Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಅಮೆರಿಕದ ಸಮಾಜ ಆಂತರಿಕ ದಂಗೆಯ ಅಂಚಿಗೆ...

ಅಮೆರಿಕದ ಸಮಾಜ ಆಂತರಿಕ ದಂಗೆಯ ಅಂಚಿಗೆ ತಲುಪುತ್ತಿದೆಯೇ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.16 Sept 2025 9:30 AM IST
share
ಅಮೆರಿಕದ ಸಮಾಜ ಆಂತರಿಕ ದಂಗೆಯ ಅಂಚಿಗೆ ತಲುಪುತ್ತಿದೆಯೇ?

ಇಂದು ಅಮೆರಿಕದಲ್ಲಿ ಎಲ್ಲರೂ ಎಲ್ಲರನ್ನೂ ಪರಸ್ಪರ ಅನುಮಾನದಿಂದ ನೋಡುತ್ತಿದ್ದಾರೆ. ಕಠಿಣ ಬಲಪಂಥೀಯ ಟ್ರಂಪ್ ಆಡಳಿತ ಅಪನಂಬಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಭಯ ಇರುವಲ್ಲಿ, ಟ್ರಂಪ್ ಮತ್ತು ರಿಪಬ್ಲಿಕನ್ ಬೆಂಬಲ ಹೆಚ್ಚಾಗುತ್ತಿದೆ. ಆದ್ದರಿಂದ ದ್ವೇಷ ಮತ್ತು ಹಿಂಸಾಚಾರದ ಗ್ರಾಫ್ ಹೆಚ್ಚಾಗುತ್ತಿದೆ. ಇಂದು ಅಮೆರಿಕನ್ ಸಮಾಜದಲ್ಲಿ ಇದನ್ನೆಲ್ಲ ತಡೆಯಲಾರದ ಸ್ಥಿತಿ ಕಾಣಿಸತೊಡಗಿದೆ. ರಿಪಬ್ಲಿಕನ್ನರು ಹುಸಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದಾರೆ. ದ್ವೇಷ, ತಪ್ಪು ಮಾಹಿತಿ, ಪಿತೂರಿ ಸಿದ್ಧಾಂತ ಎಲ್ಲವೂ ಇಲ್ಲಿಂದ ಬರುತ್ತವೆ.

ಮೊನ್ನೆ ಅಮರಿಕದಲ್ಲಿ ಬಲಪಂಥೀಯ ಕಾರ್ಯಕರ್ತ, ಟ್ರಂಪ್ ಅವರ ಯುವಮಿತ್ರ ಚಾರ್ಲಿ ಕರ್ಕ್ ಹತ್ಯೆಯಾಯಿತು.

ಅದೇ ಹೊತ್ತಲ್ಲೇ ಭಾರತೀಯ ವಲಸಿಗ, ಕರ್ನಾಟಕ ಮೂಲದ ಚಂದ್ರಮೌಳಿ ನಾಗಮಲ್ಲಯ್ಯ ಅವರನ್ನು ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯೊಬ್ಬ ಮಚ್ಚಿನಿಂದ ತಲೆಕಡಿದು ಕೊಂದ.

ಇವೆರಡು ಘಟನೆಗಳಿಗೆ ಕೆಲವೇ ದಿನಗಳ ಮೊದಲು ಉತ್ತರ ಕೆರೊಲಿನಾದ ರೈಲು ನಿಲ್ದಾಣದಲ್ಲಿ ಉಕ್ರೇನ್ ನಿರಾಶ್ರಿತೆ ಐರಿನಾ ಜರುತ್ಸ್ಕಾ ಅವರನ್ನು ಭೀಕರವಾಗಿ ಇರಿದು ಕೊಲ್ಲಲಾಗಿತ್ತು.

ಕಳೆದ ವಾರದ ಈ ಕರಾಳ ಘಟನೆಗಳು ಅಮೆರಿಕದ ರಾಜಕೀಯದಲ್ಲಿ ತೀವ್ರ ತಲ್ಲಣ ಸೃಷ್ಟಿಸಿವೆ.

ಚಾರ್ಲಿ ಕರ್ಕ್ ಹತ್ಯೆಗೆ ಸಂಬಂಧಿಸಿ 22 ವರ್ಷದ ಟೈಲರ್ ರಾಬಿನ್ಸನ್ ಎಂಬವನನ್ನು ಬಂಧಿಸಲಾಗಿದೆ.

ಕರ್ಕ್ ಹತ್ಯೆಯನ್ನು ಬಲಪಂಥೀಯ ಮತ್ತು ಎಡಪಂಥೀಯ ಸಿದ್ಧಾಂತಗಳ ನಡುವಿನ ಯುದ್ಧದ ಆರಂಭ ಎಂದು ವ್ಯಾಖ್ಯಾನಿಸುವುದು ಶುರುವಾಗಿತ್ತು. ಆದರೆ ರಾಬಿನ್ಸನ್ ಕಪ್ಪು ವರ್ಣೀಯನಾಗಲೀ, ಟ್ರಾನ್ಸ್ ಆಗಲೀ, ಎಡ ಮಾರ್ಕ್ಸಿಸ್ಟ್ ಆಗಲೀ ಅಲ್ಲ ಎಂದು ತನಿಖೆಯಲ್ಲಿ ಗೊತ್ತಾದಾಗ, ಅಂಥದೊಂದು ಹುಸಿ ನಿರೂಪಣೆ ಕುಸಿಯಿತು.

ರಾಬಿನ್ಸನ್ ತನ್ನ ರಾಜಕೀಯ ಸಂಬಂಧವನ್ನು ಬಹಿರಂಗಪಡಿಸಲಿಲ್ಲ.

ಆದರೆ ಆತನ ಪೋಷಕರು ಅಧ್ಯಕ್ಷ ಟ್ರಂಪ್ ಅವರ ಪಕ್ಷ ರಿಪಬ್ಲಿಕನ್‌ನ ಮತದಾರರು. ಎಡಪಂಥೀಯರ ಸಂಪರ್ಕಗಳ ಬದಲು, ಈಗ ಹಂತಕನ ರಿಪಬ್ಲಿಕನ್ ಸಂಪರ್ಕಗಳೇ ಮುಂದಕ್ಕೆ ಬರುತ್ತಿವೆ.

ಅವನ ಚರ್ಮದ ಬಣ್ಣ ಮತ್ತು ಧರ್ಮ ಕೂಡ ಸೈದ್ಧಾಂತಿಕ ಸಂಘರ್ಷದ ನಿರೂಪಣೆಗೆ ಪೂರಕವಾಗುವಂತಿಲ್ಲ.

ಇನ್ನು ರೈಲಿನಲ್ಲಿ ಉಕ್ರೇನ್ ನಿರಾಶ್ರಿತೆಯನ್ನು ವ್ಯಕ್ತಿಯೊಬ್ಬ ಇರಿದು ಕೊಂದಿರುವ ವೀಡಿಯೊ ವೈರಲ್ ಆಗಿದೆ.

ಆಗಸ್ಟ್ 22ರಂದು ಆ ಘಟನೆ ನಡೆದರೂ, ವೀಡಿಯೊ ಈಚೆಗೆ ಬಯಲಿಗೆ ಬಂದಿದೆ. ದಾಳಿಕೋರ ಆಫ್ರಿಕನ್ ಅಮೆರಿಕನ್ ಸಮುದಾಯದವನು ಮತ್ತು ಕ್ರಿಮಿನಲ್ ಹಿನ್ನೆಲೆಯವನು. ಆ ಪ್ರದೇಶ ಡೆಮಾಕ್ರಟಿಕ್ ಪಕ್ಷದ ನಿಯಂತ್ರಣದಲ್ಲಿದ್ದು, ಘಟನೆ ರಾಜಕೀಯ ಬಣ್ಣ ಪಡೆಯುತ್ತಿದೆ.

ಡಲ್ಲಾಸ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಯನ್ನು ಕ್ರೂರವಾಗಿ ಶಿರಚ್ಛೇದ ಮಾಡಲಾಯಿತು. ವಾಷಿಂಗ್ ಮೆಷಿನ್ ನೆಪದಲ್ಲಿನ ಜಗಳ ತಲೆ ಕಡಿಯುವ ಮಟ್ಟಕ್ಕೆ ಹೋಯಿತು. ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ವೀಡಿಯೊದಲ್ಲಿ ದಾಳಿಕೋರ ಚಂದ್ರಮೌಳಿ ನಾಗಮಲ್ಲಯ್ಯ ಅವರ ತಲೆ ಕಡಿದ ಮೇಲೆ ಅದನ್ನು ಒದೆಯುತ್ತಿರುವ ಭೀಕರ ದೃಶ್ಯ ಕಂಡುಬಂದಿದೆ.

ಆರೋಪಿ ಈಗ ಪೊಲೀಸ್ ಕಸ್ಟಡಿಯಲ್ಲಿದ್ದಾನೆ. ದುರಂತವೆಂದರೆ ಈ ಘಟನೆಯ ಬಗ್ಗೆ ಯಾವುದೇ ನಿರ್ದಿಷ್ಟ ಆಕ್ರೋಶ ವ್ಯಕ್ತವಾಗಿಲ್ಲ. ಅಮೆರಿಕದ ನಾಯಕರಿಂದ ಯಾವುದೇ ದೊಡ್ಡ ಹೇಳಿಕೆಗಳಿಲ್ಲ.

ಒಂದೇ ವಾರದಲ್ಲಿ ನಡೆದಿರುವ ಈ ಮೂರು ಭಯಂಕರ ಘಟನೆಗಳು ಅಮೆರಿಕದ ಬೆಳೆಯುತ್ತಿರುವ ರಾಜಕೀಯ ಮತ್ತು ಸಾಮಾಜಿಕ ವಿಭಜನೆಗಳನ್ನು ಎತ್ತಿ ತೋರಿಸಿವೆ.

ಚಾರ್ಲಿ ಕರ್ಕ್ ಪ್ರಕರಣದಲ್ಲಿ ರಾಜಕೀಯ ಹಿಂಸಾಚಾರವಿದ್ದರೆ, ಉಕ್ರೇನ್ ನಿರಾಶ್ರಿತೆಯ ಹತ್ಯೆಯಲ್ಲಿ ಜನಾಂಗೀಯ ವಿಭಜನೆ ಕಾಣಿಸಿದೆ. ಚಂದ್ರಮೌಳಿ ನಾಗಮಲ್ಲಯ್ಯ ಪ್ರಕರಣ ವಲಸಿಗರ ವಿರುದ್ಧ, ಅದರಲ್ಲೂ ಭಾರತೀಯರ ವಿರುದ್ಧ ದ್ವೇಷಾಪರಾಧವನ್ನು ಎತ್ತಿ ತೋರಿಸುತ್ತದೆ.

ಅಮೆರಿಕ ಹೇಗೆ ಉಗ್ರವಾದ, ಜನಾಂಗೀಯತೆ ಮತ್ತು ಅನ್ಯಜನರ ಮೇಲಿನ ದ್ವೇಷದ ನೆಲೆಯಾಗುತ್ತಿದೆ ಎಂಬುದನ್ನು ಈ ಮೂರು ಘಟನೆಗಳು ತೋರಿಸುತ್ತವೆ.

ಡೊನಾಲ್ಡ್ ಟ್ರಂಪ್ ದ್ವೇಷದ ಜ್ವಾಲೆಗಳನ್ನು ತಣ್ಣಗಾಗಿಸುವ ಬದಲು ರಾಜಕೀಯ ಲಾಭವನ್ನು ಪಡೆಯುತ್ತಿದ್ದಾರೆಯೇ ಎಂಬ ಪ್ರಶ್ನೆ ದೊಡ್ಡದಾಗುತ್ತಿದೆ.

ಸೆಪ್ಟಂಬರ್ 10ರಂದು ಒರೆಮ್ ನಗರದ ಉತಾಹ್ ವ್ಯಾಲಿ ವಿಶ್ವವಿದ್ಯಾನಿಲಯದಲ್ಲಿ ಚಾರ್ಲಿ ಕರ್ಕ್ ದಿ ಅಮೆರಿಕನ್ ಕಮ್ಬ್ಯಾಕ್ ಟೂರ್ ಕಾರ್ಯಕ್ರಮದಲ್ಲಿದ್ದರು.

ತೆರೆದ ಆವರಣದಲ್ಲಿ 3,000 ಜನರೊಂದಿಗೆ ಸಂವಾದದಲ್ಲಿ ತೊಡಗಿದ್ದಾಗ, ಯಾರೋ ಕಟ್ಟಡದ ಮುಂಭಾಗದ ಟೆರೇಸ್‌ನಿಂದ ಹಾರಿಸಿದ ಗುಂಡು ಕರ್ಕ್ ಅವರ ಗಂಟಲು ಸೀಳಿತ್ತು. ಅದು ಅವರ ಜೀವವನ್ನು ಬಲಿ ತೆಗೆದುಕೊಂಡಿತು. ಈ ಅನಿರೀಕ್ಷಿತ ದಾಳಿಯಿಂದಾಗಿ ಸ್ಥಳದಲ್ಲಿ ಭಯ ಮತ್ತು ಅವ್ಯವಸ್ಥೆ ಉಂಟಾಯಿತು.

ಈ ಘಟನೆ ಅಮೆರಿಕನ್ ಸಮಾಜವನ್ನು ಇನ್ನಷ್ಟು ಧ್ರುವೀಕರಿಸಿತು.

ಇದು ನಿಸ್ಸಂದೇಹವಾಗಿ ರಾಜಕೀಯ ಪ್ರೇರಿತ ಹತ್ಯೆ. ಆದರೆ ಇದನ್ನು ಯಾರು ಸಂಘಟಿಸಿದರು ಮತ್ತು ಏಕೆ ರಿಪಬ್ಲಿಕನ್ನರು ಮತ್ತು ಬಲಪಂಥೀಯರು ಈ ಇಡೀ ವಿಷಯದಲ್ಲಿ ದೂಷಣೆಗೆ ಇಳಿದರು?

ಬಲಪಂಥೀಯ ಚಾನೆಲ್‌ಗಳು, ಟ್ರಂಪ್ ಅವರ ಬೆಂಬಲಿಗ ಪಡೆಗಳು ಮತ್ತು ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳು ಅಂತರ್ಯುದ್ಧದ ನಿರೀಕ್ಷೆಯನ್ನು ಬಹಿರಂಗವಾಗಿ ಚರ್ಚಿಸಿದವು. ಇದು ಬಲಪಂಥೀಯ ಧ್ವನಿಗಳನ್ನು ತೊಡೆದುಹಾಕುವ, ಬಲಪಂಥೀಯರನ್ನು ಮೌನಗೊಳಿಸುವ ಉದ್ದೇಶದ್ದಾಗಿದೆ ಎಂದು ಹೇಳುವುದು ಶುರುವಾಯಿತು.

ಶಾಂತಿ ಮತ್ತು ರಾಜಕೀಯ ಏಕತೆಗಾಗಿ ಮನವಿ ಮಾಡಬೇಕಿದ್ದ ಡೊನಾಲ್ಡ್ ಟ್ರಂಪ್ ಎಡಪಂಥೀಯರನ್ನು ದೂಷಿಸಲು ನಿಂತುಬಿಟ್ಟಿದ್ದರು.

ಕರ್ಕ್ ಅವರು ‘ಟರ್ನಿಂಗ್ ಪಾಯಿಂಟ್’ ಎಂಬ ಅತ್ಯಂತ ಪ್ರಮುಖ ಬಲಪಂಥೀಯ ಯುವ ಸಂಘಟನೆಯ ಸ್ಥಾಪಕರಾಗಿದ್ದರು.

ಅದನ್ನು ಶುರು ಮಾಡಿದ್ದ ಹೊತ್ತಲ್ಲಿ ಅವರು, ಕಾಲೇಜುಗಳಲ್ಲಿ ಸಂಪ್ರದಾಯವಾದಿ ವಿಚಾರಗಳ ಹರಡುವಿಕೆಯಲ್ಲಿ ತೊಡಗಿದ್ದರು.

ಯಾರೊಬ್ಬರ ಅಭಿಪ್ರಾಯಗಳು ಎಷ್ಟೇ ವಿವಾದಾತ್ಮಕ ಅಥವಾ ಸ್ವೀಕಾರಾರ್ಹವಲ್ಲದಿದ್ದರೂ, ಗುಂಡು ಉತ್ತರವಲ್ಲ. ಅದು ಭಾರತವಾಗಲಿ ಅಥವಾ ಅಮೆರಿಕವಾಗಲಿ ಎಲ್ಲರಿಗೂ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ.

ಕರ್ಕ್ ಅವರನ್ನು ಬಹಳ ದೊಡ್ಡ ಜನಸಂಖ್ಯೆ ಇಷ್ಟಪಡಲಿಲ್ಲ. ಸ್ವಾಭಾವಿಕವಾಗಿ ಇನ್ನೊಂದು ಬದಿಯಲ್ಲಿ ಅವರನ್ನು ದ್ವೇಷಿಸುವ ಜನರಿದ್ದರು. ಕೆಲವರು ಅವರ ಹತ್ಯೆಯನ್ನೂ ಸಂಭ್ರಮಿಸಿದರು.

ಡೊನಾಲ್ಡ್ ಟ್ರಂಪ್ ಕಳೆದ ವರ್ಷ ತಮ್ಮ ಮೇಲೆ ನಡೆದ ಹತ್ಯಾಯತ್ನವನ್ನು ನೆನಪಿಸಿಕೊಂಡರು. ತಮ್ಮ ರಾಜಕೀಯ ವಿರೋಧಿಗಳನ್ನು ಉಲ್ಲೇಖಿಸಿದರು. ಅವರು ಬಲಪಂಥೀಯರು ಬಲಿಪಶುಗಳಾಗುತ್ತಿದ್ಧಾರೆ ಎಂದು ಬಿಂಬಿಸಲು ಯತ್ನಿಸಿದರು.

ಆದರೆ, ಅದೇ ಟ್ರಂಪ್ ಕಳೆದ ಕೆಲ ತಿಂಗಳುಗಳಲ್ಲಿ ಡೆಮಾಕ್ರಟಿಕ್ ನಾಯಕರ ಮೇಲೆ ಮಾರಕ ದಾಳಿಗಳು ನಡೆದಿವೆ ಎಂಬುದರ ಬಗ್ಗೆ ಮಾತಾಡಲಿಲ್ಲ.

ಇದು ಅಮೆರಿಕದ ಸ್ಥಿತಿ.

ಜೂನ್ ತಿಂಗಳಲ್ಲಿ ಮಿನ್ನೇಸೋಟ ರಾಜ್ಯದಲ್ಲಿ ಇಬ್ಬರು ಡೆಮಾಕ್ರಾಟ್ ನಾಯಕರು ಮತ್ತವರ ಕುಟುಂಬಗಳನ್ನು ಗುರಿಯಾಗಿಸಲಾಯಿತು. ಇದರಲ್ಲಿ ಮಾಜಿ ಹೌಸ್ ಸ್ಪೀಕರ್ ಮೆಲಿಸ್ಸಾ ಹಾರ್ಟ್‌ಮನ್ ಮತ್ತು ಅವರ ಪತಿ ಪ್ರಾಣ ಕಳೆದುಕೊಂಡರು. ಜಾನ್ ಹಾಫ್‌ಮನ್ ಮತ್ತು ಅವರ ಪತ್ನಿಯ ಮೇಲೂ ದಾಳಿ ನಡೆಸಲಾಯಿತು.

ಕ್ಯಾಪಿಟಲ್ ಹಿಲ್‌ನಲ್ಲಿ ಏನಾಯಿತು ಎಂಬುದನ್ನು ನಾವು ಮರೆಯಲು ಸಾಧ್ಯವಿಲ್ಲ.

ಇತ್ತೀಚಿನ ನ್ಯೂಯಾರ್ಕ್ ಟೈಮ್ಸ್ ಸಮೀಕ್ಷೆಯ ಪ್ರಕಾರ, ಒಬ್ಬರು ಹೇಳುವುದು ಇಷ್ಟವಾಗದಿದ್ದರೆ, ಬಂದೂಕನ್ನು ಬಳಸಿ ಎಂಬುದು ಅಮೆರಿಕನ್ ಸಮಾಜದಲ್ಲಿ ದೊಡ್ಡ ಸಮಸ್ಯೆಯಾಗಿದೆ.

ಈಗ ಪ್ರಶ್ನೆ ಏನೆಂದರೆ, ಅಮೆರಿಕದ ರಾಜಕೀಯದಲ್ಲಿ ಹಿಂಸಾಚಾರ ಏಕೆ ತೀವ್ರವಾಗಿ ಹೆಚ್ಚುತ್ತಿದೆ ಎಂಬುದು.

ತಜ್ಞರು ರಾಜಕೀಯ ಹಿಂಸಾಚಾರಕ್ಕೆ ನಾಲ್ಕು ಅಂಶಗಳು ಕಾರಣವೆನ್ನುತ್ತಾರೆ.

ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸದಿದ್ದಾಗ, ಜನಾಂಗ, ಧರ್ಮ ಇತ್ಯಾದಿಗಳ ಮೇಲೆ ಸಮಾಜ ವಿಭಜನೆಯಾದಾಗ, ರಾಜಕೀಯ ನಾಯಕರು ಹಿಂಸೆಯನ್ನು ತಡೆಯದಿದ್ದಾಗ ಅಥವಾ ಬೆಂಬಲಿಸಿದಾಗ ಮತ್ತು ನಾಲ್ಕನೆಯದಾಗಿ, ನಾಗರಿಕರಿಗೆ ಬಂದೂಕುಗಳು ಸುಲಭವಾಗಿ ಲಭ್ಯವಾದಾಗ.

ಇವೆಲ್ಲವೂ ಇಂದಿನ ಅಮೆರಿಕದಲ್ಲಿ ನಡೆಯುತ್ತಿರುವುದರಿಂದ, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಬಹುದು.

ಧ್ರುವೀಕರಣ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ಸೀನ್ ವೆಸ್ಟ್ ವುಡ್, ಮೂರನೇ ಒಂದು ಭಾಗದಷ್ಟು ಜನರು ತಮ್ಮ ವಿರೋಧಿಗಳು ರಾಜಕೀಯ ಹಿಂಸಾಚಾರ ಬೆಂಬಲಿಸುತ್ತಾರೆ ಎಂದು ಭಾವಿಸುವುದಾಗಿ ಹೇಳುತ್ತಾರೆ.

ಆದರೆ ಮುಖ್ಯವಾಗಿ, ಜನರ ಮನಸ್ಸಿನಲ್ಲಿರುವಂಥ ಗ್ರಹಿಕೆ ಸಾಮಾಜಿಕ ಮಾಧ್ಯಮ, ಸುಳ್ಳು ಸುದ್ದಿ, ಪಿತೂರಿ ಸಿದ್ಧಾಂತಗಳು ಮತ್ತು ತಪ್ಪು ಮಾಹಿತಿಯ ಮೂಲಕ ಅತಿರೇಕಕ್ಕೆ ಮುಟ್ಟುತ್ತದೆ. ಭಯದ ವಾತಾವರಣವನ್ನು ಸೃಷ್ಟಿಸಲಾಗುತ್ತದೆ. ಇದನ್ನು ರಾಜಕಾರಣಿಗಳು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ವೈಯಕ್ತಿಕ ಕೋಪ ಸಾರ್ವಜನಿಕ ಸಮರ್ಥನೆಯನ್ನು ಪಡೆಯುತ್ತದೆ.

ಆದ್ದರಿಂದ ಅವರು ಹಿಂಸಾಚಾರದ ಮೂಲಕ ಒಂದು ರೀತಿಯ ಸಾಮಾಜಿಕ ಸೇವೆ ಮಾಡುತ್ತಿದ್ದೇವೆ ಎಂಬಂತೆ ಭಾವಿಸುತ್ತಾರೆ.

ಆದರೆ ತಾವು ರಾಜಕೀಯದ ಬಲಿಪಶುವಾಗುತ್ತಿರುವುದು ಅವರಿಗೆ ಅರ್ಥವಾಗುವುದಿಲ್ಲ.

ಕರ್ಕ್ ಅವರ ಹತ್ಯೆ ಅಮೆರಿಕದಲ್ಲಿನ ಒಂದು ಆತಂಕಕಾರಿ ತಿರುವನ್ನು ಕಾಣಿಸುತ್ತದೆ.

ಬಲಪಂಥೀಯ ರಾಜಕೀಯ ಇನ್ನಷ್ಟು ಕಠಿಣ ಮತ್ತು ನಿರ್ಭೀತವಾಗಿರುತ್ತದೆ.ಮತ್ತಿದು ಭಾರತೀಯರಿಗೂ ಅಪಾಯಕಾರಿ ವಿಷಯವಾಗಿರಲಿದೆ.

ದ್ವೇಷಾಪರಾಧ ಯಾವಾಗಲೂ ಸಮಸ್ಯೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಜನಾಂಗೀಯ ಹಿಂಸಾಚಾರ ಮತ್ತು ದ್ವೇಷಾಪರಾಧಗಳು ತೀವ್ರಗೊಳ್ಳುತ್ತಿವೆ.

ಪ್ರತೀ ವರ್ಷ 11 ಸಾವಿರದಿಂದ 12 ಸಾವಿರ ದ್ವೇಷಾಪರಾಧ ಘಟನೆಗಳು ದಾಖಲಾಗುತ್ತಿವೆ.

ಅವುಗಳಲ್ಲಿ ಆಫ್ರಿಕನ್ ಅಮೆರಿಕನ್ನರ ವಿರುದ್ಧ ಶೇ. 30 ಮತ್ತು ಬಿಳಿಯರ ವಿರುದ್ಧ ಶೇ. 10ರಷ್ಟು ದ್ವೇಷಾಪರಾಧಗಳಿವೆ.

ಕೋವಿಡ್ ಹೊತ್ತಲ್ಲಿ ಜಾರ್ಜ್ ಫ್ಲಾಯ್ಡ್ ಹತ್ಯೆ ನಂತರ ಬಂದೂಕು ಹಿಂಸಾಚಾರದಿಂದ ಬೆದರಿಕೆವರೆಗೆ ಜನಾಂಗೀಯ ಅಪರಾಧಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದವು. ಬೈಡನ್ ಆಡಳಿತ ಕೆಲವು ಕ್ರಮಗಳನ್ನು ತೆಗೆದುಕೊಂಡಿತು. ಅದು ದ್ವೇಷಾಪರಾಧವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿತು.

ಆದರೆ ಟ್ರಂಪ್ ಆಗಮನದ ನಂತರ, ಕರಿಯರು ಅಥವಾ ಯಾವುದೇ ಜನಾಂಗೀಯ ಅಲ್ಪಸಂಖ್ಯಾತರಿಗೆ ಯಾವುದೇ ವಿಶೇಷ ಸವಲತ್ತುಗಳನ್ನು ನೀಡಲಾಗುವುದಿಲ್ಲ ಎನ್ನಲಾಯಿತು.

ಅಲ್ಪಸಂಖ್ಯಾತರ ಯಾರಾದರೂ ಇಲ್ಲಿಯವರೆಗೆ ಪ್ರಮುಖ ಸ್ಥಾನದಲ್ಲಿದ್ದರೆ ಪ್ರತಿಭೆಯಿಂದಾಗಿ ಅಲ್ಲ, ಆದರೆ ಡಿಇಐ (ಡೈವರ್ಸಿಟಿ, ಇಕ್ವಿಟಿ ಹಾಗೂ ಇನ್ ಕ್ಲುಷನ್) ನೀತಿಯಿಂದಾಗಿ ಎನ್ನಲಾಯಿತು.

ಟ್ರಂಪ್ ಸರಕಾರದಲ್ಲಿ ಡಿಇಐ ಯೋಜನೆ ನಿಲ್ಲಿಸಿದ ನಂತರ ಸಶಸ್ತ್ರ ಪಡೆಗಳಲ್ಲಿ ವೈವಿಧ್ಯತೆಯ ನೇಮಕಾತಿ ನಿಲ್ಲಿಸಲಾಯಿತು.

ಡಿಇಐ ಸರಕಾರದ ಎಲ್ಲ ಇಲಾಖೆಗಳಲ್ಲಿ ಸಮಾಜದ ಎಲ್ಲ ವಿಭಾಗಗಳ ಜನರಿಗೂ ಪ್ರಾತಿನಿಧ್ಯ ಇರುವಂತೆ ಹಾಗೂ ಎಲ್ಲರಿಗೂ ಸಮಾನ ಅವಕಾಶಗಳು ಸಿಗುವಂತೆ ಮಾಡುವ ನೀತಿ.

ಆದರೆ ಆನ್‌ಲೈನ್ ತಪ್ಪು ಮಾಹಿತಿ, ಪಿತೂರಿ ಸಿದ್ಧಾಂತಗಳು, ನಕಲಿ ಸುದ್ದಿಗಳು ಡಿಇಐ ಎಂಬುದು ಬಿಳಿಯರನ್ನು ನಿಗ್ರಹಿಸಲು ಆಮೂಲಾಗ್ರ ಎಡಪಂಥೀಯರ ಒಂದು ಮೋಸದ ಯೋಜನೆ ಮತ್ತು ಬಿಳಿಯರು ಅಪಾಯದಲ್ಲಿದ್ದಾರೆ ಎಂಬ ವಾತಾವರಣವನ್ನು ಸೃಷ್ಟಿಸಿವೆ.

ಭಾರತದಲ್ಲಿ ಹೇಗೆ ಮೀಸಲಾತಿ ಪ್ರತಿಭಾವಂತರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದೆ ಎಂದು ಒಂದು ವರ್ಗ ನಿರಂತರ ಅಪಪ್ರಚಾರ ಮಾಡುತ್ತಿದೆಯೋ ಹಾಗೆ.

ಈಗ ಉಕ್ರೇನ್ ನಿರಾಶ್ರಿತೆಯ ಹತ್ಯೆ ಬಳಿಕ, ರಿಪಬ್ಲಿಕನ್ ನಾಯಕತ್ವ ಅದಕ್ಕೆ ಜನಾಂಗೀಯ ದೃಷ್ಟಿಕೋನ ನೀಡಿ, ಆರೋಪಿ ಕ್ರಿಮಿನಲ್ ಹಿನ್ನೆಲೆಯವನು ಎಂದು ಬಿಂಬಿಸಲು ಯತ್ನಿಸುತ್ತಿದೆ.

ಈಗ ಅಮೆರಿಕದಲ್ಲಿ, ಕರಿಯರೆಂದರೆ ಅಪರಾಧ ಮಾಡುವವರು ಎಂದು ನೋಡಲಾಗುತ್ತದೆ. ಜೈಲಿನಲ್ಲಿ ಹೆಚ್ಚು ಆಫ್ರಿಕನ್ ಅಮೆರಿಕನ್ ಸಮುದಾಯದವರನ್ನು ಕಾಣಬಹುದು ಎಂಬುದು ಸತ್ಯ. ಅದಕ್ಕಾಗಿಯೇ ಸಾಮಾನ್ಯ ಅಮೆರಿಕನ್ನರು ಅಂಥ ನಿರೂಪಣೆಯನ್ನು, ಅದು ಸುಳ್ಳಾಗಿದ್ದರೂ ನಂಬುತ್ತಾರೆ.

ಟ್ರಂಪ್ ಅವರ ಮೇಕ್ ‘ಅಮೆರಿಕ ಗ್ರೇಟ್ ಅಗೈನ್‌‘ (MAGA)ಘೋಷಣೆಯಂತೂ ಭಯ ಹರಡಲು ಅಸ್ತಿತ್ವದಲ್ಲಿರುವ ಸ್ಟೀರಿಯೊಟೈಪ್‌ಗಳು ಮತ್ತು ಸುಳ್ಳು ಸುದ್ದಿಗಳನ್ನು ಬಳಸುತ್ತದೆ. ತಪ್ಪು ಮಾಹಿತಿ ಮತ್ತು ಭಯವನ್ನು ಹರಡಲು ಅರ್ಧಸತ್ಯಗಳನ್ನು ಬಳಸಲಾಗುತ್ತದೆ.

ಅಮೆರಿಕದಲ್ಲಿ ಮತ್ತೊಂದು ಬಗೆಯ ದ್ವೇಷದ ಅಲೆ ಇದೆ.

ಅದು ಅನ್ಯದ್ವೇಷ. ವಿದೇಶಿಯರು ಮತ್ತು ವಲಸಿಗರ ಕುರಿತ ಭಯ ಮತ್ತು ದ್ವೇಷ. ಹಿಂದೆ ಇದನ್ನು ಎದುರಿಸಬೇಕಾಗಿಲ್ಲದ ಭಾರತೀಯರನ್ನು ಈಗ ಗುರಿ ಮಾಡಲಾಗುತ್ತಿದೆ.

ಆದರೂ, ಮೊನ್ನೆ ಕೊಲೆಯಾದ ಚಂದ್ರಮೌಳಿ ನಾಗಮಲ್ಲಯ್ಯ ವಿಷಯದಲ್ಲಿ ಯಾವುದೇ ನಿರ್ದಿಷ್ಟ ದ್ವೇಷವಿಲ್ಲ. ಅವರು ಭಾರತೀಯರೆಂಬ ಕಾರಣಕ್ಕೆ ಗುರಿಯಾಗಿಸಲಾಗಿಲ್ಲ. ಆದರೆ ಅವರ ಹತ್ಯೆ, ಅಮೆರಿಕದಲ್ಲಿ ಭಾರತೀಯರ ವಿರುದ್ಧದ ಹಿಂಸಾಚಾರವನ್ನು ಎತ್ತಿ ತೋರಿಸುತ್ತದೆ.

ಅಮೆರಿಕದಲ್ಲಿ ಭಾರತ ವಿರೋಧಿ ಭಾವನೆಗಳನ್ನು ವಿಶೇಷವಾಗಿ ಸಾಮಾಜಿಕ ಮಾಧ್ಯಮದಲ್ಲಿ ಕಾಣಬಹುದು.

ಕೆಲ ಬಲಪಂಥೀಯ ಗುಂಪುಗಳು ಭಾರತೀಯರು ಅಮೆರಿಕನ್ ಉದ್ಯೋಗಗಳನ್ನು ಕದಿಯಲು H-1B ವೀಸಾಗಳನ್ನು ಬಳಸಿದ್ದಾರೆ ಎಂದು ಹೇಳುತ್ತವೆ.

ಮೊನ್ನೆ ಕೊಲೆಯಾದ ಬಲಪಂಥೀಯ ಚಾರ್ಲಿ ಕರ್ಕ್ ಕೂಡ ಭಾರತೀಯರ ವಿರುದ್ಧ ದ್ವೇಷದ ಮಾತುಗಳಿಗೆ ಕುಖ್ಯಾತಿ ಪಡೆದಿದ್ದ. ಅಮೆರಿಕಕ್ಕೆ ವಲಸೆ ಬರುವ, ಅದರಲ್ಲೂ ಕಾನೂನುಬದ್ಧವಾಗಿ ಬರುವ ಭಾರತೀಯರ ಬಗ್ಗೆಯೂ ಕರ್ಕ್ ವಿಷ ಕಾರಿದ್ದ.

ಅಮೆರಿಕ-ಭಾರತ ವ್ಯಾಪಾರ ಮಾತುಕತೆಯ ಸಂದರ್ಭದಲ್ಲಿ ಆತ, ‘ಬಹುಶಃ ಬೇರೆ ಯಾವುದೇ ಕಾನೂನುಬದ್ಧ ವಲಸೆಗಿಂತಲೂ, ಭಾರತದಿಂದ ಬಂದವರು ಅಮೆರಿಕದ ಕಾರ್ಮಿಕರನ್ನು ಹೆಚ್ಚು ಸ್ಥಳಾಂತರಿಸಿದ್ದಾರೆ. ಸಾಕು, ಇನ್ನಷ್ಟು ಬೇಡ. ನಮ್ಮ ದೇಶ ತುಂಬಿದೆ. ನಮ್ಮ ಜನರಿಗೆ ಮೊದಲು ಆದ್ಯತೆ ನೀಡೋಣ’ ಎಂದು ಟ್ವೀಟ್ ಮಾಡಿದ್ದ.

ಅದೇ ಕರ್ಕ್ ಅಮೆರಿಕದಲ್ಲಿ ಸುಲಭವಾಗಿ ಗನ್ ಕೈಗೆ ಸಿಗುವುದನ್ನೂ ಸಮರ್ಥಿಸಿಕೊಂಡು, ಅದಕ್ಕಾಗಿ ಕೆಲವು ಜೀವ ಹೋದರೂ ಪರವಾಗಿಲ್ಲ ಎಂದೇ ಹೇಳಿದ್ದ. ಕೊನೆಗೆ ಆತನೇ ಗುಂಡಿಗೆ ಬಲಿಯಾದ ಅಮೆರಿಕದಲ್ಲಿ ಭಾರತೀಯ ವಲಸಿಗರು ಬಹಳಷ್ಟು ಹಣ ಹೊಂದಿದ್ದಾರೆ ಮತ್ತು ಅವರು ಅತ್ಯಂತ ಯಶಸ್ವಿ ಸಮುದಾಯ. ಆದರೆ ರಾಜಕೀಯವಾಗಿ ದುರ್ಬಲ ಮತ್ತು ಅಸಂಘಟಿತರು.

ಭಾರತೀಯರು ಏಕೀಕೃತ ನಿಲುವನ್ನು ಹೊಂದಿಲ್ಲ. ಗಡಿಪಾರು ಮಾಡಿದರೆ ಏನು ಗತಿ ಎಂಬ ಭಯದಿಂದ ಅವರು ಸಮುದಾಯಕ್ಕಾಗಿ ಧ್ವನಿ ಎತ್ತುವುದಿಲ್ಲ.

ವಿವೇಕ್ ರಾಮಸ್ವಾಮಿಯಂಥ ರಾಜಕಾರಣಿಗಳು ಮತ್ತು ಎಫ್‌ಬಿಐ ನಿರ್ದೇಶಕ ಕಾಶ್ ಪಟೇಲ್‌ರಂಥವರು ಅಲ್ಲಿನ ಭಾರತೀಯರ ಬಗ್ಗೆ ಚಿಂತಿಸುವುದಿಲ್ಲ ಅಥವಾ ಹೆಚ್ಚು ಮಾತನಾಡುವುದಿಲ್ಲ.

ಕಾಶ್ ಪಟೇಲ್ ಅವರು ಕರ್ಕ್‌ಗಾಗಿ ಕಣ್ಣೀರು ಹಾಕಿದರು. ಆದರೆ ಚಂದ್ರಮೌಳಿ ನಾಗಮಲ್ಲಯ್ಯ ಅವರಿಗಾಗಿ ಟ್ವೀಟ್ ಕೂಡ ಮಾಡಲಿಲ್ಲ.

ಅದು ತೀರಾ ಭಯಾನಕ ಘಟನೆ ಮತ್ತು ಭಾರತೀಯರ ವಿರುದ್ಧದ ದ್ವೇಷ ನಿಜವಾದ ಹಿಂಸಾಚಾರಕ್ಕೆ ತಿರುಗುತ್ತಿದೆ.

ಮೇ ತಿಂಗಳಲ್ಲಿ 31 ವರ್ಷದ ಅಕ್ಷಯ್ ಗುಪ್ತಾ ಅವರನ್ನು ಟೆಕ್ಸಾಸ್‌ನಲ್ಲಿ ಯಾವುದೇ ಪ್ರಚೋದನೆಯಿಲ್ಲದೆ ಇರಿಯಲಾಯಿತು.

ಅದಕ್ಕೂ ಮೊದಲು, ಮೂವರು ಭಾರತೀಯ ಅಮೇರಿಕನ್ನರ ಕುಟುಂಬದ ಮೇಲೆ ಅವರ ಮನೆಯನ್ನು ಮುರಿದು ದಾಳಿ ಮಾಡಲಾಗಿತ್ತು. ವಿದ್ಯಾರ್ಥಿಗಳನ್ನು ಯಾವುದೇ ಕಾರಣವಿಲ್ಲದೆ ಗುರಿಯಾಗಿಸಿಕೊಂಡ ಅನೇಕ ಪ್ರಕರಣಗಳು ನಡೆದಿವೆ. ಕಳೆದ 5 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ದಾಳಿಯಲ್ಲಿ ಜೀವ ಕಳೆದುಕೊಂಡಿದ್ದಾರೆ.

ಅಮೆರಿಕನ್ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕಾಗಿ ಜೀವ ಕಳೆದುಕೊಂಡಿದ್ದರೆ ಅಮೆರಿಕದಿಂದ ಟ್ರಂಪ್ ಎಚ್ಚರಿಕೆ ಮತ್ತು ಭಾರತದಲ್ಲಿ ಅಲ್ಲಿಗೆ ಪ್ರಯಾಣಿಸುವುದರ ಬಗ್ಗೆ ಎಚ್ಚರಿಕೆ ಬರುತ್ತಿತ್ತು.

ಆದರೆ ಭಾರತೀಯರು ಅಮೆರಿಕದಲ್ಲಿ ಸಾಯುತ್ತಿದ್ದಾರೆ ಮತ್ತು ಅದರ ಬಗ್ಗೆ ಅಲ್ಲಿಯೂ, ಇಲ್ಲಿಯೂ ಸಂಪೂರ್ಣ ಮೌನವಿದೆ.

ಅದು ರಾಜಕೀಯ ಹಿಂಸೆಯಾಗಲಿ ಅಥವಾ ಜನಾಂಗೀಯ ಹಿಂಸೆಯಾಗಲಿ ಅಥವಾ ಅನ್ಯದ್ವೇಷವಾಗಲಿ.

ಇಂದು ಅಲ್ಲಿ ಎಲ್ಲರೂ ಎಲ್ಲರನ್ನೂ ಪರಸ್ಪರ ಅನುಮಾನದಿಂದ ನೋಡುತ್ತಿದ್ದಾರೆ. ಕಠಿಣ ಬಲಪಂಥೀಯ ಟ್ರಂಪ್ ಆಡಳಿತ ಅಪನಂಬಿಕೆಯನ್ನು ಪ್ರೋತ್ಸಾಹಿಸುತ್ತಿದೆ. ಭಯ ಇರುವಲ್ಲಿ, ಟ್ರಂಪ್ ಮತ್ತು ರಿಪಬ್ಲಿಕನ್ ಬೆಂಬಲ ಹೆಚ್ಚಾಗುತ್ತಿದೆ. ಆದ್ದರಿಂದ ದ್ವೇಷ ಮತ್ತು ಹಿಂಸಾಚಾರದ ಗ್ರಾಫ್ ಹೆಚ್ಚಾಗುತ್ತಿದೆ. ಇಂದು ಅಮೆರಿಕನ್ ಸಮಾಜದಲ್ಲಿ ಇದನ್ನೆಲ್ಲ ತಡೆಯಲಾರದ ಸ್ಥಿತಿ ಕಾಣಿಸತೊಡಗಿದೆ. ರಿಪಬ್ಲಿಕನ್ನರು ಹುಸಿ ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ಲಾಭ ಪಡೆಯುತ್ತಿದ್ದಾರೆ. ದ್ವೇಷ, ತಪ್ಪು ಮಾಹಿತಿ, ಪಿತೂರಿ ಸಿದ್ಧಾಂತ ಎಲ್ಲವೂ ಇಲ್ಲಿಂದ ಬರುತ್ತವೆ.

ಅಮೆರಿಕವಾಗಲಿ, ಭಾರತವಾಗಲಿ, ದ್ವೇಷ ಮತ್ತು ಸುಳ್ಳು ನಿರೂಪಣೆಗಳ ಮೇಲೆ ನಡೆಯುತ್ತಿರುವ ಯಾವುದೇ ಸರಕಾರ ಅದನ್ನು ತಡೆಯಲು ಪ್ರಾಮಾಣಿಕ ಹೆಜ್ಜೆ ಇಡುತ್ತದೆಯೇ?

ಧರ್ಮ ಅಥವಾ ಜಾತಿ ಆಧಾರದ ಮೇಲೆ ಸಾಮಾಜಿಕ ವಿಭಜನೆ ಮಾಡುವ ರಾಜಕಾರಣಿಗಳು ಸಮಸ್ಯೆಯನ್ನು ನಿಭಾಯಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾರೆಯೇ?

ಟ್ರಂಪ್‌ರಂತಹವರು ಮಹತ್ವದ ಹುದ್ದೆಗಳಲ್ಲಿ ಕೂತಾಗ ಅದರ ಫಲಿತಾಂಶ ಇಡೀ ಸಮಾಜದಲ್ಲಿ ಕಾಣಲು ಶುರುವಾಗುತ್ತದೆ.

ಅಮೆರಿಕದಲ್ಲಾಗಲೀ, ಭಾರತದಲ್ಲಾಗಲೀ ದ್ವೇಷದ ನಿರೂಪಣೆಯನ್ನು ತಿರಸ್ಕರಿಸುವುದು ನಾಗರಿಕರ ಜವಾಬ್ದಾರಿ. ಹಿಂಸೆ ಕೊನೆಗೆ ಅದರ ಪ್ರತಿಪಾದಕನನ್ನೂ ಬಲಿ ತೆಗೆದುಕೊಳ್ಳುತ್ತದೆ.

ಮತದಾರರು ದ್ವೇಷವನ್ನು ಹರಡುವ ಶಕ್ತಿಗಳನ್ನು ತಿರಸ್ಕರಿಸಬೇಕು. ಅವರು ಬಲಪಂಥೀಯರಾಗಿರಲಿ ಅಥವಾ ಎಡಪಂಥೀಯರಾಗಿರಲಿ, ಅಂಥವರನ್ನು ಜನರು ತಿರಸ್ಕರಿಸಬೇಕು.

ನಾಗರಿಕರು ಹಾಗೆ ಮಾಡಿದರೆ, ರಾಜಕಾರಣಿಗಳು ದೇಶದ ನಿಜವಾದ ಸಮಸ್ಯೆಗಳ ಕಡೆ ಗಮನ ಕೊಡಬಲ್ಲರು.

ಆದರೆ, ಜನರು ಅದನ್ನು ಮಾಡುವುದು ಅಷ್ಟು ಸುಲಭವಲ್ಲ ಎಂಬುದು ಕೂಡ ನಮ್ಮ ಸಂದರ್ಭದ ಘೋರ ಸತ್ಯ.

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X