Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಪರಿಶಿಷ್ಟ ಜಾತಿಗಳ ನಡುವಿನ ಸಂಘರ್ಷಗಳು...

ಪರಿಶಿಷ್ಟ ಜಾತಿಗಳ ನಡುವಿನ ಸಂಘರ್ಷಗಳು ಮತ್ತು ಒಳಮೀಸಲಾತಿಯ ಒಳನೋಟಗಳು

ಎಸ್. ಮೂರ್ತಿಎಸ್. ಮೂರ್ತಿ31 July 2025 11:47 AM IST
share
ಪರಿಶಿಷ್ಟ ಜಾತಿಗಳ ನಡುವಿನ ಸಂಘರ್ಷಗಳು ಮತ್ತು ಒಳಮೀಸಲಾತಿಯ ಒಳನೋಟಗಳು
ಭಾರತ ಸರಕಾರದ DOPT ಮಂತ್ರಾಲಯ ಈವರೆಗೂ ಒಳಮೀಸಲಾತಿ ಅನುಷ್ಠಾನ ಆದೇಶ ಹೊರಡಿಸಿಲ್ಲ; ಕೇಂದ್ರ ಸರಕಾರ ಲಾಭದಾಯಕ ಬಹುತೇಕ ಸರಕಾರಿ ಉದ್ಯಮಗಳನ್ನು ಖಾಸಗೀಕರಣ ಮಾಡಿದೆ; ಉಳಿದ ಸರಕಾರಿ ಉದ್ಯಮಗಳಲ್ಲಿ ಗುತ್ತಿಗೆ ನೇಮಕಾತಿಗಳನ್ನು ಮಾಡುತ್ತಿದೆ; ಇದರಿಂದ ಲಕ್ಷಾಂತರ ಮೀಸಲಾತಿಯ ಹುದ್ದೆಗಳು ನಷ್ಟವಾಗಿವೆ; ಪ್ರಧಾನಿ ನರೇಂದ್ರ ಮೋದಿ ಮಾಡಿದ ಘೋಷಣೆಯಂತೆ 2014ರಿಂದ ವಾರ್ಷಿಕ 2 ಕೋಟಿ ಉದ್ಯೋಗಗಳನ್ನು ಸೃಜಿಸಲಿಲ್ಲ; ಬಿಜೆಪಿ/ಆರೆಸ್ಸೆಸ್ ಬೆಂಬಲಿತ ದಲಿತ ಹೋರಾಟಗಾರರು ಏತಕ್ಕೆ ಇವುಗಳನ್ನು ಪ್ರಶ್ನಿಸುತ್ತಿಲ್ಲ? ದಲಿತ ಸಮುದಾಯಗಳ ಬಗೆಗಿನ ನಿಮ್ಮ ಕಾಳಜಿ ನಾಟಕವೇ?

‘ಹಿಂದೂ’ ಸಮಾಜವು ಏಕಸ್ವರೂಪಿ ಸಮಾಜವಲ್ಲ. ಹಿಂದೂಗಳಲ್ಲಿ ಇರುವಷ್ಟು ವಿವಿಧತೆ ಮತ್ತೆಲ್ಲೂ ಕಾಣಲಾಗದು. ನಾಗರಿಕತೆಯೆಡೆಗೆ ಹೆಜ್ಜೆ ಹಾಕಲು ಪ್ರಾರಂಭಿಸಿದ ಕ್ರಿಸ್ತಪೂರ್ವ ಕಾಲದಿಂದಲೇ ಈ ದೇಶದ ಸಮಾಜ ರಚನೆಯಲ್ಲಿ ಜಾತಿ, ಉಪಜಾತಿಗಳು ಉದ್ಯೋಗ ಆಧಾರಿತವಾಗಿ ನಂತರ ಜನ್ಮ ಆಧಾರಿತವಾಗಿ ಹಾಸುಹೊಕ್ಕಾಗಿವೆ. ವೃತ್ತಿ ಮತ್ತು ಕಾಯಕಗಳನ್ನು ಸಮಾನಾಂತರ ರೂಪದಲ್ಲಿ ನೋಡದೆ, ಶ್ರೇಣೀಕೃತ ರೂಪದಲ್ಲಿ ನೋಡುವ ಕಾಯಿಲೆಗೆ, ರೋಗಕ್ಕೆ ಶತಶತಮಾನಗಳ ಹಿಂದಿನಿಂದಲೂ ಸಮಾಜ ಬಲಿಯಾಗಿದೆ. ವಿಭಜಿಸಲ್ಪಟ್ಟಿದೆ.

ಜಾತಿ, ಅಸ್ಪಶ್ಯತೆ, ಶೋಷಣೆ, ಅಸಮಾನತೆಗಳ ವಿರುದ್ಧ ಈ ಮಣ್ಣಿನಲ್ಲಿ ಬಸವಣ್ಣನವರು, ಕನಕದಾಸರು, ಶರಣರು, ದಾಸರು ಧ್ವನಿ ಎತ್ತಿದರು. ಮೈಸೂರಿನ ಮಹಾರಾಜ ನಾಲ್ವಡಿ ಅವರು 1920ರಲ್ಲಿ ಮೊದಲ ಬಾರಿಗೆ ಮೀಸಲಾತಿ ನೀತಿ ಮೈಸೂರು ಪ್ರಾಂತದಲ್ಲಿ ಜಾರಿಗೆ ತಂದರು. ಬ್ರಿಟಿಷರು, ಲಾರ್ಡ್ ಮೆಕಾಲೆ, ಜ್ಯೋತಿಬಾ ಫುಲೆ, ಅಂಬೇಡ್ಕರ್, ಇತರ ನಾಯಕರು ಈ ಅಸ್ಪಶ್ಯತೆ, ಸಾಮಾಜಿಕ ಪಿಡುಗುಗಳನ್ನು, ಅಸಮಾನತೆಗಳನ್ನು ಹೋಗಲಾಡಿಸಲು ಶ್ರಮಿಸಿದರು. ಆದರೂ ಜಾತಿ, ಅಸ್ಪಶ್ಯತೆ, ಅಸಮಾನತೆ ಹೋಗಲಿಲ್ಲ.

ಇದನ್ನು ಮನಗಂಡು, ಮುಂದೆ ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಂಡು, ಡಾ. ಬಿ.ಆರ್. ಅಂಬೇಡ್ಕರ್ ಶತಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಸಮುದಾಯಗಳಿಗೆ ಭಾರತ ಸಂವಿಧಾನದಲ್ಲಿ ಮೀಸಲಾತಿ/ಪ್ರಾತಿನಿಧ್ಯ, ಅಸಮಾನತೆ ನಿವಾರಣೆಗೆ ಅವಕಾಶಗಳನ್ನು ಕಲ್ಪಿಸಿದರು. ಅದನ್ನು ಮೂಲಭೂತ ಹಕ್ಕುಗಳೆಂದು ಘೋಷಿಸಿದರು.

ಭಾರತ ಸಂವಿಧಾನದ ಈ ಮೀಸಲಾತಿ ಮೂಲಭೂತ ಹಕ್ಕುಗಳನ್ನು ಪಡೆದ ಅಸ್ಪಶ್ಯ ಮತ್ತಿತರ ಶೋಷಿತ ಜಾತಿಗಳು ದೇಶದ ಸಾರ್ವಜನಿಕ ಸೇವೆಗಳಲ್ಲಿ; ಶಿಕ್ಷಣ ಸಂಸ್ಥೆಗಳ ಪ್ರವೇಶಾತಿಗಳಲ್ಲಿ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ತಮ್ಮ ಪ್ರಾತಿನಿಧ್ಯವನ್ನು ಪಡೆದರು. ಫಲ ಪಡೆದವರೇ ತಮ್ಮ ತಮ್ಮ ಕುಟುಂಬ ಮತ್ತು ತಮ್ಮ ಉಪಜಾತಿಗಳಿಗೆ ಫಲಗಳನ್ನು ಕೊಡಿಸಲು, ಉಳಿದ ಉಪಜಾತಿಗಳಿಗೆ ಆ ಫಲಗಳು ಸಿಗದಂತೆ ಮಾಡಲು ಮುಖವಾಡ ಧರಿಸಿದರು. ಸ್ವಾರ್ಥಿಗಳಾದರು. ವಂಚನೆಗಳನ್ನು ಎಸಗಿದರು. ಪರಿಶಿಷ್ಟರ ಒಳಗೆ ಪ್ರಬಲ, ದುರ್ಬಲ ಗುಂಪುಗಳನ್ನು ಸೃಷ್ಟಿಸಿದರು. ಅಂಬೇಡ್ಕರ್ ಸಿದ್ಧಾಂತಗಳಿಗೆ, ಸಂವಿಧಾನದ ಆಶಯಗಳಿಗೆ ಚೂರಿ ಹಾಕಿದರು. ಸಂವಿಧಾನ ಜಾರಿಗೊಂಡು 7 ದಶಕಗಳೇ ಉರುಳಿದರೂ, ಕೆಲವು ಪರಿಶಿಷ್ಟ ಶೋಷಿತ ದುರ್ಬಲ ಸಮುದಾಯಗಳಿಗೆ ಸಂವಿಧಾನದ ಮೂಲಭೂತ ಹಕ್ಕುಗಳು, ಅವಕಾಶಗಳು ಸಿಕ್ಕಿಲ್ಲ. ಸಿಗದಂತೆ ಮಾಡಲಾಯಿತು. ಇದರಿಂದ ಅಸಮಾನತೆ ಮುಂದುವರಿಯಿತು.

ಅಂದಾಜು 70ನೇ ದಶಕದಿಂದ ರಾಷ್ಟ್ರವ್ಯಾಪಿ, ಪರಿಶಿಷ್ಟ ಜಾತಿಗಳ ಗುಂಪಿನ ಒಳಗೆ ಅನ್ಯಾಯಕ್ಕೆ ಒಳಗಾದ ಜಾತಿ, ಉಪಜಾತಿಗಳ ಗುಂಪುಗಳು ಪ್ರತಿಭಟನೆ, ಸತ್ಯಾಗ್ರಹ, ಕಾಲ್ನಡಿಗೆ ಜಾಥಾ ಇತ್ಯಾದಿಗಳನ್ನು ಪ್ರಾರಂಭಿಸಿದರು.

ಒಳ ಮೀಸಲಾತಿ ಅನುಷ್ಠಾನ

1. 1975ರಲ್ಲಿ ಪಂಜಾಬ್ ರಾಜ್ಯದ ಮುಖ್ಯಮಂತ್ರಿ ಗ್ಯಾನಿ ಜೈಲ್‌ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರ ಮಜಬಿ ಸಿಖ್ ಜಾತಿಯವರಿಗೆ ಶೇ.50 ಒಳಮೀಸಲಾತಿ ಕಲ್ಪಿಸಿತು;

2. 1991-92ರಲ್ಲಿ ತಮಿಳುನಾಡಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಪರಿಶಿಷ್ಟ ಜಾತಿ ಒಳಗಿನ ಅರುಂಧತಿ ಜಾತಿಯವರಿಗೆ ಒಟ್ಟು ಶೇ. 15ರ ಮೀಸಲಾತಿಯಲ್ಲಿ ಪಾಲು. ಜೊತೆಗೆ, ಹೆಚ್ಚುವರಿಯಾಗಿ ಶೇ.3 ಪ್ರತ್ಯೇಕ ಮೀಸಲಾತಿಯನ್ನು ಕೂಡ ಕಲ್ಪಿಸಿದರು;

3. 1994ರಲ್ಲಿ ಹರ್ಯಾಣದ ಮುಖ್ಯಮಂತ್ರಿ ಭಜನ್ ಲಾಲ್ ಪರಿಶಿಷ್ಟ ಜಾತಿ ಒಳಗಿನ ಬಾಲ್ಮೀಕಿ ಜಾತಿಯವರಿಗೆ ಶೇ.50 ಒಳಮೀಸಲಾತಿ ಕಲ್ಪಿಸಿದರು;

4. 1999-2000ದಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಶ್ರೀ ಚಂದ್ರಬಾಬು ನಾಯ್ಡು ‘ಪರಿಶಿಷ್ಟ ಮೀಸಲಾತಿಯ ಮರುವರ್ಗೀಕರಣ ಕಾಯ್ದೆ’ಯನ್ನು ಜಾರಿಗೆ ತಂದು, ಪರಿಶಿಷ್ಟ ಜಾತಿಗಳ ಪಟ್ಟಿ ಒಳಗಿನ ಎಲ್ಲರಿಗೂ, ಅವರ ಜನಸಂಖ್ಯೆಗೆ ಅನುಗುಣವಾಗಿ ಒಳಮೀಸಲಾತಿ ಯನ್ನು ಕಲ್ಪಿಸಿದರು;

5. 2025ರಲ್ಲಿ ತೆಲಂಗಾಣ, ಹಿಮಾಚಲ ಪ್ರದೇಶ, ಹರ್ಯಾಣ, ಇನ್ನು ಕೆಲವು ರಾಜ್ಯಗಳು ಒಳ ಮೀಸಲಾತಿ ಜಾರಿಯನ್ನು ಘೋಷಣೆ ಮಾಡಿವೆ; ಅನುಷ್ಠಾನ ಬಾಕಿ ಇದೆ;

ಒಳ ಮೀಸಲಾತಿಗೆ ನ್ಯಾಯಾಲಯಗಳ ಮಧ್ಯ ಪ್ರವೇಶ

ಆಂಧ್ರ ಪ್ರದೇಶದಲ್ಲಿ ಪರಿಶಿಷ್ಟ ಜಾತಿ ಪಟ್ಟಿ ಒಳಗಿನ ಮಾಲ ಜಾತಿಗೆ ಸೇರಿದ ಇ.ವಿ.ಚಿನ್ನಯ್ಯ ಇವರು ಆಂಧ್ರಪ್ರದೇಶ ಸರಕಾರ 1999-2000ರಲ್ಲಿ ಅನುಷ್ಠಾನಕ್ಕೆ ತಂದ, ಒಳಮೀಸಲಾತಿ ಆದೇಶವನ್ನು ಆಂಧ್ರ ಪ್ರದೇಶ ಹೈಕೋರ್ಟ್‌ನಲ್ಲಿ, ತರುವಾಯ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಿದರು. ಸರ್ವೋಚ್ಚ ನ್ಯಾಯಾಲಯದಲ್ಲಿ, ಕರ್ನಾಟಕ ಮೂಲದ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ನೇತೃತ್ವದ ಐವರು ನ್ಯಾಯಾಧೀಶರ ಪೀಠ ದಿನಾಂಕ 5-5-2004ರಂದು ತೀರ್ಪು ಪ್ರಕಟಿಸಿ:

‘ಸಂವಿಧಾನದಲ್ಲಿ ಪರಿಶಿಷ್ಟ ಜಾತಿ ಪಂಗಡಗಳನ್ನು ಮಾರ್ಪಾಡು ಮಾಡುವ, ವಿಂಗಡಿಸುವ ಅಧಿಕಾರ ರಾಜ್ಯಗಳಿಗೆ ಇಲ್ಲ’ ಎಂದು ಆಂಧ್ರಪ್ರದೇಶ ಜಾರಿಗೆ ತಂದಿದ್ದ ಒಳಮೀಸಲಾತಿ ಆದೇಶವನ್ನು ರದ್ದುಪಡಿಸಿತು. ಇದರಿಂದ ರಾಷ್ಟ್ರದ ಯಾವುದೇ ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿ ಅನುಷ್ಠಾನ ಮಾಡುವ ಅಧಿಕಾರ ಇಲ್ಲದಂತಾಯಿತು.

ಈ ತೀರ್ಪನ್ನು ಆಧಾರ ಮಾಡಿಕೊಂಡು, ದವಿಂದರ್ ಸಿಂಗ್ ಎನ್ನುವವರು ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳು ಈ ಹಿಂದೆ ಜಾರಿ ಮಾಡಿದ್ದ ಒಳಮೀಸಲಾತಿ ಆದೇಶಗಳನ್ನು ರದ್ದುಪಡಿಸಬೇಕೆಂದು ಪಂಜಾಬ್-ಹರ್ಯಾಣ ಹೈಕೋರ್ಟ್‌ನಲ್ಲಿ ದಾವೆ ಹೂಡಿದರು. ತರುವಾಯ ಇದು ಸರ್ವೋಚ್ಚ ನ್ಯಾಯಾಲಯದ ಮುಂದೆ ಬಂದಿತು. ಸರ್ವೋಚ್ಚ ನ್ಯಾಯಾಲಯದಲ್ಲಿ ನ್ಯಾಯಮೂರ್ತಿ ಅರುಣ್ ಮಿಶ್ರಾ ನೇತೃತ್ವದ ಐವರ ಪೀಠ ದಿನಾಂಕ 27-8-2020ರಂದು ತೀರ್ಪನ್ನು ಪ್ರಕಟಿಸಿ:

‘ಬುಟ್ಟಿ ಒಳಗಿನ ಹಣ್ಣುಗಳು ಹಸಿದವರಿಗೆ, ದುರ್ಬಲರಿಗೆ ಸಿಗದೇ, ತಾಕತ್ತಿದ್ದವರ ಪಾಲಾಗುವುದನ್ನು ನೋಡಿ ಸುಮ್ಮನಿರಲಾಗದು. ಇಂತಹ ಸಾಮಾಜಿಕ ವಾಸ್ತವಗಳನ್ನು ಏಕ ಸ್ವರೂಪದ ಸಮುದಾಯದಡಿಯಲ್ಲಿ ಮುಚ್ಚಿಡಲಾಗದು. ಮೀಸಲಾತಿಯ ಹಂಚಿಕೆ ಸಾಮಾಜಿಕ ನ್ಯಾಯದ ಭಾಗವೇ ಆಗಿದೆ.’

ಮುಂದುವರಿದು ಸದರಿ ಪೀಠವು, ‘ನಮಗೆ ಮತ್ತೊಂದು ಐವರ ಪೀಠದ(ಸಂತೋಷ್ ಹೆಗ್ಡೆ) ತೀರ್ಪನ್ನು ಪರಿಶೀಲಿಸಲಾಗದು. ಹೀಗಾಗಿ ಸರ್ವೋಚ್ಚ ನ್ಯಾಯಾಲಯದ ಮುಖ್ಯಸ್ಥರು ಏಳು ಅಥವಾ ಅದಕ್ಕಿಂತ ಹೆಚ್ಚಿನ ಸದಸ್ಯರ ಪೀಠ ರಚಿಸಿ, ಈ ವಿಷಯವನ್ನು ಆ ಪೀಠಕ್ಕೆ ವರ್ಗಾಯಿಸಬೇಕು’ ಎಂದು ತೀರ್ಪಿನಲ್ಲಿ ತಿಳಿಸಿತು.

ಅದರಂತೆ, ಸರ್ವೋಚ್ಚ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿಯಾಗಿದ್ದ ಚಂದ್ರಚೂಡ್ ನೇತೃತ್ವದ 7 ನ್ಯಾಯಮೂರ್ತಿಗಳ ಪೀಠ ನ್ಯಾ.ಸಂತೋಷ್ ಹೆಗ್ಡೆ ಮತ್ತು ನ್ಯಾ.ಅರುಣ್ ಮಿಶ್ರಾ ನೇತೃತ್ವದ ಎರಡು ಭಿನ್ನ ತೀರ್ಪುಗಳನ್ನು ಪರಿಶೀಲಿಸಿ, ದಿನಾಂಕ 1-8-2024ರಂದು ತನ್ನ ತೀರ್ಪನ್ನು ಪ್ರಕಟಿಸಿತು:

‘ಭಾರತ ಸಂವಿಧಾನದ ಅವಕಾಶಗಳಡಿ, ರಾಜ್ಯ ಸರಕಾರಗಳು ಪರಿಶಿಷ್ಟ ಜಾತಿಗಳನ್ನು ಉಪವರ್ಗೀಕರಿಸುವ ಅಧಿಕಾರವನ್ನು ಹೊಂದಿವೆ. ಈ ವರ್ಗದೊಳಗೆ ಅನನುಕೂಲಕರ ಗುಂಪುಗಳನ್ನು ಗುರುತಿಸಲು ಮತ್ತು ಅವರಿಗೆ ಹೆಚ್ಚು ಕೇಂದ್ರೀಕೃತ ಪ್ರಯೋಜನಗಳನ್ನು ಒದಗಿಸಲು ರಾಜ್ಯ ಸರಕಾರಗಳಿಗೆ ಅಧಿಕಾರವಿದೆ’ ಎಂದು ತಿಳಿಸಿತು.

ಈ ತೀರ್ಪಿನ ತರುವಾಯ, ಯಾವುದೇ ರಾಜ್ಯ ಸರಕಾರಗಳಿಗೆ ಒಳ ಮೀಸಲಾತಿಗಳನ್ನು ಅನುಷ್ಠಾನ ಮಾಡಲು ನಿರ್ಬಂಧಗಳು ಇಲ್ಲ. ಸುಮಾರು ಮೂರು ದಶಕಗಳಿಗೂ ಹೆಚ್ಚು ಕಾಲ ಅಡ್ಡಿಯಾಗಿದ್ದ ನ್ಯಾಯಾಲಯದ ತಾಂತ್ರಿಕ ತೊಡಕು ನಿವಾರಣೆಯಾಯಿತು.

ಕರ್ನಾಟಕ ರಾಜ್ಯದಲ್ಲಿ ಒಳ ಮೀಸಲಾತಿಯ ಹೆಜ್ಜೆಗಳು:

1. 1990ರ ದಶಕದಿಂದ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಪೈಕಿ ಮಾದಿಗ ಜಾತಿಯವರು, ಅವರ ಸಂಘಟನೆಗಳು/ರಾಜಕಾರಣಿಗಳು, ಒಳಮೀಸಲಾತಿ ಬೇಡಿಕೆ ಇಟ್ಟುಕೊಂಡು ಹೋರಾಟ, ಸತ್ಯಾಗ್ರಹ, ಕಾಲ್ನಡಿಗೆ, ಜಾಥಾ, ಸಾವು ನೋವುಗಳನ್ನು ಎದುರಿಸಿದ್ದಾರೆ, ಅನುಭವಿಸಿದ್ದಾರೆ;

2. 2004ರಲ್ಲಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ನೇತೃತ್ವ ಕಾಂಗ್ರೆಸ್ ಸರಕಾರ, ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗವನ್ನು ಒಳ ಮೀಸಲಾತಿ ಸಂಬಂಧ ನೇಮಕ ಮಾಡಿತು;

3. ಈ ಆಯೋಗವು ಸುಮಾರು 7 ವರ್ಷಗಳ ಕಾಲ ಅಧ್ಯಯನ ನಡೆಸಿ, ದಿನಾಂಕ 14-7-2012ರಂದು ಬಿಜೆಪಿ ಸರಕಾರದ ಮುಖ್ಯಮಂತ್ರಿ ಸದಾನಂದ ಗೌಡ ಇವರಿಗೆ ವರದಿ ನೀಡಿತು; ಆ ವರದಿಯನ್ನು ಕಾಂಗ್ರೆಸ್, ಬಿಜೆಪಿ, ಜನತಾದಳ ಯಾವ ಸರಕಾರಗಳು ಗಮನಿಸಲಿಲ್ಲ;

4. 2022ರಲ್ಲಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ, ಕಾನೂನು ಸಚಿವ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ ಮಾಡಿ, ಒಳ ಮೀಸಲಾತಿ ಸಂಬಂಧ ವರದಿ ನೀಡಲು ಸೂಚಿಸಿತು;

5. ಮಾಧುಸ್ವಾಮಿ ನೇತೃತ್ವದ ಸಂಪುಟ ಉಪಸಮಿತಿ ನೀಡಿದ ವರದಿಯನ್ನು ಆಧರಿಸಿ, ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಒಳಮೀಸಲಾತಿಯನ್ನು ಅನುಷ್ಠಾನಗೊಳಿಸಲು ದಿನಾಂಕ 27-3-2023ರಂದು ಸರಕಾರಿ ಆದೇಶವನ್ನು ಹೊರಡಿಸಿತು. ಈ ಆದೇಶದಲ್ಲಿಯೇ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು (ಕಾರಣಗಳನ್ನು ನೀಡದೆ) ‘ಮುಕ್ತಾಯ’ಗೊಳಿಸಿರುವುದಾಗಿ ಘೋಷಿಸಿತು.

6. ಸರ್ವೋಚ್ಚ ನ್ಯಾಯಾಲಯದ ನ್ಯಾ. ಸಂತೋಷ್ ಹೆಗ್ಡೆಯವರ ತೀರ್ಪಿನ ತೊಡಕುಗಳಿಂದ ಈ ಸರಕಾರಿ ಆದೇಶ ಅಂದು ಅನುಷ್ಠಾನ ಆಗಲಿಲ್ಲ; ಈ ತೊಡಕುಗಳಿದ್ದರೂ ಬಿಜೆಪಿ ಸರಕಾರ ಏತಕ್ಕೆ ಸರಕಾರಿ ಆದೇಶ ಮಾಡಿತು ತಿಳಿಯಲಿಲ್ಲ; ಮತ್ತೊಂದು ಈ ಸರಕಾರಿ ಆದೇಶವನ್ನು ಕೇಂದ್ರದ ಮೋದಿ ಸರಕಾರಕ್ಕೆ ಕೂಡ ರಾಜ್ಯ ಸರಕಾರ ಕಳುಹಿಸಿತ್ತು. ಆ ಬಗ್ಗೆ ಕೇಂದ್ರ ಸರಕಾರ ಏನು ಮಾಡಿತು ಎಂದು ತಿಳಿಯಲಿಲ್ಲ;

7. ಮುಂದೆ, ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಮೂರ್ತಿಗಳ ಪೀಠ ದಿನಾಂಕ 1-8-2024ರಂದು ನೀಡಿದ ತೀರ್ಪಿನ ತರುವಾಯ, ಕರ್ನಾಟಕ ರಾಜ್ಯದಲ್ಲಿ ಹಾಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಒಳಮೀಸಲಾತಿ ಅನುಷ್ಠಾನ ಸಂಬಂಧ ಅನುಕ್ರಮವಾಗಿ ದಿನಾಂಕ 12-11-2024 ಮತ್ತು 3-12-2024ಗಳಂದು ಸರಕಾರಿ ಆದೇಶವನ್ನು ಹೊರಡಿಸಿ, ಮಾಜಿ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಇವರ ಅಧ್ಯಕ್ಷತೆಯಲ್ಲಿ ಏಕಸದಸ್ಯ ವಿಚಾರಣಾ ಆಯೋಗವನ್ನು ರಚನೆ ಮಾಡಿತು;

8. ಈ ಆಯೋಗವು ದಿನಾಂಕ 27-3-2025ರಂದು ಸರಕಾರಕ್ಕೆ ಮಧ್ಯಂತರ ವರದಿಯನ್ನು ನೀಡಿ, ‘ಪರಿಶಿಷ್ಟ ಜಾತಿಗಳ ಪಟ್ಟಿ ಒಳಗಿನ ಆದಿ ಕರ್ನಾಟಕ, ಆದಿ ದ್ರಾವಿಡ ಮತ್ತು ಆದಿ ಆಂಧ್ರ ಈ ಹೆಸರಿನಲ್ಲಿ ಕೂಡ ಮಾದಿಗರು ಮತ್ತು ಹೊಲಯ ಜಾತಿಯ ಇಬ್ಬರೂ ಜಾತಿ ಪ್ರಮಾಣ ಪತ್ರ ಪಡೆದಿದ್ದಾರೆ. ಈ ಕಾರಣದಿಂದ ಇವರ ಜನಸಂಖ್ಯೆಯನ್ನು ನಿಖರವಾಗಿ ತಿಳಿಯಲು ಕಷ್ಟವಾಗಿದೆ. ವಾಸ್ತವ ತಿಳಿಯುವುದಕ್ಕಾಗಿ, ಈ ಪರಿಶಿಷ್ಟರ ಜಾತಿಗಣತಿ ಅನಿವಾರ್ಯ’ವೆಂದು ಸರಕಾರಕ್ಕೆ ವರದಿಯಲ್ಲಿ ತಿಳಿಸಿತು;

9. ಸಿದ್ದರಾಮಯ್ಯ ಸರಕಾರ ದಿನಾಂಕ 27-3-2025ರಂದು ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಉಲ್ಲೇಖಿತ ಪರಿಶಿಷ್ಟರ ಜಾತಿಗಣತಿಯನ್ನು ಮಾಡಲು ತೀರ್ಮಾನ ತೆಗೆದುಕೊಂಡು, ಪರಿಶಿಷ್ಟರ ಜಾತಿಗಣತಿಗೆ ಆದೇಶಿಸಿತ್ತು; ಈಗ ಆ ಪರಿಶಿಷ್ಟರ ಜಾತಿಗಣತಿ ಮುಕ್ತಾಯವಾಗಿದೆ. ನ್ಯಾಯಮೂರ್ತಿ ನಾಗಮೋಹನದಾಸ್ ಏಕಸದಸ್ಯ ಆಯೋಗ ವರದಿ ತಯಾರಿಸುವ ಪ್ರಕ್ರಿಯೆಯಲ್ಲಿದೆ;

10. ಪರಿಶಿಷ್ಟರ ಈ ಜಾತಿಗಣತಿಗೆ ಕೂಡ ಒತ್ತಡ ತರುವ ಸಲುವಾಗಿ ರಾಜ್ಯವ್ಯಾಪಿ ಮಾದಿಗ ಸಂಘಟನೆಗಳು ಕಾಲ್ನಡಿಗೆ, ಜಾಥಾ, ಸತ್ಯಾಗ್ರಹ ಹೋರಾಟಗಳನ್ನು ಮಾಡಿವೆ. ಮಾದಿಗರಲ್ಲಿ ಜಾಗೃತಿ ಹೆಚ್ಚು ಮೂಡಿಸಿವೆ. ಇತ್ತ ಹೊಲಯ ಜಾತಿಯ ಕೆಲವು ಸಂಘಟನೆಯ ನಾಯಕರು ಬೆಂಗಳೂರಿನ ಅಂಬೇಡ್ಕರ್ ಭವನದಲ್ಲಿ ಒಂದು ಸಭೆ ನಡೆಸಿ, ಜಾಗೃತಿ ಮೂಡಿಸಿದ್ದಾರೆ.

11. ಕಾಂಗ್ರೆಸ್ ಪಕ್ಷವನ್ನು ವಿರೋಧಿಸುವ ಕೆಲವರು, ಅಪಪ್ರಚಾರ, ವಾಟ್ಸ್‌ಆ್ಯಪ್‌ಗಳಲ್ಲಿ ನಾನಾ ವಿಧದ ಸುದ್ದಿಗಳನ್ನು ಹರಿಬಿಟ್ಟು ಗೊಂದಲಗಳನ್ನು ಸೃಷ್ಟಿಸುತ್ತಿದ್ದರು. ಈ ಗೊಂದಲಗಳ ಬಗ್ಗೆ ನ್ಯಾಯಮೂರ್ತಿ ನಾಗಮೋಹನ ದಾಸ್ ಅವರೇ ನೇರವಾಗಿ ಮಾಧ್ಯಮಗಳಲ್ಲಿ ‘‘ಪರಿಶಿಷ್ಟ ಜಾತಿ ಮೀಸಲಾತಿ ಉಪ ವರ್ಗೀಕರಣಕ್ಕಾಗಿ (ಒಳಮೀಸಲಾತಿಗಾಗಿ) ಮನೆಮನೆ ಸಮೀಕ್ಷೆ ಮಾಡುವುದು ಖಚಿತ. ಯಾವುದೇ ಮಾಧ್ಯಮಗಳು ಸುಳ್ಳು ಸುದ್ದಿಯನ್ನು ಹಬ್ಬಿಸಬಾರದು. ವರದಿಗಳನ್ನು ಯಾರು ನಂಬಬಾರದು. ಏನೂ ಗೊತ್ತಿಲ್ಲದೆ ಬರೆಯುವ ಅಪ್ರಯೋಜಕ ವರದಿಗಳ ಬಗ್ಗೆ ಸಮುದಾಯಗಳು ಕಿವಿಗೊಡಬಾರದು’’ ಎಂದು ವಿನಂತಿಸಿದ್ದರು;

12. 2014ರಲ್ಲಿ ರಚಿಸಲಾಗಿದ್ದ ಕಾಂತರಾಜು ನೇತೃತ್ವದ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಯನ ನಡೆಸಿ ನೀಡಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ-2015 ವರದಿಯನ್ನು ಹಾಲಿ ಸರಕಾರ ಸ್ವೀಕರಿಸಿತ್ತು. ದಿನಾಂಕ 11-4-2025ರಂದು ಜರುಗಿದ ಸಚಿವ ಸಂಪುಟದ ಸಭೆಯಲ್ಲಿ ಸದರಿ ವರದಿಯನ್ನು ಮಂಡಿಸಿತ್ತು. ಆದರೆ ಇತ್ತೀಚೆಗೆ ಸಚಿವ ಸಂಪುಟದಲ್ಲಿ ಚರ್ಚಿಸಿ, ಕಾಂತರಾಜು ವರದಿಗೆ 10 ವರ್ಷಗಳು ಮೀರಿದೆ. ಈ ತಾಂತ್ರಿಕ ತೊಡುಕುಗಳಿಂದ ರಾಜ್ಯದಲ್ಲಿ ಹೊಸದಾಗಿ ಜಾತಿಗಣತಿ ಮಾಡುವುದಾಗಿ ತಿಳಿಸಿ, ಇತ್ತೀಚೆಗೆ ಮಧುಸೂದನ್ ನಾಯಕ್, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಇವರೊಡನೆ ಮತ್ತು ಇಲಾಖೆ ಅಧಿಕಾರಿಗಳೊಡನೆ ಮುಖ್ಯಮಂತ್ರಿಗಳು ಚರ್ಚಿಸಿ, ಸೆಪ್ಟಂಬರ್‌ನಲ್ಲಿ ರಾಜ್ಯದಲ್ಲಿ ಜಾತಿ ಗಣತಿ ಮಾಡಲು ಸೂಚನೆಗಳನ್ನು ನೀಡಿದ್ದಾರೆ;

13. ಕಾಂತರಾಜು ವರದಿಯಲ್ಲಿ ನಮೂದಿಸಿದ ಎಸ್‌ಸಿ/ಎಸ್‌ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಪ್ರಮಾಣವನ್ನು ಈಗಾಗಲೇ ರಾಜ್ಯದಲ್ಲಿ ಹೆಚ್ಚಳ ಮಾಡಲಾಗಿದೆ. ಜೊತೆಗೆ SCSP/TSP ಯೋಜನೆ ಮತ್ತು ಸವಲತ್ತುಗಳಲ್ಲಿ ಅವರ ಪ್ರಮಾಣಗಳನ್ನು ಹೆಚ್ಚಳ ಮಾಡಲಾಗಿದೆ.

ಬಿಜೆಪಿ/ಆರೆಸ್ಸೆಸ್ ಬೆಂಬಲಿತ ದಲಿತ ಹೋರಾಟಗಾರರು ಏತಕ್ಕೆ ಪ್ರಶ್ನಿಸುತ್ತಿಲ್ಲ?

1. ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರ ತನ್ನ ಕೇಂದ್ರ ಸರಕಾರದ ನೇಮಕಾತಿಗಳಲ್ಲಿ ಒಳಮೀಸಲಾತಿಯನ್ನು ಈವರೆಗೂ ಅನುಷ್ಠಾನ ಮಾಡಿಲ್ಲ. ಆ ಬಗ್ಗೆ ಭಾರತ ಸರಕಾರದ DOPT ಮಂತ್ರಾಲಯ ಯಾವುದೇ ಸರಕಾರಿ ಆದೇಶವನ್ನು ಈವರೆಗೂ ಹೊರಡಿಸಿಲ್ಲ;

2. ಮುಂದುವರಿದು, ಸುಮಾರು 29+ ಸರಕಾರಿ ಕಂಪೆನಿ, ಬೋರ್ಡ್, ಕಾರ್ಪೊರೇಷನ್‌ಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಖಾಸಗೀಕರಣಗೊಳಿಸಿದೆ;

3. ಇನ್ನು, ಲಾಭದಾಯಕ ವಾಗಿರುವ ಭಾರತ ಸರಕಾರದ ಬಹುತೇಕ ಸರಕಾರಿ ಕಂಪೆನಿ, ಬೋರ್ಡ್, ಕಾರ್ಪೊರೇಷನ್‌ಗಳಲ್ಲಿ ನೇರ ನೇಮಕಾತಿಗಳ ಬದಲಿಗೆ ಗುತ್ತಿಗೆ ಆಧಾರದ ನೇಮಕಾತಿಗಳನ್ನು ಮಾಡುತ್ತಿದೆ;

4. ಈ ಕಾರಣಗಳಿಂದ ಮೀಸಲಾತಿಯ ಲಕ್ಷಾಂತರ ಉದ್ಯೋಗಗಳು ನಷ್ಟವಾಗಿವೆ.

5. 2014ರ ಚುನಾವಣೆ ವೇಳೆಯಲ್ಲಿ ದೇಶದ ಜನತೆಗೆ ನೀಡಿದ ನೂರಾರು ಆಶ್ವಾಸನೆಗಳ ಪೈಕಿ, ಪ್ರತೀ ವರ್ಷ 2 ಕೋಟಿ ಉದ್ಯೋಗಗಳನ್ನು ಸೃಜಿಸುವುದಾಗಿ ನರೇಂದ್ರ ಮೋದಿ ದೇಶದ ಜನತೆಗೆ ಮಾತು ನೀಡಿದ್ದರು. ಆದರೆ ಈವರೆಗೂ ಈ ಉದ್ಯೋಗಗಳನ್ನು ಸೃಜಿಸಿಲ್ಲ. ಅವರು ನೀಡಿದ ಆಶ್ವಾಸನೆ ಸುಳ್ಳಾಗಿದೆ;

6. ಶತಶತಮಾನಗಳ ಕಾಲದಿಂದ ಶೋಷಣೆಗೆ ಒಳಗಾದ ಪರಿಶಿಷ್ಟರಿಗೆ ಮೀಸಲು ಅಥವಾ ಸವಲತ್ತುಗಳಿಗಾಗಿ ಕಾರ್ಯಕ್ರಮ ರೂಪಿಸಿದರೆ, ದತ್ತಾಂಶ ಕೇಳುವ ಸರ್ವೋಚ್ಚ ನ್ಯಾಯಾಲಯ, ಮೋದಿ ಸರಕಾರ ಇಡಬ್ಲ್ಯುಎಸ್‌ನವರಿಗೆ ಶೇ.10 ಮೀಸಲಾತಿಯನ್ನು ನೀಡಿದಾಗ, ಯಾವುದೇ ದತ್ತಾಂಶ ಕೇಳದೆ, ಆ ಮೀಸಲಾತಿ ಸಂವಿಧಾನಬದ್ಧ ಎಂದು ಎತ್ತಿ ಹಿಡಿಯಿತು;

7. ಇಂತಹ ನೂರಾರು ಗೊಂದಲಗಳು, ನೋವುಗಳು ಇವೆ. ಆದರೆ ಆ ವಿಷಯಗಳ ಬಗ್ಗೆ ರಾಜಕಾರಣಿಗಳು, ಹೋರಾಟಗಾರರು, ಮಠಮಾನ್ಯಗಳು, ಬಿಜೆಪಿ/ಆರೆಸ್ಸೆಸ್ ಬೆಂಬಲಿತ ದಲಿತ ಸಂಘಟನೆಗಳು ಏತಕ್ಕೆ ಧ್ವನಿ ಎತ್ತುತ್ತಿಲ್ಲ? ಪಕ್ಷಪಾತಿಗಳೇ? ಪ್ರಶ್ನಿಸಲು ಹೇಡಿತನವೇ?.

ಒಳ ಮೀಸಲಾತಿ ವಿಷಯದಲ್ಲಿ ರಾಜ್ಯದಲ್ಲಿ ಬಿಜೆಪಿ/ಆರೆಸ್ಸೆಸ್ ಬೆಂಬಲಿತ ದಲಿತ ನಾಯಕರು ರಾಜ್ಯವ್ಯಾಪಿ ಸಂಚರಿಸುತ್ತ, ಪರಿಶಿಷ್ಟರಲ್ಲಿ ಸೃಷ್ಟಿಸುತ್ತಿರುವ ಗೊಂದಲಗಳ ಬಗ್ಗೆ ವಾಸ್ತವ/ಜನಜಾಗೃತಿ ಮತ್ತು ಸಾಮಾಜಿಕ ಕಾಳಜಿಗಾಗಿ ಈ ವಿವರಗಳನ್ನು ಬರೆದಿದ್ದೇನೆ; ಅಭಿಪ್ರಾಯಗಳಿಗೆ ಸ್ವಾಗತವಿದೆ.

share
ಎಸ್. ಮೂರ್ತಿ
ಎಸ್. ಮೂರ್ತಿ

ರಾಜ್ಯ ಮುಖ್ಯ ಸಂಚಾಲಕರು, ಅಹಿಂದ ಚಳವಳಿ

Next Story
X