Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೋಟ್ ಬ್ಯಾನ್ ಆದ ಎಂಟು ವರ್ಷಗಳ ಬಳಿಕವೂ...

ನೋಟ್ ಬ್ಯಾನ್ ಆದ ಎಂಟು ವರ್ಷಗಳ ಬಳಿಕವೂ 2024ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಮೂರು ಪಟ್ಟು ಹೆಚ್ಚಾಗಿದ್ದುದು ಹೇಗೆ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.22 Jun 2025 2:30 PM IST
share
ನೋಟ್ ಬ್ಯಾನ್ ಆದ ಎಂಟು ವರ್ಷಗಳ ಬಳಿಕವೂ 2024ರಲ್ಲಿ ಸ್ವಿಸ್ ಬ್ಯಾಂಕ್‌ನಲ್ಲಿ ಭಾರತೀಯರ ಹಣ ಮೂರು ಪಟ್ಟು ಹೆಚ್ಚಾಗಿದ್ದುದು ಹೇಗೆ?

2014ರ ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತ್ತು ಅದಕ್ಕೂ ಮೊದಲು ಏನೇನೆಲ್ಲಾ ಹೇಳಲಾಯಿತು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ.

ಸ್ವಿಸ್ ಬ್ಯಾಂಕ್‌ಗಳಲ್ಲಿನ ಕಪ್ಪು ಹಣವನ್ನು ಭಾರತಕ್ಕೆ ತರಲಾಗುವುದು ಎನ್ನಲಾಯಿತು. ಅದನ್ನು ಪ್ರತಿಯೊಬ್ಬ ಭಾರತೀಯರಿಗೂ ಹಂಚಲಾಗುವುದು ಎನ್ನಲಾಯಿತು.ಇಲ್ಲಿ ಚಿನ್ನದ ರಸ್ತೆಗಳನ್ನೇ ಬೇಕಾದ್ರೂ ಮಾಡಬಹುದು ಎನ್ನಲಾಯಿತು. ಆದರೆ ಕಪ್ಪು ಹಣ ವಾಪಸ್ ಬರಲಿಲ್ಲ.

ಇದೆಲ್ಲ ಹೇಳಿ ಜನರನ್ನು ವಂಚಿಸಿ 11 ವರ್ಷಗಳೇ ಆಗಿಹೋಗಿವೆ. ಈ ನಡುವೆ, ಈಗ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ಹಿಂದಿನ ವರ್ಷಗಳಿಗಿಂತ ಮೂರು ಪಟ್ಟು ಹೆಚ್ಚಾಗಿದೆ ಎಂಬ ಸುದ್ದಿ ಬರುತ್ತಿದೆ.

2024ರಲ್ಲಿ, ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ 37,600 ಕೋಟಿ ರೂ.ಗಳಿಗೆ ಮುಟ್ಟಿದೆ ಎಂದು ವರದಿಗಳು ಹೇಳುತ್ತವೆ. 2021ರ ನಂತರದ ತೀರಾ ಏರಿಕೆಯನ್ನು ಅದು ತೋರಿಸುತ್ತದೆ. ಇದು 2023ರಲ್ಲಿ ಇದ್ದುದಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ.

ಅಂದರೆ, 2023ರಲ್ಲಿ ಸ್ವಿಸ್ ಬ್ಯಾಂಕ್‌ಗಳಲ್ಲಿ 9,771 ಕೋಟಿ ರೂ ಇತ್ತು. ಇದು ಈಗ ಮೂರು ಪಟ್ಟು ಹೆಚ್ಚಿದೆ.

ಸ್ವಿಸ್ ಬ್ಯಾಂಕ್‌ಗಳಲ್ಲಿರುವ ಭಾರತ ಅಥವಾ ಭಾರತೀಯರ ಎಲ್ಲಾ ಹಣ ಅಕ್ರಮ ಮತ್ತು ಕಪ್ಪು ಹಣ ಅಲ್ಲ ಎಂದು ಹೇಳುವುದು ಇಲ್ಲಿ ಮುಖ್ಯ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಇಡುವವರು ಅದನ್ನು ಪ್ರಾಮಾಣಿಕ ರೀತಿಯಲ್ಲಿಯೂ ಇಡಬಹುದು. ಅದೇನೇ ಇದ್ದರೂ ಈಗ ವಿಪರೀತ ಹೆಚ್ಚಳವಾಗಿದ್ದು ನಿಜ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.

2010ರಲ್ಲಿ ಈ ಹಣ ಸುಮಾರು 8,500 ಕೋಟಿ ರೂ. ಇತ್ತು. 2016ರಲ್ಲಿ ಸುಮಾರು 7,000 ಕೋಟಿ ರೂ. ಆಯಿತು. 2017ರಲ್ಲಿ ಇದು ಮತ್ತೆ 11,000 ಕೋಟಿ ರೂ.ಗಳಿಗೆ ಏರಿತು.

2019ರಲ್ಲಿ ಮೋದಿಯವರ ಎರಡನೇ ಅವಧಿಯಲ್ಲಿ ಇದು ಸುಮಾರು 6,625 ಕೋಟಿ ರೂ. ಆಯಿತು. ಕ್ರಮೇಣ ನಿರಂತರ ಕುಸಿತ ಕಾಣುತ್ತಿದೆ ಎಂದು ನಂಬಲಾಗಿತ್ತು.

ನಂತರ 2020ರಲ್ಲಿ ಕೋವಿಡ್ ಸಮಯದಲ್ಲಿ, 13 ವರ್ಷಗಳಲ್ಲಿಯೇ ಸ್ವಿಸ್ ಬ್ಯಾಂಕ್ ಖಾತೆಗಳಲ್ಲಿ ಭಾರತೀಯರ ಗರಿಷ್ಠ ಹಣವಿತ್ತು. ಅದು 20,700 ಕೋಟಿ ರೂ.ಗಳಷ್ಟಿತ್ತು ಎಂದು ವರದಿಗಳು ಹೇಳುತ್ತಿವೆ.

2021ರಲ್ಲಂತೂ ಈ ದಾಖಲೆಯನ್ನು ಮುರಿಯುವ ಹಾಗೆ, 30,500 ಕೋಟಿ ರೂ.ಗೆ ಏರಿತು.

2022ರಲ್ಲಿ ಅದು 28,000 ಕೋಟಿ ರೂ. ಗಳಿಗೆ ಬಂತು.

ಆನಂತರ 2023ರಲ್ಲಿ ಶೇ. 70ರಷ್ಟು ತೀವ್ರ ಕುಸಿತ ಕಂಡು, ಅದು 9,771 ಕೋಟಿ ರೂ. ಗಳಿಗೆ ಇಳಿಯಿತು.

ಆದರೆ ಸ್ವಿಸ್ ಬ್ಯಾಂಕ್‌ಗಳಲ್ಲಿ ಭಾರತೀಯರ ಹಣ 2020, 2021 ಮತ್ತು 2022ರಲ್ಲಿ ಹೆಚ್ಚಿದ್ದಕ್ಕಿಂತ 2024ರಲ್ಲಿ ಹೆಚ್ಚಾಗಿದೆ. ಇಕನಾಮಿಕ್ ಟೈಮ್ಸ್ ವರದಿಯ ಪ್ರಕಾರ 37,600 ಕೋಟಿ ರೂ. ಅಂದರೆ ಮೂರು ಪಟ್ಟು ಹೆಚ್ಚಾಗಿದೆ.

2014ರ ಚುನಾವಣೆಯ ಸಮಯದಲ್ಲಿ, ನಾವು ಕಪ್ಪು ಹಣ ಮರಳಿ ತರುತ್ತೇವೆ ಎಂದು ಹೇಳಲಾಗಿತ್ತು. ಆಮೇಲೆ 2016ರಲ್ಲಿ ನೋಟ್ ಬ್ಯಾನ್ ಮೂಲಕ ಕಪ್ಪು ಹಣ ಇಲ್ಲವಾಗಿಸಲಾಗುತ್ತದೆ ಎನ್ನಲಾಗಿತ್ತು. ಆದರೆ ಅದನ್ನು ನಿಯಂತ್ರಿಸಲಾಗಲಿಲ್ಲ. ಅದು ಹಲವು ಪಟ್ಟು ಹೆಚ್ಚಾಗುತ್ತಿದೆ.

ಇದನ್ನು ಹೇಗೆ ಅರ್ಥಮಾಡಿಕೊಳ್ಳಬೇಕು ಎಂಬುದು ಕುತೂಹಲಕಾರಿಯಾಗಿದೆ.

2014, 2016, 2019ರಲ್ಲಿ ಸರಕಾರ ಕಪ್ಪು ಹಣದ ಬಗ್ಗೆ ನೀಡಿದ ಕೆಲವು ಹೇಳಿಕೆಗಳು ಎಲ್ಲರಿಗೂ ನೆನಪಿರುತ್ತವೆ.

‘‘ನಾವು ಕಪ್ಪು ಹಣದ ವಿರುದ್ಧ ಹೋರಾಟ ಪ್ರಾರಂಭಿಸಿದ್ದೇವೆ ಮತ್ತು ಈ ಹೋರಾಟ ನಿಲ್ಲುವುದಿಲ್ಲ’’ ಎಂದು ಹೇಳಲಾಗಿತ್ತು.

‘‘ನಾವು ತಂತ್ರಜ್ಞಾನವನ್ನು ಬಳಸಿದ್ದೇವೆ ಮತ್ತು ತಂತ್ರಜ್ಞಾನದ ಮೂಲಕ, ಸರಕಾರಿ ಖಜಾನೆಯಿಂದ ಹೊರಬಂದು ಬೇರೆಡೆಗೆ ಹೋಗುತ್ತಿದ್ದ ಹಣದ ಶೇ. 90 ಉಳಿಸಲಾಗಿದೆ ಎನ್ನಲಾಗಿತ್ತು.

ತಂತ್ರಜ್ಞಾನದ ಮೂಲಕ ಸಾವಿರಾರು ಕೋಟಿ ರೂಪಾಯಿಗಳನ್ನು ಉಳಿಸಲಾಗಿದೆ. ಅದು ತಪ್ಪು ಕೈಗಳಿಗೆ ಹೋಗುತ್ತದೆ. ದೇಶವನ್ನು ಅಂತಹ ವ್ಯವಸ್ಥೆಗಳು ನಡೆಸುತ್ತಿದ್ದವು. ನಾವು ಎರಡೂವರೆ ಲಕ್ಷಕ್ಕೂ ಹೆಚ್ಚು ಶೆಲ್ ಕಂಪೆನಿಗಳನ್ನು ಮುಚ್ಚಿದ್ದೇವೆ ಮತ್ತು ಸುಮಾರು ಎರಡು ಲಕ್ಷ ಮತ್ತು ಎರಡೂವರೆ ಲಕ್ಷ ಕಂಪೆನಿಗಳು ಇನ್ನೂ ಪರಿಶೀಲನೆಯಲ್ಲಿವೆ. ಅವುಗಳನ್ನು ಯಾವುದೇ ಸಮಯದಲ್ಲಿ ಮುಚ್ಚುವ ಸಾಧ್ಯತೆಗಳಿವೆ’’ ಎನ್ನಲಾಗಿತ್ತು.

‘‘ಈಗ ಜನರು ನನ್ನನ್ನು ಅರ್ಥಮಾಡಿಕೊಂಡಿದ್ದಾರೆ. ಇಷ್ಟು ದಿನ ಅವರಿಗೆ ಅರ್ಥವಾಗಲಿಲ್ಲ. ಆದರೆ ಅವರಿಗೆ ಇನ್ನೂ ಒಂದು ಅಥವಾ ಎರಡು ಡೋಸ್ ಸಿಕ್ಕಾಗ, ಅವರು ಅರ್ಥಮಾಡಿಕೊಂಡರು.

ಆದರೆ ಇದು ಅಂತ್ಯವಲ್ಲ. ಇದು ಪೂರ್ಣವಿರಾಮವಲ್ಲ.

ಇಂದು ನಾನು ಇದು ಪೂರ್ಣವಿರಾಮವಲ್ಲ ಎಂದು ಬಹಿರಂಗವಾಗಿ ಹೇಳುತ್ತೇನೆ. ದೇಶದಲ್ಲಿ ಭ್ರಷ್ಟಾಚಾರ ಮತ್ತು ವಂಚನೆಯನ್ನು ನಿಲ್ಲಿಸಲು ನನ್ನ ಮನಸ್ಸಿನಲ್ಲಿ ಇನ್ನೂ ಹಲವು ಯೋಜನೆಗಳು ಇವೆ. ನಾನು ಇದನ್ನು ಪ್ರಾಮಾಣಿಕ ಜನರಿಗಾಗಿ ಮಾಡುತ್ತಿದ್ದೇನೆ. ನಾನು ಇದನ್ನು ದೇಶದ ಬಡ ಜನರಿಗಾಗಿ ಮಾಡುತ್ತಿದ್ದೇನೆ’’ ಎಂದು ಮೋದಿ ಹೇಳಿದ್ದರು.

ಕಪ್ಪು ಹಣವನ್ನು ಮರಳಿ ತರುವುದು ಮೋದಿ ಸರಕಾರದ ಸ್ಪಷ್ಟವಾಗಿ ಘೋಷಿಸಿದ ಕಾರ್ಯಸೂಚಿಯಾಗಿತ್ತು.

ಆದರೆ ಆ ಕಪ್ಪು ಹಣ ಮರಳಿ ದೇಶಕ್ಕೆ ಬರಲೇ ಇಲ್ಲ.

2009ರಿಂದ 2014ರವರೆಗಿನ ಯುಪಿಎ ಸರಕಾರದ ವಿರುದ್ಧದ ಬಿಜೆಪಿಯ ಸಂಪೂರ್ಣ ಅಭಿಯಾನ ಈ ಕಪ್ಪು ಹಣವನ್ನು ಹೇಗೆ ಮರಳಿ ತರುವುದು ಎಂಬುದರ ಮೇಲಿತ್ತು.

ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ನಿಧಿಯ ವಿಷಯದಲ್ಲಿ ಭಾರತದ ಶ್ರೇಯಾಂಕ 2023ರಲ್ಲಿ 67ರಿಂದ 2024ರಲ್ಲಿ 48 ನೇ ಸ್ಥಾನಕ್ಕೆ ಬಂದು ತಲುಪಿದೆ.

ಭಾರತದ ಸ್ವಿಸ್ ಬ್ಯಾಂಕ್‌ಗಳಲ್ಲಿ ಇರುವ ನಿಧಿ ಹೆಚ್ಚಾಗಿದ್ದರೂ ಅದು ಯುಕೆ ಮತ್ತು ಅಮೆರಿಕದಂತಹ ಪ್ರಮುಖ ಆರ್ಥಿಕತೆಗಳಿಗಿಂತ ತುಂಬಾ ಕೆಳಗಿದೆ. ಅಂದರೆ, ಯುಎಸ್ ಮತ್ತು ಯುಕೆ ಭಾರತಕ್ಕಿಂತ ಹೆಚ್ಚಿನ ಹಣವನ್ನು ಸ್ವಿಸ್ ಬ್ಯಾಂಕ್‌ಗಳಲ್ಲಿ ಹೊಂದಿವೆ.

ಈ 37,600 ಕೋಟಿ ಹಣ ವಿದೇಶಿ ಬ್ಯಾಂಕ್‌ಗೆ ಹೋಗುತ್ತಿದ್ದರೆ, ಇಷ್ಟು ಹಣ ಭಾರತದಲ್ಲಿಲ್ಲ ಎಂದು ಅರ್ಥಮಾಡಿಕೊಳ್ಳಬೇಕು.

ಹಾಗಾದರೆ, ಸರಕಾರ ಏನು ಸಾಧಿಸಿತು? ಅದು ಏನು ಸಾಧಿಸಲು ಸಾಧ್ಯವಾಯಿತು? ಈ ಪ್ರಶ್ನೆಗಳನ್ನು ಕೇಳಲಾಗುತ್ತಿದೆ.

ಇದಕ್ಕೆ ಸಂಬಂಧಿಸಿದಂತೆ ಹಲವು ಪ್ರತಿಕ್ರಿಯೆಗಳು ಬಂದಿವೆ.

ಭಾರತೀಯರ ಹಣವು ಸಿಸ್ ಬ್ಯಾಂಕ್‌ಗಳಲ್ಲಿ ಹೆಚ್ಚಾಗಿದೆ. ಇದು ಮೊದಲಿಗಿಂತ ಹೆಚ್ಚಾಗಿದೆ. ಆದರೆ, ಈ ಸುದ್ದಿಯನ್ನು ನಕಾರಾತ್ಮಕ ದೃಷ್ಟಿಕೋನದಿಂದ ನೋಡಬೇಕೆ?

ಇಂದು ಮಾಹಿತಿ ಹಂಚಿಕೆ ಒಪ್ಪಂದವಿದೆ.

ಹಲವು ವರ್ಷಗಳಿಂದ, ಭಾರತೀಯ ಅಧಿಕಾರಿಗಳು ಸ್ವಿಸ್ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯುತ್ತಿದ್ದಾರೆ. ಯಾವುದೇ ಆತಂಕ, ಯಾವುದೇ ಸಂದೇಹಗಳಿರುವಲ್ಲಿ,

ಭಾರತೀಯ ಅಧಿಕಾರಿಗಳು ಸ್ವಿಸ್ ಬ್ಯಾಂಕ್‌ಗಳಿಂದ ಮಾಹಿತಿ ಪಡೆಯಬಹುದು.

ಈಗ ಭಾರತ ವಿಶ್ವದ ನಾಲ್ಕನೇ ಅತಿದೊಡ್ಡ ಆರ್ಥಿಕತೆಯಾಗಿದೆ. ಆದ್ದರಿಂದ ಭಾರತೀಯರ ಆಸ್ತಿಗಳು ಸಹ ಹೆಚ್ಚುತ್ತಿವೆ ಎಂಬುದು ಸ್ಪಷ್ಟವಾಗಿದೆ.

ಮಾಹಿತಿ ಸಿಗುತ್ತಿರುವ ಹಿನ್ನೆಲೆಯಲ್ಲಿ, ನಮಗೆ ಹೆಚ್ಚಿನ ಸಂದೇಹಗಳಿಲ್ಲ ಮತ್ತು ನಾವು ಈ ವಿಷಯವನ್ನು ನಕಾರಾತ್ಮಕವಾಗಿ ನೋಡಬೇಕಿಲ್ಲ.

ಸ್ವಿಸ್ ಬ್ಯಾಂಕ್‌ಗಳಲ್ಲಿ ಹಣ ಹೆಚ್ಚಾಗುತ್ತಿದ್ದರೆ, ಸ್ವಿಸ್ ಬ್ಯಾಂಕ್‌ಗಳಿಗೆ ಹೋಗುವ ಎಲ್ಲಾ ಹಣ ಕಪ್ಪು ಹಣವಲ್ಲ ಎಂಬುದನ್ನು ಗಮನಿಸಬೇಕು. ಆದರೆ ಈಗ ಅಧಿಕಾರದಲ್ಲಿರುವ ಮೋದಿ ಸರಕಾರ ಅಧಿಕಾರಕ್ಕೆ ಬರುವಾಗ ಹೇಳಿದ್ದೇನು?

ಅಧಿಕಾರಕ್ಕೆ ಬಂದು ಹನ್ನೊಂದು ವರ್ಷಗಳಲ್ಲಿ ಮಾಡಿದ್ದೇನು?

ವಿದೇಶಿ ಬ್ಯಾಂಕುಗಳಲ್ಲಿರುವ ಎಲ್ಲ ದುಡ್ಡನ್ನು ಭಾರತಕ್ಕೆ ತರುತ್ತೇವೆ ಎಂದು ಭಾರೀ ದೊಡ್ಡ ಪ್ರಚಾರ ಅಭಿಯಾನವನ್ನೇ ನಡೆಸಿದವರು ಅಧಿಕಾರದಲ್ಲಿರುವಾಗ ವಿದೇಶಿ ಬ್ಯಾಂಕುಗಳಲ್ಲಿ

ದೇಶದ ದುಡ್ಡು ಇಷ್ಟು ಹೆಚ್ಚಿದ್ದು ಹೇಗೆ?

ಅವರೇ ಹೇಳಿದ ಹಾಗೆ ಈ ಕಪ್ಪು ಹಣ ತರುವ ಭರವಸೆ ಬರೀ ಜುಮ್ಲಾ ಆಗಿತ್ತೇ?

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X