Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಶ್ರೆಕ್ಷಣಿಕ ಅಧ್ಯಯನಕ್ಕೆ ಸಹಕಾರಿಯಾದ...

ಶ್ರೆಕ್ಷಣಿಕ ಅಧ್ಯಯನಕ್ಕೆ ಸಹಕಾರಿಯಾದ ಕಲಬುರಗಿಯ ಖಾಸಗಿ ವಸ್ತು ಸಂಗ್ರಹಾಲಯ

ಇಂದು ಅಂತರ್‌ರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನ

ಸಾಜಿದ್‌ ಅಲಿಸಾಜಿದ್‌ ಅಲಿ18 May 2025 2:46 PM IST
share
ಶ್ರೆಕ್ಷಣಿಕ ಅಧ್ಯಯನಕ್ಕೆ ಸಹಕಾರಿಯಾದ ಕಲಬುರಗಿಯ ಖಾಸಗಿ ವಸ್ತು ಸಂಗ್ರಹಾಲಯ

ಕಲಬುರಗಿ: ಒಂದು ಕಾಲದಲ್ಲಿ ವಸ್ತು ಸಂಗ್ರಹಾಲಯಗಳು ಮೇಲ್ವರ್ಗದ ಜನರಿಗೆ ಮತ್ತು ಉನ್ನತ ಮಟ್ಟದ ಅಧಿಕಾರಿಗಳಿಗೆ ಮಾತ್ರ ಸೀಮಿತವಾಗಿದ್ದವು, 20ನೇ ಶತಮಾನದಿಂದ ವಸ್ತು ಸಂಗ್ರಹಾಲಯಗಳು ಸಾರ್ವಜನಿಕವಾಗಿ ತೆರೆಯಲಾಗಿದೆ. ಮೇ 18ರಂದು ಅಂತರ್‌ರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವಾಗಿ ಆಚರಣೆ ಮಾಡಲಾಗುತ್ತಿದೆ.

ಪ್ರಾಚೀನ ಪರಂಪರೆಯ ನೆನಪುಗಳನ್ನು ಸಂರಕ್ಷಣೆ ಮತ್ತು ಉಳಿಸಿ ಬೆಳಸುವ ನಿಟ್ಟಿನಲ್ಲಿ ಜನರನ್ನು ಆಕರ್ಷಿಸುವ ವಸ್ತು ಸಂಗ್ರಹಾಲಯಗಳು ಮನೋರಂಜನೆ ಸಾಂಸ್ಕೃತಿಕ, ಚಾರಿತ್ರಿಕವಾಗಿ ಇತಿಹಾಸವನ್ನು ಶೈಕ್ಷಣಿಕ ಅಧ್ಯಯನದ ಜೊತೆಗೆ ಸಂಶೋಧನೆಗಳಿಗೆ ಸಹಕಾರಿಯಾಗಿದ್ದು, ಕಲಬುರಗಿ ನಗರದಲ್ಲಿ ವಿಜ್ಞಾನಕೇಂದ್ರದ ವಸ್ತು ಸಂಗ್ರಹಾಲಯ, ಸರಕಾರಿ ಜಿಲ್ಲಾ ಆಸ್ಪತ್ರೆಯ ಎದುರಿರುವ ಪುರಾತತ್ವ ಇಲಾಖೆಯ ಆವರಣದಲ್ಲಿರುವ ಸರಕಾರಿ ವಸ್ತು ಸಂಗ್ರಹಾಲಯ ಮತ್ತು ಇತ್ತೀಚೆಗೆ ನಗರದ ಹಾಗರಗಾ ರಸ್ತೆಯಲ್ಲಿರುವ ಗುಲ್ಶನ್ ಅರ್ಫಾತ್ ಕಾಲನಿಯಲ್ಲಿ ಸಂಶೋಧಕ ಅಯಾಝುದ್ದೀನ್ ಪಟೇಲ್ ಎಂಬವರು ಖಾಸಗಿಯಾಗಿ ಒಂದು ವಸ್ತು ಸಂಗ್ರಹಾಲಯ ಮತ್ತು ಮ್ಯೂಸಿಯಂ ಸ್ಥಾಪಿಸಿದ್ದಾರೆ.

ಈ ವಸ್ತು ಸಂಗ್ರಹಲಯಗಳಲ್ಲಿ ಪ್ರಾಚೀನ ಕಾಲದಲ್ಲಿ ಬಳಸಲಾದ ನಾಣ್ಯಗಳು, ಐತಿಹಾಸಿಕ ಛಾಯಚಿತ್ರಗಳು, ವಿಜ್ಞಾನ, ತಂತ್ರಜ್ಞಾನದ ಅವಿಸ್ಕಾರಗಳು ಮತ್ತು ದಕ್ಷಿಣ ಭಾರತದ ಪ್ರಖ್ಯಾತ ರಾಜ ವಂಶಸ್ಥರಾದ ಶಾತವಾಹನರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ಬಹಮನಿಗಳು, ಆದಿಲ್ ಷಾಹಿಗಳು ಮತ್ತು ನಿಝಾಮರು ಈ ಪ್ರದೇಶದಲ್ಲಿ ಆಳ್ವಿಕೆ ನಡೆಸಿದ್ದು, ಗತಕಾಲದ ಹಲವಾರು ಸ್ಮಾರಕಗಳು ಹಾಗೂ ಪ್ರಾಚ್ಯವಸ್ತುಗಳು ಇಲ್ಲಿ ನೋಡಲು ಸಿಗುತ್ತದೆ.

ಕಲಬರಗಿ ಸರಕಾರಿ ವಸ್ತು ಸಂಗ್ರಹಾಲಯದಲ್ಲಿ ಕ್ರಿ.ಪೂ.4,000 ವರ್ಷ ಪುರಾತನದಿಂದ ಆಧುನಿಕ ಕಾಲದವರೆಗಿನ ವಿವಿಧ ಪ್ರಾಚ್ಯವಸ್ತು ಹಾಗೂ ಕಲಾಕೃತಿಗಳಾದ ಶಿಲ್ಪಗಳು, ಶಾಸನಗಳು, ನಾಣ್ಯಗಳು, ವೀರಗಲ್ಲುಗಳು, ಮಹಾಸತಿ ಕಲ್ಲುಗಳು, ನಿಷಿಧಿ ಕಲ್ಲುಗಳು, ಆಯುಧೋಪಕರಣಗಳು, ಹಸ್ತಪ್ರತಿಗಳು, ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳು, ಜೇಡಿ ಮಣ್ಣಿನ ಕಲಾಕೃತಿಗಳು ಹಾಗೂ ಮಣಿಗಳು, ಫಿರಂಗಿ ತೋಪುಗಳು, ವರ್ಣಚಿತ್ರಗಳು, ಹರಪ್ಪಾ ಸಂಸ್ಕೃತಿಯ ಪ್ರತಿಕೃತಿಗಳು ಮತ್ತು ಆಂಗ್ಲ ಅಧಿಕಾರಿ ‘ಫಿಲಿಪ್ ಮೆಡೋಸ್ ಟೇಲರ್’ ಬಳಸಿದ ಖುರ್ಚಿ ಹಾಗೂ ಪಾತ್ರೆಗಳು ಇಲ್ಲಿವೆ.

ಇಲ್ಲಿ ಶಿವಲಿಂಗ, ನಂದಿ, ನಾಟ್ಯ ಶಿವ, ದುರ್ಗಾ, ಜಲಶಯನ ವಿಷ್ಣು, ಮಧುಸೂಧನ, ಉಮಾ-ಮಹೇಶ್ವರ, ವಿಷ್ಣು, ನಾಗ, ನಾಯಕ, ವೀರಗಲ್ಲು ಇತ್ಯಾದಿ, 12ನೇ ಶತಮಾನದಿಂದ 18ನೇ ಶತಮಾನದವರೆಗಿನ ಶಿಲಾ ಶಿಲ್ಪಗಳು, ಗಾರೆಯ ಮೂರ್ತಿಗಳು, 1-2ನೇ ಶತಮಾನದ ಮಣ್ಣಿನ ಮಣಿಗಳು ಹಾಗೂ ಕಲ್ಲಿನ ವಿಗ್ರಹಗಳು, ಶಂಖುವಿನಿಂದ ತಯಾರಾದ ಬಳೆ ಚೂರುಗಳು, ಇಟ್ಟಿಗೆ, 18ನೇ ಶತಮಾನದ ತಾಮ್ರ ಹಾಗೂ ಹಿತ್ತಾಳೆಯ ಪಾತ್ರೆಗಳು, ಕೈ ಫಿರಂಗಿ, ಕಠಾರಿ,ಖಡ್ಗ, ಗುರಾಣಿ ಮೊದಲಾದ ಆಯುಧಗಳು ಹಾಗೂ ಫಿರಂಗಿ ಗುಂಡುಗಳು ಮತ್ತು ಫಿರ್ದೋಸಿ ರಚಿತ ‘ಷಹನಾಮ’ದ ಪ್ರತಿ, ತಾಳೆಗರಿ ಹಾಗೂ ಕಾಗದದ ಹಸ್ತಪ್ರತಿಗಳು, ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ದೊರೆತ ಶಿಲಾಯುಗ ಮತ್ತು ನೂತನ ಶಿಲಾಯುಗದ ಕಲ್ಲಿನ ಕೊಡಲಿ ಹಾಗೂ ಕೈಗೊಡಲಿಗಳು, ಕಬ್ಬಿಣದ ಬಾಣದ ತುದಿಗಳು, ಮೃತ್ಪಾತ್ರೆಗಳು ಹಾಗೂ ಮಡಕೆ ಚೂರುಗಳನ್ನು ಇಲ್ಲಿವೆ.

ಬ್ರಾಹ್ಮ್ಮಿಲಿಪಿಯಲ್ಲಿರುವ ಸುಮಾರು 1-2ನೇ ಶತಮಾನದ ಬೌದ್ಧ ಧರ್ಮದ ಶಾಸನ ಫಲಕಗಳಿಂದ ಹಿಡಿದು 15ನೇ ಶತಮಾನದವರೆಗಿನ ಸಂಸ್ಕೃತ,ದೇವನಾಗರಿ ಹಾಗೂ ಹಳಗನ್ನಡ ಲಿಪಿಯಲ್ಲಿರುವ ಅನೇಕ ಶಿಲಾಶಾಸನಗಳನ್ನು ಮತ್ತು ಚಿತ್ತಾಪುರ ತಾಲೂಕಿನ ಸನ್ನತಿಯ ಬೌದ್ಧ ನೆಲೆಯ ಉತ್ಪನನದಲ್ಲಿ ದೊರೆತ ಪ್ರಾಚ್ಯಾವಶೇಷಗಳಾದ ಬುದ್ಧನ ಜೀವನದ ಮುಖ್ಯ ಘಟನೆಗಳು ಅಂದರೆ ಸಿದ್ದಾರ್ಥನ ನಿರ್ಗಮನ ಹಾಗೂ ಬೌದ್ಧ ಧರ್ಮದ ಪೂಜ್ಯ ಸಂಕೇತಗಳಾದ ವಜ್ರಾಸನದಲ್ಲಿಯ ಬುದ್ಧನ ಪಾದ, ಪವಿತ್ರ ಅಸ್ಥಿ ಪಾತ್ರೆ, ದಾನಿಗಳ ಭೋಗದ ಜೀವನ ತೋರಿಸುವ ಹಾಗೂ ಸ್ಥಳದಲ್ಲಿಯೇ ಮೃತರಾದ ಪ್ರತಿಷ್ಟಿತ ವ್ಯಕ್ತಿಗಳ ಸ್ಮಾರಕಗಳ ಚಿತ್ರಗಳು, ಕುಬ್ಬ ಯಕ್ಷರು, ಸ್ತೂಪದ ಕಟಕಟೆಯ ಮೇಲಿನ ಪುಷ್ಪ ವಿನ್ಯಾಸ, ರೆಕ್ಕೆಯುಳ್ಳ ಪ್ರಾಣಿಗಳ ಸಾಲು, ಸಿಂಹ, ಸಂಗೀತಗಾರರು, ನಾಗ ಮೊದಲಾದ ಶಿಲಾ ಶಿಲ್ಪಗಳು, ಪರಿಸರ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆ, ಜಾನಪದ ಕಥೆಗಳು ಮತ್ತು ಸಂಗ್ರಹಾಲಯದ ಹೊರ ಆವರಣದಲ್ಲಿ ಚಾಲುಕ್ಯ, ರಾಷ್ಟ್ರಕೂಟ, ಹೊಯ್ಸಳ ಮತ್ತು ವಿಜಯನಗರ ಶೈಲಿಯಲ್ಲಿರುವ 10-15 ಶತಮಾನದವರೆಗಿನ ಅನೇಕ ಶಿಲಾ ವಿಗ್ರಹಗಳು ವಸ್ತು ಸಂಗ್ರಹಾಲಯದ ಆಕರ್ಷಣೆಗೆ ಒಳಪಟ್ಟಿವೆ.

ವಸ್ತು ಸಂಗ್ರಹಾಲಯಗಳು ಜ್ಞಾನದ ಭಂಡಾರಗಳಾಗಿವೆ. ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಂಶೋಧಕರು, ವಿಧ್ವಂಸಕರು, ಶಾಲಾ, ಕಾಲೇಜು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಪುರಾತನ ಕಾಲದ ವಸ್ತು ಸಂಗ್ರಹ ಮತ್ತು ಪ್ರದರ್ಶನದಿಂದ ಮೌಲ್ಯಾಧಾರಿತ ಜ್ಞಾನವನ್ನು ಬೆಳೆಸಿಕೊಳ್ಳಲು ಸಹಕಾರಿ.

-ರಾಜರಾಮ್, ಸಹಾಯಕ ನಿರ್ದೇಶಕರು, ಪುರಾತತ್ವ ವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಕಲಬುರಗಿ

ಇಂದಿನ ಪೀಳಿಗೆ ಪಾರಂಪರಿಕವಾಗಿರುವ ವಸ್ತುಗಳು, ಛಾಯ ಚಿತ್ರಗಳನ್ನು ಪ್ರದರ್ಶನದಿಂದ ನಮ್ಮ ಪೂರ್ವಜನರ ಇತಿಹಾಸವನ್ನು ಅವಲೋಕನ ಮಾಡಿಕೊಳ್ಳಬಹುದು. ಸಂಶೋಧನೆಯ ಹಿನ್ನೆಲೆಯಲ್ಲಿ ಸ್ಥಾಪನೆಗೊಂಡಿರುವ ಈ ವಸ್ತು ಸಂಗ್ರಹಾಲಯದಲ್ಲಿ ಪ್ರಾಚೀನಕಾಲದಿಂದ ಇಂದಿನವರೆಗೂ ದೇಶ ವಿದೇಶಗಳ ಚಲಾವಣೆಯಲ್ಲಿದ ನಾಣ್ಯಗಳು ಇಲ್ಲಿವೆ.

-ಅಯಾಝುದ್ದೀನ್ ಪಟೇಲ್, ಕಲಬುರಗಿ ಖಾಸಗಿ ವಸ್ತುಸಂಗ್ರಹಾಲಯದ ಸ್ಥಾಪಕ

share
ಸಾಜಿದ್‌ ಅಲಿ
ಸಾಜಿದ್‌ ಅಲಿ
Next Story
X