Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮಾದರಿ ಸಮಗ್ರ ಕೃಷಿಯ ಅರೆತಿಪ್ಪೂರಿನ...

ಮಾದರಿ ಸಮಗ್ರ ಕೃಷಿಯ ಅರೆತಿಪ್ಪೂರಿನ ಕುಟುಂಬ

ಕುಂಟನಹಳ್ಳಿ ಮಲ್ಲೇಶಕುಂಟನಹಳ್ಳಿ ಮಲ್ಲೇಶ14 Oct 2024 12:47 PM IST
share
ಮಾದರಿ ಸಮಗ್ರ ಕೃಷಿಯ ಅರೆತಿಪ್ಪೂರಿನ ಕುಟುಂಬ

ಮಂಡ್ಯ: ಮದ್ದೂರು ತಾಲೂಕು ಅರೆತಿಪ್ಪೂರು ಗ್ರಾಮದ ಎ.ಎಂ.ಪುಟ್ಟಸ್ವಾಮಿ ಅವರ ಕುಟುಂಬ ಸಮಗ್ರ ಕೃಷಿ ಪದ್ಧತಿಯಲ್ಲಿ ಸಾಧನೆ ಮಾಡುವುದರೊಂದಿಗೆ, ಎತ್ತಿನ ಗಾಣದ ಮೂಲಕ ವಿವಿಧ ಧಾನ್ಯಗಳ ಅಡುಗೆ ಎಣ್ಣೆ ತಯಾರಿಸಿ ಲಕ್ಷಾಂತರ ರೂ. ಆದಾಯ ಪಡೆಯುತ್ತಿದ್ದಾರೆ. ಇವರ ಬೇಸಾಯ ವೀಕ್ಷಣೆಗೆ ರಾಜ್ಯದ ವಿವಿಧ ಕಡೆಯಿಂದ ರೈತರು ಬರುತ್ತಿದ್ದಾರೆ.

ಪುಟ್ಟಸ್ವಾಮಿ ಕುಟುಂಬಕ್ಕೆ 15 ಎಕರೆ ಜಮೀನು ಇದೆ. ಇದರಲ್ಲಿ 2 ಎಕರೆಯಲ್ಲಿ ಭತ್ತ, 2 ಎಕರೆಯಲ್ಲಿ ರಾಗಿ, 5 ಎಕರೆ ಪ್ರದೇಶದಲ್ಲಿ ಬೇಬಿಕಾರ್ನ್ (ಜೋಳ), 1 ಎಕರೆಯಲ್ಲಿ ರೇಷ್ಮೆ ಬೆಳೆದಿದ್ದಾರೆ. 300 ತೆಂಗಿನ ಮರ, 150 ತೇಗ, 70 ಹೆಬ್ಬೇವು, 60 ರಕ್ತ ಚಂದನ ಮರ ಗಳನ್ನು ಬೆಳೆಸಿದ್ದಾರೆ. ಮನೆಗೆ ಬೇಕಾದ ತರಕಾರಿ ಗಿಡಗಳು ಇವೆ.

ಜತೆಗೆ, ಎಮ್ಮೆ, ಹಸು, ಸಾಕಣೆಯಿಂದ ಹೈನುಗಾರಿಕೆ ಮಾಡುತ್ತಿದ್ದಾರೆ. 4 ಹಳ್ಳಿಕಾರ್, 2 ಅಮೃತ್‌ಮಹಲ್, 2 ಗಿರ್ ತಳಿ ಹಸುಗಳನ್ನು ಸಾಕಿದ್ದಾರೆ. ಇವುಗಳ ಮೇವಿಗಾಗಿ 5 ಎಕರೆ ಪ್ರದೇಶ ದಲ್ಲಿ ಜೋಳ, ಮೇವಿನ ಹುಲ್ಲು ಬೆಳೆಯುತ್ತಿದ್ದಾರೆ. ಕುರಿ, ಆಡು, ನಾಟಿ ಕೋಳಿಗಳನ್ನೂ ಸಾಕಿದ್ದಾರೆ. ಸಾಕಷ್ಟು ಕೊಟ್ಟಿಗೆ ಗೊಬ್ಬರ ದೊರೆಯುತ್ತಿರುವುದರಿಂದ ರಾಸಾಯನಿಕ ಗೊಬ್ಬರ ಬಳಕೆ ಮಾಡುತ್ತಿಲ್ಲ. ಮೂರು ಕೊಳವೆಬಾವಿಗಳಲ್ಲಿ ಸಾಕಷ್ಟು ನೀರು ಪೂರೈಕೆಯಾಗುತ್ತಿದೆ.

ಪುಟ್ಟಸ್ವಾಮಿ ಎಸೆಸೆಲ್ಸಿವರೆಗೆ ಮಾತ್ರ ಓದಿದ್ದು, ಚಿಕ್ಕವಯಸ್ಸಿನಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ ಇವರ ಕುಟುಂಬದಲ್ಲಿ ಪುಟ್ಟಮ್ಮ, ಶಶಿಕಲಾ, ವೆಂಕಟೇಶ್, ಅನಿತಾ ಸೇರಿದಂತೆ 12 ಮಂದಿ ಇದ್ದಾರೆ. ಎಲ್ಲರೂ ಕೃಷಿಯಲ್ಲಿ ಕೈಜೋಡಿಸುತ್ತಿರುವುದರಿಂದ ಆಳುಗಳ ಅಗತ್ಯ ಬರುವುದಿಲ್ಲವಂತೆ. ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ಪುಟ್ಟಸ್ವಾಮಿ ಸಾಮಾಜಿಕ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಗ್ರಾಮಸ್ಥರ ಜತೆಗೂಡಿ ಗ್ರಾಮದಲ್ಲಿರುವ ಐತಿಹಾಸಿಕ ಜೈನ ಬಸದಿಗಳ ರಕ್ಷಣೆಗೆ ಮುಂದಾಗಿದ್ದಾರೆ.

ಅಂತರ್‌ಜಿಲ್ಲಾ ರೈತ ಅಧ್ಯಯನ ಪ್ರವಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಪುಟ್ಟಸ್ವಾಮಿ ಅವರು, ಮಾಗಡಿ ಸಮೀಪ ಎಣ್ಣೆಗಾಣ ಘಟಕ ವೀಕ್ಷಿಸಿ, ಮಾಹಿತಿ ಪಡೆದು ಪ್ರೇರಿತರಾಗಿ ಆತ್ಮಯೋಜನೆಯಡಿ ಮದ್ದೂರು ತಾಲೂಕಿನಲ್ಲಿ ಪ್ರಥಮವಾಗಿ ಸಾಂಪ್ರದಾಯಿಕ ಮರದ ಎಣ್ಣೆಗಾಣ ಘಟಕ ತೆರೆದರು. ಗುಣಮಟ್ಟದ ಅಡುಗೆ ಎಣ್ಣೆಯನ್ನು ಗ್ರಾಹಕರಿಗೆ ಪೂರೈಕೆ ಮಾಡುತ್ತಾ ಮಾದರಿಯಾಗಿದ್ದಾರೆ. ಕೃಷಿ ಇಲಾಖೆಯಿಂದ ದೊರೆಯುವ ಸವಲತ್ತುಗಳನ್ನು ಒದಗಿಸಿಕೊಡಲಾಗುತ್ತಿದೆ.

-ಎಚ್.ಜೆ.ಪ್ರತಿಭಾ, ಸಹಾಯಕ ಕೃಷಿ ನಿರ್ದೇಶಕಿ, ಮದ್ದೂರು

ಗಾಣದ ಎಣ್ಣೆಗೆ ಬಹು ಬೇಡಿಕೆ

ಪುಟ್ಟಸ್ವಾಮಿ ಅವರು ಗಾಣದಲ್ಲಿ ಕಡ್ಲೆಕಾಯಿ ಎಣ್ಣೆ, ಕೊಬ್ಬರಿ ಎಣ್ಣೆ, ಹುಚ್ಚೆಳ್ಳು ಎಣ್ಣೆ, ಸೂರ್ಯಕಾಂತಿ, ಕಪ್ಪು ಎಳ್ಳಿನ ಎಣ್ಣೆ ಸೇರಿದಂತೆ ವಿವಿಧ ಬಗೆಯ ಅಡುಗೆ ಎಣ್ಣೆಗಳನ್ನು ತಯಾರು ಮಾಡುತ್ತಿದ್ದಾರೆ. ಸಂಪೂರ್ಣವಾಗಿ ಮರದಿಂದ ನಿರ್ಮಾಣ ಮಾಡಿದ ಗಾಣದಲ್ಲಿ ಎಣ್ಣೆ ತಯಾರಿಸುವುದು ವಿಶೇಷವಾಗಿದೆ. ಈ ಎಣ್ಣೆಗಳಿಗೆ ಯಾವುದೇ ರೀತಿುಂ ಕೆಮಿಕಲ್ ಬಳಸುವುದಿಲ್ಲ. ಆದ್ದರಿಂದ ಸುಮಾರು 5ರಿಂದ 6 ತಿಂಗಳವರೆಗೆ ಎಣ್ಣೆ ತಾಜಾ ಇರುತ್ತದೆ. ಕೊಬ್ಬರಿ ಎಣ್ಣೆಗೆ ಇವರೇ ಬೆಳೆದಿರುವ ತೆಂಗಿನ ಫಸಲು (ಕೊಬ್ಬರಿ) ಬಳಸುತ್ತಾರೆ. ಕಡ್ಲೆಕಾಯಿ ಎಣ್ಣೆಗೆ ಆಂಧ್ರಪ್ರದೇಶದ ಕಾಳಹಸ್ತಿ ರೈತರಿಂದ ನೇರವಾಗಿ ಕಡ್ಲೆಕಾಯಿ ತರಿಸಿ ಕೊಳ್ಳುತ್ತಾರೆ. ಉಳಿದಂತೆ ಹುಚ್ಚೆಳ್ಳು, ಕಪ್ಪು ಎಳ್ಳು, ಸೂರ್ಯಕಾಂತಿಯನ್ನು ರೈತರಿಂದಲೇ ಖರೀದಿ ಮಾಡಿ ಗಾಣಕ್ಕೆ ಬಳಸಿ ತೈಲ ತಯಾರು ಮಾಡುತ್ತಾರೆ. ಪುಟ್ಟಸ್ವಾಮಿ ಕುಟುಂಬ ತಯಾರಿಸುವ ಅಡುಗೆ ಎಣ್ಣೆಗೆ ಅಧಿಕ ಬೇಡಿಕೆ ಇದೆ. ಸುತ್ತಮುತ್ತಲ ಗ್ರಾಮಸ್ಥರು ಅಲ್ಲಿಗೆ ಬಂದು ಖರೀದಿಸುತ್ತಾರೆ. ಉಳಿದ ಎಣ್ಣೆಯನ್ನು ಬೆಂಗಳೂರು ನಗರಕ್ಕೆ ಹೋಂ ಡೆಲಿವರಿ ಕೊಡುತ್ತಾರೆ. ಮಂಡ್ಯಕ್ಕೂ ತಂದು ಮಾರುತ್ತಾರೆ. ಇದಲ್ಲದೆ ದೆಹಲಿ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಸೇರಿದಂತೆ ಇತರ ರಾಜ್ಯಗಳಿಗೂ ಕಳುಹಿಸಿಕೊಡುತ್ತಾರೆ.

share
ಕುಂಟನಹಳ್ಳಿ ಮಲ್ಲೇಶ
ಕುಂಟನಹಳ್ಳಿ ಮಲ್ಲೇಶ
Next Story
X