Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ನೀಲಿ ಬಾವುಟ
  5. ‘ನೀನಾ ಭಗವಂತಾ’ ಎಂದ ದೈತ್ಯ ಪ್ರತಿಭೆಯ...

‘ನೀನಾ ಭಗವಂತಾ’ ಎಂದ ದೈತ್ಯ ಪ್ರತಿಭೆಯ ದೇಸಿ ಕನಸುಗಾರ

ಸುಬ್ಬು ಹೊಲೆಯಾರ್ಸುಬ್ಬು ಹೊಲೆಯಾರ್14 July 2025 4:19 PM IST
share
‘ನೀನಾ ಭಗವಂತಾ’ ಎಂದ ದೈತ್ಯ ಪ್ರತಿಭೆಯ ದೇಸಿ ಕನಸುಗಾರ

70ರ ದಶಕದಲ್ಲಿ ಕನ್ನಡ ಕಾವ್ಯಪರಂಪರೆ ಯಲ್ಲಿ ದೊಡ್ಡ ಕ್ರಾಂತಿ ಯಾಯಿತು. ಸಿನೆಮಾ ಸಂಗೀತವೂ ಇದಕ್ಕೆ ಸಾಕ್ಷಿಯಾಯಿತು. ‘ನೀನಾ ಭಗವಂತ’ ಎಂಬ ಹಾಡಿನ ಮೂಲಕ ಪ್ರತಿರೋಧದ ಸಾಲುಗಳನ್ನು ಬರೆಯುತ್ತಾ ಹೊಸ ಹೆಜ್ಜೆಗಳನ್ನು ಮೂಡಿಸಿದ ಹಂಸಲೋಕ ಈ ಪರಂಪರೆಗೆ ನೀಡಿದ ಕೊಡುಗೆ ಅನನ್ಯವಾದುದು.

ನಾನು ಒಮ್ಮೆ ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ ಒಂದು ಸಂದರ್ಶನ ಕೇಳುತ್ತಿದ್ದೆ. ಸಂದರ್ಶನದಲ್ಲಿ ಅತಿಥಿಯೊಬ್ಬರು ಮಾತನಾಡುತ್ತಾ, ‘ಕನ್ನಡಕ್ಕೂ ಮುಗ್ಧತೆ ಇದೆ’ ಎಂದರು. ಈ ಮಾತು ಒಂದು ಮಗುತನವೂ ಹೌದು ತಾಯಿಯ ಹಿರಿತನವೂ ಹೌದು, ಒಂದು ನಾಡಿನ ನುಡಿಯೂ ಹೌದು. ಈ ಮಾತು ಹೇಳಬೇಕಾದರೆ ಭಾಷೆಯ ತಪಸ್ಸಿನಲ್ಲಿ ಮುಳುಗಿ ಏಳಬೇಕು. ಅಂತಹವರು ಮಾತ್ರ ಈ ಮಾತನ್ನು ಹೇಳುವುದಕ್ಕೆ ಸಾಧ್ಯ.

ಇದನ್ನು ಹೇಳಿದವರು ಈ ನಾಡಿಗೆ 3,500ಕ್ಕೂ ಹೆಚ್ಚು ಹಾಡುಗಳನ್ನು ಬರೆದು ಸಂಗೀತಕ್ಕೆ ಅಳವಡಿಸಿ ಕೋಟ್ಯಂತರ ಕನ್ನಡಿಗರ ಎದೆಯಾಳದಲ್ಲಿ ಇಳಿದಿರುವ ಕವಿ ಡಾ. ಹಂಸಲೇಖ. ಇವರು ಹಾಡುಗಳನ್ನು ಬರೆಯುತ್ತಾ ಹಾರ್ಮೋನಿ ಹಿಡಿದು ಕುಳಿತರೆ ಅಲ್ಲಿ ಸಂಗೀತದ ಮಳೆಯೇ ಸೃಷ್ಟಿಯಾಗುತ್ತದೆ. ಹಂಸಲೇಖರು ಸಿನೆಮಾ, ಸಾಹಿತ್ಯ ಸಂಗೀತದ ಸೃಜನಶೀಲತೆಯ ಶಿಖರವೇ ಹೌದು. ಯಾವುದೇ ಮಿತಿಗೆ ಒಳಪಟ್ಟವರಲ್ಲ. ಇದು ಅವರ ಶಕ್ತಿ. ಅವರ ಒಂದು ಹಾಡು ಅತ್ಯಂತ ಜನಪ್ರಿಯ. ಡಾ.ರಾಜ್‌ಕುಮಾರ್ ಹಾಡಿರುವ ‘ಹುಟ್ಟಿದರೆ ಕನ್ನಡನಾಡಿನಲ್ಲಿ ಹುಟ್ಟಬೇಕು ಎನ್ನುವ ಹಾಡು’ ಯಾರು ಕೇಳಿಲ್ಲ, ಯಾರು ಹಾಡಿಲ್ಲ? ಕನ್ನಡದ ಉತ್ಕೃಷ್ಟ ಕಾದಂಬರಿ ಮಲೆಗಳಲ್ಲಿ ಮದುಮಗಳು ಬಸವಲಿಂಗಯ್ಯ ನಿರ್ದೇಶನದಲ್ಲಿ ನಾಟಕ ರೂಪ ಪಡೆದಾಗ, 36 ಹಾಡುಗಳನ್ನು ಬರೆದು ಸಂಗೀತ ಸಂಯೋಜನೆ ಮಾಡಿದ ಖ್ಯಾತಿ ಅವರದು. ಕನ್ನಡದ ಎಲ್ಲ ಪ್ರಕಾರಗಳ ಪುಸ್ತಕಗಳನ್ನು ಅವರು ಅಭ್ಯಾಸ ಮಾಡಿದ್ದಾರೆ. ಸಂಗೀತದ ಧ್ಯಾನದಷ್ಟೇ ಅವರ ಓದು, ಅರಿವು ಮತ್ತು ಆಳವನ್ನು ಹೆಚ್ಚಿಸಿದೆ.

70-80ರ ದಶಕ ಕನ್ನಡ ಚಳವಳಿಗಳ ಪ್ರಖರವಾದ ದಿನಗಳು. ನಾನು ದಲಿತ ಚಳವಳಿಯ ಸಕ್ರಿಯ ಕಾರ್ಯಕರ್ತನಾಗಿದ್ದೆ. ಗೆಳೆಯ ಡಿ.ಸಿ.ಚಿಕ್ಕಣ ್ಣ ಮತ್ತು ನಾನು ಸಕಲೇಶಪುರದಲ್ಲಿ ಒಂದೇ ರೂಮಿನಲ್ಲಿ ಇದ್ದೆವು. ಒಂದು ದಿನ ಸಂಜೆ ವಾಕ್ ಹೋಗುವಾಗ ಹಂಸಲೇಖರ ವಿಷಯ ಪ್ರಸ್ತಾಪವಾಯಿತು. ಸುಬ್ಬು ನಿನಗೆೆ ಹಂಸಲೇಖ ಗೊತ್ತಾ ಎಂದರು. ನನಗೆ ೋರಾಟಗಾರರ ೆಸರು ಮಾತ್ರ ಗೊತ್ತು ಎಂದೆ. ಚಿಕ್ಕಣ್ಣ ‘ಎಲ್ಲಿಂದಲೊ ನೀನು ಬಂದೆ, ಸೂರ್ಯನ ಮರೆಮಾಡಿ ನಿಂದೆ’ ಎನ್ನುವ ಹಾಡನ್ನು ಮೈ ಮರೆತು ಹಾಡಿ ಬಿಟ್ಟ. ಈ ಹಾಡನ್ನು ಬರೆದು ಸಂಗೀತ ನೀಡಿದವರು ಹಂಸಲೇಖ ಎಂದರು. ಹಾಡು ಕೇಳಿದ ನಂತರ ನಾನು ಸ್ವಲ್ಪಹೊತ್ತು ಆ ಹಾಡಿನಗುಂಗಿನಲ್ಲೇ ಇದ್ದು, ರೂಮಿಗೆ ಬಂದು ಮತ್ತೊಮ್ಮೆ ೇಳಿ ಅಂದೆ. ಹೀಗೆ ನಾನು ಹಂಸಲೇಖ ಅಭಿಮಾನಿಯಾಗಿಬಿಟ್ಟೆ.

ಕರ್ನಾಟಕವೆಲ್ಲ ಸುತ್ತಾಡಿ ಬೆಂಗಳೂರಿಗೆ ಬಂದು ನೆಲೆ ನಿಂತೆ. ನನಗೆ ಲಂಕೇಶ್ ಮೇಷ್ಟ್ರ ಸಂಪರ್ಕವಿದ್ದುದ್ದರಿಂದ ಪ್ರತಿವಾರ ಪತ್ರಿಕಾ ಕಚೇರಿಗೆ ೋಗುತ್ತಿದ್ದೆ. ಅಲ್ಲಿ ಸಿನೆಮಾ ವಿಭಾಗ ನೋಡಿಕೊಳ್ಳುತ್ತಿದ್ದ ಸದಾಶಿವಶೆಣೈ ಅವರನ್ನೊಮ್ಮೆ ‘ಸರ್, ನಾನು ಒಮ್ಮೆ ಹಂಸಲೇಖರನ್ನು ನೋಡಬಹುದೇ?’ ಎಂದು ಕೇಳಿದೆ. ನೋಡಬಹುದು ಆದರೆ, ಅವರು ತುಂಬಾ ಕೆಲಸದ ಒತ್ತಡದಲ್ಲಿ ಇರುತ್ತಾರೆ ಎಂದರು.

ಆರ್.ಟಿ. ನಗರದಲ್ಲಿರುವ ತರಳಬಾಳು ಮಠದ ಸ್ವಾಮೀಜಿ ಸಾನಿಧ್ಯದಲ್ಲಿ ಪ್ರತಿವರ್ಷ ಬೆಳದಿಂಗಳ ಕವಿಗೋಷ್ಠಿ ನಡೆಯುತ್ತಿತ್ತು. ಕೆಲವು ದಿನ ನಾನು ಕೇಳುಗನಾಗಿ ಭಾಗವಹಿಸುತ್ತಿದ್ದೆ. ಆಮೇಲೆ ನನಗೂ ಅವಕಾಶ ದೊರೆಯಿತು. ಆದರೆ ನಾನು ಹೋದ ಮೊದಲ ಬೆಳದಿಂಗಳ ಕವಿಗೋಷ್ಠಿಯಲ್ಲಿ ಹಂಸಲೇಖರವರು ಇರುವುದು ತಿಳಿದು ತುಂಬಾ ಖುಷಿಯಾಯಿತು. ಆ ಕವಿಗೋಷ್ಠಿಯಲ್ಲಿ ಹಂಸಲೇಖರು ಒಂದು ಗಂಭೀರವಾದ ಕವಿತೆಯನ್ನು ವಾಚನ ಮಾಡಿದರು. ಅಲ್ಲಿದ್ದ ಎಲ್ಲರಿಗೂ ಆ ಕವಿತೆ ಇಷ್ಟವಾಯಿತು. ಅಧ್ಯಕ್ಷ ಭಾಷಣ ಮಾಡಿದ ಕವಿ ಡಾ.ನಿಸಾರ್ ಅಹ್ಮದ್ ಮಾತನಾಡುತ್ತಾ, ನಿಂಬೆ ಹಣ್ಣಿನ ಕವಿ ಬಂದಿದ್ದು ನೋಡಿದೆ ಎಂದು ಸ್ವಲ್ಪ ಹಗುರವಾಗಿ ಮಾತನಾಡಿದರು. ಇದನ್ನು ಕೇಳಿದ ನಾನು ಸಿಟ್ಟಿಗೆದ್ದು, ಸಭಿಕರ ಮಧ್ಯೆ ಹೋ...ಎಂದು ಕೂಗಿಬಿಟ್ಟೆ. ಹಂಸಲೇಖರ ಪರಮ ಅಭಿಮಾನಿಯಾಗಿದ್ದರಿಂದ ಹಾಗೆ ಮಾಡಿದ್ದೆನೇನೋ, ಈಗಲೂ ಅದನ್ನು ನೆನಸಿಕೊಂಡರೆ, ಒಳಗೆ ಒಂದು ರೀತಿಯ ಮುಜುಗರ, ಸಂಕೋಚ ಅನಿಸುತ್ತದೆ.

ಕೆಲವು ದಿನಗಳ ನಂತರ ಕವಿ ಮಂಜುನಾಥ್(ಮದುರ ಚನ್ನ)ರಿಂದ ಡಾ.ಹಂಸಲೇಖ ಇನ್ನಷ್ಟು ಹತ್ತಿರವಾದರು. ಹಂಸಲೇಖರು ನನಗೆ ನಿಮ್ಮ ಹೆಸರಲ್ಲಿ ಏನೋ ವಿಶೇಷ ಇದೆ ಎಂದರು. ನನ್ನನ್ನು ಅವಮಾನ ಮಾಡಲಿಕ್ಕಾಗಿ ನನ್ನ ಜಾತಿ ಹೆೆಸರು ಹಿಡಿದು ಕೂಗುತ್ತಿದ್ದರು, ನಾನು ಅದನ್ನೇ ಹೆಮ್ಮೆ, ಗೌರವದ ಸಂಕೇತ ಎಂದು ಹೆಸರಲ್ಲಿ ಸೇರಿಸಿಕೊಂಡೆ ಸರ್ ಎಂದೆ. ಗುಡ್..ಎಂದು ಬೆನ್ನು ತಟ್ಟಿ ಅಂಬೇಡ್ಕರ್ ಹೇಳಿದ ಹಾಗೆ ಸ್ವಾಭಿಮಾನಿಯಾಗಿ ಬದುಕಬೇಕು ಎಂದರು. ಅವರ ಬಾಯಿಯಲ್ಲಿ ಅಂಬೇಡ್ಕರ್ ಹೆಸರು ಕೇಳಿ ರೋಮಾಂಚನಗೊಂಡೆ. ಬಹುಶಃ ಹಂಸಲೇಖ ಸರ್‌ಗೆ ಅಂಬೇಡ್ಕರ್ ಮತ್ತು ಸಂವಿಧಾನದ ಬಗ್ಗೆ ಅಪಾರವಾದ ಗೌರವ ಇದೆ. ಆದ್ದರಿಂದಲೇ ಸಂವಿಧಾನದ ಪ್ರಸ್ತಾವನೆಯನ್ನು ಸಂಗೀತದ ಮೂಲಕ ಇಂಗ್ಲಿಷ್ ಮತ್ತು ಕನ್ನಡದ ಎರಡು ಭಾಷೆಗಳಿಂದ ಅತ್ಯಂತ ಮಧುರವಾಗಿ ಸಂಯೋಜಿಸಿ ಅದನ್ನು ಹಾಡಿಸುವ ಮೂಲಕ ಕರ್ನಾಟಕದ ಮನೆಮನಸ್ಸುಗಳಿಗೆ ದಾಟಿಸುವಲ್ಲಿ ದೊಡ್ಡ ಯಶಸ್ಸಿಗೆ ಕಾರಣಕರ್ತರಾಗಿದ್ದಾರೆ.

ನಿಮ್ಮ ಸಂಕಲನ ನನ್ನ ಹತ್ತಿರ ಇದೆ. ಅದು ಏನೋ ತುಂಬಾ ಉದ್ದದ ಹೆಸರು ಇದೆ ಎಂದರು. ‘ನಾನೇ ಸೂಜಿಗಾತ್ರದ ಕೊಳವೆಯಿಂದ ಮನುಷ್ಯನೊಬ್ಬನ ಹಾಡು’ ಎಂದೆ. ಎಸ್....ಹೌದು ನನಗೆ ನಮ್ಮ ಗುರುಗಳು ಪ್ರೊ.ಎಸ್.ಜಿ. ಸಿದ್ದರಾಮಯ್ಯ ಕೊಟ್ಟರು ಎಂದರು. ನನಗೆ ಆಶ್ಚರ್ಯ, ಸಂತೋಷ ಎರಡು ಆಯಿತು.

ಕೆಲವು ದಿನಗಳ ನಂತರ ಮತ್ತೊಮ್ಮೆ ಅವರೊಟ್ಟಿಗೆ ಹಾಸನಕ್ಕೆ ಪ್ರಯಾಣ ಮಾಡುವ ಅವಕಾಶ ದೊರೆಯಿತು. ಆ ಪ್ರಯಾಣ ಒಂದು ಅಪರೂಪದ ಅನುಭವ ನೀಡಿತು. ನಮ್ಮ ಮಾತುಗಳ ನಡುವೆ ಅವರಿಗೊಂದು ಪ್ರಶ್ನೆ ಕೇಳಿದೆ. ‘ಈ ಮಾಸದ ಮುಗುಳ್ನಗೆಗೆ ಕಾರಣವೇನು ಸರ್’ ಎಂದೆ. ‘ಹೋ ಖಂಡಿತ ಇದೆ. ಒಂದು ಊರಿನಲ್ಲಿ ನಾಟಕ ಮಾಡುತ್ತಿದ್ದಾಗ ಒಂದು ದಿನ ನಮ್ಮ ನಾಟಕದ ರಂಗಪರದೆಗಳು, ಉಡುಪು ಇತ್ಯಾದಿಗಳೆಲ್ಲವೂ ಸುಟ್ಟುಹೋದವು. ನಾಳೆಯ ಕನಸುಗಳಿಗಾಗಿ ಈ ಮುಗುಳ್ನಗೆ ಹಾಗೆ ಉಳಿದು ಬಿಟ್ಟಿತು’ ಎಂದರು.

ಜಗತ್ ಪ್ರಸಿದ್ಧಿಯಾಗು ಮಗನೇ ಎಂದು ನನಗೆ ನಮ್ಮ ಅಪ್ಪ ಆಗಾಗ ಹೇಳುತ್ತಿದ್ದರು. ಈಗ ಇಲ್ಲಿ ನಿಮ್ಮೊಟ್ಟಿಗೆ ಪ್ರಯಾಣಿಸುತ್ತಿದ್ದೀನಿ, ಇನ್ನೂ ಪ್ರಯಾಣವಿದೆ. ಅವರು ಹೇಳಿದ ಮಾತಿಗೆ ಬೆಲೆ ಬಂದಿರಬಹುದು ಅನಿಸುತ್ತದೆ ಸುಬ್ಬು ಎಂದು ಸಂಕೋಚದಿಂದಲೇ ಹೇಳಿದರು. ಹಂಸಲೇಖ ಸರ್ ಡಾ.ರಾಜ್‌ಕುಮಾರ್ ಅವರನ್ನು ಸಿನೆಮಾ ವಿಷಯಕ್ಕೆ ಸಂಬಂಧಪಟ್ಟ ಹಾಗೆ ಭೇಟಿ ಮಾಡುವ ಸಂದರ್ಭದಲ್ಲಿ, ಅವರ ಸರಳತೆ ಮಂತ್ರ ಮುದ್ಧನ್ನಾಗಿರಿಸುತ್ತದೆ. ಇವರೆಷ್ಟು ಸರಳವಾಗಿದ್ದರು ಎಂದರೆ, ಎಲ್ಲರ ಹಾಗೆ ಚಾಪೆ ಮೇಲೆ ಕುಳಿತು ನಾವೆಲ್ಲರೂ ಸಮಾನರು ಎನ್ನುವುದನ್ನು ಹೇಳದೇ, ಮಾಡಿ ತೋರಿಸುತ್ತಿದ್ದರು. ರಾಜ್ಯದಾದ್ಯಂತ ನಿಮ್ಮ ಪ್ರಭಾವಳಿ ಆವರಿಸಿದೆ. ಆದರೆ ನೀವು ಮಾತ್ರ ಇಷ್ಟು ಸರಳವಾಗಿದ್ದೀರಲ್ಲ ಎಂದಿದ್ದಕ್ಕೆ ಅಣ ್ಣನವರು, ಹೌದು ಚಿನ್ನದ ಕಿರೀಟ ಇದೆ ಅಂತ ಅದನ್ನು ಹಾಕಿಕೊಂಡು ಮಲಗಲಾಗುತ್ತದೆಯೇ? ಎನ್ನುವ ವಿವೇಕದ ಮಾತು ಹಂಸಲೇಖರನ್ನು ದಂಗುಬಡಿಸಿತ್ತು.

ಸ್ವತಃ ಹಂಸಲೇಖರವರು ಇದನ್ನೇ ಅಳವಡಿಸಿಕೊಂಡಿದ್ದಾರೆ ಎಂದು ಅನಿಸುತ್ತದೆ.

18-20 ವರ್ಷಗಳಿಂದ ‘ಹಂಸಲೇಖ ಮ್ಯೂಸಿಕ್ ಫೌಂಡೇಷನ್’ ಸ್ಥಾಪಿಸಿ ಆದಿವಾಸಿ ಮಕ್ಕಳಿಗೆ ಸಂಗೀತದ ಸಂಕೇತಗಳನ್ನು ಕಲಿಸುವುದನ್ನೇ ಮುಖ್ಯ ಗುರಿಯನ್ನಾಗಿಸಿದ್ದಾರೆ. ಇಂತಹ ಪ್ರಬುದ್ಧ ಚಿಂತನೆಗೆ ಅವರನ್ನು ಅಭಿನಂದಿಸಲೇ ಬೇಕು. ಈ ಐದನೇ ಸಂಗೀತ ಎಂಬುದು ಒಂದು ಹೊಸ ಆವಿಷ್ಕಾರವು ಸಂಗೀತದ ಮಧುರ ರಹಸ್ಯವನ್ನು ವಿವರಿಸುವ ಮ್ಯೂಸಿಕ್ ಲೈನಿನೊಂದಿಗೆ ಆರು ಸಾಲುಗಳಲ್ಲಿ ಸಂಗೀತವನ್ನು ಬರೆಯುವ, ಹೊಸ ವಿಧಾನವನ್ನು ಸಂಗೀತ ಪ್ರಪಂಚಕ್ಕೆ ವಿಕಸಿತಗೊಳಿಸಲು, ಹೊರಹೊಮ್ಮಿಸಿ ಪ್ರದರ್ಶಿಸಲು 18 ವರ್ಷಗಳು ತೆಗೆದುಕೊಂಡಿದ್ದಾರೆ.

ಇಂತಹವರ ಬಗ್ಗೆ ಎಷ್ಟು ಬರೆದರೂ ಮುಗಿಯುವುದಿಲ್ಲ. ಸಮಾಜದಲ್ಲಿ ಒಬ್ಬ ವ್ಯಕ್ತಿ ಜನಪ್ರಿಯವಾಗಿಬಿಟ್ಟರೆ, ಕೆಲವು ದುರ್ಬಲ ಮನಸ್ಸಿನವರು ಏನಾದರೂ ಒಂದು ತಪ್ಪು ಹುಡುಕುತ್ತಾರೆ. ಈ ನಾಡಿನ ಜಗದ ಕವಿ ಕುವೆಂಪು ವಿರುದ್ಧ ಕೂಡ ಪ್ರತಿಭಟನೆ, ವಿರೋಧಿ ಹೇಳಿಕೆಗಳು ಈ ನಾಡಿನಲ್ಲಿ ನಡೆದಿವೆ. ಇಂತಹ ಸಮಾಜದಲ್ಲಿ ಕೆಲವರು ಒಳ್ಳೆಯದನ್ನು ಸಹಿಸಿಕೊಳ್ಳುವುದಿಲ್ಲ ಎನ್ನುವುದು ನೂರಾರು ಬಾರಿ ನೋಡಿದ್ದೇವೆ. ಇರಲಿ ಇವೆಲ ್ಲವನ್ನೂ ಮೀರಿದ ಕನ್ನಡದ ಅಸ್ಮಿತೆ ಹಂಸಲೇಖರದ್ದು.

share
ಸುಬ್ಬು ಹೊಲೆಯಾರ್
ಸುಬ್ಬು ಹೊಲೆಯಾರ್
Next Story
X