ಬಾನು ಮುಷ್ತಾಕ್ ಅವರೇ ʼದಸರಾ ಉದ್ಘಾಟನೆʼ ಮಾಡಲಿದ್ದಾರೆ : ಎಚ್.ಸಿ.ಮಹದೇವಪ್ಪ

ಮೈಸೂರು : ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆ ಮಾಡಲು ಆಹ್ವಾನಿಸಿದ್ದೇವೆ. ಅವರು ಗೌರವಯುತವಾಗಿ ಬಂದು ದಸರಾ ಉದ್ಘಾಟನೆ ಮಾಡಲಿದ್ದಾರೆ ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದಸರಾ ಎಂದಿನಂತೆ ಸುಗಮವಾಗಿ, ಸುಲಲಿತವಾಗಿ ಮೈಸೂರಿನ ಸಮಸ್ತ ಜನರ ಸಹಭಾಗಿತ್ವದಲ್ಲಿ ನಡೆಯುತ್ತದೆ. ಬಾನು ಮುಷ್ತಾಕ್ ಅವರನ್ನು ಗೌರವಯುತವಾಗಿ ದಸರಾ ಉದ್ಘಾಟನೆ ಮಾಡಲು ಆಹ್ವಾನಿಸಿದ್ದೇವೆ. ಅವರು ಕೂಡ ಅಷ್ಟೇ ಗೌರವಯುತವಾಗಿ ಬಂದು ದಸರಾವನ್ನು ಉದ್ಘಾಟನೆ ಮಾಡುತ್ತಾರೆ ಎಂದು ಹೇಳಿದರು.
22ನೇ ತಾರೀಖಿನಂದು ಅವರು ಉದ್ಘಾಟಿಸಲಿದ್ದಾರೆ. ಈ ಜನರ ಉತ್ಸವದಲ್ಲಿ ಎಲ್ಲಾ ಸಂಘಟನೆಗಳು, ಧಾರ್ಮಿಕ ಗುಂಪುಗಳು ಮತ್ತು ರಾಜಕೀಯ ಪಕ್ಷಗಳು ಎಲ್ಲರೂ ಸೇರಿ ಸಂತೋಷದಿಂದ ದಸರಾವನ್ನು ಆಚರಣೆ ಮಾಡೋಣ. ಒಂದು ಒಳ್ಳೆಯ ಸಂದೇಶ ಕಳಿಸೋಣ ಎಂದರು.
Next Story