Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಮನೋ ಭೂಮಿಕೆ
  5. ಲಂಚೋದ್ಯಮ ಮತ್ತು ಭ್ರಷ್ಟ ಅಧಿಕಾರಿಗಳು!

ಲಂಚೋದ್ಯಮ ಮತ್ತು ಭ್ರಷ್ಟ ಅಧಿಕಾರಿಗಳು!

ನರೇಂದ್ರ ರೈ ದೇರ್ಲನರೇಂದ್ರ ರೈ ದೇರ್ಲ3 Aug 2025 10:07 AM IST
share
ಲಂಚೋದ್ಯಮ ಮತ್ತು ಭ್ರಷ್ಟ ಅಧಿಕಾರಿಗಳು!

ವ್ಯಕ್ತಿತ್ವವು ಪರೀಕ್ಷೆ, ಪಠ್ಯಪುಸ್ತಕದಿಂದ ರೂಪುಗೊಳ್ಳುವುದಿಲ್ಲ, ಅದು ಜೀವನ ಪಾಠದಿಂದ ಹುಟ್ಟುವುದು. ಕೇವಲ ನೇಮಕವಲ್ಲ, ಅಧಿಕಾರಿಯು ಕೆಲಸ ಮಾಡುವ ಶೈಲಿಯನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆ ಬೇಕು. ಜನರಿಂದ ಅಭಿಪ್ರಾಯ ಸಂಗ್ರಹಿಸಿ ಅಧಿಕಾರಿಗಳ ಸೇವಾ ಗುಣಮಟ್ಟವನ್ನು ಅಳೆಯುವ ವ್ಯವಸ್ಥೆ ಬರಬೇಕು. ಅಧಿಕಾರಿಗಳ ನಿರ್ವಹಣೆಯ ಮೇಲ್ವಿಚಾರಣೆಯ ವಿಚಾರದಲ್ಲಿ ಜನತಾ ನ್ಯಾಯಾಲಯದ ಪಾತ್ರ ಮುಖ್ಯವಾಗಬೇಕು. ಈ ಇಡೀ ವ್ಯವಸ್ಥೆ ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು.

ನಮ್ಮ ದೇಶದಲ್ಲಿ ಯಾವುದೇ ಅಪರಾಧದ ತನಿಖೆಗೆ ಅಧಿಕಾರಿಗಳನ್ನು ನೇಮಕ ಮಾಡಿದ ತಕ್ಷಣ ಲೋಕದ ಪ್ರತಿಕ್ರಿಯೆಯೊಂದು ಇದ್ದೇ ಇದೆ. ಹೂತಿಟ್ಟ ಹೆಣಗಳ ವಿಚಾರದಲ್ಲಿ ಎಸ್‌ಐಟಿ ನೇಮಕಗೊಂಡ ತಕ್ಷಣ ತನಿಖಾಧಿಕಾರಿಗಳ ಪರವಾಗಿ ಮೆಚ್ಚುಗೆಯ ಅಭಿಪ್ರಾಯ ವ್ಯಕ್ತವಾಯಿತು. ಅವರ ಈವರೆಗಿನ ಕಾರ್ಯಕ್ಷಮತೆ-ಚಾರಿತ್ರ್ಯದ ಹಿನ್ನೆಲೆಯನ್ನು ಶೋಧಿಸಿ ಮಣ್ಣು ಬಗೆಯುವ ಮುನ್ನವೇ ಪ್ರಾಮಾಣಿಕರು ಎಂಬ ಪ್ರಭೆಯನ್ನು ಅವರಿಗೆ ಸುತ್ತಲಾಯಿತು. ಈ ನಡುವೆಯೂ ಈ ಹಿಂದೆ ಉನ್ನತ ಪೊಲೀಸ್ ಅಧಿಕಾರಿಯಾಗಿ ಸ್ವಯಂ ನಿವೃತ್ತಿ ಪಡೆದ ಅನುಪಮಾ ಶೆಣೈ ಎಸ್‌ಐಟಿಯಲ್ಲಿದ್ದ ಅಧಿಕಾರಿಯೊಬ್ಬರ ಬಗ್ಗೆ ಅನುಮಾನ ವ್ಯಕ್ತಪಡಿಸಿ ಅಪಸ್ವರ ಎತ್ತಿದರು.

ಅಲ್ಲ, ಸರಕಾರಿ ಸೇವೆಗೆ ಸೇರಿದ ಒಬ್ಬ ಪೊಲೀಸ್ ಅಧಿಕಾರಿ, ನ್ಯಾಯಾಧೀಶ, ಶಿಕ್ಷಕ, ಜಿಲ್ಲಾಧಿಕಾರಿ, ಜವಾನ... ಇವರೆಲ್ಲ ಒಳ್ಳೆಯವರು ಕೆಟ್ಟವರು ಎಂಬ ಲೋಕ ತೀರ್ಮಾನಕ್ಕೆ ಸಲ್ಲುವುದಾದರೂ ಹೇಗೆ? ಸರಕಾರಿ ನೇಮಕದ ದಾರಿಯಲ್ಲಿ ಇವರೆಲ್ಲರೂ ಎದುರಿಸಿದ್ದು ಒಂದೇ ರೀತಿಯ ಪರೀಕ್ಷೆಗಳನ್ನು. ಆಯಾಯ ಇಲಾಖೆ ಏರ್ಪಡಿಸಿದ ಗಂಭೀರ ಪ್ರಶ್ನೆಗಳಿಗೆ ಉತ್ತರಿಸಿ, ಮೌಖಿಕ ಪರೀಕ್ಷೆಯನ್ನು ಎದುರಿಸಿ ಒಂದು ವ್ಯವಸ್ಥೆಗೆ ಒಳಪಟ್ಟವರು. ಹೀಗಿರುವಾಗ ಅವರು ನಿರ್ವಹಿಸುವ ಕಾರ್ಯದಲ್ಲೂ ಅದೇ ಏಕ ಸೂತ್ರ ಇರಬೇಕು. ನಿಯಮ, ಪ್ರಾಮಾಣಿಕತೆ, ಕಟ್ಟುನಿಟ್ಟಿನ ಶ್ರದ್ಧೆ ಇರಲೇ ಬೇಕು. ಹೀಗಿರುವಾಗ ಒಳ್ಳೆಯವ-ಕೆಟ್ಟವ ಎಂಬ ವಿಂಗಡಣೆ ಬರುವುದಾದರೂ ಹೇಗೆ?

ಬಹಳ ವರ್ಷಗಳ ಹಿಂದೆ ನನಗೆ ಗೊತ್ತಿರುವ ಶಿಕ್ಷಕರೊಬ್ಬರಿಗೆ ರಾಷ್ಟ್ರ ಪ್ರಶಸ್ತಿ ಬಂತು. ಆ ಪ್ರಶಸ್ತಿಗಾಗಿ ಅವರು ಸುತ್ತದ ಮಂತ್ರಿ, ರಾಜಕಾರಣಿಗಳ ಮನೆ ಮಠಗಳಿಲ್ಲ. ಪಾಠ ಮಾಡಿದ್ದಕ್ಕಿಂತ ಹೆಚ್ಚು ಅವರು ಶಿಫಾರಸು ಪತ್ರಗಳನ್ನು ಜೋಡಿಸುವುದರಲ್ಲಿಯೇ ಹೆಚ್ಚು ಕಾಲ ಕಳೆದಿದ್ದರು. ಇದಕ್ಕಿಂತಲೂ ಹೆಚ್ಚು ಅವರೊಮ್ಮೆ ಪಾಠ ಮಾಡುವಾಗ ತರಗತಿಯಲ್ಲಿ ಒಬ್ಬ ಹುಡುಗ ತೂಕಡಿಸುತ್ತಿದ್ದ ಎಂಬ ಕಾರಣಕ್ಕಾಗಿ ಅವನದ್ದೇ ಚಪ್ಪಲಿಯನ್ನು ತಲೆಗೇರಿಸಿ ಶಾಲೆಯ ಸುತ್ತ ಮೂರು ಸುತ್ತು ಓಡಿಸಿ ಶಿಕ್ಷೆ ಕೊಟ್ಟಿದ್ದರು. ಊರಿನಲ್ಲಿ ಅವರ ಬಗ್ಗೆ ಸದಭಿಪ್ರಾಯ ಇರಲಿಲ್ಲ. ಕೊನೆಗೂ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂತು!

ಅದೇ ಶಾಲೆಯಲ್ಲಿದ್ದ ಇನ್ನೊಬ್ಬ ಮೇಷ್ಟ್ರನ್ನು ಮಕ್ಕಳು ಬಿಡಿ, ಇಡೀ ಊರೇ ‘ಎಡ್ಡೆ ಮೇಷ್ಟ್ರು’(ಒಳ್ಳೆಯ ಮೇಷ್ಟ್ರು) ಎಂದೇ ಸಂಬೋಧಿಸುತ್ತಿದ್ದರು. ಯಾವತ್ತೂ ಅವರಿಗೆ ಶಾಲೆ ಮತ್ತು ಮನೆ ಬೇರೆ ಬೇರೆಯಾಗಿರಲಿಲ್ಲ. ಶಾಲೆಯ ಶಾರದಾ ಪೂಜೆಯಿಂದ ಹಿಡಿದು ಊರ ಬಡವರ ಮನೆಯ ಬೊಜ್ಜದವರೆಗೂ ಅಲ್ಲಿ ಅವರದೊಂದು ಸೇವೆ ಇದ್ದೇ ಇರುತ್ತಿತ್ತು. ತಾನು ಮಾಡುವ ಕೆಲಸಕ್ಕೆ ಸರಕಾರದಿಂದ ತಿಂಗಳ ತಿಂಗಳ ಸಂಬಳ ಬರುತ್ತೆ, ಅದೇ ತನಗೆ ಪ್ರಶಸ್ತಿ ಎಂದು ಭಾವಿಸಿಕೊಂಡು ಯಾವತ್ತೂ ಅವರು ತನಗೊಂದು ಬಹುಮಾನ ಕೊಡಿ ಎಂದು ಯಾರನ್ನೂ ಬೇಡಿದವರಲ್ಲ. ದುರಂತವೆಂದರೆ ರಾಷ್ಟ್ರ ಪ್ರಶಸ್ತಿ ಪಡೆದ ಶಿಕ್ಷಕರನ್ನು ಶಾಲೆಯಲ್ಲಿ ಸನ್ಮಾನಿಸುವ ಹೊತ್ತು ಅದೇ ಎಡ್ಡೆ ಮೇಷ್ಟ್ರು, ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದರು. ಅವರ ಪ್ರತೀ ಮಾತಿಗೆ ಊರವರ, ಮಕ್ಕಳ ಚಪ್ಪಾಳೆಯದ್ದೇ ರಾಶಿ. ಪ್ರಶಸ್ತಿ ವಿಜೇತ ಮೇಷ್ಟ್ರು ಸನ್ಮಾನಕ್ಕೆ ಉತ್ತರಿಸುವಾಗ ಮಕ್ಕಳಿಂದ ಹಿಡಿದು ಸಭಿಕರವರೆಗೆ ಒಂದು ದಿವ್ಯ ಮೌನ ಎದ್ದು ಕಾಣುತ್ತಿತ್ತು.

ಯೂನಿವರ್ಸಿಟಿಯೇ ಇರಲಿ, ಪ್ರೈಮರಿ ಶಾಲೆಯೇ ಇರಲಿ ಒಬ್ಬ ಭ್ರಷ್ಟ ಶಿಕ್ಷಕ ಅಡ್ಡದಾರಿ ಹಿಡಿದು, ಲಂಚ ಕೊಟ್ಟು ಶಿಕ್ಷಕನಾದರೆ ಆತ ಹೆಚ್ಚು ಕಡಿಮೆ ೩೦ ವರ್ಷ ಪಾಠ ಮಾಡಿದ ವಿದ್ಯಾರ್ಥಿಗಳು ಹೇಗಿರುತ್ತಾರೆ ಎನ್ನುವುದನ್ನು ಲೆಕ್ಕ ಹಾಕಿ. ಅವರೆಲ್ಲ ಅವನಂತೆಯೇ ಆಗಿಬಿಟ್ಟರೆ ಇಡೀ ಶಿಕ್ಷಣ ವ್ಯವಸ್ಥೆಯೇ ಭ್ರಷ್ಟರ ಸಂತೆಯಾಗಬಹುದು. ಅದೇ ವಿದ್ಯಾರ್ಥಿಗಳು ಮುಂದೆ ಮೇಷ್ಟುಗಳಾಗಿ ಕಲಿಸುವಾಗಲೂ ಇದೇ ಅಬೌದ್ಧಿಕತೆ ಪರಿಣಾಮ ಬೀರಬಹುದು. ಆ ಕಾರಣಕ್ಕಾಗಿಯಾದರೂ ಎಲ್ಲದಕ್ಕಿಂತ ಮುಖ್ಯವಾಗಿ ಶಿಕ್ಷಣ ಕ್ಷೇತ್ರ ಶುದ್ಧೀಕರಣಗೊಳ್ಳಬೇಕಾದ, ನೈತಿಕ ಮೌಲ್ಯಗಳನ್ನು ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಒಬ್ಬ ಕೆಟ್ಟ ಶಿಕ್ಷಕನು ಅಪ್ಪ-ಮಗ ಹೀಗೆ ಎರಡು ತಲೆಮಾರನ್ನು ತಿದ್ದುವ ದಾರಿಯಲ್ಲಿ ಭ್ರಷ್ಟತೆಯನ್ನು ತುಂಬಿದರೆ ಆ ಊರೇ ನೈತಿಕವಾಗಿ ಕುಸಿಯಬಹುದು.

ಸಾಮಾನ್ಯವಾಗಿ ವಿಶ್ವವಿದ್ಯಾನಿಲಯಗಳ ಕುಲ ಸಚಿವ, ಕುಲಪತಿಗಳ ಆಯ್ಕೆ ಅವರು ಕೊಡುವ ಲಂಚದ ಪ್ರಮಾಣದಲ್ಲಿ ನಿಂತಿದೆ ಎನ್ನುವ ಆರೋಪವಿದೆ. ಅಂದರೆ ಈ ದೇಶದ ಅತ್ಯುನ್ನತ ಶಿಕ್ಷಣದ ನೆಲೆಯಲ್ಲೇ ಅನೈತಿಕತೆಯ ಹಾದಿ ಆರಂಭಗೊಳ್ಳುತ್ತದೆ.ಕೊಟ್ಟಷ್ಟನ್ನು ಮತ್ತೆ ಪಡೆಯುವ ಲಾಲಸೆಯಿಂದ ಮುಂದಿನ ವಿಶ್ವವಿದ್ಯಾನಿಲಯದ ಒಳಗಡೆ ಮುಂದೆ ಆಗಬಹುದಾದ ನೇಮಕಾತಿ, ಕಾಮಗಾರಿ ಪೂರ್ಣ ಆತ ಮಾರಾಟಕ್ಕೆ ಕೂರುತ್ತಾನೆ, ಭ್ರಷ್ಟರ ಸರಣಿ ಹೀಗೆ ಕೊಡುಕೊಳ್ಳುವ ಕ್ರಿಯೆಯಲ್ಲಿ ಒಂದಕ್ಕೊಂದು ಸೇರಿಕೊಂಡೇ ಮುಂದುವರಿಯುತ್ತದೆ.

ಉಪಕುಲಪತಿಗಳ ಕಥೆ ಬಿಡಿ, ನನಗೆ ಗೊತ್ತಿರುವ ವಿಶ್ವವಿದ್ಯಾನಿಲಯ ಒಂದರ ಕನ್ನಡ ವಿಭಾಗದ ಮುಖ್ಯಸ್ಥರೊಬ್ಬರು ಪಿಎಚ್.ಡಿ. ವಿದ್ಯಾರ್ಥಿಗಳಿಂದ ಪ್ರತೀ ಹಂತದಲ್ಲೂ ದುಡ್ಡು ಪೀಕುತ್ತಿರುವ ಕಥೆಯನ್ನು ನೀವು ಕೇಳಬೇಕು. ಬಡತನದ ಹಿನ್ನೆಲೆಯ, ಮೀಸಲಾತಿ ದಾರಿಯಲ್ಲಿ ವಿಭಾಗಕ್ಕೆ ಬಂದ, ಭಾಷೆ ಸಾಹಿತ್ಯವನ್ನು ಕಲಿಸುವ ಕನ್ನಡ ಉಪನ್ಯಾಸಕರೆಲ್ಲ ಸೂಕ್ಷ್ಮ ಸಂವೇದನೆಯವರು ಎಂದೇ ನಾವು ಭ್ರಮಿಸಿದ್ದ ಇಂಥವರೆಲ್ಲ ವಸೂಲಾತಿಗೆ ಕೂತರೆ ಬೇರೆ ವಿಭಾಗಗಳ ಕಥೆ ಹೇಗಿರಬಹುದೆಂದು ನೀವೇ ಊಹಿಸಿ. ಎಲ್ಲಾ ಕಡೆ ಇದೇ ಆದಾಗ ಸಹಜವಾಗಿಯೇ ಯೋಗ್ಯರು, ಅರ್ಹರು ಹಿಂದೆ ಉಳಿದು ಭ್ರಷ್ಟ ಉಪನ್ಯಾಸಕರು ಒಳಸುಳಿಯುತ್ತಾರೆ. ಸರಿಯಾದ ದಾರಿಯಲ್ಲಿ ನೇಮಕಗೊಂಡ ಉಪನ್ಯಾಸಕರನ್ನು, ಸಜ್ಜನ ಪ್ರಾಮಾಣಿಕ ಕುಲಪತಿಗಳನ್ನು ಕೂಡ ಸಮಾಜ ಅನುಮಾನದಿಂದಲೇ ನೋಡುವ ಪ್ರವೃತ್ತಿ ಆರಂಭವಾಗುತ್ತದೆ.

ಒಂದು ರಾಜ್ಯದ ಅತ್ಯುನ್ನತ ಅಧಿಕಾರಿಗಳನ್ನು ಆಯ್ಕೆ ಮಾಡುವ ಪರೀಕ್ಷಾ ಮತ್ತು ಮೌಲ್ಯಮಾಪನ ಕಾರ್ಯದಲ್ಲಿ ನಾನು ಭಾಗವಹಿಸಿದವನೇ. ಪ್ರಶ್ನೆ ಪತ್ರಿಕೆಗಳನ್ನು ಅಂತಿಮಗೊಳಿಸುವ ರಹಸ್ಯ ಸಭೆಗಳಲ್ಲಿರುವ ನಿರ್ಬಂಧಗಳು, ನಿಯಮಗಳು, ಪಾರದರ್ಶಕತೆ, ತಲೆ ಮೇಲೆ ತೂಗುವ ಕ್ಯಾಮರಾಗಳನ್ನು ಗಮನಿಸಿದರೆ ಭೇಷ್ ಅನಿಸುತ್ತದೆ. ಪರೀಕ್ಷೆಯವರೆಗೆ ಎಲ್ಲವೂ ಕಟ್ಟುನಿಟ್ಟು. ಆನಂತರದ ಪ್ರಕ್ರಿಯೆಗಳೆಲ್ಲ ಹೇಗೆ ಹಳ್ಳ ಹಿಡಿಯುತ್ತವೆ ಎಂಬುದಕ್ಕೆ ನಮ್ಮ ರಾಜ್ಯದಲ್ಲಿ ಹೈಕೋರ್ಟ್ ಮೆಟ್ಟಲೇರಿದ್ದ ಕೆಪಿಎಸ್‌ಸಿ ಕೇಸುಗಳ ಸಂಖ್ಯೆಯೇ ಸಾಕು! ರಾಜ್ಯದ್ದು ಬಿಡಿ, ಈ ದೇಶದ ಅತ್ಯುನ್ನತ ಪರೀಕ್ಷೆಯ ಮೌಲ್ಯಮಾಪಕರಿಗೆ ರಹಸ್ಯ ಮುದ್ರೆಯನ್ನು ಹೊತ್ತ ಉತ್ತರ ಪತ್ರಿಕೆಗಳು ತಲುಪುವ ಮುಂಚೆ ಅದರ ಒಳಗಡೆ ಉತ್ತರ ಪತ್ರಿಕೆಗಳಿರುವ ಅಭ್ಯರ್ಥಿಗಳ ಫೋನುಗಳು ಬರುತ್ತವೆ ಎಂದರೆ ಈ ಒಟ್ಟು ವ್ಯವಸ್ಥೆ ಎಷ್ಟು ಸಡಿಲವಾಗಿದೆ ಎನ್ನುವುದನ್ನು ನೀವೇ ಲೆಕ್ಕ ಹಾಕಿ. ನನಗೆ ಗೊತ್ತಿರುವ ಒಬ್ಬ ಯುವ ತಹಸೀಲ್ದಾರ್ ಬರೀ ಹತ್ತೇ ವರ್ಷಗಳಲ್ಲಿ ರಾಜ್ಯದ ಬೇರೆ ಬೇರೆ ಊರುಗಳಲ್ಲಿ ಎಷ್ಟು ಭೂಮಿ ಖರೀದಿಸಿದ್ದಾನೆ ಎಂದರೆ ಪ್ರತೀ ಸಲ ಲಂಚ ಪಡೆದು ಸಿಕ್ಕಿಹಾಕಿಕೊಂಡು ಕೆಲವೇ ದಿನಗಳಲ್ಲಿ ಅದರ ಅಪ್ಪನಷ್ಟು ದುಡ್ಡು ಕೊಟ್ಟು ಮತ್ತೆ ಕೆಲಸ ಪಡೆಯುವಷ್ಟು ಆತ ಗಟ್ಟಿಯಾಗಿದ್ದಾನೆ. ಲಂಚೋದ್ಯಮದಲ್ಲಿ ಈ ರೀತಿ ಬಂಡವಾಳ ಹೂಡುವ ಅನೇಕ ಅಧಿಕಾರಿಗಳನ್ನು ನಾವು ಕಂಡಿದ್ದೇವೆ.

ಒಂದು ಕಾಲ ಇತ್ತು. 20-30 ವರ್ಷ ಕೆಲಸ ಮಾಡಿ ರಿಟೈರ್ಡ್ ಆಗುವ ಮುಂಚೆ ಒಂದು ಮನೆ ಕಟ್ಟಿದರೆ ಸಾಕಪ್ಪ ಎಂದು ಪ್ರಾಮಾಣಿಕವಾಗಿ ಕಷ್ಟಪಟ್ಟು ದುಡ್ಡು ಉಳಿಸುವ ಅಧಿಕಾರಿಗಳು. ಆದರೆ ಈಗ ಪ್ರೊಬೆಷನರಿ ಅವಧಿ ಮುಗಿಯುವ ಮುಂಚೆ ಮನೆಯಷ್ಟೇ ಅಲ್ಲ, ಆ ಬಂಗಲೆಯ ಮುಂದೆ ನಾಲ್ಕೈದು ಕಾರುಗಳನ್ನು ನಿಲ್ಲಿಸಿಕೊಂಡ ಭ್ರಷ್ಟ ಅಧಿಕಾರಿಗಳನ್ನು ನಾವು ನೋಡುತ್ತಿದ್ದೇವೆ. ಲೋಕಾಯುಕ್ತ, ಐಟಿ ರೈಡ್‌ಗಳಾದಾಗ ಸಾವಿರಕ್ಕಿಂತ ಹೆಚ್ಚು ರೇಷ್ಮೆ ಸೀರೆಗಳು, ಮುನ್ನೂರಕ್ಕಿಂತ ಹೆಚ್ಚು ಜೊತೆ ಚಪ್ಪಲಿಗಳು, ಕೆಜಿ ಕೆಜಿ ಚಿನ್ನ, ಬೆಳ್ಳಿ, ವಜ್ರ ಇವೆಲ್ಲ ಆ ಮನೆಯಲ್ಲಿ ತುಂಬಿಕೊಂಡಿರುವುದು ಸಾಮಾನ್ಯವಾಗಿ ಹೋಗಿದೆ.

ಇತ್ತೀಚೆಗೆ ನಮ್ಮ ಕಂದಾಯ ಮಂತ್ರಿ ಕೃಷ್ಣ ಬೈರೇಗೌಡರು ರಾಜ್ಯದ ತಾಲೂಕು ಕಚೇರಿಗಳಿಗೆ ಭೇಟಿಕೊಟ್ಟು ವಿಚಾರಿಸುವ ಚಿಕ್ಕ ತುಣುಕುಗಳು ಪ್ರಸಾರವಾಗುತ್ತಿವೆ. ತುಂಬಾ ಹುಲುಸಾಗಿ ಮೇಯುವ ಇಲಾಖೆಯದು. ‘‘ನಿಮ್ಮ ರೇಟಿನ ಬೋರ್ಡನ್ನು ಟೇಬಲ್ ಮೇಲೆ ನೇತುಹಾಕಿ’’ ಎಂಬ ಮಾತನ್ನು ನೇರವಾಗಿ ಅವರೇ ಆಡಿದ್ದಾರೆ. ಪ್ರಜೆಗಳು ಕೊಡುವ ಲಂಚದ ಹಣವೇ ತಮ್ಮ ವೇತನ, ಪ್ರತ್ಯೇಕ ಸಂಬಳವೇ ಇಲ್ಲ ಅನ್ನುವ ರೀತಿಯಲ್ಲಿ ಸಾರ್ವಜನಿಕರಿಂದ ಪೀಕಿಸುತ್ತ, ಪೀಡಿಸುತ್ತಾ ಮತ್ತೆ ಮತ್ತೆ ಬರ ಹೇಳುತ್ತಾ ಕಾಡುವ ಅಧಿಕಾರಿಗಳು ಎಲ್ಲೆಡೆ ತುಂಬಿಕೊಂಡಿದ್ದಾರೆ.

ವಿಶೇಷವೆಂದರೆ ಸರಕಾರದ ವೇತನ, ಪಿಂಚಣಿ ಪಡೆಯುವ ಇಂತಹ ಅಧಿಕಾರಿಗಳನ್ನು ಅತ್ಯುತ್ತಮ, ಪರಮೋತ್ತಮ, ಮಹೋಪಾಧ್ಯಾಯ ಇತ್ಯಾದಿ ಬಿರುದುಕೊಟ್ಟು ಕಿರೀಟ ತೊಡಿಸಿ ನಾವೇ ಸಂಭ್ರಮಿಸುವ ಕ್ರಮ!

ಸರಕಾರ ವರ್ಷಗಟ್ಟಲೆ ಪರೀಕ್ಷೆಗಳನ್ನು ಆಯೋಜಿಸಿ, ಸಾವಿರಾರು ಅಭ್ಯರ್ಥಿಗಳಲ್ಲಿ ಕೆಲವರೆನ್ನುವವರನ್ನು ಮಾತ್ರ ಕಟ್ಟುನಿಟ್ಟಾಗಿ ಆಯ್ಕೆ ಮಾಡುತ್ತದೆ. ಎಲ್ಲಾ ಅಭ್ಯರ್ಥಿಗಳು ಒಂದೇ ಪ್ರಶ್ನೆಪತ್ರಿಕೆಗೆ ಉತ್ತರಿಸುತ್ತಾರೆ. ಒಂದೇ ಅಂತಿಮ ಫಲಿತಾಂಶದಲ್ಲಿ ಸಿಗುವ ಹುದ್ದೆಗಳವು. ಅಲ್ಲಿ ಮೀಸಲಾತಿ ಇದ್ದರೂ, ಪಾಠ ಓದುವ ಕಠಿಣ ಶ್ರಮ ಒಂದೇ. ಒಬ್ಬ ಕಾನೂನು ನಿರ್ವಾಹಕ, ಮತ್ತೊಬ್ಬ ಕಾನೂನು ಮೀರಿ ನಡೆವವ. ಇಬ್ಬರಿಗೂ ವೇತನ ಸರಿಸಮಾನ, ಹುದ್ದೆಯ ಗೌರವ ಒಂದೇ. ಆದರೆ ನಾಡಿನ ಜನರ ನೋಟದಲ್ಲಿ ಒಬ್ಬ ‘ದೇವತೆ’ ಮತ್ತೊಬ್ಬ ‘ದೈತ್ಯ’. ಇದು ಕೇವಲ ಆಡಳಿತ ಯಂತ್ರದ ಸಮಸ್ಯೆಯಲ್ಲ. ಇದು ಮಾನವ ವ್ಯಕ್ತಿತ್ವದ ತಾರತಮ್ಯ. ಅಧಿಕಾರ ಎಲ್ಲರಿಗೂ ಸಿಗಬಹುದು, ಆದರೆ ಅದನ್ನು ಹೇಗೆ ಬಳಸಬೇಕು ಎಂಬ ಬುದ್ಧಿ ಎಲ್ಲರಲ್ಲಿರುವುದಿಲ್ಲ. ಒಬ್ಬ ಅಧಿಕಾರಿ ಬೆಳಗ್ಗೆ ೯ ಗಂಟೆಗೂ ಮುನ್ನ ಕಚೇರಿಗೆ ಬಂದು ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸುತ್ತಿದ್ದರೆ, ಮತ್ತೊಬ್ಬ ಎರಡು ಗಂಟೆ ತಡವಾಗಿ ಬಂದು ಇವತ್ತು ನಿಮ್ಮ ಫೈಲ್ ನೋಡಲಾಗುವುದಿಲ್ಲ ಎನ್ನುತ್ತಾನೆ. ಮತ್ತೊಬ್ಬ ನಾನು ಅಧಿಕಾರಿಯಾಗಿದ್ದೇನೆ, ನೀವು ನನ್ನ ಮುಂದೆ ತಲೆಬಾಗಬೇಕು ಎನ್ನುವ ಕೆಡುಕು ಮನಸ್ಸಿನಿಂದ ವರ್ತಿಸುತ್ತಾನೆ.ಇಲ್ಲಿ ವ್ಯತ್ಯಾಸ ಉದ್ಭವಿಸುವುದೇ ವ್ಯಕ್ತಿತ್ವದಲ್ಲಿ. ವ್ಯಕ್ತಿತ್ವವು ಪರೀಕ್ಷೆ, ಪಠ್ಯಪುಸ್ತಕದಿಂದ ರೂಪುಗೊಳ್ಳುವುದಿಲ್ಲ, ಅದು ಜೀವನ ಪಾಠದಿಂದ ಹುಟ್ಟುವುದು. ಕೇವಲ ನೇಮಕವಲ್ಲ, ಅಧಿಕಾರಿಯು ಕೆಲಸ ಮಾಡುವ ಶೈಲಿಯನ್ನು ನಿರಂತರವಾಗಿ ಪರಿಶೀಲಿಸುವ ವ್ಯವಸ್ಥೆ ಬೇಕು. ಜನರಿಂದ ಅಭಿಪ್ರಾಯ ಸಂಗ್ರಹಿಸಿ ಅಧಿಕಾರಿಗಳ ಸೇವಾ ಗುಣಮಟ್ಟವನ್ನು ಅಳೆಯುವ ವ್ಯವಸ್ಥೆ ಬರಬೇಕು. ಅಧಿಕಾರಿಗಳ ನಿರ್ವಹಣೆಯ ಮೇಲ್ವಿಚಾರಣೆಯ ವಿಚಾರದಲ್ಲಿ ಜನತಾ ನ್ಯಾಯಾಲಯದ ಪಾತ್ರ ಮುಖ್ಯವಾಗಬೇಕು. ಈ ಇಡೀ ವ್ಯವಸ್ಥೆ ರಾಜಕೀಯ ಪ್ರಭಾವದಿಂದ ಮುಕ್ತವಾಗಿರಬೇಕು.

share
ನರೇಂದ್ರ ರೈ ದೇರ್ಲ
ನರೇಂದ್ರ ರೈ ದೇರ್ಲ
Next Story
X