ʼಕರ್ನಾಟಕ ಹಿಂದೂ ಪಾರ್ಟಿʼ ಕಟ್ಟುತ್ತೇವೆ : ಶಾಸಕ ಯತ್ನಾಳ್

ಮದ್ದೂರು : ʼರಾಜ್ಯದ ಬಿಜೆಪಿಯವರು ಹೊಂದಾಣಿಕೆ ಮಾಡಿಕೊಂಡಿದ್ದಾರೆ. ಬಿಜೆಪಿಯವರು ಗೌರವಯುತವಾಗಿ ತೆಗೆದುಕೊಳ್ಳದಿದ್ದರೆ, ರಾಜ್ಯದಲ್ಲಿ ಹೊಸ ಸರಕಾರ ತರುತ್ತೇವೆʼ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.
ಗುರುವಾರ ಮದ್ದೂರಿನಲ್ಲಿ ಮಾತನಾಡಿದ ಅವರು, ‘ಪಾಕಿಸ್ತಾನಕ್ಕೆ ಜೈ’ ಎಂದು ಧ್ವಜ ಹಾರಿಸಿದರೆ ಅಲ್ಲೇ ಎನ್‌ಕೌಂಟರ್ ಮಾಡುತ್ತೇವೆ. ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ರೀತಿ ಆಡಳಿತ ಕರ್ನಾಟಕದಲ್ಲಿ ಬರಲಿದೆ. ನಾನು ಮತ್ತು ಪ್ರತಾಪ್ ಸಿಂಹ ಹಿಂದೂಗಳ ಪರವಾಗಿ ಗಟ್ಟಿಯಾಗಿ ಮಾತನಾಡುತ್ತೇವೆ. ನಾವೆಲ್ಲ ಒಂದಾಗಿ ರಾಜ್ಯದಲ್ಲಿ ಕರ್ನಾಟಕ ಹಿಂದೂ ಪಾರ್ಟಿ ಕಟ್ಟುತ್ತೇವೆ ಎಂದರು.
ಅಧಿಕಾರಕ್ಕೆ ಬಂದರೆ ಮುಸ್ಲಿಮರ ಮೀಸಲಾತಿ ತೆಗೆದು ಹಿಂದೂಗಳಿಗೆ ಹಂಚುತ್ತೇನೆ. ನೀವು ನನಗೆ ಆಶೀರ್ವಾದ ಮಾಡಿದರೆ, ರಾಜ್ಯಾದ್ಯಂತ ಅಕ್ರಮ ಮಸೀದಿಗಳನ್ನು ನಿಲ್ಲಿಸುತ್ತೇನೆ. ಹಿಂದುತ್ವಪರ ಕಾರ್ಯಕರ್ತರಿಗೆ ಕಲ್ಲು ಹೊಡೆದವರಿಗೆ ಸರಿಯಾದ ಶಿಕ್ಷೆ ಆಗಬೇಕು. ನಾನು ಅಧಿಕಾರಕ್ಕೆ ಬಂದರೆ ಗೋ ಹತ್ಯೆ ಮಾಡುವವರನ್ನು ಬಿಡಲ್ಲ ಎಂದು ಹೇಳಿದರು.
Next Story