ಆಂಧ್ರ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ: ಬಾಗೇಪಲ್ಲಿ ಮೂಲದ ಮೂವರು ಮೃತ್ಯು, 9 ಮಂದಿಗೆ ಗಾಯ

ಸಾಂದರ್ಭಿಕ ಚಿತ್ರ
ಬಾಗೇಪಲ್ಲಿ: ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಮದನಪಲ್ಲಿ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಬಾಗೇಪಲ್ಲಿ ತಾಲೂಕಿನ ಮೂವರು ಸ್ಥಳದಲ್ಲಿಯೇ ಮೃತಪಟ್ಟು, 9 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಚರಣ್(17), ಮೇಘರ್ಷ(17) ಹಾಗೂ ಶ್ರಾವಣಿ(28) ಮೃತಪಟ್ಟವರು.
ಕಳೆದ ಎರಡು ದಿನಗಳ ಹಿಂದೆ ತಿರುಪತಿಯ ತಿರುಮಲ ದೇವಾಲಯದ ಶ್ರೀವೆಂಕಟೇಶ್ವರಸ್ವಾಮಿಯ ದೇವರ ದರ್ಶನ ಪಡೆದು ಟಿಟಿ ವಾಹನದಲ್ಲಿ 14 ಜನರು ಬಾಗೇಪಲ್ಲಿಗೆ ವಾಪಸ್ ಬರುತ್ತಿದ್ದಾಗ ಸೋಮವಾರ ಬೆಳಗ್ಗೆ 7ಗಂಟೆ ಸಮಯದಲ್ಲಿ ಮದನಪಲ್ಲಿ ಬಳಿಯ ಕುರುಬಲಕೋಟ ಮಂಡಲಂ ಮಂಡಲದ ಚನ್ನಮರ್ರಿಮಿಟ್ಟ ಗ್ರಾಮದ ಬಳಿ ದುರಂತ ನಡೆದಿದ್ದು, ಟಿಟಿ ವಾಹನಕ್ಕೆ ಎದುರುಗಡೆಯಿಂದ ಬಂದ ಅಪರಿಚಿತ ವಾಹನ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ
ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಅಪರಿಚತ ವಾಹನ ಢಿಕ್ಕಿಯಾದ ರಭಸಕ್ಕೆ ಟಿಟಿ ವಾಹನ ಪಕ್ಕಕ್ಕೆ ಉರಳಿಬಿದ್ದಿದೆ. ಬಾಗೇಪಲ್ಲಿ ಪೊಲೀಸರು ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಮೃತರು ಮೂಲತಃ ಬಾಗೇಪಲ್ಲಿ ತಾಲೂಕಿನ ಹೊಸಹುಡ್ಯ, ಶ್ರೀನಿವಾಸಪುರ ಗ್ರಾಮದವರು ಎಂದು ತಿಳಿದು ಬಂದಿದೆ.