ಕೊಪ್ಪಳ | ಯುವಕನಿಗೆ ಅವಾಚ್ಯ ಶಬ್ದದಿಂದ ನಿಂದನೆ ಆರೋಪ

ಮಂಜುನಾಥ ನಾಯಕ, ಅಬ್ದುಲ್ ರಜಾಕ್
ಕೊಪ್ಪಳ, ಸೆ.12: ನನಗೆ ಅಬ್ದುಲ್ ರಝಾಕ್ ಎಂಬವರು ನಿಂದಿಸಿದ್ದಾರೆ ಎಂದು ಆರೋಪಿಸಿ ನಗರದ ಕವಲೂರು ಓಣಿ ನಿವಾಸಿ ಮಂಜುನಾಥ ನಾಯಕ ಎಂಬವರು ಜಾತಿ ನಿಂದನೆ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಕೊಪ್ಪಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸೆ.3ರಂದು ಅಬ್ದುಲ್ ರಝಾಕ್ ಅವರಿಗೆ ದೂರವಾಣಿ ಕರೆ ಮಾಡಿದಾಗ ನಾನು ಗೌರವ ಪೂರ್ವಕವಾಗಿ ಮಾತನಾಡಿದೆ. ಆದರೆ ಅವರು ನನಗೆ ಜಾತಿನಿಂದನೆ ಮಾಡಿದ್ದಾರೆ ಎಂದು ಮಂಜುನಾಥ್ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಪೋಲಿಸ್ ಅಧಿಕಾರಿಗಳು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಜಾತಿನಿಂದನೆ ಮಾಡಿದ ವ್ಯಕ್ತಿಯನ್ನು ತಕ್ಷಣ ಬಂಧನ ಮಾಡಿ, ನ್ಯಾಯಾಂಗದ ವಶಕ್ಕೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ಇನ್ನೂ ಪ್ರಕರಣ ದಾಖಲಾಗಿಲ್ಲ ಎಂದು ತಿಳಿದು ಬಂದಿದೆ. ಅಬ್ದುಲ್ ರಝಾಕ್ ಮತ್ತು ಮಂಜುನಾಥ್ ನಾಯಕ್ ಎನ್ನುವವರ ನಡೆದ ಸಂಭಾಷಣೆಯ ಎನ್ನಲಾದ ಆಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ ಎನ್ನಲಾಗಿದೆ.
Next Story