ಕೊಪ್ಪಳ | ಟ್ರಾಕ್ಟರ್ ಹರಿದು ಮಹಿಳೆ ಮೃತ್ಯು : ಪ್ರಕರಣ ದಾಖಲು

ಕೊಪ್ಪಳ: ರಸ್ತೆ ದಾಟುತ್ತಿದ್ದಾಗ ಮೈ ಮೇಲೆ ತರಕಾರಿ ತುಂಬಿದ ಟ್ರಾಕ್ಟರ್ ಹರಿದು ಮಹಿಳೆಯೊರ್ವರು ಮೃತಪಟ್ಟ ಘಟನೆ ನಗರದ ಪವಾರ್ ಹೋಟೆಲ್ ಬಳಿ ನಡೆದಿದೆ.
ಮೃತರನ್ನು ಕೊಪ್ಪಳದ ಸಿದ್ಧೇಶ್ವರ ನಗರದ ಗಂಗಮ್ಮ (29), ಎಂದು ಗುರುತಿಸಲಾಗಿದೆ.
ಘಟನಾ ಸ್ಥಳಕ್ಕೆ ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ, ಟ್ರಾಕ್ಟರ್‌ನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story