ಕೊಪ್ಪಳ | ಬಲ್ಡೋಟಾ ಕಾರ್ಖಾನೆ ವಿರುದ್ಧ ಪೇಂಟ್ ಅಭಿಯಾನ

ಕೊಪ್ಪಳ : ನಗರದ ಸಮೀಪದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಲ್ಡೋಟಾ ಕಾರ್ಖಾನೆಗೆ ಈಗಾಗಲೇ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದು, ಜಿಲ್ಲಾ ಬಚಾವೋ ಆಂದೋಲನ ಸಮಿತಿಯಿಂದ ಪೇಂಟ್ ಅಭಿಯಾನ ನಡೆಯಿತು.
‘ಬಲ್ಡೋಟಾ ತೊಲಗಿಸಿ ಕೊಪ್ಪಳ ಉಳಿಸಿ’ ‘ಶುದ್ಧ ಪರಿಸರ ನಮ್ಮೆಲರ ಹಕ್ಕು’ ‘ಅಂದು ಕ್ವಿಟ್ ಇಂಡಿಯಾ ಇಂದು ಕ್ವಿಟ್ ಬಲ್ಡೋಟಾ’ ಎಂಬ ಗೋಡೆ ಬರಹಗಳನ್ನು ನಗರದ ವಿವಿಧೆಡೆ ಬರೆಯಲಾಗುತ್ತಿದ್ದೆ.
ಕೊಪ್ಪಳ ನಗರಗದ ಬ್ರಿಡ್ಜ್, ಗೋಡೆ ಹಾಗೂ ಬಾಧಿತ ಪ್ರದೇಶಗಳ ಹಳ್ಳಿಗಳಲ್ಲಿ ಕಾರ್ಖಾನೆ ವಿರುದ್ಧ ಮತ್ತು ಅದರಿಂದ ಆಗುತ್ತಿರುವ ಹಾನಿಯ ಬಗ್ಗೆ ಜನಜಾಗೃತಿ ಮೂಡಿಸಲು ಈ ಪೇಂಟ್ ಅಭಿಯಾನ ನಡೆಸುತ್ತಿದ್ದು, ಗೋಡೆ ಬರಹಕ್ಕೆ ಬಣ್ಣಗಳನ್ನು ನಗರದ ಬಣ್ಣದ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಬಣ್ಣ ಒದಗಿಸಿದ್ದಾರೆ.
ಇದ್ದಕ್ಕೆ ಪ್ರತಿಯಾಗಿ ಬಲ್ಡೋಟಾ ಕೂಡ ನಗರದ ತುಂಬೆಲ್ಲಾ ಗಿಡಗಳ ಸುತ್ತಲು ನಿರ್ಮಿಸಿರುವ ಬ್ಯಾರಿಕೇಡ್ ರೂಪದ ಕವಚಕ್ಕೆ ಮೊದಲು ಇದ್ದ ತನ್ನದೇ ಕಂಪೆನಿಯ ಬರಹವನ್ನು ಅಳಿಸಿ ‘ಬಲ್ಡೋಟಾ’ ಎಂದು ಮತ್ತೆ ದೊಡ್ಡ ಅಕ್ಷರಗಳಿಂದ ಬರೆಸುತ್ತಿದೆ.
ಬಲ್ಡೋಟಾ ಕಂಪೆನಿಯು ತನ್ನ ಸುತ್ತ ಕೋಟೆ ಗೋಡೆಯಂತೆ ಗೋಡೆಯನ್ನು ಕಟ್ಟಿಕೊಂಡಿದ್ದು, ಬೇರೆ ಕಡೆಯಿಂದ ಕಂಪೆನಿಯನ್ನು ಪ್ರವೇಶಿಸಲಾಗದೆ ಕನಿಷ್ಠ ಪಕ್ಷ ಒಳಗೆ ಏನು ನಡೆಯುತ್ತಿದೆ ಎಂದು ಕೂಡ ನೋಡದಂತೆ ಗೋಡೆಯನ್ನು ಕಟ್ಟಲಾಗಿದೆ.
ಈಗಾಗಲೇ ಬಲ್ಡೋಟಾ ಎಂಬ ನೇಮ್ ಪ್ಲೇಟ್‌ನ ವಾಹನಗಳು ನಗರದಲ್ಲಿ ಓಡಾಡುತ್ತಿದ್ದು, ಕಾರ್ಖಾನೆಯನ್ನು ವಿಸ್ತರಿಸಲು ಬಲ್ಡೋಟಾ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದು, ಇಲ್ಲಿನ ಜನಪ್ರತಿನಿಧಿಗಳು ಮಾತ್ರ ಮೌನ ತಾಳಿದ್ದಾರೆ ಎಂದು ನಗರದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.