ಕೊಪ್ಪಳ | ವಿಶ್ವೇಶ್ವರಯ್ಯನವರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ: ಚೆನ್ನಕೇಶವ

ಕೊಪ್ಪಳ: ಸರ್ ಎಂ.ವಿಶ್ವೇಶ್ವರಯ್ಯನವರು ನೀಡಿದ ಮೌಲ್ಯಗಳು ಮತ್ತು ಮಾದರಿಗಳನ್ನು ಎಲ್ಲಾ ಇಂಜಿನಿಯರ್‌ಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಅವರ ದಾರಿಯಲ್ಲಿ ನಡೆಯಬೇಕು ಎಂದು ಸಿವಿಲ್ ಇಂಜಿನಿಯರ್ಸ್ ಅಂಡ್ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಚೆನ್ನಕೇಶವ ಹೇಳಿದರು.
ನಗರದ ಇಂಜಿನಿಯರ್ ಅಸೋಸಿಯೇಷನ್ ಕಚೇರಿಯಲ್ಲಿ ನಡೆದ ಇಂಜಿನಿಯರ್‌ಸ್ ಡೇ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಚೆನ್ನಕೇಶವ ವಹಿಸಿದ್ದರು.
ಡಾ. ಬಿ.ವಿ. ಮುದ್ಗಲ್, ಚಂದ್ರಶೇಖರಯ್ಯ ಸೊಪ್ಪಿಮಠ, ಬಸವರಾಜ್ ಗೌರಿಮಠ ಮತ್ತು ಬಸವರಾಜ್ ದೇವಪುರ ಅವರು ಅತಿಥಿಗಳಾಗಿ ಹಾಜರಿದ್ದರು.
ಸರ್ ಎಂ. ವಿಶ್ವೇಶ್ವರಯ್ಯನವರು ಈ ನಾಡಿಗೆ ನೀಡಿದ ಮಹತ್ತರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಅವರ ಜನ್ಮದಿನವನ್ನು ಇಂಜಿನಿಯರ್‌ಸ್ ಡೇ ಆಗಿ ಆಚರಿಸಲಾಗುತ್ತಿದೆ ಎಂದು ಅಸೋಸಿಯೇಷನ್ ಸದಸ್ಯ ಚಂದ್ರಶೇಖರ್ ಪಾಟೀಲ್ ಹೇಳಿದರು.
ಕಾರ್ಯಕ್ರಮದ ನಂತರ ಅಸೋಸಿಯೇಷನ್ ಹಾಗೂ ಖಾಸಗಿ ಕಂಪನಿಗಳ ಸಿಬ್ಬಂದಿ ಸೇರಿ ಕೊಪ್ಪಳ ನಗರದಲ್ಲಿ ಸಸಿ ನೆಡುವ ಮೂಲಕ ದಿನವನ್ನು ಅರ್ಥಪೂರ್ಣವಾಗಿ ಆಚರಿಸಿದರು.
ಕಾರ್ಯಕ್ರಮದಲ್ಲಿ ಜಾಯಿಂಟ್ ಸೆಕ್ರೆಟರಿ ಮಹೇಶ್ ತಾವರಗೆರೆ, ಹಿರಿಯ ಇಂಜಿನಿಯರ್ ಪಂಪಾಪತಿ, ಖಾಲಿದ್ ಸಿದ್ದಖಿ, ಪ್ರಮೋದ್, ಆಕಾಶ್ ಹುರಕಡ್ಲಿ, ಬಸವರಾಜ್ ಮಸ್ಕಿ, ಇಂಜಿನಿಯರ್ ಅನುರಾಧ, ಮೀಡಿಯಾ ಕನ್ವೀನರ್ ಕಲೀಮ್ ಖಾನ್ ಸೇರಿದಂತೆ ಅಸೋಸಿಯೇಷನ್‌ನ ಎಲ್ಲಾ ಸದಸ್ಯರು ಭಾಗವಹಿಸಿದ್ದರು.