ಕೋಲಾರ: ಗೋ ಕಳ್ಳತನ ಆರೋಪ; ಐವರ ಬಂಧನ

ಕೋಲಾರ, ಜುಲೈ .18 : ಗೋ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಐವರನ್ನು ಕೋಲಾರ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
ಸೈಯದ್ ನಿಜಾಂ (24), ಮುಹೀನ್ ಪಾಷ (20), ಮುಷ್ತಾಕ್ (22), ಆಸೀಫ್ ಪಾಷ (21) ಶೇಕ್ ಕುತುಬುಲ್ಲಾ (22) ಬಂಧಿತರು.
ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಗೋ ಕಳ್ಳತನದ ಪ್ರಕರಣಗಳು ಹೆಚ್ಚಾಗುತಿದ್ದ ಹಿನ್ನೆಲೆಯಲ್ಲಿ ವಿಶೇಷ ಗಮನಹರಿಸಿದ ಪೊಲೀಸರು ಜು.16 ರಂದು ಸಾಯಂಕಾಲ 7.00 ಗಂಟೆಯ ಹೊತ್ತಿಗೆ ಕೊಂಡರಾಜನಹಳ್ಳಿ ಗೇಟ್ ಬಳಿ ಬೊಲೆರೋ ಗೂಡ್ಸ್ ವಾಹನವನ್ನು ತಡೆದು ಚಾಲಕನನ್ನು ಮತ್ತು ವಾಹನದ ಹಿಂದಿಯಲ್ಲಿದ್ದ ನಾಲ್ವರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ಸೀಮೆ ಹಸುಗಳ ಸಗಣಿ ಮತ್ತು ಗಂಜಲದ ವಾಸನೆ ಬರುತ್ತಿದ್ದರಿಂದ ಅನುಮಾನಗೊಂಡು ಎಲ್ಲರನ್ನು ಟೆಂಪೋ ಸಮೇತ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸೀಮೆ ಹಸುಗಳನ್ನ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರಿಂದ ಕೃತ್ಯಕ್ಕೆ ಉಪಯೋಗಿಸಿದ ಬೊಲೇರೋ ವಾಹನ ಕಳ್ಳತನ ಮಾಡಿ ಮಾರಿದ್ದ ಹಸುಗಳಿಂದ ಬಂದ ಹಣದಲ್ಲಿ ಆರೋಪಿಗಳು ಹಂಚಿಕೊಂಡು ಖರ್ಚು ಮಾಡಿ ಉಳಿದಿದ್ದ 51,000 ರೂ ನಗದನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್.ಬಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕರುಗಳಾದ ರವಿಶಂಕರ್ ಮತ್ತು ಜಗದೀಶ್ ರವರ ಮಾರ್ಗದರ್ಶನದಲ್ಲಿ .ಎಂ.ಹೆಚ್.ನಾಗ್ತೆ ಪೊಲೀಸ್ ಉಪಾಧೀಕ್ಷಕರು ಕೋಲಾರ ಉಪ-ವಿಭಾಗ ರವರ ಮುಂದಾಳತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಕಾಂತರಾಜ.ಕೆ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಅವರ ತಂಡದ ಶೇಖ್ ಸಾಧಿಕ್ ಪಾಷ. ಆಂಜಿನಪ್ಪ, ರಾಘವೇಂದ್ರ, ಸತೀಶ್ ಕುಮಾರ್, ನವೀನ್ ಕುಮರ್, ಚಂದ್ರಶೇಖರ್ ನಾಯ್ಕ್ ರವರು ಭಾಗಿಯಾಗಿದ್ದರು.
ಈ ಕಾರ್ಯಚರಣೆಯಲ್ಲಿ ಪಲ್ಗೊಂಡಿದ್ದ ಅಧಿಕಾರಿ ಮತ್ತು ಸಿಬ್ಬಂದಿಯ ಕಾರ್ಯವನ್ನು ಕೋಲಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶ್ಲಾಘಿಸಿರುತ್ತಾರೆ.