ಕಾಸರಗೋಡು: ಸ್ಕೂಟರ್ ಡಿವೈಡರ್‌ಗೆ ಢಿಕ್ಕಿ; ಯುವಕ ಮೃತ್ಯು

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಮಾವಿನ ಕಟ್ಟೆಯಲ್ಲಿ ಸ್ಕೂಟರ್ ಡಿವೈಡರ್ ಗೆ ಡಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಶುಕ್ರವಾರ ರಾತ್ರಿ ನಡೆದಿದೆ.
ಪಚ್ಚಂಬಳ ದಿನಾರ್ ನಗರದ ಯೂಸಫ್ (20) ಮೃತಪಟ್ಟವರು.
ಶಿರಿಯದ ಶಾಲೆಯೊಂದರಲ್ಲಿ ಓಣಂ ಕಾರ್ಯಕ್ರಮ ಪಾಲ್ಗೊಂಡು ಬಳಿಕ ಸ್ನೇಹಿತನನ್ನು ಮೊಗ್ರಾಲ್ ನ ಮನೆಗೆ ತಲುಪಿಸಿ ಪಚ್ಚಂಬಳ ದ ಮನೆಗೆ ಮರಳುತ್ತಿದ್ದಾಗ ಈ ಅಪಘಾತ ನಡೆದಿದೆ. ಕುಂಬಳೆ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡಿದ್ದಾರೆ.
Next Story