ಅಫಜಲಪುರ | ಅವ್ಯವಹಾರ ಆರೋಪ : ಬಿದನೂರು ಗ್ರಾಮ ಪಂಚಾಯತ್‌ಗೆ ಬೀಗ ಹಾಕಿ ಗ್ರಾಮಸ್ಥರಿಂದ ಅಹೋರಾತ್ರಿ ಧರಣಿ

ಕಲಬುರಗಿ: ಅಫಜಲಪುರ ತಾಲ್ಲೂಕಿನ ಬಿದನೂರು ಗ್ರಾಮ ಪಂಚಾಯಿತಿಯಲ್ಲಿ 2020ರಿಂದ 2025ರವರೆಗೆ ಭಾರೀ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಪಂಚಾಯತ್ ಕಚೇರಿಗೆ ಬೀಗ ಹಾಕಿ ಅಹೋರಾತ್ರಿ ಧರಣಿ ನಡೆಸಿದರು.
ಎಸ್‌ಸಿ/ಎಸ್‌ಟಿ ಹಾಗೂ ಅಂಗವಿಕಲರ ಅನುದಾನವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ, ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಸಮಗ್ರ ತನಿಖೆ ನಡೆಸಿ, ಕ್ರಿಮಿನಲ್ ಕೇಸ್ ದಾಖಲಿಸಿ, ಸೇವೆಯಿಂದ ಅಮಾನತ್ತು ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.
ಜೆಜೆಎಂ ಯೋಜನೆಗಳಿಂದ ಬಂದ ಹಣದಲ್ಲೂ ಅವ್ಯವಹಾರ ನಡೆದಿದೆ. ಹಳ್ಳಿಗಳ ಸ್ವಚ್ಚತೆ, ಸಿಸಿ ರಸ್ತೆ, ಚರಂಡಿ ಸೇರಿದಂತೆ ಅನೇಕ ಕಾಮಗಾರಿಗಳ ಹೆಸರಲ್ಲಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದರು.
ಧರಣಿಯಲ್ಲಿ ಮೈಲಾರಿ ದೊಡ್ಡಮನಿ, ದೇವಾನಂದ ಬಿರಾದಾರ, ಚಂದಪ್ಪ ಪೂಜಾರಿ, ಸಾಯಿಬಣ್ಣ ಕೋರಬಾ, ಪ್ರಭುಲಿಂಗ ನರಗಾ, ಅಂಬಾರಾಯ ಜಯಪಗೋಳ, ಬಾಬು ಮೇಳಕುಂದಿ, ಮಾತೇಂಶ ತಳವಾರ, ಮಹಾಂತಪ್ಪ ಸಿ.ಹೇರೂರ, ಮಹಾಂತಪ್ಪ ಚಿಕ್ಕ ಕೌವಲಗಿ, ಅಂಬಾರಾಯ ಹಾವನೂರ, ಸೈದಪ್ಪ ಗರೂರ, ಮಡಿವಾಳಪ್ಪ ಕರೀಕಲ, ಅಂಬಾರಾಯ ನಾಟೀಕಾರ, ಬಾಬು ಬಣಮಗಿ, ಕಲ್ಯಾಣಿ ಡೂಂಗರಿ, ದೇವಣ್ಣ ಡೂಂಗರಿ, ಜಗಪ ಮಲಾಬಾದಿ, ಮಲಕಪ್ಪ ಡೂಂಗರೀ ಸೇರಿದಂತೆ ಅನೇಕ ಗ್ರಾಮಸ್ಥರು ಭಾಗವಹಿಸಿದ್ದರು.