Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜವಾರಿ ಮಾತು
  5. ಸಾರ್ವಜನಿಕ ಗ್ರಂಥಾಲಯ: ಸಗಟು ಪುಸ್ತಕ...

ಸಾರ್ವಜನಿಕ ಗ್ರಂಥಾಲಯ: ಸಗಟು ಪುಸ್ತಕ ಖರೀದಿ ಸ್ಥಗಿತ

ಡಾ. ರಾಜಶೇಖರ ಹತಗುಂದಿಡಾ. ರಾಜಶೇಖರ ಹತಗುಂದಿ12 July 2025 11:05 AM IST
share
ಸಾರ್ವಜನಿಕ ಗ್ರಂಥಾಲಯ: ಸಗಟು ಪುಸ್ತಕ ಖರೀದಿ ಸ್ಥಗಿತ
ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕತೆಯ ಬಗ್ಗೆ ಹೆಚ್ಚು ಮಾತನಾಡುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪುಸ್ತಕ ಸಂಸ್ಕೃತಿ ಕುರಿತು ಅನಾದರ ತೋರುತ್ತಿರುವುದು ಜನತಂತ್ರದ ಬಹು ದೊಡ್ಡ ವ್ಯಂಗ್ಯವೇ ಸರಿ. ಗ್ರಂಥಾಲಯ ಮಂತ್ರಿಯೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಎದುರಿಸುತ್ತಿರುವ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪುಸ್ತಕ ಸಗಟು ಖರೀದಿ ಯೋಜನೆ ಮತ್ತು ಅದರ ಭಾಗವಾಗಿರುವ ಏಕ ಗವಾಕ್ಷಿ ಪದ್ಧತಿಗೆ ಜೀವ ತುಂಬಬೇಕಿದೆ. ಸ್ಥಗಿತಗೊಂಡ ಪುಸ್ತಕ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದರೆ ಪುಸ್ತಕ ಸಂಸ್ಕೃತಿಗೆ ಆಮ್ಲಜನಕ ಒದಗಿಸಿದಂತಾಗುತ್ತದೆ.

ಸಾರ್ವಜನಿಕ ಗ್ರಂಥಾಲಯಗಳನ್ನು ಜನಸಾಮಾನ್ಯರ ವಿಶ್ವವಿದ್ಯಾನಿಲಯ ಎಂದೇ ಪರಿಭಾವಿಸಲಾಗಿದೆ. ಯೂಟ್ಯೂಬ್ ಮತ್ತು ಗೂಗಲ್ ಕ್ರಿಯಾಶೀಲವಾಗಿ ಕಾರ್ಯ ನಿರ್ವಹಿಸುವ ಮುಂಚೆ ಸಾರ್ವಜನಿಕ ಗ್ರಂಥಾಲಯಗಳು ಜ್ಞಾನಾಕಾಂಕ್ಷಿಗಳಿಗೆ ಅತ್ಯಂತ ಮಹತ್ವದ ಅರಿವಿನ ಕೇಂದ್ರಗಳಾಗಿದ್ದವು. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಬಹುದೊಡ್ಡ ಕ್ರಾಂತಿಯನ್ನೇ ಮಾಡಿವೆ. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವಾಲಯದ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.

ಕರ್ನಾಟಕವು, 1965ರ ಸಾರ್ವಜನಿಕ ಗ್ರಂಥಾಲಯ ಕಾಯ್ದೆಯನ್ನು ಜಾರಿಗೊಳಿಸಿದ ದೇಶದ ಮೂರನೇ ರಾಜ್ಯವಾಗಿದೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆಯಡಿ ನಗರ ಮತ್ತು ಪಟ್ಟಣಗಳ ಸ್ಥಳೀಯ ಸಂಸ್ಥೆಗಳ ಮೂಲಕ ಆಸ್ತಿ ತೆರಿಗೆಯಲ್ಲಿ ಪ್ರತಿಶತ ಆರರಷ್ಟು ಗ್ರಂಥಾಲಯ ಸೆಸ್ ಸಂಗ್ರಹಿಸಲಾಗುತ್ತಿದೆ. ಈ ಗ್ರಂಥಾಲಯ ಸೆಸ್ ಅನ್ನು ರಾಜ್ಯದ ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಿಕೊಳ್ಳಬೇಕೆಂಬ ನಿಯಮವಿದೆ. ಸುಮಾರು ಆರು ನೂರು ಕೋಟಿ ರೂ. ನಷ್ಟು ಗ್ರಂಥಾಲಯ ಸೆಸ್ ಸಂಗ್ರಹವಾಗಿದ್ದು ಸ್ಥಳೀಯ ಸಂಸ್ಥೆಗಳು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಬ್ಯಾಂಕ್ ಖಾತೆಗೆ ಜಮಾ ಮಾಡಬೇಕಿದೆ.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯನ್ನು ವಿಸ್ತರಿಸಿದ ಮತ್ತು ಬಲಪಡಿಸಿದ ಕೀರ್ತಿ ರಂಗನಾಥ ಹಾಗೂ ಬಗರಿಯವರಿಗೆ ಸಲ್ಲಬೇಕು. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯಗಳು ಹೆಚ್ಚು ಕ್ರಿಯಾಶೀಲವಾಗಿದ್ದರಿಂದ ಮತ್ತು ಕಾಲಕಾಲಕ್ಕೆ ಅಪ್‌ಡೇಟ್ ಆಗಿದ್ದರಿಂದ ಇಂದಿನ ಮೊಬೈಲ್ ಯುಗದಲ್ಲೂ ಗ್ರಂಥಾಲಯಗಳು ಜನಸಾಮಾನ್ಯರನ್ನು ಆಕರ್ಷಿಸುತ್ತಿವೆ.

ಕರ್ನಾಟಕದಲ್ಲಿ ರಾಜ್ಯ ಕೇಂದ್ರ ಗ್ರಂಥಾಲಯ, ನಗರ ಕೇಂದ್ರ ಗ್ರಂಥಾಲಯಗಳು, ಜಿಲ್ಲಾ ಕೇಂದ್ರ ಗ್ರಂಥಾಲಯಗಳು, ಸಂಚಾರಿ ಗ್ರಂಥಾಲಯಗಳು, ಗ್ರಾಮ ಪಂಚಾಯತ್ ಗ್ರಂಥಾಲಯಗಳು, ಬೆಂಗಳೂರಿನಲ್ಲಿನ ಇಂದಿರಾ ಪ್ರಿಯದರ್ಶಿನಿ ಮಕ್ಕಳ ಗ್ರಂಥಾಲಯ (1994), 30 ಜಿಲ್ಲೆಗಳಲ್ಲಿ ಸಮುದಾಯ ಮಕ್ಕಳ ಗ್ರಂಥಾಲಯಗಳು, ಅಲೆಮಾರಿ ಮತ್ತು ಸ್ಲಂ ಗ್ರಂಥಾಲಯಗಳು ಸೇರಿ ಒಟ್ಟು ಏಳು ಸಾವಿರ ಗ್ರಂಥಾಲಯಗಳು ಜನಸಾಮಾನ್ಯರ ಬಳಕೆಗೆ ಲಭ್ಯ ಇವೆ. ಅಷ್ಟು ಮಾತ್ರವಲ್ಲ, ಬೆಂಗಳೂರು, ಧಾರವಾಡ, ಕಲಬುರಗಿ ಮತ್ತು ಮಂಗಳೂರಿನಲ್ಲಿ ಗ್ರಂಥಾಲಯ ವಿಜ್ಞಾನದಲ್ಲಿ ತರಬೇತಿ ನೀಡುವ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಬೆಂಗಳೂರು ಮಹಾನಗರದ ಐದು ವಿಭಾಗಗಳಲ್ಲಿ ಗ್ರಂಥಾಲಯ ಇಲಾಖೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದೆ. ರಾಜ್ಯದ ಏಳು ಸಾವಿರ ಗ್ರಂಥಾಲಯಗಳಲ್ಲಿ ದಿನಪತ್ರಿಕೆ, ವಾರಪತ್ರಿಕೆ, ಅತ್ಯಂತ ಉಪಯುಕ್ತವಾದ ನಿಯತಕಾಲಿಕೆಗಳು ಮತ್ತು ಸಾವಿರಾರು ಸೃಜನ-ಸೃಜನೇತರ ಪುಸ್ತಕಗಳು ಓದಲು ಸಿಗುತ್ತವೆ. ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿ ಸ್ಥಾಪಿತವಾದ ಬೃಹತ್ ರಾಜ್ಯ, ಕೇಂದ್ರ ಗ್ರಂಥಾಲಯಗಳಲ್ಲಿ ಅಪರೂಪದ ಆಕರ ಗ್ರಂಥಗಳು ಓದಲು ಲಭ್ಯ ಇವೆ. ಅಸಂಖ್ಯಾತ ಜನ ರಾಜ್ಯದ ಗ್ರಂಥಾಲಯಗಳಲ್ಲಿ ಚಂದಾದಾರರಾಗಿದ್ದಾರೆ. ಚಂದಾದಾರರಲ್ಲದವರೂ ಸಾರ್ವಜನಿಕ ಗ್ರಂಥಾಲಯಗಳನ್ನು ಬಳಸಬಹುದಾಗಿದೆ. ಚಂದಾದಾರರಿಗೆ ಗ್ರಂಥಾಲಯಗಳಲ್ಲಿನ ಗ್ರಂಥಗಳನ್ನು ಎರವಲು ಪಡೆಯುವ ಅವಕಾಶ ಇರುತ್ತದೆ. ಈ ಹೊತ್ತಿಗೂ ಐಎಎಸ್, ಕೆಎಎಸ್ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಸಾರ್ವಜನಿಕ ಗ್ರಂಥಾಲಯಗಳನ್ನೇ ಆಶ್ರಯಿಸಿದ್ದಾರೆ.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಂಥಾಲಯಗಳಿಗೆ ಕುರ್ಚಿ, ಟೇಬಲ್, ರ್ಯಾಕ್‌ಗಳ ಜೊತೆಗೆ ಅತ್ಯಗತ್ಯವಾಗಿ ಬೇಕಾಗಿರುವುದು ಪತ್ರಿಕೆ ಮತ್ತು ಪುಸ್ತಕಗಳು.

ಕರ್ನಾಟಕ ಸಾರ್ವಜನಿಕ ಗ್ರಂಥಾಲಯಗಳಿಗೆ ಬೇಕಾಗಿರುವ ಪುಸ್ತಕಗಳ ಆಯ್ಕೆ ಮತ್ತು ಖರೀದಿಗೆ ಪೂರಕವಾಗಿ ಕಾರ್ಯ ನಿರ್ವಹಿಸಲು ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯನ್ನು ರಚಿಸಲಾಗುತ್ತದೆ. ಈ ಆಯ್ಕೆ ಸಮಿತಿಯ ಅಧ್ಯಕ್ಷರನ್ನಾಗಿ ಕನ್ನಡದ ಶ್ರೇಷ್ಠ ಬರಹಗಾರರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಸಾಹಿತಿಗಳು, ಪ್ರಕಾಶಕರು, ವಿವಿಧ ವಿಷಯಗಳ ತಜ್ಞರು ಈ ಪುಸ್ತಕ ಆಯ್ಕೆ ಸಮಿತಿಯಲ್ಲಿ ಇರುತ್ತಾರೆ. ಪುಸ್ತಕ ಆಯ್ಕೆ ಎಂಬುದು ನಿರಂತರ ಪ್ರಕ್ರಿಯೆ. ಪುಸ್ತಕ ಆಯ್ಕೆ ಪ್ರಕ್ರಿಯೆ ನಿರಂತರವಾಗಿ ನಡೆಸಲು ಈ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಗೆ ಜವಾಬ್ದಾರಿ ನೀಡಲಾಗುತ್ತದೆ. 2004ಕ್ಕೂ ಮುಂಚೆ ಈ ಪುಸ್ತಕ ಆಯ್ಕೆ ಸಮಿತಿಯು, ಗ್ರಂಥಾಲಯ ಇಲಾಖೆಗೆ ಸಲ್ಲಿಸಲಾದ ಸಾವಿರಾರು ಪುಸ್ತಕಗಳಲ್ಲಿ ಅತ್ಯುತ್ತಮ ಗುಣಮಟ್ಟದ ಕೃತಿಗಳನ್ನು ಆಯ್ಕೆ ಮಾಡುತ್ತಿದ್ದರು. ಪುಸ್ತಕಗಳನ್ನು ಆಯ್ಕೆ ಮಾಡಿ ಆಯ್ಕೆ ಪಟ್ಟಿ ನೀಡುವುದಷ್ಟೇ ಈ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿಯ ಕೆಲಸವಾಗಿತ್ತು. ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ತಮಗೆ ಬೇಕಾದ ಪುಸ್ತಕಗಳಿಗೆ ಮಾತ್ರ ಖರೀದಿ ಆದೇಶ ನೀಡುತ್ತಿದ್ದರು. ವೃತ್ತಿ ಪರ ಪುಸ್ತಕ ಪ್ರಕಾಶಕರು ಮಾತ್ರ ಈ ಅವಕಾಶ ಪಡೆಯುತ್ತಿದ್ದರು. ಲೇಖಕರೇ ಪ್ರಕಾಶಕರಾಗಿರುವವರ ಪುಸ್ತಕಗಳನ್ನು ಖರೀದಿ ಮಾಡುತ್ತಿರಲಿಲ್ಲ. ಈ ಲೋಪವನ್ನು ಮನಗಂಡು ಅಂದಿನ ಸರಕಾರ ಪುಸ್ತಕ ಖರೀದಿಗೆ ‘ಏಕ ಗವಾಕ್ಷಿ’ ಪದ್ಧತಿಯನ್ನು ಜಾರಿಗೆ ತಂದಿತು. ಉನ್ನತ ಮಟ್ಟದ ಸಮಿತಿ ಆಯ್ಕೆ ಮಾಡಿದ ಪುಸ್ತಕಗಳ ಪ್ರತೀ ಶೀರ್ಷಿಕೆಯ ಮುನ್ನೂರು ಪ್ರತಿಗಳನ್ನು ಗ್ರಂಥಾಲಯ ಇಲಾಖೆ ಖರೀದಿ ಮಾಡುತ್ತಿತ್ತು. ರಾಜಾರಾಮ್ ಮೋಹನರಾಯ್ ಗ್ರಂಥಾಲಯ ಪ್ರತಿಷ್ಠಾನದ ಅನುದಾನದಲ್ಲಿ ಪ್ರತೀ ಶೀರ್ಷಿಕೆಯ ಇಂತಿಷ್ಟು ಪ್ರತಿಗಳನ್ನು ಖರೀದಿ ಮಾಡಲಾಗುತ್ತಿತ್ತು. ಗ್ರಾಮ ಪಂಚಾಯತ್ ಗ್ರಂಥಾಲಯಗಳಿಗಾಗಿ ಪುಸ್ತಕಗಳನ್ನು ಖರೀದಿಸಿ ವಿತರಿಸಲಾಗುತ್ತಿತ್ತು. ಪ್ರತಿವರ್ಷ ಏನಿಲ್ಲವೆಂದರೂ ಪ್ರತೀ ಶೀರ್ಷಿಕೆಯ ಕನಿಷ್ಠ ಐದು ನೂರು ಪ್ರತಿಗಳನ್ನು ಗ್ರಂಥಾಲಯ ಇಲಾಖೆಯ ವಿವಿಧ ಯೋಜನೆಗಳಲ್ಲಿ ಖರೀದಿ ಮಾಡಲಾಗುತ್ತಿತ್ತು. ಆಯ್ಕೆ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಿತ್ತು. ಪ್ರತೀ ವರ್ಷ ಆಯ್ಕೆಯಾದ ಪುಸ್ತಕಗಳನ್ನು ಗ್ರಂಥಾಲಯ ಇಲಾಖೆ ಖರೀದಿ ಮಾಡಿ ರಾಜ್ಯದ ವಿವಿಧ ಶಾಖೆಗಳಿಗೆ ಕಳುಹಿಸಿಕೊಡುತ್ತಿತ್ತು. ಪುಸ್ತಕ ಸಂಸ್ಕೃತಿಗೆ ಉತ್ತೇಜನ ಸಿಗುತ್ತಿತ್ತು. ಗ್ರಂಥಾಲಯದ ಚಂದಾದಾರರಿಗೆ ಮತ್ತು ಸಾಮಾನ್ಯ ಓದುಗರಿಗೆ ಆಯಾ ವರ್ಷ ಪ್ರಕಟವಾದ ಹೊಸ ಪುಸ್ತಕಗಳು ಓದಲು ಸಿಗುತ್ತಿದ್ದವು. ಲೇಖಕರು, ಪ್ರಕಾಶಕರು ಮತ್ತು ಓದುಗರು ಸಂತೃಪ್ತಿಯಿಂದ ಇದ್ದರು. ಇದರ ನಡುವೆ ಎಲ್ಲ ವ್ಯವಸ್ಥೆಯಲ್ಲಿ ಇರುವಂತೆ ಕೆಟ್ಟ ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರೂ ಲಾಭ ಮಾಡಿಕೊಳ್ಳುತ್ತಿದ್ದರು. ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಎಚ್ಚರಿಕೆ ವಹಿಸಿದಾಗಲೆಲ್ಲ ಧನದಾಹಿ ಪ್ರಕಾಶಕರನ್ನು ಹದ್ದುಬಸ್ತಿನಲ್ಲಿ ಇಡಲು ಸಾಧ್ಯವಾಗಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಆಡಳಿತ ಚುಕ್ಕಾಣಿ ಹಿಡಿದ ಮೇಲೆ ಕನ್ನಡದ ಹಿರಿಯ ಸಾಹಿತಿ ಡಾ. ಕರೀಗೌಡ ಬೀಚನಹಳ್ಳಿ ಅಧ್ಯಕ್ಷತೆಯ ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿ ರಚಿಸಿತು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಬಹುದೆಂದು ಕನ್ನಡ ಸಾರಸ್ವತ ಲೋಕದ ಎಲ್ಲರೂ ಬಲವಾಗಿ ನಂಬಿದ್ದರು.

ಈ ಹಿಂದಿನ ಬಿಜೆಪಿ ಸರಕಾರ ಪುಸ್ತಕ ಸಂಸ್ಕೃತಿಯನ್ನೇ ಹಾಳು ಮಾಡಿತ್ತು. ಪುಸ್ತಕ ಆಯ್ಕೆ ಮತ್ತು ಖರೀದಿಗೆ ಪ್ರಾಮುಖ್ಯತೆ ಕೊಡಲಿಲ್ಲ. ಬಿಜೆಪಿ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ, ಗ್ರಂಥಾಲಯ ಮಂತ್ರಿಯಾಗಿದ್ದ ಬಿ.ಸಿ. ನಾಗೇಶ್ ಅವರು ಪಠ್ಯ ಪುಸ್ತಕ ಗಲಾಟೆಗೆ ಸುದ್ದಿಯಾದರೇ ಹೊರತು ಅತ್ಯುತ್ತಮ ಕೆಲಸಗಳಿಗೆ ಹೆಸರು ಮಾಡಲಿಲ್ಲ.

ಪ್ರತೀ ವರ್ಷ ಕನ್ನಡದಲ್ಲಿ ಏನಿಲ್ಲವೆಂದರೂ ಏಳು ಸಾವಿರ ಶೀರ್ಷಿಕೆಯಷ್ಟು ಪುಸ್ತಕಗಳು ಪ್ರಕಟಗೊಳ್ಳುತ್ತವೆ. ಹೆಸರಾಂತ ಲೇಖಕರು ಮತ್ತು ಬೆರಳೆಣಿಕೆಯ ಪ್ರತಿಷ್ಠಿತ ಪ್ರಕಾಶಕರ ಪುಸ್ತಕಗಳನ್ನು ಓದುಗರು ಕೊಂಡುಕೊಳ್ಳುತ್ತಾರೆ. ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿ ಯೋಜನೆ ಲೇಖಕರು ಮತ್ತು ಪ್ರಕಾಶಕರಿಗೆ ಟಾನಿಕ್ ಇದ್ದ ಹಾಗೆ. ಒಂದು ಶೀರ್ಷಿಕೆಯ ಸಾವಿರ ಪ್ರತಿ ಮಾರಾಟವಾಗಲು ವರ್ಷಗಳೇ ಹಿಡಿಯುತ್ತದೆ. ಕರ್ನಾಟಕ ಸರಕಾರದ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಗಟು ಪುಸ್ತಕ ಖರೀದಿ ಯೋಜನೆ ಲೇಖಕರು ಮತ್ತು ಪ್ರಕಾಶಕರಿಗೆ ನಿಜವಾದ ಅರ್ಥದಲ್ಲಿ ಉತ್ತೇಜನಕಾರಿಯಾಗಿತ್ತು. ಹಾಕಿದ ಬಂಡವಾಳಕ್ಕೆ ಮೋಸ ಇರಲಿಲ್ಲ.

ಲೇಖಕರು ಮತ್ತು ಪ್ರಕಾಶಕರು 2020ರಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಅಪರೂಪದ ಏಕ ಗವಾಕ್ಷಿ ಪುಸ್ತಕ ಖರೀದಿ ವ್ಯವಸ್ಥೆ ಸ್ಥಗಿತಗೊಂಡಿದೆ. 2020ನೇ ಸಾಲಿನಲ್ಲಿ ಪ್ರಕಟಗೊಂಡ ಪುಸ್ತಕಗಳ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡು ಒಂದಷ್ಟು ಪ್ರಮಾಣದ ಪುಸ್ತಕಗಳನ್ನು ಖರೀದಿ ಮಾಡಲಾಗಿದೆ. ಇನ್ನೂ ನಾಲ್ಕು ಕೋಟಿ ರೂ. ಮೊತ್ತದ ಪುಸ್ತಕಗಳ ಪೇಮೆಂಟ್ ಬಾಕಿ ಇದೆ. 2021ರಲ್ಲಿ ಪ್ರಕಟವಾದ ಪುಸ್ತಕಗಳ ಆಯ್ಕೆ ಪ್ರಕ್ರಿಯೆಯನ್ನು ಉನ್ನತ ಮಟ್ಟದ ಪುಸ್ತಕ ಆಯ್ಕೆ ಸಮಿತಿ ಪೂರ್ಣಗೊಳಿಸಿದೆ. ಆದರೆ ಆಯ್ಕೆಗೊಂಡ ಪುಸ್ತಕಗಳ ಅಂತಿಮ ಪಟ್ಟಿ ಪ್ರಕಟಿಸಿಲ್ಲ. ಇನ್ನು ಖರೀದಿ ಪ್ರಕ್ರಿಯೆ ಆರಂಭವಾಗುವುದು ಯಾವಾಗ? ಲೇಖಕ ಮತ್ತು ಪುಸ್ತಕ ಪ್ರಕಾಶಕರಿಗೆ ಹಣ ಪಾವತಿಸುವುದು ಯಾವಾಗ? 2022, 2023 ಮತ್ತು 2024ರಲ್ಲಿ ಪ್ರಕಟವಾದ ಪುಸ್ತಕಗಳಿಗೆ ಮುಕ್ತಿ ಸಿಗುವುದು ಯಾವಾಗ? ಲೇಖಕರು ಮತ್ತು ಪ್ರಕಾಶಕರು ಪುಸ್ತಕಗಳನ್ನು ಪ್ರಕಟಿಸಿ ಕಳೆದ ನಾಲ್ಕು ವರ್ಷಗಳಿಂದ ಚಾತಕ ಪಕ್ಷಿಯಂತೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಪುಸ್ತಕ ಸಗಟು ಖರೀದಿ ಯೋಜನೆಯತ್ತ ಮುಖ ಮಾಡಿ ಕಾಯುತ್ತಿದ್ದಾರೆ. ಲೇಖಕರು ಮತ್ತು ಪ್ರಕಾಶಕರು ಮಂತ್ರಿ ಮಧು ಬಂಗಾರಪ್ಪ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಹಾಗೆ ನೋಡಿದರೆ ಅದು ಲೇಖಕ ಮತ್ತು ಪ್ರಕಾಶಕರ ಹಕ್ಕು. ಅಷ್ಟಕ್ಕೂ ಸಾರ್ವಜನಿಕರಿಂದ ಗ್ರಂಥಾಲಯ ಸೆಸ್ ಸಂಗ್ರಹಿಸುವ ಸರಕಾರ ಪುಸ್ತಕಗಳ ಖರೀದಿಗೆ ವಿಳಂಬ ಮಾಡಲೇಬಾರದು. ಸರಕಾರದ ದಿವ್ಯ ನಿರ್ಲಕ್ಷ್ಯ ಧೋರಣೆಯಿಂದ ಕನ್ನಡ ಪುಸ್ತಕೋದ್ಯಮ ಸಂಕಷ್ಟ ಎದುರಿಸುತ್ತಿದೆ. ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಹೊರತು ಪಡಿಸಿದರೆ ಪುಸ್ತಕಗಳನ್ನು ಖರೀದಿಸುವ ಇನ್ನೊಂದು ಸಂಸ್ಥೆಯೆಂದರೆ, ಕನ್ನಡ ಪುಸ್ತಕ ಪ್ರಾಧಿಕಾರ. ಕನ್ನಡ ಪುಸ್ತಕ ಪ್ರಾಧಿಕಾರವು ಪುಸ್ತಕಗಳನ್ನು ಖರೀದಿಸುತ್ತಿಲ್ಲ.

ಗ್ರಂಥಾಲಯ ಇಲಾಖೆ ಪುಸ್ತಕ ಖರೀದಿಗೆಂದು ಕಾಯ್ದಿರಿಸಿದ ಒಟ್ಟು ಹಣದಲ್ಲಿ ಪ್ರತಿಶತ 80ರಷ್ಟು ಕನ್ನಡ ಪುಸ್ತಕಗಳ ಖರೀದಿಗೆ ಬಳಸಬೇಕು. ಲೇಖಕರು ಮತ್ತು ಪ್ರಕಾಶಕರು 2021ರಿಂದ 2024ರವರೆಗೆ ಪುಸ್ತಕಗಳನ್ನು ಮುದ್ರಿಸಿ ಇಟ್ಟುಕೊಂಡಿದ್ದಾರೆ. 2025ನೇ ಸಾಲಿನ ಪುಸ್ತಕಗಳು ಪ್ರಕಟಗೊಂಡು ಬಿಡುಗಡೆಯಾಗುತ್ತಲೇ ಇವೆ. ಇನ್ನು ಐದು ತಿಂಗಳು ಕಳೆದರೆ 2025ನೇ ಸಾಲಿನ ಪುಸ್ತಕಗಳು ಗೋಡೌನ್ ಸೇರುತ್ತವೆ. ಪ್ರಕಟಿಸಿದ ಪುಸ್ತಕಗಳನ್ನು ಹಾಳಾಗದಂತೆ ಇಡಲು ಸ್ಥಳಾವಕಾಶ ಇರುವುದಿಲ್ಲ. ಪ್ರತಿವರ್ಷ ಏಳು ಸಾವಿರ ಶೀರ್ಷಿಕೆಗಳು ಪ್ರಕಟವಾಗುತ್ತವೆ. ಅಂದರೆ 2021ರಿಂದ ಇಲ್ಲಿಯವರೆಗೆ ಮೂವತ್ತು ಸಾವಿರಕ್ಕೂ ಹೆಚ್ಚು ಶೀರ್ಷಿಕೆಯ ಪುಸ್ತಕಗಳು ಪ್ರಕಟಗೊಂಡಿವೆ. ಒಂದು ಶೀರ್ಷಿಕೆಯ ಕನಿಷ್ಠ ಒಂದು ಸಾವಿರ ಪ್ರತಿಗಳನ್ನು ಮುದ್ರಿಸಲಾಗುತ್ತದೆ. ಅಷ್ಟು ಪುಸ್ತಕಗಳು ಖರೀದಿ ಭಾಗ್ಯವಿಲ್ಲದೆ ಗೋಡೌನ್ ನಲ್ಲಿ ಕೊಳೆಯುತ್ತಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಾಹಿತ್ಯ ಸಂಸ್ಕೃತಿ ಬಗ್ಗೆ ಅಪಾರ ಗೌರವ ಭಾವ ಹೊಂದಿದವರು. ಪುಸ್ತಕ ಸಂಸ್ಕೃತಿ ಬೆಳೆಯಬೇಕು ಎನ್ನುವ ಮನೋಭಾವದವರು.

ಕರ್ನಾಟಕ ರಾಜ್ಯದ ಏಳು ಸಾವಿರ ಸಾರ್ವಜನಿಕ ಗ್ರಂಥಾಲಯಗಳು ಕಳೆದ ಐದು ವರ್ಷಗಳಿಂದ ಹೊಸ ಪ್ರಕಟಣೆಗಳಿಂದ ವಂಚಿತವಾಗಿವೆ. ಇನ್ನೊಂದೆಡೆ ಪ್ರಕಟಣೆಗೊಂಡ ಪುಸ್ತಕಗಳು ಗೋಡೌನ್‌ಗಳಲ್ಲಿ ಗೆದ್ದಲುಗಳಿಗೆ ಆಹಾರವಾಗುತ್ತಿವೆ. ಅಷ್ಟಕ್ಕೂ ಕರ್ನಾಟಕದಲ್ಲಿ ಪುಸ್ತಕ ಸಂಸ್ಕೃತಿ ಪುಸ್ತಕೋದ್ಯಮದ ಮಟ್ಟದಲ್ಲಿ ಬೆಳೆದು ನಿಂತಿಲ್ಲ. ಸಾರ್ವಜನಿಕ ಬದುಕಿನಲ್ಲಿ ಮಾರುಕಟ್ಟೆ ಸಂಸ್ಕೃತಿ ಪ್ರವೇಶ ಮಾಡಿ ಮೂರು ದಶಕಗಳೇ ಕಳೆದು ಹೋಗಿವೆ. ಆದರೆ ಕನ್ನಡ ಪುಸ್ತಕೋದ್ಯಮ ಮಾರುಕಟ್ಟೆಯ ಮಾನದಂಡ ಅನುಸರಿಸಿ ಬೆಳೆಯದೆ ಇರುವುದರಿಂದ ಸರಕಾರದ ಹಂಗಿನಲ್ಲಿ ಉಸಿರಾಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇಂಗ್ಲಿಷ್‌ನಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಉದ್ಯಮದ ಸ್ವರೂಪ ಪಡೆದುಕೊಂಡು ಲಾಭದತ್ತ ಹೆಜ್ಜೆ ಹಾಕುತ್ತಿದೆ. ಸೀಮಿತ ಮಾರುಕಟ್ಟೆ ಮತ್ತು ಸಾಕ್ಷರತಾ ಪ್ರಮಾಣ ಕಡಿಮೆ ಇರುವ ಭಾರತದಂತಹ ದೇಶದಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಉದ್ಯಮದ ಸ್ವರೂಪ ಪಡೆದುಕೊಳ್ಳುವುದು ಅಸಾಧ್ಯದ ಮಾತು.

ಕರ್ನಾಟಕದಲ್ಲಿ ಪುಸ್ತಕ ಪ್ರಕಟಣೆ ಮತ್ತು ಮಾರಾಟ ಉದ್ಯಮದ ಸ್ವರೂಪ ಪಡೆದುಕೊಳ್ಳಲಾರದು ಎಂಬುದನ್ನು ಮೊದಲೇ ಮನಗಂಡ ನಮ್ಮ ಹಿರಿಯರು ಗ್ರಂಥಾಲಯ ಸೆಸ್ ಸಂಗ್ರಹಿಸುವ ಪದ್ಧತಿ ಪರಿಚಯಿಸಿ ಕಾಯ್ದೆ ಕೂಡಾ ರೂಪಿಸಿದ್ದರು. ಸಂಕಷ್ಟದ ಸ್ಥಿತಿಯಲ್ಲಿರುವ ಕನ್ನಡ ಪುಸ್ತಕ ಸಂಸ್ಕೃತಿ ಉಳಿದು ಬೆಳೆಯಬೇಕೆಂದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮನಸ್ಸು ಮಾಡಬೇಕು. ಸ್ಥಳೀಯ ಸಂಸ್ಥೆಗಳು ವಸೂಲಿ ಮಾಡುತ್ತಿರುವ ಆಸ್ತಿ ತೆರಿಗೆಯಲ್ಲಿ ಪ್ರತಿ ಶತ ಆರರಷ್ಟು ಗ್ರಂಥಾಲಯ ಸೆಸ್ ಸೇರಿಕೊಂಡಿದೆ. ಅಂದರೆ ಸ್ಥಳೀಯ ಸಂಸ್ಥೆಗಳು ಈಗಾಗಲೇ ಗ್ರಂಥಾಲಯ ಸೆಸ್ ಅನ್ನು ವಸೂಲಿ ಮಾಡಿಕೊಂಡಿವೆ. 1965ರ ಗ್ರಂಥಾಲಯ ಕಾಯ್ದೆ ಅನ್ವಯ ಸಂಗ್ರಹಿಸಿದ ಗ್ರಂಥಾಲಯ ಸೆಸ್ ಸಾರ್ವಜನಿಕ ಗ್ರಂಥಾಲಯಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಬಳಸಬೇಕು. ಏನಿಲ್ಲವೆಂದರೂ ಆರು ನೂರು ಕೋಟಿಯಷ್ಟು ಗ್ರಂಥಾಲಯ ಸೆಸ್ ಅನ್ನು ಸ್ಥಳೀಯ ಸಂಸ್ಥೆಗಳು ಈಗಾಗಲೇ ವಸೂಲಿ ಮಾಡಿವೆ. ಗ್ರಂಥಾಲಯ ಸೆಸ್ ಹಣ ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ವರ್ಗಾವಣೆಯಾದರೆ ಗ್ರಂಥಾಲಯಗಳು ಸ್ವಾವಲಂಬಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಹಣಕಾಸು ಮಂತ್ರಿಯೂ ಆಗಿರುವ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಗ್ರಂಥಾಲಯ ಸೆಸ್ ಅನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಕಲ್ಪಿಸಿದರೆ ಪುಸ್ತಕ ಖರೀದಿಯೂ ಸೇರಿದಂತೆ ಗ್ರಂಥಾಲಯಗಳಿಗೆ ವಿಶೇಷ ಅನುದಾನದ ಅಗತ್ಯವೇ ಬೀಳುವುದಿಲ್ಲ.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆಯವರು ಗ್ರಾಮ ಪಂಚಾಯತ್ ಗ್ರಂಥಾಲಯಗಳನ್ನು ‘ಅರಿವಿನ’ ಕೇಂದ್ರಗಳನ್ನಾಗಿ ರೂಪಿಸುತ್ತಿದ್ದಾರೆ. ಆ ಅರಿವಿನ ಕೇಂದ್ರಗಳಲ್ಲಿ ಅತ್ಯುತ್ತಮ ಪುಸ್ತಕಗಳು ಇರಬೇಕಲ್ಲವೇ?

ಪ್ರಕಟಗೊಂಡು ಗೋಡೌನ್‌ಗಳಲ್ಲಿ ಧೂಳು ತಿನ್ನುತ್ತಿರುವ ಅತ್ಯುತ್ತಮ ಪುಸ್ತಕಗಳನ್ನು ಗ್ರಾಮ ಪಂಚಾಯತ್‌ನ ಅರಿವಿನ ಕೇಂದ್ರಗಳಿಗೆ ರವಾನಿಸಿದರೆ ಹಳ್ಳಿಗಾಡಿನ ಯುವ ಸಮುದಾಯಕ್ಕೆ ಉಪಯೋಗಕ್ಕೆ ಬರುತ್ತವೆ. ಸಾಹಿತ್ಯ, ಸಂಸ್ಕೃತಿ ಮತ್ತು ವೈಚಾರಿಕತೆಯ ಬಗ್ಗೆ ಹೆಚ್ಚು ಮಾತನಾಡುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪುಸ್ತಕ ಸಂಸ್ಕೃತಿ ಕುರಿತು ಅನಾದರ ತೋರುತ್ತಿರುವುದು ಜನತಂತ್ರದ ಬಹು ದೊಡ್ಡ ವ್ಯಂಗ್ಯವೇ ಸರಿ. ಗ್ರಂಥಾಲಯ ಮಂತ್ರಿಯೂ ಆಗಿರುವ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆಯ ಸಚಿವ ಮಧು ಬಂಗಾರಪ್ಪ ಅವರು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆ ಎದುರಿಸುತ್ತಿರುವ ಗಂಭೀರ ಸ್ವರೂಪದ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಪುಸ್ತಕ ಸಗಟು ಖರೀದಿ ಯೋಜನೆ ಮತ್ತು ಅದರ ಭಾಗವಾಗಿರುವ ಏಕ ಗವಾಕ್ಷಿ ಪದ್ಧತಿಗೆ ಜೀವ ತುಂಬಬೇಕಿದೆ. ಸ್ಥಗಿತಗೊಂಡ ಪುಸ್ತಕ ಆಯ್ಕೆ ಮತ್ತು ಖರೀದಿ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಿದರೆ ಪುಸ್ತಕ ಸಂಸ್ಕೃತಿಗೆ ಆಮ್ಲಜನಕ ಒದಗಿಸಿದಂತಾಗುತ್ತದೆ. ಗ್ರಂಥಾಲಯ ಸೆಸ್ ಅನ್ನು ಕರ್ನಾಟಕ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಖಾತೆಗೆ ಜಮಾ ಮಾಡಿಸಿದರೆ ಪುಸ್ತಕ ಖರೀದಿ ಮಾತ್ರವಲ್ಲ, ಇಡೀ ಗ್ರಂಥಾಲಯ ಇಲಾಖೆಗೆ ಕಾಯಕಲ್ಪ ನೀಡಲು ಸಾಧ್ಯವಾಗುತ್ತದೆ. ಗ್ರಂಥಾಲಯಗಳು ಕಾಲದ ಅಗತ್ಯಕ್ಕೆ ತಕ್ಕಂತೆ ಆಧುನೀಕರಣಕ್ಕೆ ಒಳಗಾಗಬೇಕಿದೆ. ಗ್ರಂಥಾಲಯಗಳಿಗೆ ಅತ್ಯುತ್ತಮ ಕನ್ನಡ ಪುಸ್ತಕ ಒದಗಿಸುವುದು ಒಂದು ಬಗೆಯಾದರೆ, ಸಮಸ್ತ ಮಾಹಿತಿ ಗ್ರಂಥಾಲಯಗಳಲ್ಲಿ ಲಭ್ಯವಾಗುವಂತೆ ಮಾಡುವುದು ಇನ್ನೊಂದು ಬಗೆ. ಜಗತ್ತಿನ ಅತ್ಯುತ್ತಮ ಗ್ರಂಥಗಳನ್ನು ಆನ್‌ಲೈನ್ ಮೂಲಕ ದಕ್ಕಿಸಿಕೊಳ್ಳಬಹುದಾಗಿದೆ. ಆಡಿಯೊ ಬುಕ್‌ಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಕನ್ನಡ ಪುಸ್ತಗಳನ್ನು ಆಡಿಯೊ ರೂಪಕ್ಕೆ ಅಳವಡಿಸಲು ಗ್ರಂಥಾಲಯ ಇಲಾಖೆ ಮುಂದಾಗಬೇಕು. ವಿಶೇಷವಾಗಿ ಗ್ರಾಮೀಣ ಪ್ರದೇಶದ ಬಡ ಮಕ್ಕಳಿಗೆ ಗ್ರಂಥಾಲಯಗಳು ಜ್ಞಾನದ ಕೇಂದ್ರಗಳಾಗಬೇಕು. ಪುಸ್ತಕಗಳನ್ನು ಪ್ರಕಟಿಸುವ ಪ್ರಕಾಶಕರು ಮತ್ತು ಲೇಖಕರು ಪ್ರತೀ ವರ್ಷ ಸರಕಾರಕ್ಕೆ ಪುಸ್ತಕ ಖರೀದಿಗೆ ಮನವಿ ಮಾಡುವುದು ಅತ್ಯಂತ ಅಪಮಾನಕರ ವಿದ್ಯಮಾನ. ಕನ್ನಡ ಸಾರಸ್ವತ ಲೋಕಕ್ಕೆ, ಕನ್ನಡ ಸಾಹಿತಿಗಳಿಗೆ ಮತ್ತು ಪುಸ್ತಕ ಸಂಸ್ಕೃತಿಗೆ ಅಪಮಾನ ಮಾಡಿದಂತೆ. ಭಾರತೀಯ ಜನತಾ ಪಕ್ಷದ ಸರಕಾರಕ್ಕೂ ಮತ್ತು ಪ್ರಸ್ತುತ ಕಾಂಗ್ರೆಸ್ ಸರಕಾರಕ್ಕೂ ಇರುವ ವ್ಯತ್ಯಾಸವನ್ನು ಕೆಲಸಗಳ ಮೂಲಕ ರುಜುವಾತುಪಡಿಸಬೇಕು. ಅರಿವನ್ನು ವಿಸ್ತಾರಗೊಳಿಸುವವರು ಮಾತ್ರ ಪುಸ್ತಕ ಸಂಸ್ಕೃತಿ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಾರೆ. ನಿಜವಾದ ಅರ್ಥದಲ್ಲಿ ಪುಸ್ತಕಗಳ ಜನಾರ್ಪಣೆ ಆಗಬೇಕಿದೆ.

share
ಡಾ. ರಾಜಶೇಖರ ಹತಗುಂದಿ
ಡಾ. ರಾಜಶೇಖರ ಹತಗುಂದಿ
Next Story
X