Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಜನಚರಿತೆ
  5. ಮರೆಯಬಾರದ ದಲಿತರ ‘ಕರಂಚೇಡು ಹತ್ಯಾಕಾಂಡ’

ಮರೆಯಬಾರದ ದಲಿತರ ‘ಕರಂಚೇಡು ಹತ್ಯಾಕಾಂಡ’

ಡಾ. ಅರುಣ್ ಜೋಳದಕೂಡ್ಲಿಗಿಡಾ. ಅರುಣ್ ಜೋಳದಕೂಡ್ಲಿಗಿ22 July 2025 12:36 PM IST
share
ಮರೆಯಬಾರದ ದಲಿತರ ‘ಕರಂಚೇಡು ಹತ್ಯಾಕಾಂಡ’
ಕರಂಚೇಡು ಹತ್ಯಾಕಾಂಡವು ಆಂಧ್ರಪ್ರದೇಶದಲ್ಲಿ ಬಹುದೊಡ್ಡ ದಲಿತ ಚಳವಳಿಯನ್ನು ಹುಟ್ಟುಹಾಕಿತು ಎನ್ನುವುದು ಚಾರಿತ್ರಿಕ ಸತ್ಯವಾಗಿದೆ. ಇದರ ಫಲವಾಗಿ ದಲಿತರ ಮೇಲೆ ನಡೆಯಬಹುದಾಗಿದ್ದ ನೂರಾರು ದೌರ್ಜನ್ಯಗಳು ತಡೆಯಲ್ಪಟ್ಟಿವೆ. ದಲಿತ ಮಹಾಸಭಾವು ಮೇಲ್ಜಾತಿಗಳ ದಬ್ಬಾಳಿಕೆಯ ವಿರುದ್ಧ ಹೋರಾಡಲು ದಲಿತ ಪರವಾದ ಚಳವಳಿ, ದಲಿತರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ದಲಿತರನ್ನು ಸಂಘಟಿಸಲು ಪ್ರಯತ್ನಿಸಿತು. ದಲಿತ ಮಹಾಸಭಾ ಚಳವಳಿಯು ಬಿ.ಆರ್. ಅಂಬೇಡ್ಕರ್ ಅವರ ಅರಿವನ್ನು ಮತ್ತು ಸ್ಫೂರ್ತಿಯನ್ನು ಮುನ್ನೆಲೆಗೆ ತಂದಿತು.

ಇದೇ ಜುಲೈ 17ಕ್ಕೆ ಆಂಧ್ರ ಪ್ರದೇಶದ ಕರಂಚೇಡು ಹತ್ಯಾಕಾಂಡಕ್ಕೆ 40 ವರ್ಷಗಳು ತುಂಬಿದವು. 1985ರ ಜುಲೈ 17ರಂದು ಆಂಧ್ರದ ಕರಾವಳಿ ಭಾಗದ ಬಾಪಟ್ಲಾ ಜಿಲ್ಲೆಯ ಚಿರಾಲ ಕಂದಾಯ ವಿಭಾಗದ ಕರಂಚೇಡು ಗ್ರಾಮದಲ್ಲಿ ದಲಿತರ ಮೇಲೆ ದೇಶವೇ ಬೆಚ್ಚಿ ಬೀಳಿಸುವಂತಹ ಹತ್ಯಾಕಾಂಡ ನಡೆಯಿತು. ಇದೀಗ 11,667ರಷ್ಟು ಜನಸಂಖ್ಯೆ ಇರುವ ಈ ಊರು ಈಗಲೂ ಕಮ್ಮ ಸಮುದಾಯದ ಭೂಮಾಲಕರು ಬಲಾಢ್ಯವಾಗಿರುವ ಸ್ಥಳ. ಅಂದು ದಲಿತರ ಮೇಲೆ ಅಮಾನುಷ ದೌರ್ಜನ್ಯ ಎಸಗಿ ಆರು ಜನ ದಲಿತರನ್ನು ಕೊಂದು ಮೂವರು ಮಹಿಳೆಯರನ್ನು ಅತ್ಯಾಚಾರ ಮಾಡಿದ್ದರು. ಈ ಹತ್ಯಾಕಾಂಡದಲ್ಲಿ ನೂರಾರು ಜನರು ಊರು ಬಿಟ್ಟು ದಿಕ್ಕಾಪಾಲು ಓಡಿಹೋಗಿ ತಮ್ಮ ಜೀವ ಉಳಿಸಿಕೊಂಡಿದ್ದರು.

ಒಂದು ದಿನ ದಲಿತರು ಕುಡಿಯುವ ನೀರಿನ ಟ್ಯಾಂಕ್‌ಗೆ ಎಮ್ಮೆ ತೊಳೆಯಲು ಬಂದ ಮೇಲ್ಜಾತಿ ಹುಡುಗರು ಕೊಳಕಾದ ಬಕೆಟುಗಳನ್ನು ಕುಡಿವ ನೀರಿನ ಟ್ಯಾಂಕ್‌ನಲ್ಲಿ ಇಳಿಸಿ ನೀರು ತೆಗೆದರು. ಇದನ್ನು ನೋಡಿದ ದಲಿತ ಯುವಕರು ಸಹಜವಾಗಿ ಸಿಟ್ಟಿಗೆ ಬಂದು ಬೈದರು. ಹೀಗೆ ಸಣ್ಣದಾಗಿ ಹುಟ್ಟಿಕೊಂಡ ಜಗಳ ಕಮ್ಮ ಜಾತಿಯವರಲ್ಲಿ ‘ದಲಿತರಿಗೆ ಸರಿಯಾಗಿ ಬುದ್ದಿ ಕಲಿಸಬೇಕು’ ಎನ್ನುವ ಆಕ್ರೋಶವನ್ನು ಹುಟ್ಟುಹಾಕಿತು. ಇನ್ನೆಂದೂ ದಲಿತರು ಕಮ್ಮಗಳ ಎದುರು ಮಾತನಾಡಬಾರದು, ಹಾಗೆ ದಾಳಿ ಮಾಡಬೇಕೆಂದು ವ್ಯವಸ್ಥಿತವಾಗಿ ದಾಳಿಯನ್ನು ಯೋಜಿಸುತ್ತಾರೆ.

ಮಾದಿಗರನ್ನು ಗಂಡು, ಹೆಣ್ಣು, ವಯಸ್ಸಾದವರು, ಮಕ್ಕಳು ಎಂದು ಲೆಕ್ಕಿಸದೆ ಅವರ ಗುಡಿಸಲುಗಳನ್ನು ನುಗ್ಗಿ ದಾಳಿ ಶುರುಮಾಡುತ್ತಾರೆ. ಈ ಹಠಾತ್ ದಾಳಿಗೆ ಸಿಕ್ಕ ಮಾದಿಗರು ಕಂಗಾಲಾಗುತ್ತಾರೆ. ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಮಾದಿಗರು ತಮ್ಮ ಜೀವವನ್ನು ಉಳಿಸಿಕೊಳ್ಳಲು ದಿಕ್ಕಾಪಾಲಾದರು. ಇದರ ಬಗ್ಗೆ ರಕ್ತಸಿಕ್ತ ವಿವರಗಳನ್ನು ಸತ್ಯಶೋಧನಾ ಸಮಿತಿಗಳು ಮತ್ತು ಪತ್ರಿಕೆಗಳು ವರದಿ ಮಾಡಿದವು.

ಈ ಹತ್ಯಾಕಾಂಡದ ನಂತರ ಜುಲೈ 22ರಂದು ಆಂಧ್ರ ಪ್ರದೇಶ ಸಿವಿಲ್ ಲಿಬರ್ಟಿ ಕಮಿಟಿಯು ಒಂದು ವರದಿಯನ್ನು ಸಿದ್ಧಪಡಿಸುತ್ತದೆ. ಈ ವರದಿಯ ಪ್ರಕಾರ, ಹಳ್ಳಿಯ ಬಹುಸಂಖ್ಯಾತ ಕಮ್ಮಗಳು ತೆಲುಗು ದೇಶಂ (ಟಿಡಿಪಿ) ಪಕ್ಷವನ್ನು ಬೆಂಬಲಿಸಿದರು. ಕಮ್ಯುನಿಸ್ಟ್ ಪಾರ್ಟಿಯೂ ಕಮ್ಮಗಳ ಹಿಡಿತದಲ್ಲಿಯೇ ಇದ್ದ ಕಾರಣ ದಲಿತರು ಸಹಜವಾಗಿ ಅವರ ವಿರುದ್ಧವಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದರು. ಇದು ಕಮ್ಮಗಳನ್ನು ಕೆರಳಿಸಿತ್ತು. ಅವರ ಈತನಕದ ದಲಿತರ ಹಿಡಿತವನ್ನು ಸಡಿಲಗೊಳಿಸಿತ್ತು. ಕಮ್ಮಗಳ ಪ್ರತಿಷ್ಠೆಗೆ ಧಕ್ಕೆಯಾಗಿತ್ತು. ನಮ್ಮಲ್ಲಿ ಜೀತ ಮಾಡುವ ದಲಿತರು ನಾವು ಹೇಳಿದ ಪಕ್ಷಕ್ಕೆ ಬೆಂಬಲಿಸಲಿಲ್ಲವಲ್ಲಾ ಎಂದು ದಲಿತರನ್ನು ಮಟ್ಟ ಹಾಕುವ ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರು. ಇದೇ ಸಂದರ್ಭದಲ್ಲಿ ದಲಿತರ ನೀರಿನ ಟ್ಯಾಂಕಲ್ಲಿ ಕಮ್ಮಗಳ ಯುವಕರು ಕೊಳಕಾದ ಬಕೆಟುಗಳನ್ನು ಅದ್ದಿದ್ದಕ್ಕಾಗಿ ಬಂದ ದಲಿತ ಯುವಕರ ಪ್ರತಿರೋಧ ಈ ಸಿಟ್ಟನ್ನು ಕೆರಳಿಸಿತು. ಬಹಳ ಪೂರ್ವ ತಯಾರಿ ಮಾಡಿಕೊಂಡು ಜುಲೈ 17ರಂದು ವ್ಯವಸ್ಥಿತ ದಾಳಿ ಮಾಡಿದರು. ಮಾದಿಗರನ್ನು ಮುಖ ಮೂತಿ ನೋಡದೆ ಕಂಡಕಂಡಲ್ಲಿ ದಾಳಿ ಮಾಡಿದರು. ಈ ಸಂಘಟಿತ ದಾಳಿಗೆ ದಲಿತರು ಬೆಚ್ಚಿಬಿದ್ದರು. ಹೊಡೆತ ತಾಳದೆ ದಿಕ್ಕಾಪಾಲಾಗಿ ಓಡಿದರು. ಸಿಕ್ಕ ಸಿಕ್ಕ ಮಹಿಳೆಯರನ್ನು ಅತ್ಯಾಚಾರ ಮಾಡಲು ಪ್ರಯತ್ನಿಸಿದರು. ದಲಿತರ ಗುಡಿಸಲುಗಳಿಗೆ ನುಗ್ಗಿ ವಯೋವೃದ್ಧರು, ಮಕ್ಕಳು, ಬಾಣಂತಿಯರು ಎಲ್ಲರನ್ನೂ ಎಳೆದೆಳೆದು ಹೊಡೆದರು. ಮಾದಿಗರು ಈ ದಾಳಿಯಿಂದ ತಪ್ಪಿಸಿಕೊಳ್ಳಲು ದಿಕ್ಕೆಟ್ಟು ಓಡುತ್ತಿದ್ದರೆ, ಕಮ್ಮ ಯುವಕರು ಸ್ಕೂಟರು, ಬೈಕುಗಳು, ಟ್ರಾಕ್ಟರ್ ಇತ್ಯಾದಿ ವಾಹನಗಳನ್ನು ಬಳಸಿಕೊಂಡು ಬೆನ್ನಟ್ಟಿ ದಾಳಿ ಮಾಡಿದರು. ಜೀವಭಯದಿಂದ ಹೊಲಗಳಲ್ಲಿ ಹೊಟ್ಟಿದ್ದ ಮೇವಿನ ಬಣವೆಗಳಲ್ಲಿ ಬಚ್ಚಿಟ್ಟುಕೊಂಡರು. ಅದನ್ನು ನೋಡಿದ ಕಮ್ಮಗಳು ಇಂತಹ ಬಣವೆಯೊಳಗೆ ಅಡಗಿಕೊಂಡಿದ್ದವರನ್ನು ಎಳೆದೆಳೆದು ಹೊಡೆದರು. ಈ ದಾಳಿಯಲ್ಲಿ ಆರು ಜನ ದಲಿತರನ್ನು ಹತ್ಯೆ ಮಾಡಲಾಯಿತು. ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಯಿತು. ನೂರಾರು ಜನರು ರಕ್ತಸಿಕ್ತರಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಮಕ್ಕಳು ಈ ದಾಳಿಗೆ ಬೆದರಿ ತಿಂಗಳುಗಟ್ಟಲೆ ಭಯದಲ್ಲೇ ನಡುಗಿದರು.

ಸುಮಾರು 8 ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಚಿರಾಲ ಪಟ್ಟಣಕ್ಕೆ ಬಂದರು, ಅನೇಕರು ಆಸ್ಪತ್ರೆಗೆ ದಾಖಲಾಗಿದ್ದರು. ನಂತರ ಕೆಲವರು ತೀವ್ರಗಾಯಗಳಿಂದ ಸಾವನ್ನಪ್ಪಿದರು. ರಕ್ಷಿಸಬೇಕಾಗಿದ್ದ ಚಿರಾಲದ ಸ್ಥಳೀಯ ಪೊಲೀಸರು ಭಯಭೀತರಾಗಿ ಬಂದಿದ್ದ ದಲಿತರ ಮೇಲೆ ದಾಳಿ ಮಾಡಿ ಬಂಧಿಸಿದರು. ನಂತರ ಸ್ಥಳೀಯ ದಲಿತ ಕಾರ್ಯಕರ್ತರು ಮತ್ತು ನಾಯಕರು ಪಟ್ಟಣದ ಚರ್ಚ್ ನಲ್ಲಿ ಆಶ್ರಯ ಕೊಟ್ಟರು. ನಿರಾಶ್ರಿತರ ಶಿಬಿರವನ್ನು ಆಯೋಜಿಸಿದರು. ಶಿಬಿರದಲ್ಲಿ ಸುಮಾರು 500 ದಲಿತರು ಇದ್ದರು. ಅವರು ಎಂದಿಗೂ ಕರಂಚೇಡುಗೆ ಹಿಂದಿರುಗಲಿಲ್ಲ, ಚಿರಾಲದಲ್ಲಿಯೇ ನೆಲೆಗೊಂಡರು. ಈ ಹತ್ಯಾಕಾಂಡ ದಲಿತರಲ್ಲಿ ಯಾವ ಮಟ್ಟಕ್ಕೆ ಭಯವನ್ನು ಹುಟ್ಟುಹಾಕಿತ್ತು ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಕರಂಚೇಡು ಗ್ರಾಮವು ಕರಾವಳಿ ಪ್ರದೇಶವಾಗಿದ್ದ ಕಾರಣ ಫಲವತ್ತಾದ ಭೂಮಿ ಮತ್ತು ನೀರಾವರಿಯಿಂದ ಸಮೃದ್ಧವಾಗಿದ್ದ ಪ್ರದೇಶ. ಮೊದಲಿನಿಂದಲೂ ಕೃಷ್ಣಾ ನದಿ ನೀರಿನ ಸೌಲಭ್ಯವಿತ್ತು. ಸ್ವಾತಂತ್ರ್ಯಾನಂತರವೂ ನಾಗಾರ್ಜುನ ಸಾಗರ ಕಾಲುವೆಗಳ ಮೂಲಕ ನೀರಾವರಿ ಪ್ರಮಾಣ ಮತ್ತಷ್ಟು ಹೆಚ್ಚಾಗಿತ್ತು. ಇದರ ಲಾಭದ ಫಲಾನುಭವಿಗಳು ಮಾತ್ರ ಕಮ್ಮ ಮೊದಲಾದ ಮೇಲು ಜಾತಿಗಳಾಗಿದ್ದವು. 1980ರ ದಶಕದಲ್ಲಿ ಕರಂಚೇಡು ಗ್ರಾಮದಲ್ಲಿದ್ದದ್ದು 13,600 ಜನಸಂಖ್ಯೆ. ಬಹುಸಂಖ್ಯಾತ ಕಮ್ಮ ಸಮುದಾಯದವರೇ 6,000ರಷ್ಟಿದ್ದರು. ಮಾದಿಗರು 1,100ರಷ್ಟಿದ್ದರೆ, ಮಾಲರು 900ರಷ್ಟಿದ್ದರು, ಒಟ್ಟಾರೆ ದಲಿತರು ಎರಡು ಸಾವಿರದಷ್ಟಿದ್ದರು. 9,000 ಎಕರೆ ಕೃಷಿಯೋಗ್ಯ ಭೂಮಿಯಲ್ಲಿ ಹೆಚ್ಚಿನವು ಕಮ್ಮ ಭೂಮಾಲಕರದ್ದಾಗಿತ್ತು. ತಂಬಾಕು, ಭತ್ತದಂತಹ ವಾಣಿಜ್ಯ ಬೆಳೆ ಲಾಭದಾಯಕವಾಗಿತ್ತು. ಆಗ ಕಮ್ಮ ಜಾತಿಯ ಒಂದು ಕುಟುಂಬದ ವಾರ್ಷಿಕ ಆದಾಯ 65,000 ದಷ್ಟಿದ್ದರೆ, ದಲಿತರದು ಕೇವಲ 2,000 ಆಗಿತ್ತು. ದಿನಕ್ಕೆ 16 ಗಂಟೆಗಳ ಕೆಲಸಕ್ಕೆ ರೂ. 10-12 ಕೂಲಿ ಕೊಡುತ್ತಿದ್ದರು. ಇದು ಮೇಲ್ಜಾತಿಗಳು ಕಡ್ಡಾಯಗೊಳಿಸಿದ್ದ ಕನಿಷ್ಠ ವೇತನವಾಗಿತ್ತು. ಕೂಲಿಗಳು ಗೈರಾದರೆ ಮನೆಗಳಿಂದ ಒದ್ದು ಕೂಲಿಗೆ ತರುತ್ತಿದ್ದರು. ಎದುರಾಡಿದರೆ ಒಂಭತ್ತು ತಿಂಗಳ ಕಾಲ ಕೆಲಸವನ್ನು ನಿಷೇಧಿಸುತ್ತಿದ್ದರು. ಹೀಗೆ ದಲಿತರನ್ನು ಅಮಾನುಷವಾಗಿ ನಡೆಸಿಕೊಳ್ಳುತ್ತಿದ್ದರು.

1960ರ ದಶಕದಲ್ಲಿ ಯಾರು ಶೋಷಕರಾಗಿದ್ದರೋ ಆ ಕಮ್ಮಗಳೇ ಕಮ್ಯುನಿಸ್ಟ್ ಪಾರ್ಟಿಯೊಳಗೂ ಇದ್ದರು. ಕಮ್ಯುನಿಸ್ಟ್ ಪಕ್ಷವು ಹೇಳುತ್ತಿದ್ದ ವರ್ಗ ಅಸಮಾನತೆಯ ಪಾಠಗಳು ತಮಗೇ ಹೇಳಿದಂತಿದೆ ಅನ್ನಿಸಿದಾಗ, ಕೆಲವರು ಕಮ್ಯುನಿಸ್ಟ್ ಪಾರ್ಟಿ ತೊರೆದರೆ, ಮತ್ತೆ ಕೆಲವರು ಈ ವಿಷಯಗಳು ದಲಿತರಿಗೆ ತಿಳಿಯದಂತೆ ಮಾಡಿ ಪಾರ್ಟಿಯಲ್ಲಿದ್ದುಕೊಂಡು ಕಮ್ಯುನಿಸ್ಟ್ ಪಾರ್ಟಿಯ ಹೋರಾಟಗಳನ್ನು ದಮನ ಮಾಡಿದರು. ದಲಿತರಲ್ಲಿ ಎಚ್ಚರದ ಪ್ರಜ್ಞೆಯನ್ನು ಹುಟ್ಟುಹಾಕಬೇಕಿದ್ದ ಕಮ್ಯುನಿಸ್ಟ್ ಪಾರ್ಟಿ ದಲಿತರನ್ನು ಕತ್ತಲಲ್ಲಿರಿಸಿತು. ಹೀಗೆ ಒಂದೆಡೆ ವರ್ಗ ಅಸಮಾನತೆಯ ಬಗ್ಗೆ ಮಾತನಾಡುತ್ತಿದ್ದ ಕಮ್ಯುನಿಸ್ಟ್ ಪಾರ್ಟಿಯ ಆಶಯವನ್ನು ಜಾತಿ ಅಸಮಾನತೆ ಕಡೆ ತಿರುಗಿ ನೋಡದಂತೆ ಮಾಡಿತು.

ಇಂತಹದ್ದೊಂದು ಹತ್ಯಾಕಾಂಡಕ್ಕೆ ಕಮ್ಮಗಳಿಗೆ ಇದ್ದ ಈ ಬಗೆಯ ಮೇಲುಜಾತಿಯ ಅಹಂ ರೂಪುಗೊಂಡದ್ದಾದರೂ ಹೇಗೆ ಎಂದು ಪರಿಶೀಲಿಸಿದರೆ, ಮತ್ತೊಂದು ಬಹಳ ಮುಖ್ಯವಾದ ಆಯಾಮ ತೆರೆದುಕೊಳ್ಳುತ್ತದೆ. ಈ ಹತ್ಯಾಕಾಂಡಕ್ಕೆ ಬೆಂಗಾವಲಾಗಿದ್ದದ್ದು ರಾಜಕೀಯ ಅಧಿಕಾರ. ಆಂಧ್ರಪ್ರದೇಶದಲ್ಲಿ ತೆಲುಗು ದೇಶಂ (ಟಿಡಿಪಿ) ಪಕ್ಷ ರಚನೆಯ ನಂತರ, ಗ್ರಾಮದ ಕಮ್ಮರು ಈ ಪಕ್ಷವನ್ನು ಬೆಂಬಲಿಸಿದರು. ಕರಂಚೇಡು ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಗ್ರಾಮದ ಶ್ರೀಮಂತ ಕಮ್ಮ ಭೂಮಾಲಕ ದಗ್ಗುಬಾಟಿ ಚೆಂಚು ರಾಮಯ್ಯ ಟಿಡಿಪಿಯ ಸಂಸ್ಥಾಪಕ ಎನ್.ಟಿ.ರಾಮರಾವ್ (ಎನ್‌ಟಿಆರ್) ಅವರೊಂದಿಗೆ ತೀರಾ ಆಪ್ತ ಸಂಪರ್ಕ ಹೊಂದಿದ್ದರು. ಮುಂದೆ ಇದು ನೆಂಟಸ್ಥನವೂ ಆಯಿತು. ಚೆಂಚು ರಾಮಯ್ಯನವರ ಮಗ ದಗ್ಗುಬಾಟಿ ವೆಂಕಟೇಶ್ವರ ರಾವ್, ಎನ್‌ಟಿಆರ್ ಅವರ ಮಗಳನ್ನು ವಿವಾಹವಾದರು. ಮುಂದುವರಿದು ದಗ್ಗುಬಾಟಿ ವೆಂಕಟೇಶ್ವರ ರಾವ್ 1983ರಲ್ಲಿ ಈ ಪ್ರದೇಶದಲ್ಲಿ ಟಿಡಿಪಿ ಪಾರ್ಟಿಯಿಂದ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾದರು. ಇದರಿಂದಾಗಿ ಸ್ಥಳೀಯ ಕಮ್ಮ ಭೂಮಾಲಕರು ರಾಜಕೀಯ ಅಧಿಕಾರ ಪಡೆದು ದಲಿತರ ಮೇಲಿನ ದಬ್ಬಾಳಿಕೆಯನ್ನು ತೀವ್ರಗೊಳಿಸಿದರು. ಕಮ್ಮಗಳಿಗೆ ಸಿಕ್ಕ ಈ ರಾಜಕೀಯ ಅಧಿಕಾರವು ದಲಿತರ ಮೇಲೆ ಭೀಕರ ಹತ್ಯಾಕಾಂಡವನ್ನು ನಡೆಸಲು ಕುಮ್ಮಕ್ಕು ನೀಡಿತು.

ಕರಂಚೇಡು ಹತ್ಯಾಕಾಂಡದ ಪ್ರತೀಕಾರವಾಗಿ, ಪೀಪಲ್ಸ್ ವಾರ್ ಗ್ರೂಪ್ ಹಿಂಸಾಚಾರದ ಪ್ರಮುಖ ಆರೋಪಿಯಾಗಿದ್ದ ಚೆಂಚು ರಾಮಯ್ಯನನ್ನು ಕೊಲೆ ಮಾಡಿತು, ಆದರೆ ದಲಿತ ಮಹಾಸಭಾ ಅಂತಹ ಹಿಂಸಾತ್ಮಕ ಕ್ರಮಗಳನ್ನು ವಿರೋಧಿಸಿತು. ಕರಂಚೇಡು ಘಟನೆಯು ಆಂಧ್ರದ ದಲಿತ ಕಾರ್ಯಕರ್ತರಿಂದ ವ್ಯಾಪಕ ಆಕ್ರೋಶ ಮತ್ತು ಪ್ರತಿಭಟನೆಗಳನ್ನು ಹುಟ್ಟುಹಾಕಿತು. ಹತ್ಯಾಕಾಂಡಕ್ಕೆ ಪ್ರತಿಕ್ರಿಯೆಯಾಗಿ, ಬೊಜ್ಜಾ ತಾರಕಂ ಮತ್ತು ಕಟ್ಟಿ ಪದ್ಮಾರಾವ್ ಅವರಂತಹ ನಾಯಕರು ರಾಜ್ಯದಲ್ಲಿ ‘ಸ್ವತಂತ್ರ ದಲಿತ ಚಳವಳಿ’ಯನ್ನು ಸ್ಥಾಪಿಸಲು ನಿರ್ಧರಿಸಿದರು. ಮುಂದೆ ‘ಆಂಧ್ರಪ್ರದೇಶ ದಲಿತ ಮಹಾಸಭಾ’ವನ್ನು ರಚಿಸಿದರು. ದಮನಿತ ಸಮುದಾಯದ ಬಹುಪಾಲು ಜನರು ಆಂಧ್ರದ ಕಮ್ಯುನಿಸ್ಟ್ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದರು. ಅಂತೆಯೇ ರಾಜ್ಯದ ಬಹುಪಾಲು ದಲಿತ ಸಮುದಾಯಗಳೂ ಎಡಚಳವಳಿಯಲ್ಲಿದ್ದರು. ಕರಂಚೇಡು ಹತ್ಯಾಕಾಂಡ ಇಡೀ ಈ ಚಳವಳಿಯ ದಿಕ್ಕನ್ನೇ ಬದಲಿಸಿತು. ಕಮ್ಯುನಿಸ್ಟ್ ಪಾರ್ಟಿಯಲ್ಲಿದ್ದರೆ ದಲಿತರಿಗೆ ರಕ್ಷಣೆ ಇಲ್ಲ ಎನ್ನುವ ಬಲವಾದ ನಂಬಿಕೆಯನ್ನು ಹುಟ್ಟುಹಾಕಿ ಸ್ವತಂತ್ರ ದಲಿತ ಚಳವಳಿ ಹುಟ್ಟಲು ಕಾರಣವಾಯಿತು.

ದಲಿತ ಸಂಘಟನೆಗಳ ಹಕ್ಕೊತ್ತಾಯ ಹೋರಾಟಗಳ ಪರಿಣಾಮ ಓಂಗೋಲ್ ಜಿಲ್ಲಾ ನ್ಯಾಯಾಲಯವು ಆರಂಭದಲ್ಲಿ 159 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತು, ನಂತರ ಕಮ್ಮ ಭೂಮಾಲಕರ ಪ್ರಭಾವದಿಂದ ಆಂಧ್ರಪ್ರದೇಶ ಹೈಕೋರ್ಟ್ ಈ ಆದೇಶವನ್ನು ರದ್ದುಗೊಳಿಸಿತು. ಮುಂದೆ ಸುಪ್ರೀಂ ಕೋರ್ಟ್ ಹಿಂಸಾಚಾರ ನಡೆದು 23 ವರ್ಷಗಳ ನಂತರ ಅಂತಿಮ ತೀರ್ಪು ನೀಡಿತು, ಇದರಲ್ಲಿ ಒಬ್ಬ ವ್ಯಕ್ತಿಗೆ ಜೀವಾವಧಿ ಶಿಕ್ಷೆ ಮತ್ತು ಇತರ 30 ಜನರಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಇದು ದಲಿತರ ಹತ್ಯಾಕಾಂಡಗಳ ನಂತರ ಭಾರತದ ನ್ಯಾಯ ವ್ಯವಸ್ಥೆ ಮಾಡುತ್ತಿರುವ ಅನ್ಯಾಯವನ್ನೇ ಮುಂದುವರಿಸಿತು ಎಂದು ದಲಿತ ಮಹಾಸಭಾದ ಹೋರಾಟಗಾರರು ಟೀಕಿಸಿದರು.

ಕರಂಚೇಡು ಹತ್ಯಾಕಾಂಡವು ಆಂಧ್ರಪ್ರದೇಶದಲ್ಲಿ ಬಹುದೊಡ್ಡ ದಲಿತ ಚಳವಳಿಯನ್ನು ಹುಟ್ಟುಹಾಕಿತು ಎನ್ನುವುದು ಚಾರಿತ್ರಿಕ ಸತ್ಯವಾಗಿದೆ. ಇದರ ಫಲವಾಗಿ ದಲಿತರ ಮೇಲೆ ನಡೆಯಬಹುದಾಗಿದ್ದ ನೂರಾರು ದೌರ್ಜನ್ಯಗಳು ತಡೆಯಲ್ಪಟ್ಟಿವೆ. ದಲಿತ ಮಹಾಸಭಾವು ಮೇಲ್ಜಾತಿಗಳ ದಬ್ಬಾಳಿಕೆಯ ವಿರುದ್ಧ ಹೋರಾಡಲು ದಲಿತ ಪರವಾದ ಚಳವಳಿ, ದಲಿತರ ಹಕ್ಕುಗಳು ಮತ್ತು ನ್ಯಾಯಕ್ಕಾಗಿ ದಲಿತರನ್ನು ಸಂಘಟಿಸಲು ಪ್ರಯತ್ನಿಸಿತು. ದಲಿತ ಮಹಾಸಭಾ ಚಳವಳಿಯು ಬಿ.ಆರ್. ಅಂಬೇಡ್ಕರ್ ಅವರ ಅರಿವನ್ನು ಮತ್ತು ಸ್ಫೂರ್ತಿಯನ್ನು ಮುನ್ನೆಲೆಗೆ ತಂದಿತು. ಇಂದಿಗೂ ಆಂಧ್ರದ ದಲಿತ ಹೋರಾಟಗಳಲ್ಲಿ ಕರಂಚೇಡು ದುರಂತವನ್ನು ಹಾಡುತ್ತಾರೆ. ಹಾಗಾಗಿ ಇಂದಿಗೂ ಎಂದೆಂದಿಗೂ ಭಾರತದ ದಲಿತ ಸಮುದಾಯಗಳು ಕರಂಚೇಡು ತರಹದ ಹತ್ಯಾಕಾಂಡಗಳನ್ನು ಮರೆಯುವಂತಿಲ್ಲ. ಇಂತಹ ಹತ್ಯಾಕಾಂಡಗಳ ನೆನಪುಗಳೇ ದಲಿತ ಹೋರಾಟ, ದೌರ್ಜನ್ಯದ ವಿರುದ್ಧದ ಧ್ವನಿಯನ್ನು ಜೀವಂತವಾಗಿಡಬೇಕಿದೆ.

share
ಡಾ. ಅರುಣ್ ಜೋಳದಕೂಡ್ಲಿಗಿ
ಡಾ. ಅರುಣ್ ಜೋಳದಕೂಡ್ಲಿಗಿ
Next Story
X