ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ ರಾಬರ್ಟ್ ರೆಡ್ಫೋರ್ಡ್ ನಿಧನ

Photo : Reuters
ಹೊಸದಿಲ್ಲಿ : ಆಸ್ಕರ್ ಪ್ರಶಸ್ತಿ ವಿಜೇತ ನಟ, ನಿರ್ದೇಶಕ, ನಿರ್ಮಾಪಕ ರಾಬರ್ಟ್ ರೆಡ್ಫೋರ್ಡ್ ಮಂಗಳವಾರ ನಿಧನರಾಗಿರುವ ಬಗ್ಗೆ ದಿ ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ರಾಬರ್ಟ್ ರೆಡ್ಫೋರ್ಡ್(89) ಯುಟಾ ರಾಜ್ಯದ ಪ್ರೊವೊದಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಅವರ ಪ್ರಚಾರ ಸಂಸ್ಥೆ ರೋಜರ್ಸ್ & ಕೋವನ್ ಪಿಎಂಕೆ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ ಎಂದು ಪತ್ರಿಕೆ ತಿಳಿಸಿದೆ.
‘ಬುಚ್ ಕ್ಯಾಸಿಡಿ ಅಂಡ್ ದ ಸಂಡಾನ್ಸ್ ಕಿಡ್’ (1969), ‘ದಿ ಸ್ಟಿಂಗ್’ (1973), ‘ಆಲ್ ದ ಪ್ರೆಸಿಡೆಂಟ್ಸ್ ಮೆನ್’ (1976) ಸಿನಿಮಾಗಳ ಮೂಲಕ ವಿಶ್ವಪ್ರಸಿದ್ಧರಾದ ಅವರು 1981ರಲ್ಲಿ ‘ಆರ್ಡಿನರಿ ಪೀಪಲ್’ ಚಿತ್ರದ ನಿರ್ದೇಶನಕ್ಕಾಗಿ ಆಸ್ಕರ್ ಮತ್ತು ಗೋಲ್ಡನ್ ಗ್ಲೋಬ್ ಪ್ರಶಸ್ತಿಯನ್ನು ಪಡೆದಿದ್ದರು.
ಅವರು ಸ್ಥಾಪಿಸಿದ ಸಂಡಾನ್ಸ್ ಇನ್ಸ್ಟಿಟ್ಯೂಟ್ ಹಾಗೂ ಚಲನಚಿತ್ರೋತ್ಸವ ಸ್ವತಂತ್ರ ಚಿತ್ರರಂಗದ ಹಲವು ಪೀಳಿಗೆಯ ಚಲನಚಿತ್ರ ನಿರ್ದೇಶಕರಿಗೆ ವೇದಿಕೆಯಾಗಿತ್ತು.
Next Story