ನೇಪಾಳ: ಮೂವರು ಸಚಿವರ ನೇಮಕ

ಕುಲ್ಮಾನ್ ಘೀಸಿಂಗ್ / ಓಂಪ್ರಕಾಶ್ ಆರ್ಯಲ್ / ರಾಮೇಶ್ವರ್ ಖನಾಲ್ (Photo :PTI)
ಕಠ್ಮಂಡು, ಸೆ.15: ನೇಪಾಳದ ಮಧ್ಯಂತರ ಪ್ರಧಾನಿ ಸುಶೀಲಾ ಕರ್ಕಿ ಆಯ್ಕೆ ಮಾಡಿರುವ ಮೂವರು ಸಚಿವರಿಗೆ ಅಧ್ಯಕ್ಷ ರಾಮ್ ಚಂದ್ರ ಪೌದೆಲ್ ಸೋಮವಾರ ಪ್ರಮಾಣ ವಚನ ಬೋಧಿಸಿದ್ದಾರೆ ಎಂದು ವರದಿಯಾಗಿದೆ.
ಮಾಜಿ ಹಣಕಾಸು ಕಾರ್ಯದರ್ಶಿ ರಾಮೇಶ್ವರ್ ಖನಾಲ್ ವಿತ್ತ ಸಚಿವರಾಗಿ, ನೇಪಾಳ ವಿದ್ಯುತ್ ಪ್ರಾಧಿಕಾರದ ಮಾಜಿ ಆಡಳಿತ ನಿರ್ದೇಶಕ ಕುಲ್ಮಾನ್ ಘೀಸಿಂಗ್ ಮೂರು ಇಲಾಖೆಗಳ ಸಚಿವರಾಗಿ (ಇಂಧನ, ಜಲ ಸಂಪನ್ಮೂಲ ಮತ್ತು ನೀರಾವರಿ; ಭೌತಿಕ ಮೂಲಸೌಕರ್ಯ ಮತ್ತು ಸಾರಿಗೆ; ಗ್ರಾಮೀಣ ಅಭಿವೃದ್ಧಿ), ನ್ಯಾಯವಾದಿ ಓಂಪ್ರಕಾಶ್ ಆರ್ಯಲ್ ಎರಡು ಇಲಾಖೆಗಳ ಸಚಿವರಾಗಿ( ಗೃಹ ವ್ಯವಹಾರ; ಕಾನೂನು, ನ್ಯಾಯ ಮತ್ತು ಸಂಸದೀಯ ವ್ಯವಹಾರಗಳು) ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Next Story