ಫ್ರೆಂಚ್ ಓಪನ್ ಟೆನಿಸ್ | ಯೂಕಿ ಭಾಂಬ್ರಿ-ರಾಬರ್ಟ್ ಜೋಡಿ 3ನೇ ಸುತ್ತಿಗೆ ತೇರ್ಗಡೆ

PC: NDTV
ಪ್ಯಾರಿಸ್: ಭಾರತದ ಯೂಕಿ ಭಾಂಬ್ರಿ ಹಾಗೂ ಅಮೆರಿಕದ ರಾಬರ್ಟ್ ಗ್ಯಾಲೋವೇ ಫ್ರೆಂಚ್ಓಪನ್ ಟೆನಿಸ್ ಟೂರ್ನಿಯಲ್ಲಿ ಡಬಲ್ಸ್ ವಿಭಾಗದಲ್ಲಿ 3ನೇ ಸುತ್ತು ತಲುಪಿದ್ದಾರೆ.
ಎರಡು ಗಂಟೆ ಹಾಗೂ 32 ನಿಮಿಷಗಳ ಕಾಲ ನಡೆದ 2ನೇ ಸುತ್ತಿನ ಪಂದ್ಯದಲ್ಲಿ ಮೊದಲ ಸೆಟ್ ಸೋಲಿನಿಂದ ಹೊರಬಂದಿರುವ ಯೂಕಿ-ರಾಬರ್ಟ್ ಜೋಡಿ ಕ್ರೊಯೇಶಿಯದ ನಿಕೊಲಾ ಮೆಟಿಕ್ ಹಾಗೂ ಕಿವೀಸ್ನ ಮೈಕಲ್ ವೀನಸ್ರನ್ನು 6-7(4), 7-6(4), 6-3 ಸೆಟ್ ಗಳ ಅಂತರದಿಂದ ಮಣಿಸಿದರು.
32ರ ವಯಸ್ಸಿನ ಕ್ರಮವಾಗಿ 41 ಹಾಗೂ 38ನೇ ರ್ಯಾಂಕಿನ ಯೂಕಿ ಹಾಗೂ ರಾಬರ್ಟ್ ಮೊದಲ ಸೆಟ್ ನಲ್ಲಿ 4-2 ಮುನ್ನಡೆಯೊಂದಿಗೆ ಉತ್ತಮ ಆರಂಭ ಪಡೆದಿದ್ದರೂ ಟೈಬ್ರೇಕರ್ನಲ್ಲಿ ಸೋತರು. 2ನೇ ಟೈ-ಬ್ರೇಕರ್ನಲ್ಲಿ ಮೆಟಿಕ್ ಹಾಗೂ ವೀನಸ್ ಮುನ್ನಡೆಯಲ್ಲಿದ್ದರು. ಆದರೆ ಯೂಕಿ ಹಾಗೂ ಭಾಂಬ್ರಿ ಜೋಡಿ 7ರಲ್ಲಿ 6 ಅಂಕ ಗಳಿಸಿ ಸ್ಕೋರನ್ನು ಸಮಬಲಗೊಳಿಸಿದರು.
3ನೇ ಹಾಗೂ ನಿರ್ಣಾಯಕ ಸೆಟ್ ನಲ್ಲಿ ಇಂಡೋ-ಅಮೆರಿಕ ಜೋಡಿ ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದು, ಮತ್ತೆ ಹಿಂತಿರುಗಿ ನೋಡಲಿಲ್ಲ.
ಕಳೆದ ವರ್ಷ ಫ್ರಾನ್ಸ್ನ ಅಲ್ಬಾನೊ ಒಲಿವೆಟ್ಟಿ ಅವರೊಂದಿಗೆ ಡಬಲ್ಸ್ ಪಂದ್ಯ ಆಡಿದ್ದ ಯೂಕಿ ಭಾಂಬ್ರಿ ಮೊದಲ ಸುತ್ತು ದಾಟುವಲ್ಲಿ ವಿಫಲರಾಗಿದ್ದರು. ಈ ವರ್ಷ ಉತ್ತಮ ಪ್ರದರ್ಶನ ನೀಡಿರುವ ಭಾಂಬ್ರಿ ಇದೇ ಮೊದಲ ಬಾರಿ 3ನೇ ಸುತ್ತನ್ನು ತಲುಪಿದ್ದಾರೆ.
ಭಾಂಬ್ರಿ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕದ ಕ್ರಿಸ್ಟಿಯನ್ ಹ್ಯಾರಿಸನ್ ಹಾಗೂ ಇವಾನ್ ಕಿಂಗ್ ಸವಾಲನ್ನು ಎದುರಿಸಲಿದೆ.