ನಾಳೆ(ಆ.30) ಹಾವೇರಿಯಲ್ಲಿ ʼಜೈ ಮಾನವ ಸಮಾವೇಶʼ

ಹಾವೇರಿ : ಹಾವೇರಿ ಜಿಲ್ಲೆಯನ್ನು ಕೇಂದ್ರೀಕರಿಸಿ ಶೈಕ್ಷಣಿಕ ಸೇವೆ ಸಲ್ಲಿಸುತ್ತಿರುವ ಮೇಕ್ ಫೌಂಡೇಶನ್ ವತಿಯಿಂದ ನಾಳೆ(ಆ.30) ಅಪರಾಹ್ನ 3 ಗಂಟೆಗೆ ಹಾವೇರಿ ನಗರದ ಶಿವಶಕ್ತಿ ಪ್ಯಾಲೆಸ್‌ನಲ್ಲಿ ʼಜೈ ಮಾನವ ಸಮಾವೇಶʼ ನಡೆಯಲಿದೆ.
ವಿಧಾನ ಸಭೆಯ ಉಪ ಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಉದ್ಘಾಟನೆ ಮಾಡಲಿದ್ದಾರೆ.
ಡಾ.ಗುರುಲಿಂಗ ಮಹಾಸ್ವಾಮಿಗಳು ಅಕ್ಕಿಮಠ ಹಾಗೂ ಮೌಲಾನಾ ಮುಸ್ತಫಾ ರಝಾ ನಈಮಿ ನೇತೃತ್ವದ 'ಜೈ ಮಾನವ ಕಲ್ಯಾಣ ಸಂಘ'ವನ್ನು ವಿಧಾನ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ಲೋಕಾರ್ಪಣೆ ಮಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಅನಿವಾಸಿ ಉದ್ಯಮಿ ಝಕರಿಯಾ ಜೋಕಟ್ಟೆ ಅವರಿಗೆ ʼಜೈ ಮಾನವ ಪ್ರಶಸ್ತಿʼ ಪ್ರದಾನ ಮಾಡಲಾಗುವುದು.
ಜಿಲ್ಲಾ ಉಸ್ತುವಾರಿ ಸಚಿವರಾದ ಶಿವಾನಂದ ಪಾಟೀಲ್, ಬ್ಯಾಡಗಿ ಶಾಸಕರಾ ಬಸವರಾಜ್ ಶಿವಣ್ಣನವರ್, ಶಿಗ್ಗಾಂವಿ-ಸವಣೂರು ಶಾಸಕ ಯಾಸಿರ್ ಪಠಾಣ್ ಸೇರಿದಂತೆ ಹಲವು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಇದಕ್ಕೂ ಮುನ್ನ ಅಪರಾಹ್ನ 2 ಗಂಟೆಗೆ ನಡೆಯಲಿರುವ ಅಕ್ಷರ ಕೂಟ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಸಾಹಿತಿ ಸತೀಶ್ ಕುಲಕರ್ಣೆ ಉದ್ಘಾಟಿಸಲಿದ್ದಾರೆ.
ಯೋಗಗುರು ಹಾಗೂ ಮೋಟಿವೇಶನ್ ಸ್ಪೀಕರ್ ಭಾರತ್ ಮುಸ್ತಫಾ, ಸಾಹಿತಿ ಚೆನ್ನಬಸಪ್ಪ ಮರಳಿಹಳ್ಳಿ, ಉದ್ಯಮಿಗಳಾದ ಡಾ.ಶೇಖ್ ಬಾವ, ಹಸನ್ ಫ್ಲೋರ ದುಬೈ ಮಾತನಾಡಲಿದ್ದಾರೆ.
ʼಜೈ ಮಾನವ ಸಮಾವೇಶʼದ ಪೋಸ್ಟರ್ ಬಿಡುಗಡೆಗೊಳಿಸಿದ ಸ್ಪೀಕರ್ ಯು.ಟಿ.ಖಾದರ್ ಹಾಗೂ ಶಾಸಕ ಅಶೋಕ್ ಕುಮಾರ್ ರೈ