Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಗಲ್ಫ್
  4. ಸೌದಿ ಅರೇಬಿಯ | ಪ್ರವಾಸಿಗರು ಔಷಧ...

ಸೌದಿ ಅರೇಬಿಯ | ಪ್ರವಾಸಿಗರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ

ವಾರ್ತಾಭಾರತಿವಾರ್ತಾಭಾರತಿ30 Aug 2025 7:14 PM IST
share
ಸೌದಿ ಅರೇಬಿಯ | ಪ್ರವಾಸಿಗರು ಔಷಧ ಕೊಂಡೊಯ್ಯಲು ಅನುಮತಿ ಪಡೆಯುವುದು ಕಡ್ಡಾಯ
ಅರ್ಜಿ ಸಲ್ಲಿಸುವುದು ಹೇಗೆ?

ರಿಯಾದ್: ಸೌದಿ ಅರೇಬಿಯಾಗೆ ಪ್ರಯಾಣಿಸುವವರು ತಮ್ಮೊಂದಿಗೆ ಔಷಧಗಳನ್ನು ಕೊಂಡೊಯ್ಯಲು ಬಯಸಿದರೆ, ಸೌದಿ ಆಹಾರ ಮತ್ತು ಔಷಧ ಪ್ರಾಧಿಕಾರ (SFDA) ನೀಡಿರುವ ಹೊಸ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೌದಿ ಅರೇಬಿಯ ಸರ್ಕಾರ ತಿಳಿಸಿದೆ.

ಹೊಸ ನಿಯಮದ ಅನ್ವಯ ನೋವು ನಿವಾರಕಗಳು, ನಿದ್ರೆಯ ಮಾತ್ರೆಗಳು ಅಥವಾ ಮನೋವೈದ್ಯಕೀಯ ಔಷಧಿಗಳಂತಹ ನಿಯಂತ್ರಿತ ಔಷಧಗಳನ್ನು ಸಾಗಿಸುವ ಮುನ್ನ, ಪ್ರಯಾಣಿಕರು ಅವುಗಳಿಗೆ ಮೊದಲೇ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು.

SFDA ಯ ನಿಯಂತ್ರಿತ ಔಷಧ ವ್ಯವಸ್ಥೆ (CDS) ಆನ್‌ಲೈನ್ ಪೋರ್ಟಲ್ https://cds.sfda.gov.sa ಮೂಲಕ ಸರಳವಾಗಿ ಅರ್ಜಿ ಸಲ್ಲಿಸಬಹುದು. ಈ ವ್ಯವಸ್ಥೆಯ ಉದ್ದೇಶ, ಪ್ರಯಾಣಿಕರು ತಮ್ಮ ವೈದ್ಯಕೀಯ ಅಗತ್ಯಗಳನ್ನು ಕಾನೂನುಬದ್ಧವಾಗಿ ಸಾಗಿಸಲು ಅನುಕೂಲ ಮಾಡಿಕೊಡುವುದು ಮತ್ತು ಪೋರ್ಟ್ ಗಳಲ್ಲಿ ವಿಳಂಬ ತಪ್ಪಿಸುವುದು.

► ಔಷಧಿ ಗಳನ್ನು ಸಾಗಿಸಲು ಅನುಮತಿ ಪಡೆಯುವುದು ಹೇಗೆ?

1. ಖಾತೆ ರಚನೆ

CDS ಪ್ಲಾಟ್‌ಫಾರ್ಮ್‌ https://cds.sfda.gov.sa ನಲ್ಲಿ ವೈಯಕ್ತಿಕ ಖಾತೆ ರಚಿಸಬೇಕು.

2. ಇ-ಪರವಾನಗಿಗಾಗಿ ಅರ್ಜಿ ಸಲ್ಲಿಕೆ

ವೈಯಕ್ತಿಕ ಮಾಹಿತಿ, ಪ್ರಯಾಣ ವಿವರಗಳು ಹಾಗೂ ಕೊಂಡೊಯ್ಯುವ ಔಷಧಗಳ ವಿವರಗಳನ್ನು ಅರ್ಜಿಯ ಜೊತೆ ನಮೂದಿಸಬೇಕು.

3.ದಾಖಲೆಗಳ ಅಪ್‌ಲೋಡ್

ಮಾನ್ಯವಾಗಿರುವ ವೈದ್ಯಕೀಯ ಪ್ರಿಸ್ಕ್ರಿಪ್ಷನ್, ವೈದ್ಯರಿಂದ ನೀಡಲಾದ ವೈದ್ಯಕೀಯ ವರದಿಯ ಜೊತೆಗೆ ಗುರುತಿನ ಚೀಟಿಯನ್ನು ಅಪ್ಲೋಡ್ ಮಾಡಬೇಕು. ಗುರುತಿನ ಚೀಟಿಯಾಗಿ ಪಾಸ್‌ಪೋರ್ಟ್/ ರೆಸಿಡೆಂಟ್ ಐಡಿ ಬಳಸಬಹುದು.

4. ಔಷಧದ ವಿವರಗಳನ್ನು ಘೋಷಿಸಬೇಕು.

ಈ ವೇಳೆ ಔಷಧದ ಹೆಸರು, ಅದರ ತಯಾರಿಕೆಯಲ್ಲಿ ಬಳಸಲಾದ ವಸ್ತುಗಳು, ಅದನ್ನು ತೆಗೆದುಕೊಳ್ಳುವ ವಿಧಾನವನ್ನು ತಿಳಿಸಬೇಕು. ಟ್ಯಾಬ್ಲೆಟ್/ಇಂಜೆಕ್ಷನ್ ಆಗಿದೆಯೇ ಎಂದು ನಮೂದಿಸಬೇಕು. ಅದರೊಂದಿಗೆ ಔಷಧ ಪ್ರಮಾಣ ಮತ್ತು ಅದರ ಪ್ಯಾಕೇಜ್ ಗಾತ್ರವನ್ನು ಉಲ್ಲೇಖಿಸಬೇಕು.

5.ವೈದ್ಯಕೀಯ ದೃಢೀಕರಣ ಅಗತ್ಯ.

ಅರ್ಜಿ ಸಲ್ಲಿಸುವವರು ಅಥವಾ ಅವರ ಕುಟುಂಬದವರಿಗೆ ಮಾತ್ರ ಬಳಸಲು ಎಂಬುದನ್ನು ಉಲ್ಲೇಖಿಸಬೇಕು.

6.ನಿಯಮ ಷರತ್ತುಗಳಿಗೆ ಒಪ್ಪಬೇಕು.

SFDA ನಿಯಮಗಳನ್ನು ಒಪ್ಪಿಕೊಂಡು ಅರ್ಜಿಯನ್ನು ಸಲ್ಲಿಸಬೇಕು.

7. ಅರ್ಜಿಯ ಸ್ಥಿತಿ ಟ್ರ್ಯಾಕ್ ಮಾಡಿ

ಅರ್ಜಿಯ ಸ್ಥಿತಿಯನ್ನು ಆನ್‌ಲೈನ್‌ನಲ್ಲಿ ನೇರವಾಗಿ ಪರಿಶೀಲಿಸಬಹುದು. ಅರ್ಜಿ ಸ್ವೀಕೃತವಾಗಿದೆಯೇ ಅಥವಾ ತಿರಸ್ಕೃತಗೊಂಡಿದೆಯೇ ಎಂದು ಅಲ್ಲಿಯೇ ಪರಿಶೀಲಿಸಬಹುದು.

8. ಅನುಮತಿ ಪತ್ರ

ಅನುಮತಿ ಸಿಕ್ಕ ಬಳಿಕ ಅನುಮತಿ ಪತ್ರವನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ಮಾಡಿಕೊಂಡು ಜೊತೆಗೆ ತೆಗೆದುಕೊಂಡು ಹೋಗಬೇಕು.

ಸೌದಿ ಸರಕಾರ ಜಾರಿಗೊಳಿಸಿರುವ ನೂತನ ನಿಯಮಗಳಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಜೊತೆಗೆ ಸಮಯದ ಉಳಿತಾಯವಾಗಲಿದೆ. ಮುಂಚಿತವಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ಮೂಲಕ ವಿಮಾನ ನಿಲ್ದಾಣದಲ್ಲಿ ಕಾಯುವ ಪ್ರಮೇಯ ಬರುವುದಿಲ್ಲ.

ಇದನ್ನೂ ಓದಿ ಸೌದಿ ಅರೇಬಿಯ | 20 ವರ್ಷಗಳ ಕಾಲ ಕೋಮಾದಲ್ಲಿದ್ದ ʼನಿದ್ರೆಯಲ್ಲಿರುವ ರಾಜಕುಮಾರʼ ಅಲ್ ವಲೀದ್ ಬಿನ್ ಖಾಲಿದ್ ನಿಧನ

ಅನುಮತಿಗಾಗಿ ಕಚೇರಿಗಳಿಗೆ ಅಲೆದಾಡುವ ಅಗತ್ಯವಿಲ್ಲ. ಎಲ್ಲವನ್ನೂ ಮನೆಯಿಂದಲೇ ಪೂರ್ಣಗೊಳಿಸಬಹುದು.

ಅರ್ಜಿ ಸಲ್ಲಿಸಬಹುದಾದ ಪೋರ್ಟಲ್ 24/7 ಲಭ್ಯವಿರುವುದರಿಂದ ಯಾವಾಗ ಬೇಕಾದರೂ ಅರ್ಜಿ ಸಲ್ಲಿಸಲು ಅವಕಾಶವಿದೆ.

ಸಾಮಾನ್ಯವಾಗಿ ಎದುರಾಗುವ ಪ್ರಶ್ನೆಗಳು:

ಪ್ರಶ್ನೆ: ಪ್ರಿಸ್ಕ್ರಿಪ್ಷನ್ ಇದ್ದರೂ ಔಷಧಿಗೆ ಪರವಾನಗಿ ಅಗತ್ಯವಿದೆಯೇ?

ಉತ್ತರ: ಹೌದು, ಯಾವುದೇ ಔಷಧಕ್ಕೂ ಪರವಾನಗಿ ಕಡ್ಡಾಯ.

ಪ್ರಶ್ನೆ: ಅರ್ಜಿ ಸಲ್ಲಿಸಲು ಎಲ್ಲಿಗೆ ಹೋಗಬೇಕು?

ಉತ್ತರ: SFDA ಯ CDS ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು.

ಪ್ರಶ್ನೆ: ನಾನು ಇನ್ನೊಬ್ಬರ ಪರವಾಗಿ ಅರ್ಜಿ ಹಾಕಬಹುದೇ?

ಉತ್ತರ: ಹೌದು, ಅವರ ವೈದ್ಯಕೀಯ ಅಗತ್ಯದ ದಾಖಲೆಗಳನ್ನು ನೀಡಿದರೆ ಮಾತ್ರ ಸಾಧ್ಯ.

ಪ್ರಶ್ನೆ: ನನ್ನ ಅರ್ಜಿಯ ಸ್ಥಿತಿಯನ್ನು ಹೇಗೆ ತಿಳಿದುಕೊಳ್ಳಬಹುದು?

ಉತ್ತರ: CDS ಪ್ಲಾಟ್‌ಫಾರ್ಮ್‌ ನಲ್ಲಿ ನೇರವಾಗಿ ಟ್ರ್ಯಾಕ್ ಮಾಡಬಹುದು.

ಪ್ರಶ್ನೆ: ಅನುಮೋದನೆ ಸಿಕ್ಕಿದ ಬಳಿಕ ಏನು ಮಾಡಬೇಕು?

ಉತ್ತರ: ಪರವಾನಗಿಯನ್ನು ಡೌನ್‌ಲೋಡ್ ಮಾಡಿ ಮುದ್ರಿಸಿಕೊಳ್ಳಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X