ರಿಯಾದ್: ಎಂ.ಜಿ.ಟಿ ಮಲೆನಾಡು ಸಾಂಸ್ಕೃತಿಕ, ಕ್ರೀಡಾ ಸಂಸ್ಥೆಯ ವಾರ್ಷಿಕ ಮಹಾ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ

ರಿಯಾದ್: ಎಂ.ಜಿ.ಟಿ ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆಯ ವಾರ್ಷಿಕ ಮಹಾ ಸಭೆ; ನೂತನ ಪದಾಧಿಕಾರಿಗಳ ಆಯ್ಕೆ
ರಿಯಾದ್: ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ, ರಿಯಾದ್ ವಲಯದ ವಾರ್ಷಿಕ ಮಹಾ ಸಭೆಯು ಮರೀನಾ ಇಸ್ತಿರಾಹ್ ನಲ್ಲಿ ಇತ್ತೀಚೆಗೆ ನಡೆಯಿತು.
ಇರ್ಷಾದ್ ಚಕ್ಮಕ್ಕಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಆರಂಭದಲ್ಲಿ ನಿಯಾಝ್ ಕೊಡ್ಲಿಪೇಟೆ ಕಿರಾಅತ್ ಪಠಿಸಿದರು. ಅನ್ಸಾರ್ ಚಕ್ಮಕ್ಕಿ ಕಾರ್ಯಕ್ರಮ ನಿರೂಪಿಸಿದರು. ಅಬೂಬಕರ್ ಸಿದ್ದೀಖ್ ಕೊಡ್ಲಿಪೇಟೆ ಸ್ವಾಗತಿಸಿದರು.
MGT ರಿಯಾದ್ ಸಮಿತಿಯ ಗೌರವಾಧ್ಯಕ್ಷ ಸಿರಾಜ್ ಚಕ್ಮಕ್ಕಿ, ಮಲೆನಾಡು ಸಾಂಸ್ಕೃತಿಕ ಮತ್ತು ಕ್ರೀಡಾ ಸಂಸ್ಥೆ ಬಗ್ಗೆ ಹೊಸ ಸದಸ್ಯರಿಗೆ ವಿವರಿಸಿ ಸಂಘಟನಾತ್ಮಕ ಮನೋಭಾವ ಬೆಳೆಸಿಕೊಳ್ಳಲು ಪ್ರೇರೇಪಿಸಿದರು.
ರಿಯಾದ್ ವಲಯದ ಅಧ್ಯಕ್ಷರಾದ ಇರ್ಷಾದ್ ಚಕ್ಮಕ್ಕಿ ರಿಯಾದ್ ವಲಯದ ಸಾಧನೆಗಳನ್ನು ಸದಸ್ಯರ ಮುಂದಿಟ್ಟು, ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.
ಸಭಾಧ್ಯಕ್ಷರಾಗಿ ಸಿರಾಜ್ ಚಕ್ಮಕಿ ಯವರನ್ನು ನೇಮಿಸಲಾಯಿತು.
ರಿಯಾದ್ ವಲಯದ ನೂತನ ಅಧ್ಯಕ್ಷರಾಗಿ ನವಾಝ್ ಚಿಕ್ಕಮಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ಝಬೀರ್ ಬಾಳೆಹೊನ್ನೂರು ಅವರನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಅಫ್ರೋಝ್ ಹಾಸನ, ಖಜಾಂಜಿಯಾಗಿ ಅಬೂಬಕರ್ ಸಿದ್ದೀಕ್ ಬೇಲೂರು, ಉಪಾಧ್ಯಕ್ಷರಾಗಿ ಶಾಹಿದ್ ಅಕ್ಬರ್ ಬಾಳೆಹೊನ್ನೂರು, ಇರ್ಷಾದ್ ದಾವಣಗೆರೆ ಹಾಗು ಅಬ್ದುಲ್ ಅಝೀಝ್ ಕೊಪ್ಪ ಇವರನ್ನು ಆಯ್ಕೆ ಮಾಡಲಾಯಿತು.
ಹಿರಿಯ ಸಲಹೆಗಾರರಾಗಿ ಶಹವರ್ ಅರೇಹಳ್ಳಿ, ಅಬೂಬಕರ್ ಸಿದ್ದೀಖ್ ಕೊಡ್ಲಿಪೇಟೆ, ಅಬ್ದುಲ್ ರಹ್ಮಾನ್ ಸಣ್ಣಕೆರೆ, ಇಬ್ರಾಹಿಂ ಯಾಕೂಬ್ ರಿಪ್ಪನ್‌ಪೇಟೆ, ನಯಾಝ್ ಬಾಳೆಹೊನ್ನೂರು, ಸಹಕಾರ್ಯದರ್ಶಿಗಳಾಗಿ ರಮೀಝ್ ಬೇಲೂರು, ಉಮರಬ್ಬ ಕೊಪ್ಪ ಹಾಗು ಸುಲ್ತಾನ್ ಕೊಡ್ಲಿಪೇಟೆ, ಮಾಧ್ಯಮ ವಿಭಾಗದ ಸಂಯೋಜಕರಾಗಿ ಅಬ್ದುಲ್ ರಹಿಮಾನ್ ಕೊಪ್ಪ ಹಾಗು ಇಸಾಕ್ ಬಾಳ್ಳುಪೇಟೆ ಇವರನ್ನು ಆಯ್ಕೆ ಮಾಡಲಾಯಿತು.
ಆಯೋಜಕರ (Organizers) ತಂಡವನ್ನು ಹೊಸದಾಗಿ ನಿರ್ಮಿಸಲಾಯಿತು. ಈ ತಂಡದಲ್ಲಿ ಸಫ್ವಾನ್ ಇಬ್ರಾಹಿಂ ಶಿವಮೊಗ್ಗ, ಯಾಸಿರ್ ಚಿಕ್ಕಮಗಳೂರು, ರಿಯಾಝ್ ಬಾಳೆಹೊನ್ನೂರು, ಸಾಕಿಬ್ ಖಾನ್ ಶಿವಮೊಗ್ಗ ಹಾಗು ನಯಾಝ್ ಶಿವಮೊಗ್ಗ ಅವರನ್ನು ನೇಮಿಸಲಾಯಿತು.
ನೂತನ ಸಮಿತಿಯ ಸದಸ್ಯರುಗಳಾಗಿ ಸಿರಾಜ್ ಚಕ್ಮಕ್ಕಿ, ನಝೀರ್ ಜಯಪುರ, ಅಬೂಬಕರ್ ಸಿದ್ದೀಕ್ ಕೊಡ್ಲಿಪೇಟೆ, ಜುನೈದ್ ಇಸ್ಮಾಯಿಲ್ ಚಕ್ಮಕ್ಕಿ, ಇರ್ಷಾದ್ ಚಕ್ಮಕ್ಕಿ, ಸಮೀರ್ ಹಾಸನ, ಅನ್ಸಾರ್ ಚಕ್ಮಕ್ಕಿ, ಇಬ್ರಾಹಿಂ ಹೊಸಕೋಟೆ, ಸಈದ್ ಉಪ್ಪಿನಂಗಡಿಯವರನ್ನು ಆಯ್ಕೆಮಾಡಲಾಯಿತು,
ನೂತನ ಅಧ್ಯಕ್ಷ ನವಾಝ್ ಚಿಕ್ಕಮಗಳೂರು ಸಭೆಯನ್ನುದ್ದೇಶಿಸಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಝಬೀರ್ ಬಾಳೆಹೊನ್ನೂರು ಹೊಸ ಸಮಿತಿಗೆ ಅಭಿನಂದನೆ ಸಲ್ಲಿಸಿದರು.