ದುಬೈ|ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಯೋಗದಲ್ಲಿ ಕಡವಿನ ಬಾಗಿಲು ಮರ್ಹೂಂ ಹಾಜಿ ಮುಹಮ್ಮದ್ ಮುಸ್ಲಿಯಾರ್ ಸ್ಮರಣಾರ್ಥ ರಕ್ತದಾನ ಶಿಬಿರ

ದುಬೈ:ಮರ್ಹೂಂ ಹಾಜಿ ಮುಹಮ್ಮದ್ ಮುಸ್ಲಿಯಾರ್ ಕಡವಿನ ಬಾಗಿಲು ಸ್ಮರಣಾರ್ಥ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಹಯೋಗದಲ್ಲಿ ದುಬೈಯಲ್ಲಿ ರಕ್ತದಾನ ಶಿಬಿರವು ಬೈತ್ ಅಲ್ ಮಜ್ಲಿಸ್ ಕೆಫ್ಟೆರಿಯಾ ರಾಶಿಯಾದಲ್ಲಿ ಶುಕ್ರವಾರ ನಡೆಯಿತು.
ರಕ್ತದಾನ ಶಿಬಿರದಲ್ಲಿ 50 ಯೂನಿಟ್ ರಕ್ತ ಸಂಗ್ರಹಿಸಲಾಯಿತು. ಅನಿವಾಸಿ ಭಾರತೀಯರು ಹಾಗೂ ನಾಗರಿಕರು ರಕ್ತದಾನ ಮಾಡಿದರು.
ಈ ಕಾರ್ಯಕ್ರಮದಲ್ಲಿ ಆಸ್ಪತ್ರೆ ಸಿಬ್ಬಂದಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ದುಬೈ ಅಧ್ಯಕ್ಷ ನಝೀರ್ ಬಿಕರ್ನಕಟ್ಟೆ,ಕಾರ್ಯನಿರ್ವಾಹಕರಾದ ಶಂಸುದ್ದಿನ್ ಪಿಲಿಗೂಡು, ಸಮೀರ್ ಕಡವಿನ ಬಾಗಿಲು, ಸದಸ್ಯರಾದ ಹಬೀಬ್ ಪರ್ಲ್ಯ, ಅಬು ಸಿದ್ದೀಕ್, ಅನ್ಸಾರ್ ಬಾಂಬಿಲ ಉಪಸ್ಥಿತರಿದ್ದರು ಎಂದು ಬ್ಲಡ್ ಡೋನರ್ಸ್ ಯು.ಎ.ಈ ಪ್ರಕಟಣೆಯಲ್ಲಿ ತಿಳಿಸಿದೆ.
Next Story