ಯುಎಇ | ಆನುವಲ್ ಹೆಲ್ತ್ ಅವಾರ್ಡ್ಸ್ - 2025: 15 ಯುಎಇ ನಾಗರೀಕರು, 46 ವಿಭಿನ್ನ ಕ್ಷೇತ್ರಗಳ ಸಾಧಕರ ನಾಮನಿರ್ದೇಶನ ಪ್ರಾರಂಭ

ದುಬೈ: ಹೆಲ್ತ್ ಮ್ಯಾಗಝಿನ್ ಮತ್ತು ತುಂಬೆ ಮಾಧ್ಯಮದ ಸಹಯೋಗದಲ್ಲಿ, ಆನುವಲ್ ಹೆಲ್ತ್ ಅವಾರ್ಡ್ಸ್ 2025ಕ್ಕೆ ನಾಮನಿರ್ದೇಶನ ಪ್ರಾರಂಭವಾಗಿವೆ.
ಯುಎಇಯಲ್ಲಿ ಆರೋಗ್ಯ ಕ್ಷೇತ್ರದಲ್ಲಿ ಈ ಪ್ರಶಸ್ತಿಯು ಅತ್ಯುನ್ನತ ಗೌರವ ಎಂದೇ ಗುರತಿಸಲ್ಪಟ್ಟಿದೆ. ಅಕ್ಟೋಬರ್ 9ರಂದು ಬೆಳಿಗ್ಗೆ 11 ಗಂಟೆಗೆ ದುಬೈನ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ನಡೆಯುವ ಸಮಾರಂಭದಲ್ಲಿ 15 ಯುಎಇ ನಾಗರೀಕರು ಮತ್ತು 46 ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಈ ವರ್ಷ ವಿಶೇಷವಾಗಿ ಗೌರವಿಸಲಾಗುತ್ತದೆ.
ಇದೇ ಮೊದಲ ಬಾರಿಗೆ 15 ಎಮಿರಾತಿ ಆರೋಗ್ಯ ವೃತ್ತಿಪರರು ಈ ವಿಶಿಷ್ಟ ಪ್ರಶಸ್ತಿಗಳನ್ನು ಪಡೆಯಲಿ ದ್ದಾರೆ. ಸಾರ್ವಜನಿಕ ಆರೋಗ್ಯ ಸೇವೆಗಳಿಂದ ಹಿಡಿದು ಶಸ್ತ್ರಚಿಕಿತ್ಸಾ ಸಾಧನೆ, ನಾವಿನ್ಯತೆ, ಆರೈಕೆ, ವೈದ್ಯಕೀಯ ಶಿಕ್ಷಣ ಮತ್ತು ಇನ್ನೂ ಹಲವಾರು ವಿಭಾಗಗಳಲ್ಲಿ ಸಾಧನೆಗೈದವರನ್ನು ಈ ಪ್ರಶಸ್ತಿ ಪಟ್ಟಿಯಲ್ಲಿ ಗುರುತಿಸಲಾಗುತ್ತದೆ.
ಸಾಧಕರನ್ನು ಗುರುತಿಸಲು ತುಂಬೆ ಮಾಧ್ಯಮವು ಈ ಕುರಿತಂತೆ ಟಿ.ವಿ, ಮುದ್ರಣ ಮಾಧ್ಯಮ, ಡಿಜಿಟಲ್ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಇದು ಕೇವಲ ನಾಮನಿರ್ದೇಶನ ಮಾತ್ರವಲ್ಲ, ಬದಲಾಗಿ ಸಾಧಕರ ಸಾಧನೆ, ಯಶೋಗಾಥೆಗಳನ್ನು ಹಂಚಿಕೊಳ್ಳುವ ವೇದಿಕೆ. ವೈದ್ಯರಿಂದ ಹಿಡಿದು ಆಸ್ಪತ್ರೆಗಳವರೆಗೂ, ಸ್ಟಾರ್ಟಪ್ ಗಳಿಂದ ಹಿಡಿದು ವೈದ್ಯಕೀಯ ಗುಂಪು ಗಳೂ ವಯಕ್ತಿಕವಾಗಿಯೂ ಈ ವೇದಿಕೆಯಲ್ಲಿ ಸಾಧನೆಯನ್ನು ಹಂಚಿಕೊಳ್ಳಲು ಸುವರ್ಣಾವಕಾಶವನ್ನು ಒದಗಿಸಲಾಗಿದೆ.
"ಈ ಪ್ರಶಸ್ತಿಯು ಈ ಭಾಗದಲ್ಲಿನ ಅತಿದೊಡ್ಡ ಆರೋಗ್ಯ ಪ್ರಶಸ್ತಿ ಎಂದೇ ಗುರುತಿಸಲ್ಪಟ್ಟಿದೆ. ಉತ್ತಮ ಆರೋಗ್ಯ ವೃತ್ತಿಪರರಿಗೆ ಮಾನ್ಯತೆ, ವಿಶ್ವಾಸಾರ್ಹತೆಯನ್ನು ಈ ಪ್ರಶಸ್ತಿಯ ವೇದಿಕೆಯು ಗುರುತಿಸಲಿದ್ದು, ಈ ಕ್ಷೇತ್ರದಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವವರಿಗೆ ಸ್ಫೂರ್ತಿ ನೀಡಲಿದೆ," ಎಂದು ತುಂಬೆ ಮಾಧ್ಯಮದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾದ ವಿಗ್ನೇಶ್ ಎಸ್. ಉನದ್ಕತ್ ಹೇಳಿದ್ದಾರೆ.
ನಾಮನಿರ್ದೇಶನ ಮಾಡುವುದು ಹೇಗೆ?
ಈ ಪ್ರಶಸ್ತಿ ಅಭಿಯಾನದಲ್ಲಿ ಪಾಲ್ಗೊಳ್ಳಲು, https://www.healthmagazine.ae/awards/ ಗೆ ಭೇಟಿ ನೀಡಬೇಕು. ಆ ಬಳಿಕ ಸೂಕ್ತ ವಿಭಾಗವನ್ನು ಆಯ್ಕೆ ಮಾಡಬೇಕು. ನಿಮ್ಮ ಸಾಧನೆ, ಆರೋಗ್ಯ ಕ್ಷೇತ್ರದಲ್ಲಿ ನಿಮ್ಮ ಹೆಜ್ಜೆ ಗುರುತುಗಳನ್ನು ದಾಖಲಿಸಿ ನಾಮಿನೇಷನ್ ಅಥವಾ ನಾಮನಿರ್ದೇಶನ ಸಲ್ಲಿಸಿಬೇಕು.
ಆ ಬಳಿಕ ಅನುಭವಿ ತಜ್ಞರ ಸಮಿತಿಯು ಪ್ರಾಮಾಣಿಕವಾಗಿ ಪರಿಶೀಲಿಸಿ, ಅಕ್ಟೋಬರ್ 9ರಂದು ಪ್ರಶಸ್ತಿ ವಿಜೇತರನ್ನು ಘೋಷಿಸಲಿದೆ. ನಾಮನಿರ್ದೇಶ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 20, 2025 ಎಂದು ಪ್ರಕಟನೆ ತಿಳಿಸಿದೆ.