ಗದಗ | ಭಾರೀ ಮಳೆ; ಎರಡು ಮನೆಗಳ ಮೇಲ್ಛಾವಣಿ ಕುಸಿತ

ಗದಗ : ಮಂಗಳವಾರ ರಾತ್ರಿ ಸುರಿದ ಭಾರೀ ಮಳೆಯಿಂದ ಎರಡು ಮನೆಗಳ ಮೇಲ್ಛಾವಣಿ ಕುಸಿದಿದ್ದು, ಸ್ವಲ್ಪದರಲ್ಲೇ ಮನೆಯಲ್ಲಿದ್ದವರು ಪಾರಾದ ಘಟನೆ ಗದಗ ಜಿಲ್ಲೆಯ ಲಕ್ಷೇಶ್ವರ ಪಟ್ಟಣದಲ್ಲಿ ನಡೆದಿದೆ.
ಲಕ್ಷ್ಮೇಶ್ವರ ಪಟ್ಟಣದ 12ನೇ ವಾರ್ಡ್‌ನ ಮಹಾದೇವಪ್ಪ ಗೋಜನೂರು, ಗುರುನಾಥ ಸೊರಟೂರು ಎಂಬುವವರ ಮಣ್ಣಿನ ಮನೆಗಳ ಛಾವಣಿ ಕುಸಿತಗೊಂಡಿದೆ.
ಮಹಾದೇವಪ್ಪ ಗೋಜನೂರು ದಿನಕೂಲಿ ಕೆಲಸಕ್ಕೆ ಹೋಗಿದ್ದರು. ಮಕ್ಕಳು ಸಹ ಶಾಲೆಗೆ ಹೋಗಿದ್ದರು. ಇನ್ನು ಮನೆಯಲ್ಲಿದ್ದ ಪತ್ನಿ ಮನೆಯ ಹೊರಗೆ ಬಂದಿದ್ದ ವೇಳೆ ಏಕಾಏಕಿ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಆದರೆ ಮನೆಯಲ್ಲಿದ್ದ ಗೃಹ ಉಪಯೋಗಿ ವಸ್ತುಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಪುರಸಭೆ ಅಧಿಕಾರಿಗಳು, ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Next Story