ಹುಬ್ಬಳ್ಳಿ | ಉದ್ಯಮಿ ಸಮುಂದರ್ ಸಿಂಗ್ ಮನೆ ಮೇಲೆ ಈಡಿ ದಾಳಿ

ಹುಬ್ಬಳ್ಳಿ : ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್‌ನ ಹವಾಲಾ ಕಿಂಗ್ ಪಿನ್ ಸಮುಂದರ್ ಸಿಂಗ್ ಮನೆ ಮತ್ತು ಅವರ ಸಹೋದರನ ಮನೆಗಳ ಮೇಲೆ ಇಂದು ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ದೇಶಪಾಂಡೆ ನಗರದ ಕಾಮಾಕ್ಷಿ ಅಪಾರ್ಟ್ಮೆಂಟ್ 401, 402ರ ಮನೆಯ ಮೇಲೆ 15 ಜನ ಅಧಿಕಾರಿಗಳ ತಂಡದಿಂದ ಏಕಕಾಲದಲ್ಲಿ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಉದ್ಯಮಿ ಸಮುಂದರ್ ಸಿಂಗ್ ಮನೆ ಮತ್ತು ಅವರ ಸಹೋದರನ ಮನೆಗಳ ಮೇಲೆ ದಾಳಿ ನಡೆಸಿರುವ ಜಾರಿ ನಿರ್ದೇಶನಾಲಯದ (ಈಡಿ) ಅಧಿಕಾರಿಗಳು ದಾಖಲೆಗಳನ್ನು ಶೋಧನೆ ನಡೆಸಿದ್ದಾರೆ.
ಸಮುಂದರ್ ಸಿಂಗ್ ಅವರು ಗೋವಾ, ಶ್ರೀಲಂಕಾ, ದುಬೈನಲ್ಲಿ ಕ್ಯಾಸಿನೊ ಉದ್ಯಮ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
Next Story