ಸುಳ್ಯ: ಅರಂತೋಡು ತೆಕ್ಕಿಲ್ ಮನೆ ನಿವಾಸಿ ತೆಕ್ಕಿಲ್ ಬಾಬಟ ಹಾಜಿ ಅವರ ಪತ್ನಿ, ತೆಕ್ಕಿಲ್ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ ಟಿ.ಎಂ.ಶಹೀದ್ ಅವರ ತಾಯಿ ಆಯಿಷಾ ಹಜ್ಜುಮ್ಮ (70) ಅಲ್ಪಕಾಲದ ಅಸೌಖ್ಯದಿಂದ ಮಂಗಳವಾರ ನಿಧನರಾದರು.
ಮೃತರಿಗೆ ಮೂವರು ಪುತ್ರರು, ಇಬ್ಬರು ಪುತ್ರಿಯರು ಇದ್ದಾರೆ.