ಡಿಜೆ ಬಳಕೆ ನಿಷೇಧಾಜ್ಞೆ ಉಲ್ಲಂಘಿಸಲು ಕರೆ ಆರೋಪ; ಎಂ.ಪಿ.ರೇಣುಕಾಚಾರ್ಯ ವಿರುದ್ದ ಪ್ರಕರಣ ದಾಖಲು

ದಾವಣಗೆರೆ, ಆ.30: ಡಿಜೆ ಬಳಕೆ ವಿಚಾರದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಹಾಗೂ ರಸ್ತೆಯಲ್ಲಿ ವಾಹನ ಸಂಚಾರ ತಡೆದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ ಆರೋಪದಡಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹಾಗೂ ಅವರ ಬೆಂಬಲಿಗರ ವಿರುದ್ಧ ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಗಣೇಶೋತ್ಸವ ಹಾಗೂ ಮೀಲಾದುನ್ನಬಿ ಮುಗಿಯುವವರೆಗೂ ಜಿಲ್ಲೆಯಾದ್ಯಂತ ಡಿಜೆ ಬಳಕೆ ನಿಷೇಧಿಸಿ ಡಿಸಿ ಆದೇಶ ಹೊರಡಿಸಿದ್ದರು. ಆದರೆ ರೇಣುಕಾಚಾರ್ಯ ಸುದ್ದಿಗೋಷ್ಠಿ ನಡೆಸಿ 'ತಾಕತ್ತಿದ್ದರೆ ಪೊಲೀಸರು, ಜಿಲ್ಲಾಡಳಿತ ಡಿಜೆ ಬಳಕೆಯನ್ನು ತಡೆಯಲಿ' ಎಂದು ಸವಾಲು ಹಾಕಿದ್ದರು. ಈ ಕುರಿತು ಪೊಲೀಸರು ಎಂ.ಪಿ.ರೇಣುಕಾಚಾರ್ಯ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story