ಕೈಬರಹದಲ್ಲಿ ಕುರ್‌ಆನ್ ಬರೆದ ಸಾಧಕಿಯರಿಗೆ ಮುಸ್ಲಿಂ ಸೆಂಟ್ರಲ್ ಕಮಿಟಿಯಿಂದ ಸನ್ಮಾನ

ಮಂಗಳೂರು, ಸೆ.19: ಕೈಯಲ್ಲೇ ಸಂಪೂರ್ಣ ಕುರ್‌ಆನ್‌ನ್ನು ಬರೆದು ಸಾಧನೆಗೈದ ಕುಂಬ್ರ ಮರ್ಕಝುಲ್ ಹುದಾ ವುಮನ್ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಸಜ್‌ಲಾ ಹಾಗೂ ಮಿತ್ತ್ ಬೈಲ್ ಕಾಲೇಜು ವಿದ್ಯಾರ್ಥಿನಿ ಫಾತಿಮತ್ ಅಬೀರಾ ಅವರನ್ನು ಮುಸ್ಲಿಮ್ ಸೆಂಟ್ರಲ್ ಕಮಿಟಿಯ ವತಿಯಿಂದ ಮಂಗಳವಾರ ಸನ್ಮಾನಿಸಲಾಯಿತು.
ದಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಅಲ್‌ಹಾಜ್ ಕೆ ಎಸ್ ಮುಹಮ್ಮದ್ ಮಸೂದ್‌ರ ಸೊಸೆ ಗುಲ್ಸನ್ ಫರ್ವಿನ್ ಅವರು ಸಾಧಕಿಯರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಸಭೆಯ ಅಧ್ಯಕ್ಷತೆಯನ್ನು ಅಲ್ ಹಾಜ್ ಕೆ ಎಸ್ ಮುಹಮ್ಮದ್ ಮಸೂದ್ ವಹಿಸಿದ್ದರು.
ಈ ಸಭೆಯಲ್ಲಿ ಉಪಾಧ್ಯಕ್ಷರುಗಳಾದ ಹಾಜಿ ಸಿ ಮಹಮೂದ್, ಹಾಜಿ ಇಬ್ರಾಹೀಂ ಕೋಡಿಜಾಲ್, ಕೆ. ಅಶ್ರಫ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಮೂಸ ಮೊಯ್ದೀನ್, ಕಾರ್ಯದರ್ಶಿಗಳಾದ ಹಾಜಿ ಅಹ್ಮದ್ ಬಾವ ಪಡೀಲ್, ಡಿ.ಎಂ. ಅಸ್ಲಾಂ, ಡಾ. ಮುಹಮ್ಮದ್ ಆರಿಫ್ ಮಸೂದ್, ಸಿ.ಎಂ. ಹನೀಫ್, ಎಂ.ಎ. ಅಶ್ರಫ್, ನ್ಯಾಯವಾದಿ ನೂರುದ್ದೀನ್ ಸಾಲ್ಮರ, ಹಾಜಿ ಬಿ ಅಬೂಬಕರ್, ಹಾಜಿ ರಿಯಾಝುದ್ದೀನ್, ಎನ್.ಕೆ. ಅಬೂಬಕರ್, ಯು.ಬಿ. ಸಲೀಂ, ಅಬ್ದುಲ್ ಖಾದರ್ ವಿಟ್ಲ, ಶಂಸುದ್ದೀನ್ ಎಚ್.ಬಿ.ಟಿ, ಅಬ್ಬಾಸ್ ಉಚ್ಚಿಲ್, ಶಂಸುದ್ದೀನ್ ಬಂದರ್, ಅಬೀದ್ ಜಲಿಹಾಲ್, ಹಾಜಿ ಎಸ್.ಎ. ಖಲೀಲ್ ಅಹ್ಮದ್, ನಾಸೀರ್ ಯಾದ್ಗಾರ್, ರಫೀಕ್ ಕೊಡಾಜೆ, ಶಾಕೀರ್ ಫರಂಗಿಪೇಟೆ,ಮುಹಮ್ಮದ್ ಸಲೀಂ ಮನ್ನತ್, ಅಬ್ದುಲ್ ರಹಿಮಾನ್ ಅಝಾದ್ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.