Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ರೋಂತ್: ಒಂದು ರಾತ್ರಿಯ ಪೊಲೀಸ್ ಗಸ್ತು

ರೋಂತ್: ಒಂದು ರಾತ್ರಿಯ ಪೊಲೀಸ್ ಗಸ್ತು

ಮುಹಮ್ಮದ್ ಶರೀಫ್ ಕಾಡುಮಠಮುಹಮ್ಮದ್ ಶರೀಫ್ ಕಾಡುಮಠ30 July 2025 1:08 PM IST
share
ರೋಂತ್: ಒಂದು ರಾತ್ರಿಯ ಪೊಲೀಸ್ ಗಸ್ತು

ಮಲಯಾಳಂನಲ್ಲಿ ರೋಂತ್ ಎಂದರೆ ಗಸ್ತು ತಿರುಗುವುದು(Night Patrolling) ಎಂದರ್ಥ. ಶಾಹಿ ಕಬೀರ್ ನಿರ್ದೇಶನದ ಎರಡನೇ ಸಿನೆಮಾ ಇದು. ಇದಕ್ಕಿಂತ ಹಿಂದೆ ‘ಇಲ ವೀಝಾ ಪೂಂಚಿರ’ (ಎಲೆ ಬೀಳದ ಹೂವಿನ ಕೊಳ) ಎನ್ನುವ ಸಿನೆಮಾ ಮಾಡಿದ್ದರು. ಇದರ ಕಥೆಯನ್ನು ಕಬೀರ್ ಅವರ ಸಹೋದ್ಯೋಗಿ ಪೊಲೀಸರು ರಚಿಸಿದ್ದರು, ನಿರ್ದೇಶನವಷ್ಟೇ ಕಬೀರ್ ಮಾಡಿದ್ದು. ಜೋಸೆಫ್, ನಾಯಟ್ಟು ಹಾಗೂ ಆಫೀಸರ್ ಆನ್ ಡ್ಯೂಟಿ ಸಿನೆಮಾಗಳಿಗೆ ಕಥೆ ಬರೆದಿರುವ ಅವರು, ಕಥೆ ಹಾಗೂ ನಿರ್ದೇಶನದ ಎರಡೂ ಜವಾಬ್ದಾರಿಯನ್ನು ಹೆಗಲಿಗೇರಿಸಿಕೊಂಡು ಮಾಡಿದ ಮೊದಲ ಸಿನೆಮಾ ರೋಂತ್. ಈ ಎಲ್ಲಾ ಸಿನೆಮಾಗಳೂ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಮೂಡಿಸಿವೆ, ಅವುಗಳಲ್ಲಿ ಕೆಲವು ಟೀಕೆಗೂ ಗುರಿಯಾಗಿವೆ. ಬೆರಳೆಣಿಕೆಯ ಸಿನೆಮಾ ಮಾಡಿದ್ದರೂ, ಕಬೀರ್ ತಮ್ಮ ಪ್ರತಿಭೆಗೆ ಅರ್ಹವಾಗಿ ಈಗಾಗಲೇ ಒಂದು ರಾಷ್ಟ್ರಪ್ರಶಸ್ತಿ, ಎರಡು ರಾಜ್ಯ ಪ್ರಶಸ್ತಿ ಪಡೆದವರು.

ಶಾಹಿ ಕಬೀರ್ ಹದಿಮೂರು ವರ್ಷಗಳ ಪೊಲೀಸ್ ವೃತ್ತಿಗೆ ಕೆಲವು ತಿಂಗಳ ಹಿಂದಷ್ಟೇ ರಾಜೀನಾಮೆ ಕೊಟ್ಟಿದ್ದು. ಅಲ್ಲಿಯವರೆಗೆ ವೃತ್ತಿಯ ಜೊತೆಗೆ ಸಿನೆಮಾದ ಕೆಲಸವನ್ನೂ ನಿಭಾಯಿಸಿಕೊಂಡು ಹೋಗುತ್ತಿದ್ದರು. ಕಬೀರ್ ಸಿನೆಮಾದ ಮೇಲಿನ ಆಸಕ್ತಿಯ ಕಾರಣಕ್ಕೆ, ವೃತ್ತಿಯಲ್ಲಿ ಹೆಚ್ಚಿನ ಒತ್ತಡ ಎದುರಿಸಲು ಆಗದು ಎನ್ನುವ ಕಾರಣಕ್ಕೆ ರಾಜೀನಾಮೆ ಸಲ್ಲಿಸುವವರೆಗೂ ಸಿಪಿಒ ಆಗಿಯೇ ಉಳಿದರು. ಉನ್ನತ ಹುದ್ದೆಗಳಿಗೆ ಪ್ರಯತ್ನ ಮಾಡಲಿಲ್ಲ.

ಕಬೀರ್ ಮಾಡಿರುವ ಎಲ್ಲಾ ಸಿನೆಮಾಗಳೂ ಪೊಲೀಸ್ ಇಲಾಖೆಗೆ ಸಂಬಂಧಿಸಿದವುಗಳೇ ಆಗಿವೆ. ಪೊಲೀಸರಿಗೂ ವೈಯಕ್ತಿಕ ಬದುಕು ಇದೆ, ಅವರಿಗೂ ನೋವು ಸಂಕಟ, ಸಂಕಷ್ಟ ಇರುತ್ತವೆ ಎನ್ನುವ ಅಂಶಗಳನ್ನು ತೆರೆ ಮೇಲೆ ತಂದು, ಮಾನವೀಯ ನೆಲೆಯಲ್ಲಿ ಅವರ ಬದುಕನ್ನು ವಿಶ್ಲೇಷಿಸುವ ಕಥೆಗಳೇ ಹೆಚ್ಚು. ಇದಕ್ಕೂ ಮೊದಲು ‘ತೊಂಡಿಮುದಲುಂ ದೃಕ್ ಸಾಕ್ಷಿಯುಂ’ ಎನ್ನುವ ಬ್ಯೂಟಿಫುಲ್ ಸಿನೆಮಾಗೆ ನಿರ್ದೇಶಕ ದಿಲೀಶ್ ಪೋತನ್ ಜೊತೆಗೆ ಸಹ ನಿರ್ದೇಶಕನಾಗಿ ಚಿತ್ರರಂಗ ಪ್ರವೇಶಿಸಿದವರು ಕಬೀರ್. ಕ್ರೈಂ ಥ್ರಿಲ್ಲರ್ ಸಿನೆಮಾ ಆಗಿರುವುದರಿಂದ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡಿರುವ ಅನುಭವ ತನ್ನ ಸಿನೆಮಾಕ್ಕೆ ಅನುಕೂಲ ಆಗಬಹುದು ಎನ್ನುವ ಉದ್ದೇಶದಿಂದ ದಿಲೀಶ್ ಅವರು ಕಬೀರ್ ಅವರನ್ನು ಕರೆಸಿಕೊಂಡದ್ದು. ಈ ಹಿಂದೆ ಕಬೀರ್ ಸ್ವತಃ ದಿಲೀಶ್ ಅವರಲ್ಲಿ ಸಹನಿರ್ದೇಶಕನಾಗುವ ಅವಕಾಶ ಕೇಳಿದ್ದರು. ವಿಶೇಷ ಎಂದರೆ ನಂತರ ತನ್ನ ಸಿನೆಮಾಗಳಿಗೆ ಕಬೀರ್ ಅದೇ ದಿಲೀಶ್ ಪೋತನ್ ನನ್ನು ಮುಖ್ಯಪಾತ್ರಗಳಲ್ಲಿ ಬಳಸಿಕೊಂಡದ್ದು. ಅಂದಹಾಗೆ ‘ತೊಂಡಿಮುದಲುಂ...’ ನನ್ನ ಫೇವರಿಟ್ ಸಿನೆಮಾಗಳಲ್ಲಿ ಒಂದು. ಅದರಲ್ಲಿ ಫಹದ್ ಫಾಸಿಲ್ ಅಭಿನಯಕ್ಕೆ ಮನಸೋಲದವರಿಲ್ಲ.

ರೋಂತ್ ಸಿನೆಮಾ ರಾತ್ರಿ ಗಸ್ತು ತಿರುಗುವ ಪೊಲೀಸರ ಬದುಕಿನ ಬಗೆಗಿನ ಕಥನ. ಬಹುತೇಕ ಸಿನೆಮಾಗಳಲ್ಲಿ ಪೊಲೀಸರ ಪಾತ್ರಗಳನ್ನು ಬೇರೆಯೇ ರೀತಿ ತೋರಿಸಲಾಗುತ್ತದೆ. ಹೀರೋಗಳಾಗಿ ಆರ್ಭಟಿಸಿ, ಇಲಾಖೆಗೆ ಗೌರವ ತರುವ, ಸಿಂಗಂ ಆಗಿ ಮೀಸೆ ಬಿರಿಯುವ...ಹೀಗೆ. ಆದರೆ ನಿಜವಾದ ಅವರ ಬದುಕಿನ ಚಿತ್ರಣ ಹೇಗಿರುತ್ತದೆ ಎನ್ನುವುದನ್ನು ರೋಂತ್ ಬಹಳ ಚೆನ್ನಾಗಿ, ಸೂಕ್ಷ್ಮ್ಮವಾಗಿ, ವಿವರವಾಗಿ ತಿಳಿಸುತ್ತದೆ. ರೋಂತ್, ಒಂದು ದಿನದೊಳಗೆ ನಡೆಯುವ ಘಟನೆ. ಒಬ್ಬ ಸೀನಿಯರ್ ಪೊಲೀಸ್ ಅಧಿಕಾರಿ ಹಾಗೂ ಆಗಷ್ಟೇ ತರಬೇತಿ ಮುಗಿಸಿಕೊಂಡು ಕೆಲಸಕ್ಕೆ ಸೇರಿದ ಯುವ ಪೊಲೀಸ್ ನಡುವಿನ ಅನುಭವ ವ್ಯತ್ಯಾಸ, ಅವರ ಸಂಭಾಷಣೆ, ಆಲೋಚನಾ ಕ್ರಮ, ದೃಷ್ಟಿಕೋನ, ಘಟನೆಗಳ ಗ್ರಹಿಕೆಯಲ್ಲಿನ ವ್ಯತ್ಯಾಸ ಮನೋಜ್ಞವಾಗಿ ದೃಶ್ಯೀಕರಿಸಲಾಗಿದೆ.

ಸಿನೆಮಾ ಆರಂಭವಾಗುವುದು ಸಣ್ಣ ತಕರಾರಿನೊಂದಿಗೆ. ಅದು ಧರ್ಮದ ಚಿಹ್ನೆಗಳ ವಿಷಯಕ್ಕೆ. ಅವರಿಬ್ಬರು ಗಸ್ತು ತಿರುಗಲು ಪೊಲೀಸ್ ಜೀಪ್ ಹತ್ತಿ ಒಂದು ಅಂಗಡಿಯ ಬಳಿ ಜೀಪ್ ನಿಲ್ಲಿಸುತ್ತಾರೆ. ಎಸ್‌ಐ ಯೋಹನ್ನನ್ ಅಂಗಡಿಗೆ ಹೋಗಿ (ದಿಲೀಶ್ ಪೋತನ್) ಕ್ರಿಸ್ತನ ಶಿಲುಬೆಯ ಹಾಗೆ ಕಾಣುವ ಚಿಹ್ನೆಯಿರುವ ಸಣ್ಣ ಹಾರವನ್ನು ತಂದು ಪೊಲೀಸ್ ಜೀಪ್ ನ ಎದುರಿಗೆ ತೂಗು ಹಾಕುತ್ತಾನೆ. ಅದಕ್ಕೆ ಯುವ ಪೊಲೀಸ್ ದಿನನಾಥ್(ರೋಷನ್ ಮ್ಯಾಥ್ಯೂ) ಆಕ್ಷೇಪ ಎತ್ತಿದಾಗ, ‘ಅದು ನಿರ್ದಿಷ್ಟವಾಗಿ ಶಿಲುಬೆಯ ಚಿಹ್ನೆ ಅಲ್ಲ’ ಎಂದು ಸಮರ್ಥಿಸುವ ಯೋಹನ್ನನ್, ‘ನಿನ್ನ ಕೈಗೆ ಕಟ್ಟಿದ್ದೀಯಲ್ಲ, ಅದು ನಡೆಯುತ್ತಾ?’ ಎಂದು ದಿನನಾಥ್ ನ ಕೈಯ ದಾರದ ಬಗ್ಗೆ ಪ್ರಶ್ನಿಸುತ್ತಾನೆ. ಈ ತಕರಾರು ಅವರಿಬ್ಬರ ದಾರಿಯುದ್ದಕ್ಕೂ ಮೊದಲಾರ್ಧದಲ್ಲಿ ಬೇರೆ ಬೇರೆ ಜಗಳಗಳಿಗೆ ಕಾರಣವಾಗುತ್ತದೆ.

ಚಿತ್ರದಲ್ಲಿ ರೋಷನ್ ಮ್ಯಾಥ್ಯೂ ಎಂದಿನಂತೆ ತಮ್ಮ ಸಹಜ ನಟನೆಯ ಮೂಲಕ ಸೆಳೆಯುತ್ತಾರೆ.

ಯೋಹನ್ನನ್ ಒಮ್ಮೆ ಒಬ್ಬ ಒರಟು ಮನುಷ್ಯನ ಹಾಗೆ ಕಾಣಿಸುತ್ತಾನೆ, ಸ್ವಲ್ಪ ಹೊತ್ತಿನ ಬಳಿಕ ಧರ್ಮದ ಬಗ್ಗೆ ಹೆಚ್ಚು ಒಲವಿರುವವನಂತೆ ಕಾಣುತ್ತಾನೆ ಮತ್ತೊಮ್ಮೆ, ದಿನನಾಥನಲ್ಲಿ ಕಾಲು ಕೆರೆದು ಜಗಳಕ್ಕೆ ನಿಲ್ಲುವವನಂತೆ ಕಾಣುತ್ತಾನೆ. ನಮ್ಮ ನಿರೀಕ್ಷೆಯನ್ನೇ ಕ್ಷಣ ಕ್ಷಣಕ್ಕೆ ಬುಡಮೇಲು ಮಾಡುವ ಪಾತ್ರ ಯೋಹನ್ನನದ್ದು. ಹೀಗೊಂದು ಪಾತ್ರವನ್ನು ಬರಹ ರೂಪದಲ್ಲಿ ವಿವರಿಸುವುದು ಸುಲಭ. ಆದರೆ ಅಭಿನಯದ ವಿಷಯಕ್ಕೆ ಬಂದಾಗ ಅದು ಬಹಳ ಸವಾಲಿನ ಕೆಲಸ. ಅದನ್ನು ದಿಲೀಶ್ ಪೋತನ್ ನಿಭಾಯಿಸಿದ ರೀತಿ ನಿಜಕ್ಕೂ ಬೆರಗು ಮೂಡಿಸುವಂತಿದೆ. ದಿಲೀಶ್ ಒಬ್ಬ ಅಸಾಧಾರಣ ನಟ ಎನ್ನುವುದಕ್ಕೆ ಈ ಸಿನೆಮಾದಲ್ಲಿನ ಅವರ ನಟನೆಯೇ ಸಾಕ್ಷಿ. ಎಷ್ಟು ಲೀಲಾಜಾಲವಾಗಿ ಭಾವ ವ್ಯತ್ಯಾಸಗಳು ಅವರ ಅಭಿನಯದಲ್ಲಿ ಮೂಡಿಬಂದಿದೆ ಎಂದರೆ, ಯೊಹಾನ್ನನ ಬಗ್ಗೆ ಸ್ವತಃ ದಿನನಾಥ್ ಗೆ ಮೂಡುವ ಎಲ್ಲಾ ಅನುಮಾನಗಳು ಪ್ರೇಕ್ಷಕನಲ್ಲಿಯೂ ಮೂಡುತ್ತವೆೆ. ಆತ ಒಬ್ಬ ಕೆಟ್ಟ ವ್ಯಕ್ತಿ ಎಂಬ ಅಭಿಪ್ರಾಯಕ್ಕೆ ಬರುವಷ್ಟರಲ್ಲಿಯೇ ಒಂದು ಮಾನವೀಯ ಸ್ಪರ್ಶದ ಘಟನೆಯಲ್ಲಿ ಆತ ಹೃದಯ ಕರಗುವಂತೆ ವರ್ತಿಸುತ್ತಾನೆ. ಆತ ಮಗುವಿನಂತೆ ಕಾಣುತ್ತಾನೆ.

ಸಿನೆಮಾದ ಮೊದಲಾರ್ಧದಲ್ಲಿ ಯುವತಿಯೊಬ್ಬಳ ನಾಪತ್ತೆ ಪ್ರಕರಣ ಮಾಹಿತಿ ದೊರಕಿ ಇವರಿಬ್ಬರೂ ಆಕೆಯ ಮನೆಗೆ ಹೋಗುವ ದೃಶ್ಯವಿದೆ. ಪ್ರಭಾವಿ ಕುಟುಂಬವದು. ಯುವತಿಯ ತಾಯಿ, ಆಕೆಯ ಕಡೆಯ ಹುಡುಗರಿಗೂ ಪೊಲೀಸ್ ದಿನನಾಥನಿಗೂ ನಡುವೆ ಸಣ್ಣ ಜಗಳವಾಗುತ್ತದೆ. ತಕ್ಷಣ ಜೀಪಿನಿಂದಿಳಿದು ಬಂದ ಯೋಹನ್ನನ್, ಜಗಳ ಬಿಡಿಸಿ ದಿನನಾಥನಿಗೇ ಬೈಯುತ್ತಾನೆ. ದಿನನಾಥ್ ಸಿಟ್ಟಿನಿಂದ ಹೋಗಿ ಜೀಪಿನೊಳಗೆ ಕೂರುತ್ತಾನೆ.

ಅದೇ ಪ್ರಕರಣ ಅಂತ್ಯ ಕಾಣುವಾಗ ಆಕೆಯ ತಾಯಿ ಮತ್ತದೇ ಹುಡುಗರು ಪೊಲೀಸ್ ಠಾಣೆಗೆ ಬರುತ್ತಾರೆ. ಆಗ ಮತ್ತೆ ದಿನನಾಥ್ ಜೊತೆ ಜಗಳಾಡುತ್ತಾರೆ. ಯೋಹನ್ನನ್ ಈ ಬಾರಿ ನೇರವಾಗಿ ಬಂದು ಆಕೆಯ ಕಡೆಯ ಹುಡುಗನನ್ನು ದೂಡಿ, ‘ಪೊಲೀಸರೊಂದಿಗೆ ಆಟ ಆಡ್ಬೇಡ’ ಎಂದು ಎಚ್ಚರಿಕೆ ಕೊಡುತ್ತಾನೆ. ದಿನನಾಥ್ ಸ್ವಲ್ಪ ಅಚ್ಚರಿ ಹಾಗೂ ಸಮಾಧಾನದಿಂದ ಅವನ ಕಡೆ ನೋಡುತ್ತಾನೆ.

ಒಬ್ಬ ಪೊಲೀಸ್ ಎಲಿ,್ಲ ಹೇಗೆ ಮತ್ತು ಏಕೆ, ಯಾವ ರೀತಿ ನಡೆದುಕೊಳ್ಳಬೇಕು ಎನ್ನುವುದನ್ನು ಈ ಎರಡು ದೃಶ್ಯಗಳ ಮೂಲಕ ಯಾವುದೇ ಹೆಚ್ಚುವರಿ ಡೈಲಾಗ್ ಇಲ್ಲದೆ ದಾಟಿಸಲಾಗಿದೆ. ಇಂತಹ ಹಲವು ದೃಶ್ಯಗಳೂ ಇವೆ. ಸಿನೆಮಾ ದೃಶ್ಯ ಮಾಧ್ಯಮ. ಅಲ್ಲಿ ದಾಟಿಸಬೇಕಾದ ವಿಷಯಗಳನ್ನು ದೃಶ್ಯಗಳ ಮೂಲಕವೇ ಬಹುಪಾಲು ದಾಟಿಸಬೇಕು. ಆಗ ಸಂಭಾಷಣೆ, ಮಾತಿನ ಪ್ರಮಾಣ ಕಡಿಮೆಯಾಗಿ ಸಿನೆಮಾ ಅಚ್ಚುಕಟ್ಟು ಮತ್ತು ಬಿಗಿಯಾಗಿ ಮೂಡಿಬರುತ್ತದೆ. ನನ್ನ ಪ್ರಕಾರ ಯೋಹನ್ನನ್ ಪಾತ್ರವನ್ನು ದಿಲೀಶ್ ಪೋತನ್ ನಷ್ಟು ಸಮರ್ಥವಾಗಿ ಮಲಯಾಳಂನಲ್ಲಿ ಬೇರೆ ಯಾವ ನಟನಿಗೂ ನಿರ್ವಹಿಸಲು ಸಾಧ್ಯವಾಗುತ್ತಿರಲಿಲ್ಲ. ಜೋಜು ಜಾರ್ಜ್ ಅಂತಹದೇ ಸಾಮರ್ಥ್ಯದ ನಟನಾದರೂ ಕೂಡ, ದಿಲೀಶ್ ಸನ್ನಿವೇಶಗಳಿಗೆ ತಕ್ಕಂತೆ ತರುವ ಮುಖಭಾವವನ್ನು ಜೋಜುಗೆ ಅಷ್ಟು ಚೆನ್ನಾಗಿ ನಿರ್ವಹಿಸಲಾಗದು. ನೋವು ನುಂಗಿಕೊಂಡು, ಒರಟಾದ ಮನುಷ್ಯ, ಅವನೊಳಗಿನ ಮನುಷ್ಯತ್ವವನ್ನು ಅಡಗಿಸಿಟ್ಟುಕೊಂಡೇ ಅದನ್ನು ಮುಖದ ಭಾವನೆಗಳಲ್ಲಿ ತೋರಿಸದೆಯೇ ವ್ಯಕ್ತಗೊಳಿಸುವ ರೀತಿ ಇದೆಯಲ್ಲ, ಆ ಕಾರಣಕ್ಕೆ ದಿಲೀಶ್ ಈ ಪಾತ್ರಕ್ಕೆ ಹೇಳಿ ಮಾಡಿಸಿದ ನಟ.

ಒಬ್ಬ ಪ್ರತಿಭಾವಂತ ನಿರ್ದೇಶಕನಾಗಿ ಮಾತ್ರ ಉಳಿಯದೆ ತಾನೊಬ್ಬ ಅಸಾಧಾರಣ ನಟ ಕೂಡ ಹೌದು ಎನ್ನುವುದನ್ನು ದಿಲೀಶ್ ಮತ್ತೆ ಮತ್ತೆ ಸಾಬೀತುಪಡಿಸುತ್ತಿದ್ದಾರೆ. ಈ ಚಿತ್ರಕ್ಕೆ ದಿಲೀಶ್ ನಟನೆಗೆ ಯಾವೆಲ್ಲ ಪ್ರಶಸ್ತಿ ಒಲಿಯಬಹುದು ಎನ್ನುವ ಕುತೂಹಲ ಇದೆ.

share
ಮುಹಮ್ಮದ್ ಶರೀಫ್ ಕಾಡುಮಠ
ಮುಹಮ್ಮದ್ ಶರೀಫ್ ಕಾಡುಮಠ
Next Story
X