Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಸಿನೆಮಾತು
  4. ನಗಿಸುತ್ತಾ ಅಳಿಸುವ ‘ಮೇಯಳಗನ್’

ನಗಿಸುತ್ತಾ ಅಳಿಸುವ ‘ಮೇಯಳಗನ್’

ಮುಸಾಫಿರ್ಮುಸಾಫಿರ್28 Oct 2024 11:55 AM IST
share
ನಗಿಸುತ್ತಾ ಅಳಿಸುವ ‘ಮೇಯಳಗನ್’

ಯಾವುದೋ ಮದುವೆ ಸಮಾರಂಭಕ್ಕೆ ನೀವು ಹೋಗುತ್ತೀರಿ. ಇದಕ್ಕಿದ್ದಂತೆಯೇ ಹಿಂದಿನಿಂದ ಅಪರಿಚಿತ ಕೈಗಳೆರಡು ಬಂದು ನಿಮ್ಮ ಕಣ್ಣುಗಳನ್ನು ಮುಚ್ಚಿ ‘‘ನಾನು ಯಾರು ಹೇಳಿ ನೋಡುವ?’’ ಎಂದು ಕೇಳುತ್ತವೆ. ನಿಮಗೂ ಇಕ್ಕಟ್ಟಿನಲ್ಲಿ ಸಿಲುಕಿಕೊಂಡ ಅನುಭವ. ಆಮೇಲೆ ಆ ಧ್ವನಿಯು ತನ್ನ ಗುರುತು ಹಿಡಿಯಲು ಕೆಲವು ಸುಳಿವುಗಳನ್ನು ನೀಡುತ್ತದೆ. ಆದರೂ ನಿಮಗೆ ಆ ವ್ಯಕ್ತಿ ಯಾರು ಎನ್ನುವುದು ನೆನಪಿಗೆ ಬರುವುದಿಲ್ಲ. ಆ ವ್ಯಕ್ತಿಯು ಚಿರಪರಿಚಿತನಂತೆ ನಿಮ್ಮನ್ನು ತಬ್ಬಿಕೊಂಡು, ನಿಮ್ಮ ಹಿಂದೆ ಮುಂದೆ ಸುಳಿಯುತ್ತಿರುತ್ತದೆ. ನಿಮಗೂ ‘‘ನೀವು ಯಾರು ಗೊತ್ತಾಗಲಿಲ್ಲ’ ಎಂದು ಹೇಳಲು ಮುಜುಗರ. ಆದರೆ ಆತನು ನಿಮ್ಮ ಯಾವುದೋ ಜನ್ಮದ ಒಡನಾಡಿಯಂತೆ ನಿಮ್ಮನ್ನು ಹಿಂಬಾಲಿಸುತ್ತಿರುತ್ತಾನೆ. ಮದುವೆ ಸಮಾರಂಭದಲ್ಲಿ ಎಲ್ಲರಿಗೂ ಚಿರಪರಿಚಿತ ಆತ. ‘ಯಾರಲ್ಲಾದರೂ ಆತನ ಪರಿಚಯ ಕೇಳೋಣ’ ಎಂದರೂ ಅವನು ಬೆನ್ನು ಬಿಡುತ್ತಿಲ್ಲ. ಉಣ್ಣುವ ಸಂದರ್ಭದಲ್ಲೂ ಅಂಟಿಕೊಂಡು ಕುಳಿತಿರುತ್ತಾನೆ. ಇದೀಗ ನೆಟ್‌ಫ್ಲಿಕ್ಸ್‌ನಲ್ಲಿ ಸುದ್ದಿ ಮಾಡುತ್ತಿರುವ ತಮಿಳು ಚಿತ್ರ ‘ಮೇಯಳಗನ್’ ಇಂತಹ ಒಬ್ಬ ಅನಾಮಿಕ ವ್ಯಕ್ತಿಯ ಕೈಗೆ ಸಿಕ್ಕಿ ಹಾಕಿಕೊಂಡ ಕಥಾನಾಯಕ, ಆತನ ಜೊತೆಗೆ ಕಳೆಯುವ ಒಂದು ದಿನದಲ್ಲಿ ಮನುಷ್ಯ ಸಂಬಂಧಗಳ ಮೌಲ್ಯಗಳನ್ನು ತನ್ನದಾಗಿಸಿಕೊಳ್ಳುವ ಬಗೆಯನ್ನು ಕಟ್ಟಿಕೊಡುತ್ತದೆ. ಒಂದು ಹಗಲು, ಒಂದು ರಾತ್ರಿಯಲ್ಲಿ ನಡೆಯುವ ಘಟನೆಗಳು ಕಥಾನಾಯಕನ ಬದುಕಿನ ನೋಟವನ್ನು ಏಕಾಏಕಿ ಬದಲಿಸಿ ಬಿಡುತ್ತದೆ.

ಇನ್ನೊಬ್ಬರಿಂದ ವಂಚಿಸಲ್ಪಟ್ಟು ತಾನು ಬಾಳಿ ಬದುಕಿದ ಊರು, ಮನೆಯನ್ನು ತೊರೆಯಬೇಕಾದ ಸ್ಥಿತಿ ಕಥಾನಾಯಕನ ಕುಟುಂಬಕ್ಕೆ ಒದಗುತ್ತದೆ. ಬೇರು ಕತ್ತರಿಸಲ್ಪಟ್ಟ ಗಿಡದಂತೆ, ಮನೆ ಊರನ್ನು ತೊರೆದು ಹೋಗುವ ನಾಯಕ ಮತ್ತು ಆತನ ಪೋಷಕರು ಊರಿನ ನೆನಪನ್ನು ಒಂದು ವೇದನೆಯಂತೆ ಎದೆಯಲ್ಲಿಟ್ಟು ಇಪ್ಪತ್ತು ವರ್ಷಗಳಿಂದ ಮದ್ರಾಸಿನ ನಗರದಲ್ಲಿ ಬದುಕುತ್ತಿರುತ್ತಾರೆ. ಸುಮಾರು 20 ವರ್ಷಗಳ ಬಳಿಕ ಕಥಾನಾಯಕನಿಗೆ ತನ್ನ ಸೋದರ ತಂಗಿಯ ಮದುವೆಗೆ ಅನಿವಾರ್ಯವಾಗಿ ಊರಿಗೆ ಮರಳ ಬೇಕಾದ ಸ್ಥಿತಿ ನಿರ್ಮಾಣವಾಗುತ್ತದೆ. ಒಲ್ಲದ ಮನಸ್ಸಿನಿಂದ ನಾಯಕ ಅರುಳ್ ( ಅರವಿಂದ ಸ್ವಾಮಿ) ಒಂದು ದಿನದ ಮಟ್ಟಿಗೆ ತನ್ನ ಊರಿಗೆ ಹೊರಡುತ್ತಾನೆ. ಊರಿನ ಮದುವೆ ಮಂಟಪದಲ್ಲಿ ಸಂಬಂಧಿಕರ ನಡುವೆ ಏಕಾಏಕಿ ಅಪರಿಚಿತ(ಕಾರ್ತಿ)ನೊಬ್ಬ ಚಿರಪರಿಚಿತನಾಗಿ ಅರುಳ್‌ಗೆ ಜೊತೆಯಾಗುತ್ತಾನೆ. ಈತನ ಜೊತೆಗಿನ ಒಂದು ದಿನದ ಒಡನಾಟ ಊರನ್ನು, ಸಂಬಂಧಿಕರನ್ನು, ಬದುಕನ್ನು ನೋಡುವ ರೀತಿಯನ್ನೇ ಬದಲಿಸಿ ಬಿಡುತ್ತದೆ.

2018ರಲ್ಲಿ ‘96’ ಚಿತ್ರದ ಮೂಲಕ ಮುನ್ನೆಲೆಗೆ ಬಂದ ಸಿ. ಪ್ರೇಮಕುಮಾರ್ ಅವರು ಮೇಯಳಗನ್ ಚಿತ್ರವನ್ನು ನಿರ್ದೇಶಿಸಿದ್ದಾರೆ. ‘96’ ಕೂಡ ಬಾಲ್ಯದ ನೆನಪುಗಳ ಪರಿಮಳದೊಂದಿಗೆ ಅರಳಿ ನಿಂತ ಚಿತ್ರ. 1996ರ ಕಾಲಘಟ್ಟದಲ್ಲಿ ಕಲಿತ ವಿದ್ಯಾರ್ಥಿಗಳು ಮತ್ತೆ ಒಟ್ಟು ಸೇರಿ ಹಳೆಯ ನೆನಪುಗಳನ್ನು ಧ್ಯಾನಿಸುವ ಚಿತ್ರ ಅದು. ಮೇಯಳಗನ್ ಚಿತ್ರ ಊರಿನ ನೆನಪುಗಳನ್ನು ಕಡಿದುಕೊಂಡು ದೂರವಿದ್ದ ಮನಸ್ಸುಗಳನ್ನು ಮತ್ತೆ ಬೆಸೆಯುವ ಪ್ರಯತ್ನವನ್ನು ಮಾಡುತ್ತದೆ. ಅದಕ್ಕಾಗಿಯೇ ಈ ಚಿತ್ರ ಒಂದು ವಿಶಿಷ್ಟ ಪಾತ್ರವನ್ನು ಕಥಾನಾಯಕನಿಗೆ ಮುಖಾಮುಖಿಯಾಗಿಸುತ್ತದೆ. ಆ ಎರಡು ಪಾತ್ರಗಳ ಮೂಲಕ ಕತೆ ಅತ್ಯಂತ ಲವಲವಿಕೆಯಿಂದ ಮುಂದೆ ಸಾಗುತ್ತದೆ. ಒಂದು ರೀತಿಯಲ್ಲಿ ಚಿತ್ರಕ್ಕೆ ಕತೆಯೇ ಇಲ್ಲ. ಅಪರಿಚಿತನ ಮಾತುಗಳು, ತಮಾಷೆ, ಕಿರಿಕಿರಿ, ನಾಯಕನ ಗೊಂದಲ ಇವುಗಳ ಮೂಲಕವೇ ಕತೆ ಮುಂದಕ್ಕೆ ಹೆಜ್ಜೆಯಿಡುತ್ತದೆ. ನಾವು ಬದುಕಿನಲ್ಲಿ ನಮಗೆ ತಿಳಿಯದೆಯೇ ಮಾಡುವ ಸಣ್ಣ ಪುಟ್ಟ ಒಳಿತುಗಳೂ ಇನ್ನೊಬ್ಬರ ಬದುಕಿನ ಮೇಲೆ ಅದೆಷ್ಟು ಬದಲಾವಣೆಗಳನ್ನು ತರಬಲ್ಲದು ಎನ್ನುವ ಅಂಶವನ್ನು ಚಿತ್ರ ಹೇಳುತ್ತದೆ. ನಮ್ಮ ನಡುವೆ ನಾವು ಕೋಟೆ ಕಟ್ಟುತ್ತಾ ಹೊರಗನ್ನು ತಿರಸ್ಕರಿಸಬಹುದಾದರೂ, ಕೋಟೆಯ ಹೊರಗೆ ನಮಗಾಗಿ ಕಾಯುವ ಅದೆಷ್ಟೋ ಮನಸ್ಸುಗಳಿರಬಹುದು ಎನ್ನುವುದನ್ನು ನಾವು ಮರೆಯಬಾರದು ಎನ್ನುವ ಸಂದೇಶವನ್ನು ಮೇಯಳಗನ್ ನಮಗೆ ನೀಡುತ್ತದೆ. ಮದುವೆ ಮಂಟಪದಲ್ಲಿ ಸೋದರಿ ಭುವನಾ ಮತ್ತು ಅರುಳ್ ಭೇಟಿಯೂ ಪ್ರೇಕ್ಷಕರ ಕಣ್ಣನ್ನು ಒದ್ದೆ ಮಾಡುತ್ತದೆೆ.

ಗೋವಿಂದ ವಸಂತ ಅವರ ಸಂಗೀತ, ಮಹೇಂದಿರನ್ ಜಯರಾಜು ಅವರ ಸಿನೆಮಾಟೋಗ್ರಫಿ ಊರಿನ ನೆನಪುಗಳ ಲಯವನ್ನು ಹಿಡಿಯುವಲ್ಲಿ ಯಶಸ್ವಿಯಾಗಿವೆ. ಕಳೆದು ಹೋದ ಊರಿನ ನೆನಪುಗಳಲ್ಲಿ ಹೆಪ್ಪು ಗಟ್ಟಿದ ವಿಷಾದವನ್ನು ಸಂಗೀತ ಪರಿಣಾಮಕಾರಿಯಾಗಿ ಕಟ್ಟಿಕೊಟ್ಟಿದೆ. ಚಿತ್ರವು ಒಂದು ಅನುಭವವಾಗಿ ನಮ್ಮನ್ನು ಕಾಡುತ್ತದೆ. ನಮ್ಮೊಳಗೇ ನಾವು ಕಟ್ಟಿಕೊಂಡ ಹಲವು ಗೋಡೆಗಳನ್ನು ನಮಗರಿವಿಲ್ಲದೆ ಕೆಡವುತ್ತಾ, ಇನ್ನೊಬ್ಬರಿಗೆ ತೆರೆದುಕೊಳ್ಳಲು ನಮ್ಮನ್ನು ಸಿದ್ಧಗೊಳಿಸುತ್ತದೆ. ಒಮ್ಮೆ ನೋಡಲೇ ಬೇಕಾದ ಸದಭಿರುಚಿಯ, ಲವಲವಿಕೆಯ ಚಿತ್ರ ‘ಮೇಯಳಗನ್’.

share
ಮುಸಾಫಿರ್
ಮುಸಾಫಿರ್
Next Story
X