ಚಿತ್ರದುರ್ಗ | ವಾಹನ ಢಿಕ್ಕಿ: ಕರಡಿ ಸಾವು

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕು ರಾಂಪುರ ಸಮೀಪದ ಗ್ರ್ಯಾಂಡ್ ಹೋಟೆಲ್ ಎದುರು ಶನಿವಾರ ಮುಂಜಾವ ಅಪರಿಚಿತ ವಾಹನ ಢೀಕ್ಕಿ ಹೊಡೆದ ಪರಿಣಾಮ ಆರೇಳು ವರ್ಷ ಪ್ರಾಯದ ಗಂಡು ಕರಡಿಯೊಂದು ಸಾವನ್ನಪ್ಪಿದೆ.
ಮೊಳಕಾಲ್ಮೂರು ಗುಡ್ಡ ಪ್ರದೇಶ ಮತ್ತು ಕಾಯ್ದಿಟ್ಟ ಅರಣ್ಯ ಪ್ರದೇಶ ಹೊಂದಿಕೊಂಡಂತೆ ಸುತ್ತಮುತ್ತ ಬೃಹತ್ ಕಲ್ಲು ಬಂಡೆಗಳ ಗುಡ್ಡಗಾಡು ಇರುವುದರಿಂದ ವನ್ಯಜೀವಿಗಳು ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುವುದು ಸಾಮಾನ್ಯವಾಗಿದೆ
ಬೆಂಗಳೂರು -ಬಳ್ಳಾರಿ ಮಾರ್ಗದಲ್ಲಿ ರಾತ್ರಿ ವಾಹನ ಸವಾರರು ಸೂಚನ ಫಲಕಗಳಿದ್ದರೂ ಅತೀ ವೇಗದಲ್ಲಿ ವಾಹನ ಚಲಾಯಿಸುತ್ತಾರೆ. ಅಪರಿಚಿತ ವಾಹನ ಕರಡಿಗೆ ಢಿಕ್ಕಿ ಹೊಡೆದ ಪರಿಣಾಮವಾಗಿ ತೀವ್ರವಾಗಿ ಗಾಯಗೊಂಡಿದ್ದ ಕರಡಿ ಸ್ಥಳದಲ್ಲೇ ಸಾವನ್ನಪ್ಪಿದ್ದು ಪರಿಸರ ಮತ್ತು ವನ್ಯಜೀವಿ ಸಂರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಮಾಲತೇಶ್ ಅರಸ್ ಆತಂಕ ವ್ಯಕ್ತಪಡಿಸಿದ್ದಾರೆ.
Next Story