ಬೆರಕೆ ರಕ್ತದವರು ಸುಮ್ಮನಿರುತ್ತಾರೆ, ಶುದ್ಧ ರಕ್ತದವರಾದ ನಾವು ಸುಮ್ಮನಿರಲ್ಲ: ಪ್ರಿಯಾಂಕ್ ಖರ್ಗೆ ವಿರುದ್ಧ ಸಿ.ಟಿ.ರವಿ ಅವಹೇಳನಕಾರಿ ಹೇಳಿಕೆ

ಚಿಕ್ಕಮಗಳೂರು: ನಮ್ಮ ದೇವರ ಮೆರವಣಿಗೆ ಮೇಲೆ ಕಲ್ಲು ಹೊಡೆದರೆ ಸುಮ್ಮನಿರಬೇಕಾ, ಪೆಟ್ರೋಲ್ ಬಾಂಬ್ ಹಾಕಿದರೇ ಸುಮ್ಮನಿರಬೇಕಾ, ನಮ್ಮ ದೇವರಿಗೆ ಉಗಿದರೆ ಸುಮ್ಮನಿರಬೇಕಾ? ಪಾಕಿಸ್ತಾನ್ ಜಿಂದಾಬಾದ್ ಎಂದು ಕೂಗಿದರೇ ಸುಮ್ಮನಿರಬೇಕಾ?, ಶುದ್ಧ ರಕ್ತದವರು ನನ್ನೊಂದಿಗಿದ್ದಾರೆ. ಬೆರಕೆ ರಕ್ತದವರು ಅವರೊಂದೊಗಿದ್ದಾರೆ. ಬೆರಕೆ ರಕ್ತದವರು ಸುಮ್ಮನಿರುತ್ತಾರೆ, ನಾವು ಸುಮ್ಮನಿರಲ್ಲ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಅವರು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಅವಹೇಳಕಾರಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಮದ್ದೂರು ವಿವಾದ ಸಂಬಂಧ ಸಿ.ಟಿ.ರವಿ ಹೇಳಿಕೆ ಸಂಬಂಧ, ತಮ್ಮ ಮಕ್ಕಳಿಗೆ ತಲೆ ಕಡಿಯಿರಿ, ತೊಡೆ ಮುರಿಯಿರಿ ಎಂದು ಸಿ.ಟಿ.ರವಿ ಅವರು ತಮ್ಮ ಮಕ್ಕಳಿಗೆ ಹೇಳುತ್ತಾರ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ ಸಂಬಂಧ ಸೋಮವಾರ ಸಂಜೆ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡುವ ಭರದಲ್ಲಿ ಪ್ರಿಯಾಂಕ್ ಖರ್ಗೆ ಅವರನ್ನುದ್ದೇಶಿಸಿ ಸಿ.ಟಿ.ರವಿ ಬೆರಕೆ ರಕ್ತದವರು ಎಂಬ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ.
ನಾನು ಅವರ ಪೂರ್ವಾರ್ಧ ತೆಗೆದುಕೊಳ್ಳದೇ ಉತ್ತರಾರ್ಧ ತಗೊಂಡು ಮಾತನಾಡಿದರೆ ಮಾತ್ರ ಅದು ತಪ್ಪಾಗುತ್ತದೆ. ಪೂರ್ವಾರ್ಧ ತಗೊಂಡೇ ಮಾತನಾಡಿದ್ದೇನೆ ಎಂದು ಸಿ.ಟಿ.ರವಿ ಹೇಳಿದರು.