Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಅಂಕಣಗಳು
  4. ಚರ್ಚಾರ್ಹ
  5. ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು...

ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು ಭಾರತೀಯರು

ಶಂಬೂಕಶಂಬೂಕ13 Sept 2025 12:09 PM IST
share
ಸಂಪನ್ನ ಭಾರತದ ಹಸಿದ, ಅಸ್ವಸ್ಥ, ಕಂಗಾಲು ಭಾರತೀಯರು

127 ಬಡ ದೇಶಗಳನ್ನೊಳಗೊಂಡ 2024ರ ‘ಜಾಗತಿಕ ಹಸಿವು ಇಂಡೆಕ್ಸ್’ (GHI)ನಲ್ಲಿ ಮೇಲೆ ಪ್ರಸ್ತಾಪಿಸಲಾದ ಆಫ್ರಿಕಾ ಖಂಡದ ತಾಂಝಾನಿಯಾ 94ನೇ ಸ್ಥಾನದಲ್ಲಿ, ಕೆನ್ಯಾ 100ನೇ, ರುವಾಂಡಾ 101ನೇ ಮತ್ತು ಇಥಿಯೋಪಿಯಾ 102ನೇ ಸ್ಥಾನದಲ್ಲಿದ್ದರೆ ಆ ಪಟ್ಟಿಯಲ್ಲಿ ಭಾರತ ಈ ನಾಲ್ಕೂ ಪರಮ ದರಿದ್ರ ದೇಶಗಳಿಗಿಂತ ಕೆಳಗೆ 105ನೇ ಸ್ಥಾನದಲ್ಲಿ ವಿಜೃಂಭಿಸುತ್ತಿದೆ. ಇದು ಭಾರತೀಯರೆಲ್ಲರೂ ಆಘಾತಕ್ಕೊಳಗಾಗಿ, ಇದಕ್ಕೊಂದು ಪರಿಹಾರವನ್ನು ತಕ್ಷಣ ಕಂಡುಕೊಳ್ಳಬೇಕು ಮತ್ತು ‘ವಿಶ್ವಗುರು’ಗಳಾದ ನಾವು, ಸಂಪನ್ನತೆಯ ಪಟ್ಟಿಯಲ್ಲಿ ಕನಿಷ್ಠ ಮೊದಲ 50 ದೇಶಗಳ ಪಟ್ಟಿಯಲ್ಲಾದರೂ ಜಾಗ ಪಡೆಯಲೇಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿರಬೇಕಿತ್ತು. ಆದರೆ ನಾವು ವರ್ಷದುದ್ದಕ್ಕೂ ಮಸೀದಿ, ಮಂದಿರ, ತಲಾಕ್, ವಕ್ಫ್, ಜಿಹಾದ್, ಹಾಸನದ ವೀಡಿಯೊಗಳು, ಅಂಬಾನಿಯ ಪುತ್ರನ ಆನೆ, ಮೋದಿಯ ವಯಸ್ಸು, ಕ್ರಿಕೆಟ್, ಸಿನೆಮಾ ಇತ್ಯಾದಿಗಳನ್ನು ಚರ್ಚಿಸುವುದರಲ್ಲೇ ಮಗ್ನರಾಗಿರುವುದರಿಂದ ನಮ್ಮ ಸಮಾಜದ ನಿಜಸ್ಥಿತಿಯ ಕುರಿತು ಗಮನ ಹರಿಸುವುದಕ್ಕೆ ನಮಗೆ ಪುರುಸೊತ್ತೇ ಆಗುವುದಿಲ್ಲ.

ಭಾಗ- 2

ಆಫ್ರಿಕನ್ ಖಂಡದ ಕೆಲವು ದೇಶಗಳಲ್ಲಿ ದಾರಿದ್ರ್ಯ ಪರಾಕಾಷ್ಠೆಯಲ್ಲಿದೆ. ಅಲ್ಲಿನ ಮಕ್ಕಳ ದಾರುಣ ಸ್ಥಿತಿಯನ್ನು ಕಂಡವರು ಆ ದೇಶಗಳ ಭವಿಷ್ಯ ಎಷ್ಟು ಕರಾಳವಿರಬಹುದೆಂದು ಊಹಿಸಿಯೇ ಕಳವಳಕ್ಕೀಡಾಗುತ್ತಿದ್ದಾರೆ. ಉದಾ: ರುವಾಂಡಾ, ಕೆನ್ಯಾ, ತಾಂಝಾನಿಯ ಮತ್ತು ಇಥಿಯೋಪಿಯಾ ದೇಶಗಳು.

► 1.43 ಕೋಟಿ ಜನಸಂಖ್ಯೆ ಇರುವ ರುವಾಂಡಾದಲ್ಲಿ ಒಟ್ಟು ಜನಸಂಖ್ಯೆಯ ಶೇ. 31.4 ಪಾಲು ಜನ ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಅನಾರೋಗ್ಯಗಳಿಂದ ನರಳುತ್ತಿದ್ದಾರೆ. ಸೂಕ್ತ ಹಾಗೂ ಪರ್ಯಾಪ್ತ ಆಹಾರ ಅಲಭ್ಯವಾಗಿರುವುದರಿಂದ ಶೇ. 33.1 ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಶೇ. 1.1 ಮಕ್ಕಳ ಬೆಳವಣಿಗೆಯೇ ಸಂಪೂರ್ಣ ನಿಂತುಹೋಗಿದೆ. ಶೇ. 3.8 ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.

► 5.64 ಕೋಟಿ ಜನಸಂಖ್ಯೆ ಇರುವ ಕೆನ್ಯಾದಲ್ಲಿ ಒಟ್ಟು ಜನಸಂಖ್ಯೆಯ ಶೇ. 34.5 ಪಾಲು ಜನ ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಅನಾರೋಗ್ಯಗಳಿಂದ ನರಳುತ್ತಿದ್ದಾರೆ. ಸೂಕ್ತ ಹಾಗೂ ಪರ್ಯಾಪ್ತ ಆಹಾರ ಅಲಭ್ಯವಾಗಿರುವುದರಿಂದ ಶೇ. 17.6 ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಶೇ. 4.5 ಮಕ್ಕಳ ಬೆಳವಣಿಗೆಯೇ ಸಂಪೂರ್ಣ ನಿಂತುಹೋಗಿದೆ. ಶೇ. 4.1 ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.

► 6.86 ಕೋಟಿ ಜನಸಂಖ್ಯೆ ಇರುವ ತಾಂಝಾನಿಯಾದಲ್ಲಿ ಒಟ್ಟು ಜನಸಂಖ್ಯೆಯ ಶೇ. 23.8 ಪಾಲು ಜನ ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಅನಾರೋಗ್ಯಗಳಿಂದ ನರಳುತ್ತಿದ್ದಾರೆ. ಸೂಕ್ತ ಹಾಗೂ ಪರ್ಯಾಪ್ತ ಆಹಾರ ಅಲಭ್ಯವಾಗಿರುವುದರಿಂದ ಶೇ. 30.0 ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಶೇ. 3.1 ಮಕ್ಕಳ ಬೆಳವಣಿಗೆಯೇ ಸಂಪೂರ್ಣ ನಿಂತುಹೋಗಿದೆ. ಶೇ. 4.1 ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.

► 13.21 ಕೋಟಿ ಜನಸಂಖ್ಯೆ ಇರುವ ಇಥಿಯೋಪಿಯಾದಲ್ಲಿ ಒಟ್ಟು ಜನಸಂಖ್ಯೆಯ ಶೇ. 22.2 ಪಾಲು ಜನ ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಅನಾರೋಗ್ಯಗಳಿಂದ ನರಳುತ್ತಿದ್ದಾರೆ. ಸೂಕ್ತ ಹಾಗೂ ಪರ್ಯಾಪ್ತ ಆಹಾರ ಅಲಭ್ಯವಾಗಿರುವುದರಿಂದ ಶೇ. 36.8 ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ. ಶೇ. 6.8 ಮಕ್ಕಳ ಬೆಳವಣಿಗೆಯೇ ಸಂಪೂರ್ಣ ನಿಂತುಹೋಗಿದೆ. ಶೇ. 4.6 ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.

ಆಫ್ರಿಕಾದ ಆ ಕಡು ಬಡದೇಶಗಳ ದಟ್ಟ ದಾರಿದ್ರ್ಯದ ಈ ದಾರುಣ ಸ್ಥಿತಿ ಕಂಡು ನಮ್ಮಲ್ಲಿ ಸಹತಾಪ ಉಕ್ಕುವುದು ಸಹಜ. ಏಕೆಂದರೆ ನಮ್ಮದು ಸಂಪನ್ನ ದೇಶ. ನಮ್ಮ ಪ್ರಧಾನಮಂತ್ರಿಯವರು ಪದೇ ಪದೇ ಘೋಷಿಸಿರುವಂತೆ, ಆರ್ಥಿಕವಾಗಿ ಜಗತ್ತಿನಲ್ಲೇ ಅತ್ಯಂತ ಕ್ಷಿಪ್ರ ಪ್ರಗತಿ ಸಾಧಿಸುತ್ತಿರುವ ನಮ್ಮ ದೇಶವು ಈಗಾಗಲೇ ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿದ್ದು ಶೀಘ್ರವೇ ನಾವು ಜಗತ್ತಿನ ಮೂರನೆಯ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದ್ದೇವೆ. ಜಗತ್ತಿನ ನಾಲ್ಕನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯುವುದೆಂದರೆ ಅದು ತಮಾಷೆಯ ವಿಷಯವಲ್ಲ. ಜಗತ್ತಿನ 10 ಅತಿದೊಡ್ಡ ಆರ್ಥಿಕ ಶಕ್ತಿಗಳ ಪಟ್ಟಿಯಲ್ಲಿ ಸದ್ಯ ನಾವು ಅಮೆರಿಕ, ಚೀನಾ ಮತ್ತು ಜರ್ಮನಿಯ ಬಳಿಕ 4ನೇ ಸ್ಥಾನದಲ್ಲಿ ನಿಂತಿದ್ದೇವೆ. ಜಪಾನ್, ಬ್ರಿಟನ್, ಫ್ರಾನ್ಸ್, ಇಟಲಿ, ಕೆನಡಾ ಮತ್ತು ಬ್ರೆಝಿಲ್ ನಂತಹ ಖ್ಯಾತ ದೇಶಗಳು ನಮ್ಮ ನಂತರದ ಸ್ಥಾನದಲ್ಲಿವೆ. ಇದನ್ನು ಕಂಡು ನಮಗೆ ಏಕಕಾಲದಲ್ಲಿ ಹರ್ಷ, ಸಂಭ್ರಮ, ರೋಮಾಂಚನ, ಪುಳಕ ಇತ್ಯಾದಿ ಹಲವು ಬಗೆಯ ಅನುಭವಗಳಾಗಿ ನಾವು ದೀರ್ಘ ಕಾಲಕ್ಕಾಗಿ ಮೈಮರೆತು ಬಿಡುವುದಕ್ಕೆ ಕಾರಣವಾಗುತ್ತದೆ. ಮೈಮರೆತ ಮೇಲೆ ಸುತ್ತಮುತ್ತಲ ಕಹಿ ಸತ್ಯಗಳನ್ನು ಗುರುತಿಸುವ, ಪ್ರಶ್ನೆ ಕೇಳುವ, ಪ್ರತಿಭಟಿಸುವ ಮತ್ತು ಹಕ್ಕು, ಅಧಿಕಾರಗಳಿಗಾಗಿ ಆಗ್ರಹಿಸುವ ಸಾಮರ್ಥ್ಯ ಎಲ್ಲಿ ಉಳಿದಿರುತ್ತದೆ?

‘ನಾಲ್ಕನೇ ಅತಿದೊಡ್ಡ ಆರ್ಥಿಕತೆ’ ಎಂಬ ಅಮಲಿನಿಂದ ಹೊರಬರಲು ಬಯಸುವವರು ಗಣಿತಕ್ಕಿಂತ ಹೆಚ್ಚಾಗಿ ನೆಲಮಟ್ಟಕ್ಕೆ ಸಂಬಂಧಿಸಿದ ಕೆಲವು ವಾಸ್ತವಗಳತ್ತ ಗಮನಹರಿಸಬೇಕಾಗುತ್ತದೆ. ಉದಾ:

► ಒಟ್ಟು ಜಿಡಿಪಿಯ ಆಧಾರದಲ್ಲಿ ಮಾಡಲಾದ ಪ್ರಸ್ತುತ 10 ಶಕ್ತಿಶಾಲಿ ದೇಶಗಳ ಪಟ್ಟಿಯಲ್ಲೂ ಚೀನಾದ ರಾಷ್ಟ್ರೀಯ ಜಿಡಿಪಿ ನಮಗಿಂತ ಸುಮಾರು ನಾಲ್ಕು ಪಟ್ಟು ಮತ್ತು ಅಮೆರಿಕದ ರಾಷ್ಟ್ರೀಯ ಜಿಡಿಪಿ ನಮಗಿಂತ ಕನಿಷ್ಠ ಏಳು ಪಟ್ಟು ಅಧಿಕವಿದೆ. ಜರ್ಮನಿಯದ್ದು ನಮಗಿಂತ ಸ್ವಲ್ಪ ಹೆಚ್ಚು ಆದರೆ ನಮಗೆ ಹತ್ತಿರವೇ ಇದೆ. ಜಪಾನ್‌ನ ರಾಷ್ಟ್ರೀಯ ಜಿಡಿಪಿ ನಮಗೆ ಸಮಾನವಾಗಿದೆ.

► ಈ ಕಾರಣಕ್ಕಾಗಿ, ನಾವು ಜಪಾನ್‌ನಷ್ಟು ಸಂಪನ್ನರಾಗಿದ್ದೇ ವೆಂದು ಬೀಗುವುದಕ್ಕೂ ಅವಕಾಶವಿಲ್ಲ. ಏಕೆಂದರೆ, ಅದೇ ಪಟ್ಟಿಯಲ್ಲಿರುವ, ಎಲ್ಲ 10 ದೇಶಗಳ ಪ್ರಜೆಗಳ ಸಂಖ್ಯೆಯನ್ನಾಧರಿಸಿ ನೀಡಲಾಗಿರುವ ‘ತಲಾ ಜಿಡಿಪಿ’ಯನ್ನು ನೋಡಿದರೆ, ಅದು ಜಪಾನ್‌ನಲ್ಲಿ ನಮಗಿಂತ 11 ಪಟ್ಟು, ಚೀನಾದಲ್ಲಿ 4 ಪಟ್ಟು, ಜರ್ಮನಿಯಲ್ಲಿ 18 ಪಟ್ಟು ಮತ್ತು ಅಮೆರಿಕದಲ್ಲಿ ನಮಗಿಂತ ಸುಮಾರು 30 ಪಟ್ಟು ಅಧಿಕವಿದೆ.

► ನಾವೀಗ, ಪ್ರಸ್ತುತ 10 ಶಕ್ತಿಶಾಲಿ ದೇಶಗಳ ಪಟ್ಟಿಯನ್ನು ಒತ್ತಟ್ಟಿಗಿಟ್ಟು 192 ದೇಶಗಳಿರುವ ಜಾಗತಿಕ ‘ತಲಾ ಜಿಡಿಪಿ’ (Per Capita GDP) ಪಟ್ಟಿಯನ್ನು ನೋಡಿದರೆ ಸಂಪನ್ನತೆಯ ನಮ್ಮ ಭ್ರಮೆ ನುಚ್ಚುನೂರಾಗಿ ಬಿಡುತ್ತದೆ. 2,937 ಡಾಲರ್ ತಲಾ ಜಿಡಿಪಿ ಇರುವ ನಾವು ಆ ಪಟ್ಟಿಯಲ್ಲಿ ತುಂಬಾ ಆಳದಲ್ಲಿ ಅಂದರೆ 140ನೇ ಸ್ಥಾನದಲ್ಲಿದ್ದೇವೆ! ಆದ್ದರಿಂದಲೇ ನಮ್ಮ ನಾಯಕರು ಜಾಗತಿಕ ವೇದಿಕೆಗಳಲ್ಲಿ ಮತ್ತು ಹೆಚ್ಚಿನ ಸ್ವದೇಶಿ ವೇದಿಕೆಗಳಲ್ಲೂ ನಮ್ಮ ಒಟ್ಟು ರಾಷ್ಟ್ರೀಯ ಜಿಡಿಪಿಯನ್ನು ಪ್ರಸ್ತಾಪಿಸುತ್ತಾರೆಯೇ ಹೊರತು ತಲಾ ಜಿಡಿಪಿಯ ಹೆಸರನ್ನೇ ಎತ್ತುವುದಿಲ್ಲ.

► ಕೆನ್ಯಾ, ತಾಂಝಾನಿಯಾ, ಇಥಿಯೋಪಿಯಾ ಮತ್ತು ರುವಾಂಡಾ ಎಂಬ ನಾವು ಮೇಲೆ ಪ್ರಸ್ತಾಪಿಸಿದ ಆಫ್ರಿಕಾ ಖಂಡದ ನಾಲ್ಕು ದಟ್ಟ ದರಿದ್ರ ದೇಶಗಳ ತಲಾ ಜಿಡಿಪಿ ಕೂಡಾ ನಮ್ಮ ದೇಶಕ್ಕಿಂತ ಅಧಿಕವಿದೆ. ಆ ಪೈಕಿ ಕೆನ್ಯಾ ದೇಶದ ತಲಾ ಜಿಡಿಪಿಯಂತೂ ನಮಗೆ ಹೋಲಿಸಿದರೆ ದುಪ್ಪಟ್ಟಿಗಿಂತಲೂ ಅಧಿಕವಿದೆ!

► ನಮ್ಮ ಸಂಪನ್ನತೆಯ ಬಗ್ಗೆ ಕೊಚ್ಚಿಕೊಳ್ಳುವುದಕ್ಕಾಗಿ ಆಫ್ರಿಕನ್ ಖಂಡದ ದಾರಿದ್ರ್ಯವನ್ನು ನೋಡುವವರಿಗಾಗಿ, ಆಫ್ರಿಕನ್ ಖಂಡದ 54 ದೇಶಗಳ ಜಿಡಿಪಿ ಹಾಗೂ ತಲಾ ಜಿಡಿಪಿಯ ಪಟ್ಟಿ ಲಭ್ಯವಿದೆ. ಅಲ್ಲಿ ಕಾಣಲು ಸಿಗುವ ಹೃದಯವಿದ್ರಾವಕ ಅಂಶವೇನೆಂದರೆ ಆ ಕಂಗಾಲು ಖಂಡದ 54 ದೇಶಗಳ ಪೈಕಿ 39 ದೇಶಗಳ ‘ತಲಾ ಡಿಜಿಪಿ’ ಭಾರತಕ್ಕಿಂತ ಅಧಿಕವಿದೆ!

ನಾವಿನ್ನು ನಮ್ಮದೇ ದೇಶದ 2,937 ಡಾಲರ್ ‘ತಲಾ ಜಿಡಿಪಿ’ಯ ವಾಸ್ತವವನ್ನು ಕಣ್ಣುತೆರೆದು ನೋಡಿದರೆ ನಮಗೆ ಮತ್ತೆ ಒಂದು ದೊಡ್ಡ ಆಘಾತ ಕಾದಿದೆ. ಕೆಲವರು ಇದನ್ನು ಭಾರತದ ಪ್ರತಿಯೊಬ್ಬ ಸರಾಸರಿ ನಾಗರಿಕನ ವಾರ್ಷಿಕ ಆದಾಯ ಎಂದು ನಂಬಿ ಬಿಡುವುದುಂಟು. ಭಾರತದ ಒಬ್ಬ ಸರಾಸರಿ ನಾಗರಿಕನಿಗೆ ವಾರ್ಷಿಕ 2,937 ಡಾಲರ್ (ಸುಮಾರು ರೂ. 2.6 ಲಕ್ಷ, ಅಂದರೆ ಮಾಸಿಕ ಸುಮಾರು 21 ಸಾವಿರ ರೂಪಾಯಿ) ಆದಾಯ ಇದೆಯೇ?

ನಿಜವಾಗಿ ನಮ್ಮಲ್ಲಿ ಆದಾಯದ ಹಲವಾರು ಶ್ರೇಣಿಗಳಿವೆ. ಉದಾ:

► ಭಾರತದಲ್ಲಿ ತಳಮಟ್ಟದ ಶೇ. 50 ಜನರ ವಾರ್ಷಿಕ ಆದಾಯ - ಸುಮಾರು ರೂ. 71,163 (ಮಾಸಿಕ 6 ಸಾವಿರ ರೂ.)

► ದೇಶದಲ್ಲಿ ಶೇ. 40ರಷ್ಟಿರುವ ಕೆಳ ಮಧ್ಯಮ ವರ್ಗದವರ ತಲಾ ವಾರ್ಷಿಕ ಆದಾಯ - ಸುಮಾರು ರೂ. 1.65 ಲಕ್ಷ (ಮಾಸಿಕ 13,750 ರೂ.)

► ದೇಶದಲ್ಲಿ ಶೇ. 10ರಷ್ಟಿರುವ ಮೇಲ್ ಮಧ್ಯಮ ವರ್ಗದವರ ತಲಾ ವಾರ್ಷಿಕ ಆದಾಯ - ಸುಮಾರು ರೂ. 13.5 ಲಕ್ಷ (ಮಾಸಿಕ 1,12,500 ರೂ.)

► ದೇಶದಲ್ಲಿ ಶೇ. 01ರಷ್ಟಿರುವ ಸಾಮಾನ್ಯ ಸಂಪನ್ನ ವರ್ಗದವರ ಕನಿಷ್ಠ ತಲಾ ವಾರ್ಷಿಕ ಆದಾಯ - ಸುಮಾರು 53 ಲಕ್ಷ ರೂ. (ಮಾಸಿಕ ಸುಮಾರು 4,42,000 ರೂ.)

► ದೇಶದಲ್ಲಿ ಶೇ. 0.1ರಷ್ಟಿರುವ ಶ್ರೀಮಂತ ವರ್ಗದವರ ಕನಿಷ್ಠ ತಲಾ ವಾರ್ಷಿಕ ಆದಾಯ - ಸುಮಾರು 2.25 ಕೋಟಿ ರೂ. (ಮಾಸಿಕ 18,75,000 ರೂ.)

► ದೇಶದಲ್ಲಿ ಶೇ. 0.01ರಷ್ಟಿರುವ ದೊಡ್ಡ ಶ್ರೀಮಂತರ ಕನಿಷ್ಠ ತಲಾ ವಾರ್ಷಿಕ ಆದಾಯ ಸುಮಾರು 10 ಕೋಟಿ ರೂ. (ಮಾಸಿಕ 83.33 ಲಕ್ಷ ರೂ.)

► ದೇಶದಲ್ಲಿ ಸುಮಾರು 10 ಸಾವಿರದಷ್ಟಿರುವ ಪರಮ ಶ್ರೀಮಂತರ ಒಂದು ವರ್ಗದ ಕನಿಷ್ಠ ತಲಾ ವಾರ್ಷಿಕ ಆದಾಯ ಸುಮಾರು 50 ಕೋಟಿ ರೂ. (ಮಾಸಿಕ 4.17 ಕೋಟಿ ರೂ.)

► ದೇಶದಲ್ಲಿ 2022ರಲ್ಲಿ ಶತಕೋಟಿ ಡಾಲರ್ (ರೂ. 8,300 ಕೋಟಿ) ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಸಂಪತ್ತಿರುವ 162 ಮಂದಿ ಇದ್ದರು.

ಅಂದರೆ, 2.6 ಲಕ್ಷ ರೂ. ‘ತಲಾ ಜಿಡಿಪಿ’ ಎಂಬ ಮಾಯಾಜಾಲವು ನಮ್ಮ ದೇಶದ ಶೇ. 90 ಜನರಿಗೆ ಅನ್ವಯವಾಗುವುದೇ ಇಲ್ಲ. ಆ ಶೇ. 90 ಭಾರತೀಯರ ವಾರ್ಷಿಕ ಆದಾಯವು ಸೋ ಕಾಲ್ಡ್ ‘ತಲಾ ಜಿಡಿಪಿ’ಗಿಂತ ಬಹಳಷ್ಟು ಕೆಳಮಟ್ಟದಲ್ಲಿದೆ.

ದಾರಿದ್ರ್ಯ ಖಂಡಿತ ಅಪರಾಧವಾಗಲಿ ಲಜ್ಜಾರ್ಹವಾಗಲಿ ಅಲ್ಲ. ಆದರೆ ದಾರಿದ್ರ್ಯವನ್ನು ಒಪ್ಪಿಕೊಳ್ಳದೆ ಇರುವುದು, ದಟ್ಟ ದಾರಿದ್ರ್ಯದಲ್ಲಿದ್ದರೂ ಅದರ ಪ್ರಜ್ಞೆ ಇಲ್ಲದಿರುವುದು, ನಮ್ಮನ್ನು ದಾರಿದ್ರ್ಯಕ್ಕೆ ತಳ್ಳಿದವರು ಮತ್ತು ತಳ್ಳುತ್ತಿರುವವರು ಯಾರು ಎಂಬ ಅರಿವು ಇಲ್ಲದಿರುವುದು, ದಾರಿದ್ರ್ಯದಲ್ಲಿರುವಾಗಲೇ ಯಾರದೋ ಮಂತ್ರಮೋಡಿಗೊಳಗಾಗಿ ನಾವು ಸಂಪನ್ನರೆಂಬ ಭ್ರಮೆಯಲ್ಲಿ ಬೀಗುವುದು ಮತ್ತು ಒಳಗೆ ದಿವಾಳಿಯಾಗಿದ್ದು ಹೊರಗೆ ಸಂಪನ್ನರಂತೆ ನಟಿಸುವುದು - ಇವೆಲ್ಲಾ ಖಂಡಿತ ಲಜ್ಜಾಸ್ಪದ ಸ್ಥಿತಿಗಳು. ನಮ್ಮನ್ನು ಆಳುವವರು ನಮ್ಮನ್ನು ಇಟ್ಟಿರುವುದು ಮತ್ತು ಸದಾಕಾಲ ಇಡಬಯಸುವುದು ಇದೇ ಉನ್ಮಾದದ ಸ್ಥಿತಿಯಲ್ಲಿ.

ನಿಜವಾಗಿ ಬಡ ಆಫ್ರಿಕಾ ಖಂಡದ ದೇಶಗಳ ಸ್ಥಿತಿಯನ್ನು ಕಂಡು ನಾವು ಸಮಾಧಾನ ಪಟ್ಟುಕೊಳ್ಳುವುದಕ್ಕೆ ಯಾವ ಸಮರ್ಥನೆಯೂ ಇಲ್ಲ. ಏಕೆಂದರೆ ಅಲ್ಲಿನ ಹೆಚ್ಚಿನ ದೇಶಗಳ ಸ್ಥಿತಿ ‘ವಿಶ್ವಗುರು’ಗಳಾದ ನಮಗಿಂತ ಉತ್ತಮವಿದೆ. 127 ಬಡ ದೇಶಗಳನ್ನೊಳಗೊಂಡ 2024ರ ‘ಜಾಗತಿಕ ಹಸಿವು ಇಂಡೆಕ್ಸ್’ (GHI)ನಲ್ಲಿ ಮೇಲೆ ಪ್ರಸ್ತಾಪಿಸಲಾದ ಆಫ್ರಿಕಾ ಖಂಡದ ತಾಂಝಾನಿಯಾ 94ನೇ ಸ್ಥಾನದಲ್ಲಿ, ಕೆನ್ಯಾ 100ನೇ, ರುವಾಂಡಾ 101ನೇ ಮತ್ತು ಇಥಿಯೋಪಿಯಾ 102ನೇ ಸ್ಥಾನದಲ್ಲಿದ್ದರೆ ಆ ಪಟ್ಟಿಯಲ್ಲಿ ಭಾರತ ಈ ನಾಲ್ಕೂ ಪರಮ ದರಿದ್ರ ದೇಶಗಳಿಗಿಂತ ಕೆಳಗೆ 105ನೇ ಸ್ಥಾನದಲ್ಲಿ ವಿಜೃಂಭಿಸುತ್ತಿದೆ. ಇದು ಭಾರತೀಯರೆಲ್ಲರೂ ಆಘಾತಕ್ಕೊಳಗಾಗಿ, ಇದಕ್ಕೊಂದು ಪರಿಹಾರವನ್ನು ತಕ್ಷಣ ಕಂಡುಕೊಳ್ಳಬೇಕು ಮತ್ತು ‘ವಿಶ್ವಗುರು’ಗಳಾದ ನಾವು, ಸಂಪನ್ನತೆಯ ಪಟ್ಟಿಯಲ್ಲಿ ಕನಿಷ್ಠ ಮೊದಲ 50 ದೇಶಗಳ ಪಟ್ಟಿಯಲ್ಲಾದರೂ ಜಾಗ ಪಡೆಯಲೇಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸುತ್ತಿರಬೇಕಿತ್ತು. ಆದರೆ ನಾವು ವರ್ಷದುದ್ದಕ್ಕೂ ಮಸೀದಿ, ಮಂದಿರ, ತಲಾಕ್, ವಕ್ಫ್, ಜಿಹಾದ್, ಹಾಸನದ ವೀಡಿಯೊಗಳು, ಅಂಬಾನಿಯ ಪುತ್ರನ ಆನೆ, ಮೋದಿಯ ವಯಸ್ಸು, ಕ್ರಿಕೆಟ್, ಸಿನೆಮಾ ಇತ್ಯಾದಿಗಳನ್ನು ಚರ್ಚಿಸುವುದರಲ್ಲೇ ಮಗ್ನರಾಗಿರುವುದರಿಂದ ನಮ್ಮ ಸಮಾಜದ ನಿಜಸ್ಥಿತಿಯ ಕುರಿತು ಗಮನ ಹರಿಸುವುದಕ್ಕೆ ನಮಗೆ ಪುರುಸೊತ್ತೇ ಆಗುವುದಿಲ್ಲ.

ಭಾರತವೆಂದರೆ 145 ಕೋಟಿ ಜನಸಂಖ್ಯೆ ಇರುವ ದೇಶ. ಇಲ್ಲಿ ಕೇವಲ ಶೇ. 1 ಜನ ಅಂದರೂ ರುವಾಂಡಾ ಎಂಬ ಒಂದು ದೇಶದ ಒಟ್ಟು ಜನಸಂಖ್ಯೆಗಿಂತ ಅಧಿಕವಾಗಿ ಬಿಡುತ್ತದೆ. ಈ ದೊಡ್ಡ ದೇಶದೊಳಗಿನ ಕೆಲವು ಕಹಿ ಸತ್ಯಗಳ ಒಂದು ಇಣುಕು ನೋಟ ಇಲ್ಲಿದೆ:

► ಭಾರತದಲ್ಲಿ ಒಟ್ಟು ಜನಸಂಖ್ಯೆಯ ಶೇ. 13.7 ಪಾಲು (19.87 ಕೋಟಿ) ಜನ ಪೋಷಕಾಂಶದ ಕೊರತೆಯಿಂದಾಗಿ ವಿವಿಧ ಬಗೆಯ ಅನಾರೋಗ್ಯಗಳಿಂದ ನರಳುತ್ತಿದ್ದಾರೆ.

► ಸೂಕ್ತ ಹಾಗೂ ಪರ್ಯಾಪ್ತ ಆಹಾರ ಅಲಭ್ಯವಾಗಿರುವುದರಿಂದ ಭಾರತದ ಶೇ. 35.5 (51.48 ಕೋಟಿ) ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಕುಂಠಿತವಾಗಿದೆ.

► ಭಾರತದಲ್ಲಿ ಶೇ. 18.7 (27.12 ಕೋಟಿ) ಮಕ್ಕಳ ಬೆಳವಣಿಗೆಯೇ ಸಂಪೂರ್ಣ ನಿಂತುಹೋಗಿದೆ.

► ಶೇ. 2.9 (4.21ಕೋಟಿ) ಭಾರತೀಯ ಮಕ್ಕಳು ತಮ್ಮ ಐದನೇ ಜನ್ಮದಿನಕ್ಕೆ ಮುನ್ನವೇ ಸಾವನ್ನಪ್ಪುತ್ತಿದ್ದಾರೆ.

ಅಂದರೆ ನಮ್ಮ ದಿವ್ಯ, ಭವ್ಯ ದೇಶದಲ್ಲಿ ದಾರಿದ್ರ್ಯ ಸಂಬಂಧಿ ಕಾರಣಗಳಿಂದಾಗಿ, ತಮ್ಮ ಅಸ್ತಿತ್ವಕ್ಕೇ ಅಪಾಯವನ್ನು ಎದುರಿಸುತ್ತಿರುವ ಸಂತ್ರಸ್ತರ ಸಂಖ್ಯೆ, ಆ ನಾಲ್ಕು ಕಡುಬಡ ದೇಶಗಳ ಒಟ್ಟು ಜನಸಂಖ್ಯೆಗಿಂತ ಹಲವು ಪಟ್ಟು ಅಧಿಕವಿದೆ. ಈ ಕುರಿತು ಅಂತರ್‌ರಾಷ್ಟ್ರೀಯ ಸಂಸ್ಥೆಗಳು ಪ್ರಕಟಿಸುವ ಸಮೀಕ್ಷೆ, ಅಧ್ಯಯನಗಳ ವರದಿ ಇತ್ಯಾದಿಗಳನ್ನು ನಾವು, ಭಾರತದ ಪವಿತ್ರ ಹೆಸರಿಗೆ ಕಳಂಕ ಹಚ್ಚಲು ಹೊರಟಿರುವ ಕೆಲವು ಶತ್ರು ಶಕ್ತಿಗಳ ಸಂಚುಗಳೆಂದು ಕಡೆಗಣಿಸಬಹುದು. ಆದರೆ ನಮ್ಮ ಕುರಿತು ಸ್ವತಃ ನಾವೇ ಪ್ರಕಟಿಸಿದ, ಅಧಿಕೃತ ವರದಿಗಳು ಏನನ್ನುತ್ತವೆ?

ಇದೇ ವರ್ಷ ಎಪ್ರಿಲ್‌ನಲ್ಲಿ ನಮ್ಮದೇ ಕೇಂದ್ರ ಸರಕಾರದ ವಾರ್ತಾ ಇಲಾಖೆಯವರು ಪ್ರಕಟಿಸಿದ ಒಂದು ವರದಿಯಲ್ಲಿ, 5ನೇ ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-5) ವರದಿಯ ಆಧಾರದಲ್ಲಿ ಈ ಕೆಳಗಿನ ಆಘಾತಕಾರಿ ಮಾಹಿತಿಗಳನ್ನು ನೀಡಲಾಗಿವೆ:

► 15ರಿಂದ 49 ವರ್ಷ ವಯೋಮಿತಿಯ ಶೇ. 25 ಭಾರತೀಯ ಪುರುಷರು ರಕ್ತಹೀನತೆ (anemia)ಯಿಂದ ನರಳುತ್ತಿದ್ದಾರೆ.

► 15ರಿಂದ 49 ವರ್ಷ ವಯೋಮಿತಿಯ ಶೇ. 57 ಭಾರತೀಯ ಮಹಿಳೆಯರು ರಕ್ತಹೀನತೆಯಿಂದ ನರಳುತ್ತಿದ್ದಾರೆ.

► 15ರಿಂದ 19 ವಯೋಮಿತಿಯ, ಹದಿಹರೆಯದ ಭಾರತೀಯ ಹೆಣ್ಣುಮಕ್ಕಳಲ್ಲಿ ಶೇ. 59.1 ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ.

► 15ರಿಂದ 19 ವಯೋಮಿತಿಯ, ಹದಿಹರೆಯದ ಭಾರತೀಯ ಹುಡುಗರಲ್ಲಿ ಶೇ. 31.1 ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ.

► 6ರಿಂದ 59 ತಿಂಗಳ ವಯೋಮಿತಿಯ ಭಾರತೀಯ ಮಕ್ಕಳಲ್ಲಿ ಶೇ. 67.1 ಮಂದಿ ರಕ್ತಹೀನತೆಯಿಂದ ನರಳುತ್ತಿದ್ದಾರೆ.

► ಸುಮಾರು ಶೇ. 75 ಮಹಿಳೆಯರು ಶರೀರದಲ್ಲಿ ಕಬ್ಬಿಣದ ಅಂಶದ ಕೊರತೆ (low dietary iron intake) ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.

ಈ ಕುರಿತು ಕೆಲವು ಹೆಚ್ಚುವರಿ ಮಾಹಿತಿಗಳು ಇಲ್ಲಿವೆ:

90ರ ದಶಕದಲ್ಲಿ ಭಾರತದಲ್ಲಿ ಶೇ. 5.5 ಮಂದಿ ಮಧುಮೇಹ ರೋಗದಿಂದ ಬಳಲುತ್ತಿದ್ದರೆ, ಇಂದು ಅವರ ಪ್ರಮಾಣ ಗಣನೀಯವಾಗಿ ಏರಿದೆ. ಒಂದು ಅಂದಾಜಿನಂತೆ 2000ದಲ್ಲಿ ಭಾರತದೊಳಗೆ 3.2 ಕೋಟಿ ಜನರು ಮಧುಮೇಹ ಪೀಡಿತರಾಗಿದ್ದರು. 2021ರ ಹೊತ್ತಿಗೆ ಅವರ ಸಂಖ್ಯೆ 7.4 ಕೋಟಿಗೆ ತಲುಪಿತು. ಸದ್ಯ ಅವರ ಸಂಖ್ಯೆ 10 ಕೋಟಿಯನ್ನು ಮೀರಿದೆ. (NCD-RisC) ಸಂಸ್ಥೆಗಳು ತೀರಾ ಇತ್ತೀಚೆಗೆ ಪ್ರಕಟಿಸಿದ ಸಮೀಕ್ಷಾ ವರದಿಯ ಪ್ರಕಾರವಂತೂ ಇಂದು ಭಾರತದಲ್ಲಿ 21.2 ಕೋಟಿ ಮಂದಿ ಮಧುಮೇಹದಿಂದ ನರಳುತ್ತಿದ್ದಾರೆ ಮತ್ತು ಜಗತ್ತಿನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಧುಮೇಹಪೀಡಿತರು ಇರುವ ದೇಶ ಎಂಬ ಕೀರ್ತಿ ಕೂಡಾ ಭಾರತಕ್ಕಿದೆ.

ಕೆಲವರು ಇದನ್ನೆಲ್ಲಾ ಭಾರತೀಯರ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ ಎಂದು ಪರಿಗಣಿಸಬಹುದು. ಆದರೆ ಇವು ವೈದ್ಯರು ಅಥವಾ ಆಸ್ಪತ್ರೆಗಳು ಬಗೆಹರಿಸಬಹುದಾದ ಸಮಸ್ಯೆಗಳಲ್ಲ. ಪೋಷಕಾಂಶದ ಕೊರತೆ, ರಕ್ತಹೀನತೆ ಇತ್ಯಾದಿ ಕಠಿಣ ತಾಂತ್ರಿಕ ಪದಗಳನ್ನೆಲ್ಲಾ ಬದಿಗಿಟ್ಟು ನೋಡಿದರೆ, ಸರಳ ಭಾಷೆಯಲ್ಲಿ ಇದು ಆಹಾರಕ್ಕೆ ಸಂಬಂಧಿಸಿದ ಸಮಸ್ಯೆ. ಅಷ್ಟೇ ಅಲ್ಲ, ಇದು ಆಹಾರವನ್ನು ಅವಲಂಬಿಸಿರುವ ಅಸ್ತಿತ್ವದ ಕುರಿತಾದ ಸಮಸ್ಯೆ. ಇನ್ನೂ ಸ್ವಲ್ಪ ಆಳಕ್ಕೆ ಇಣುಕಿ ನೋಡಿದರೆ ಇದು ದೇಶವನ್ನು ಆಳುತ್ತಿರುವವರ ಹಾಗೂ ವ್ಯವಸ್ಥೆಯನ್ನು ನಿಯಂತಿಸುತ್ತಿರುವವರ ಅಸ್ತಿತ್ವ ವಿರೋಧಿ ಮತ್ತು ಜೀವ ವಿರೋಧಿ ಧೋರಣೆಗಳಿಗೆ ಸಂಬಂಧಿಸಿದ ಸಮಸ್ಯೆ. ಸಂಪನ್ಮೂಲಗಳ ನ್ಯಾಯೋಚಿತ ವಿತರಣೆಯ ಹೊಣೆ ಹೊತ್ತಿರುವ ವ್ಯವಸ್ಥೆಯ ದಕ್ಷತೆ, ಪ್ರಾಮಾಣಿಕತೆ, ಪಾರದರ್ಶಕತೆ ಹಾಗೂ ಜನತೆಯ ಪರ ಅದರ ನಿಷ್ಠೆಗೆ ಸಂಬಂಧಿಸಿದ ಸಮಸ್ಯೆ. ದಟ್ಟ ದಾರಿದ್ರ್ಯದಲ್ಲಿ ನರಳುತ್ತಾ ಪ್ರಸ್ತುತ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಲ್ಲಿ ಹೆಚ್ಚಿನವರು ಭಾರತದ ಬಹುಜನರು. ಸಂವಿಧಾನದ ಪ್ರಕಾರ ಅವರೇ ಭಾರತದ ನೈಜ, ಸಕ್ರಮ ಪ್ರಭುಗಳು. ಅವರಿಗೆ ಸಮಯಕ್ಕೆ ಸರಿಯಾಗಿ ಸಂತುಲಿತ, ಆರೋಗ್ಯಕರ ಆಹಾರ ಸಿಕ್ಕಿದರೆ ಸಾಕು. ಈ ಸಮಸ್ಯೆಗಳೆಲ್ಲಾ ಕಣ್ಮರೆಯಾಗುತ್ತವೆ. ದೇಶವನ್ನು ಆಳುತ್ತಿರುವವರು ಶತಕೋಟಿ, ಸಹಸ್ರಕೋಟಿ ಡಾಲರ್ ಸಂಪತ್ತುಳ್ಳ ಮಹಾ ಕುಬೇರರನ್ನು ರಕ್ಷಿಸಿ, ಪಾಲಿಸಿ, ಪೋಷಿಸುವ ತಮ್ಮ ನಿತ್ಯ ಕರ್ಮದಿಂದ ಸ್ವಲ್ಪ ಪುರುಸೊತ್ತು ಮಾಡಿಕೊಂಡು ತಮ್ಮ ಅಧಿಕೃತ ಪ್ರಭುಗಳಾದ ಬಹುಜನರ ಹಿತಾಸಕ್ತಿಗಳ ಕಡೆಗೆ ಗಮನ ಹರಿಸಿದರೆ, ಬಗೆಹರಿಸಬಹುದಾದ ಸಮಸ್ಯೆಗಳು ಇವು. ಸದ್ಯ ಕುಬೇರ ಮುಖಿಯಾಗಿರುವ ಸರಕಾರದ ಸಾಮಾಜಿಕ ಹಾಗೂ ಆರ್ಥಿಕ ನೀತಿಗಳು ಮತ್ತು ಸಾಮಾಜಿಕ ಪ್ರಾಶಸ್ತ್ಯಗಳು ಜನಮುಖಿಯಾದೊಡನೆ ಬಗೆಹರಿಯಬಲ್ಲ ಸಮಸ್ಯೆಗಳು.

ನಮ್ಮಲ್ಲಿ, ಸಂಪತ್ತು ಮತ್ತು ಸಂಪನ್ಮೂಲಗಳಿಗೆ ಯಾವ ಕೊರತೆಯೂ ಇಲ್ಲ. ದೇಶದ ಪ್ರತಿಯೊಬ್ಬ ನಾಗರಿಕನ ಆಹಾರ, ವಸತಿ, ಆರೋಗ್ಯ, ಶಿಕ್ಷಣ, ಭದ್ರತೆ ಇತ್ಯಾದಿ ಅವಶ್ಯಕತೆಗಳೆಲ್ಲವನ್ನೂ ಈಡೇರಿಸುವುದಕ್ಕೆ ಬೇಕಾಗುವಷ್ಟು ಆರ್ಥಿಕ ಸಾಮರ್ಥ್ಯ ನಮ್ಮ ದೇಶದ ಬಳಿ ಖಂಡಿತ ಇದೆ. ಭಾರತದಲ್ಲಿ ಕೋಟಿಗಟ್ಟಲೆ ಸಂಖ್ಯೆಯಲ್ಲಿರುವ ವ್ಯವಸ್ಥೆಯ ಬಲಿಪಶುಗಳಾಗಿರುವ ಪ್ರಸ್ತುತ ಸಂತ್ರಸ್ತ ಬಹುಜನರು, ತಮ್ಮ ಸರಕಾರದ ಕಿವಿ ಹಿಂಡಲು ಮನಸ್ಸು ಮಾಡಿದರೆ ಸಾಕು. ಕೆಲವೇ ವಾರಗಳಲ್ಲಿ ಅವರು ತಮ್ಮ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಲು ಖಚಿತವಾಗಿ ಸಾಧ್ಯವಿದೆ.

ಫ್ರಾನ್ಸ್, ಫಿನ್‌ಲ್ಯಾಂಡ್ ಮತ್ತು ಡೆನ್ಮಾರ್ಕ್ ದೇಶಗಳು ಪ್ರತಿವರ್ಷ ತಮ್ಮ ಜಿಡಿಪಿಯ ಶೇ. 30 ಭಾಗವನ್ನು ಆರೋಗ್ಯ ಮತ್ತು ಶಿಕ್ಷಣವನ್ನು ಒಳಗೊಂಡ ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಮೀಸಲಿಡುತ್ತಿವೆ. ನಾರ್ವೆ, ಸ್ವೀಡನ್, ಜರ್ಮನಿ ಮತ್ತು ಆಸ್ಟ್ರೇಲಿಯ ದೇಶಗಳು ಸಮಾಜ ಕಲ್ಯಾಣ ಚಟುವಟಿಕೆಗಳಿಗೆ ಪ್ರತಿವರ್ಷ ತಮ್ಮ ಜಿಡಿಪಿಯ ಶೇ. 25ರಿಂದ 30 ಭಾಗವನ್ನು ಮೀಸಲಿಡುತ್ತವೆ. ಇದರಿಂದಾಗಿ ಆ ದೇಶಗಳ ಪ್ರಗತಿ ಬಾಧಿತವಾಗಿಲ್ಲ. ಆ ದೇಶಗಳು ನಮಗಿಂತ ಬಹಳಷ್ಟು ಅಭಿವೃದ್ಧಿ ಸಾಧಿಸಿವೆ. ಆ ದೇಶಗಳಿಗೆ ಹೋಲಿಸಿದರೆ ಈ ಕ್ಷೇತ್ರದಲ್ಲಿ ಭಾರತ ಸರಕಾರ ಮಾಡುವ ಖರ್ಚು ನಂಬಲಾಗದಷ್ಟು ಕನಿಷ್ಠವಾಗಿದೆ. ಸರಕಾರವು ಆರೋಗ್ಯಕ್ಕೆ ಜನತೆಯ ಹಕ್ಕು ಎಂಬ ಮಾನ್ಯತೆ ನೀಡುವ ಬದಲು ಅದನ್ನು ಜನತೆಯನ್ನು ದೋಚುವುದಕ್ಕೆ ಖಾಸಗಿ ಕ್ಷೇತ್ರದ ಲೂಟಿಕೋರರಿಗೆ ಇರುವ ಅವಕಾಶ ಎಂದು ಪರಿಗಣಿಸಿ ಕುಬೇರವರ್ಗದ ದಲ್ಲಾಳಿಯಾಗಿ ವರ್ತಿಸುತ್ತಿದೆ.

ರಾಷ್ಟ್ರೀಯ ಸಂಪತ್ತಿನ ಶೇ. 40 ಪಾಲು ದೇಶದ ಶೇ. 1 ಮಂದಿಯ ನಿಯಂತ್ರಣದಲ್ಲಿದೆ. ರಾಷ್ಟ್ರೀಯ ಆದಾಯದ ಶೇ. 57 ಪಾಲನ್ನು ಕೇವಲ ಶೇ. 10 ಶ್ರೀಮಂತರು ನಿಯಂತ್ರಿಸುತ್ತಿದ್ದಾರೆ ಮತ್ತು ದೇಶದ ಕೆಳಸ್ತರದ ಶೇ. 50 ಜನರಿಗೆ ಒಟ್ಟು ರಾಷ್ಟ್ರೀಯ ಆದಾಯದ ಶೇ. 13 ಪಾಲು ಮಾತ್ರ ಲಭ್ಯವಿದೆ ಎಂಬುದು ಇಂದಿನ ಭಾರತದ ಭಯಾನಕ ಸತ್ಯ. ಸಾಲದ್ದಕ್ಕೆ ದೇಶವನ್ನು ಆಳುವವರು ಈ ಭಯಾನಕ ಅಸಮಾನ ವ್ಯವಸ್ಥೆಯನ್ನು ದಫನ ಮಾಡುವ ಬದಲು ಅದನ್ನು ಅಕ್ಕರೆಯಿಂದ ರಕ್ಷಿಸಿ, ಪೋಷಿಸಿ ಅಸಮಾನತೆಯನ್ನು ಮತ್ತಷ್ಟು ಹೆಚ್ಚಿಸುವ ಸೇವೆಯಲ್ಲಿ ತಲ್ಲೀನರಾಗಿದ್ದಾರೆ. ಪರಿಸ್ಥಿತಿ ಹೀಗಿರುವ ತನಕ ಇಲ್ಲಿ ಆಶಾವಾದಕ್ಕೆ ಯಾವುದೇ ಆಸ್ಪದವಿಲ್ಲ. ಅವಕಾಶವಿರುವುದು ಬಹುಜನರು, ನಿಜಾರ್ಥದಲ್ಲಿ ತಮ್ಮ ಪ್ರಭುತ್ವವನ್ನು ಘೋಷಿಸಿ, ಬಹುಜನರ ಹಿತಕ್ಕನುಸಾರವಾಗಿ ಕಾರ್ಯನಿರ್ವಹಿಸುವಂತೆ ವ್ಯವಸ್ಥೆಯನ್ನು ನಿರ್ಬಂಧಿಸುವುದಕ್ಕೆ ಮಾತ್ರ. ಆ ಪ್ರಕ್ರಿಯೆಯು, ಅಸಂಗತ ವಿಷಯಗಳ ಕುರಿತಾದ ಚರ್ಚೆ, ವಿವಾದ, ಸಂವಾದಗಳಿಂದ ಸಮಾಜವನ್ನು ಹೊರತಂದು, ಜನಸಾಮಾನ್ಯನ ಅಸ್ತಿತ್ವ ಮತ್ತು ಘನತೆಗೆ ಸಂಬಂಧಿಸಿದ ಗಂಭೀರ ಸಮಸ್ಯೆಗಳ ಕಡೆಗೆ ಅವರ ಗಮನ ಸೆಳೆಯಬೇಕು. ಆ ಸಮಸ್ಯೆಗಳ ಕುರಿತು ದೇಶದೆಲ್ಲೆಡೆ ಚರ್ಚೆ, ಸಂವಾದ ಮತ್ತು ಜಾಗೃತಿ ಅಭಿಯಾನಗಳನ್ನು ಆರಂಭಿಸಬೇಕು. ಮುಂದಿನ ಬಾರಿ ಯಾರಾದರೂ ಠಕ್ಕ ಪುಢಾರಿ ಬಂದು, ದೇಶವು ನಾಲ್ಕನೇ ಅಥವಾ ಮೂರನೇ ಆರ್ಥಿಕ ಶಕ್ತಿಯಾಗುವ ಕುರಿತು ಮಾತೆತ್ತಿದರೆ ಅಥವಾ ಜಿಡಿಪಿ ಅಥವಾ ತಲಾ ಜಿಡಿಪಿಯನ್ನು ಪ್ರಸ್ತಾಪಿಸಿದರೆ ಇವೆಲ್ಲಾ ಸತ್ಯದ ಮೇಲೆ ತೆರೆ ಎಳೆದು, ನಮ್ಮ ವಾಸ್ತವದ ಕಡೆಗೆ ನಮ್ಮನ್ನು ಕುರುಡಾಗಿಸುವ ಹುನ್ನಾರಗಳೆಂದು ಗುರುತಿಸಿ ಆಕ್ಷಣವೇ ಅಂಥವರ ಬಾಯಿಮುಚ್ಚಿಸಲು ಹೊರಡುವಷ್ಟು ಜಾಗೃತಿಯನ್ನು ನಮ್ಮ ಸಮಾಜದ ಪ್ರತಿಯೊಬ್ಬ ನಾಗರಿಕನಲ್ಲಿ ಬೆಳೆಸಬೇಕು.

share
ಶಂಬೂಕ
ಶಂಬೂಕ
Next Story
X