ಚಾಮರಾಜನಗರ : ದೇವಾಲಯದ ಹುಂಡಿಯ ಹಣ ಕಳ್ಳತನ; ಸೂಕ್ತ ಕ್ರಮಕ್ಕೆ ಸಾರ್ವಜನಿಕರ ಒತ್ತಾಯ

ಚಾಮರಾಜನಗರ : ಅಜ್ಜೀಪುರ -ಹನೂರು ಮಾರ್ಗದಲ್ಲಿರುವ ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಾಲಯದ ಹುಂಡಿಯಲ್ಲಿ ಇದ್ದ ಲಕ್ಷಾಂತ ರೂ. ಹಣ ಕಳವಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಸ್ಥಳಕ್ಕೆ ರಾಮಾಪುರ ಇನ್ಸ್ಪೆಕ್ಟರ್ ಚಿಕ್ಕರಾಜ ಶೆಟ್ಟಿ ಸ್ಥಳಕ್ಕೆ ಭೇಟಿ ನೀಡಿ ನಂತರ ಮುಂದಿನ ಕ್ರಮ ಕೈ ಗೊಂಡಿದ್ದಾರೆ.
ಈ ಬಗ್ಗೆ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ, ಶ್ರೀ ಕಣಿವೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ತಡರಾತ್ರಿ 2:35 ರ ಹೊತ್ತಿಗೆ ಕಳ್ಳರು ಬಂದು ದೇವಸ್ಥಾನದ ಒಳಗೆ ಹುಂಡಿಯ ಹಣ ಕಳುವು ಮಾಡಿದ್ದಾರೆ. ರೈತರ ಜಮೀನಿನಲ್ಲಿ ಕೇಬಲ್ ಕಳುವು, ಮೇಕೆಗಳನ್ನ ಕದ್ಯೋದ್ದಿದ್ದಾರೆ. ಕಳ್ಳರ ಹಾವಳಿ ಹೆಚ್ಚಾಗಿದ್ದು, ಆರೋಪಿಗಳನ್ನು ಬಂಧಿಸಿ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
Next Story