ಚಾಮರಾಜನಗರ | ಯುಪಿಎಸ್ ಸಿ ಪರೀಕ್ಷೆಯಲ್ಲಿ ರೈತನ ಮಗಳು 31ನೇ ರ್‍ಯಾಂಕ್

ಚಾಮರಾಜನಗರ : ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಆಲತ್ತೂರು ಗ್ರಾಮದ ರೈತರ ಮಗಳೊರ್ವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್ ಪಡೆಯುವ ಮೂಲಕ ಚಾಮರಾಜನಗರ ಜಿಲ್ಲೆಗೆ ಹೆಮ್ಮೆ ತಂದು ಕೊಟ್ಟಿದ್ದಾರೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಾಡಂಚಿನ ಗ್ರಾಮವಾದ ಆಲತ್ತೂರು ಗ್ರಾಮದ ಜಯಮ್ಮ ಮತ್ತು ಮಾದೇಗೌಡ ರವರ ಬಡ ರೈತ ಕುಟುಂಬದಲ್ಲಿ ಜನಿಸಿದ ಚೈತ್ರ 2024 ರಲ್ಲಿ ನಡೆದ ಯುಪಿಎಸ್ ಸಿ ಪರೀಕ್ಷೆಯಲ್ಲಿ 31ನೇ ರ್‍ಯಾಂಕ್ ಪಡೆದಿದ್ದಾರೆ.
ಚೈತ್ರ ಆಲತ್ತೂರಿನ ಎಂ ಎಲ್ ಜಿ ಕಾನ್ವೇಟ್ ನಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ, ಗುಂಡ್ಲುಪೇಟೆಯಲ್ಲಿನ ಕೆ.ಎಸ್. ನಾಗರತ್ನಮ್ಮ ಶಾಳೆಯಲ್ಲಿ ಹತ್ತನೇ ತರಗತಿ ತನಕ ವ್ಯಾಸಾಂಗ ಮಾಡಿ, ದೊಡ್ಡುಂಡಿ ಬೋಗಪ್ಪ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಾಂಗ ಮಾಡಿ, ಮೈಸೂರಿನ ಎ. ಟಿ ಎಂ. ಇ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ, ಹೆಚ್ಚುವರಿ ಓದಿಗಾಗಿ ಹೈದಾರಬಾದಿನ ಎಸಿಇ ಮತ್ತು ನವದೆಹಲಿಯ ಮೇಡ್ ಈಸಿ ನಲ್ಲಿ ಪಡೆದು ಇಎಸ್ ಸಿ ಗೇಟ್ ಪರೀಕ್ಷೆಗಳನ್ನು ಬರೆದು UPSC - ESE ಬರೆದು ದೇಶದಲ್ಲಿ 31ನೇ ರ್‍ಯಾಂಕ್ ಪಡೆದು ಪ್ರಸ್ತುತ ಭಾರತ ಸರ್ಕಾರದ ದೂರಸಂಪರ್ಕ ಸಚಿವಾಲಯದಲ್ಲಿ ಜೂನಿಯರ್ ಟೆಲಿಕಾಂ ಆಫೀಸರ್ ಆಗಿ ಆಯ್ಕೆಗೊಂಡಿದ್ದಾರೆ.
ಇದೇ ತಿಂಗಳ 8ರಂದು ಗಾಜಿಯಾಬಾದಿನ ನ್ಯಾಷಿನಲ್ ಕಮ್ಯೂನಿಕೇಷನ್ ಅಕಾಡಮಿಯಲ್ಲಿ ವೃತ್ತಿ ಜೀವನ ಪ್ರಾರಂಭಿಸಲಿದ್ದಾರೆ ಎಂದು ಆಲತ್ತೂರಿನ ಪೋಸ್ಟ್ ಮಾಸ್ಟರ್ ಶಾಂತೇಶ್ ತಿಳಿಸಿದ್ದಾರೆ.