ಚಾಮರಾಜನಗರ | ಜಿಂಕೆ ಚರ್ಮ ಎಸೆದು ಆರೋಪಿ ಪರಾರಿ

ಚಾಮರಾಜನಗರ/ಹನೂರು, ಸೆ.5: ಜಿಂಕೆಯೊಂದನ್ನು ಬೇಟೆಯಾಡಿ, ಮಾಂಸವನ್ನು ತೆಗೆದುಕೊಂಡು ಚರ್ಮವನ್ನು ಎಸೆದು ಆರೋಪಿಯೊಬ್ಬ ಪರಾರಿಯಾಗಿದ್ದು, ಜಿಂಕೆ ಚರ್ಮವನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಧಾಮದ ಕಾಂಪಾರ್ಟ್‌ಮೆಂಟ್ 40ರ ಚಾಮರಾಜನಗರ ಜಿಲ್ಲೆಯ ಹನೂರು ವನ್ಯಜೀವಿ ವಲಯ ಶಾಗ್ಯಂ ಶಾಖೆಯ ಎಲ್ಲೇಮಾಳ ಗಸ್ತಿನ ವ್ಯಾಪ್ತಿಯಲ್ಲಿ ಅಜ್ಜೀಪುರದ ನಾಗರಾಜು ಎಂಬ ವ್ಯಕ್ತಿ ಜಿಂಕೆಯನ್ನು ಬೇಟೆಯಾಡಿದ್ದಲ್ಲದೆ, ಅದರ ಮಾಂಸವನ್ನು ತೆಗೆದುಕೊಂಡು ಚರ್ಮವನ್ನು ಬಿಸಾಡಿದ ಆರೋಪಿಯಾಗಿದ್ದಾನೆ.
ಆರೋಪಿ ನಾಗರಾಜು ವಿರುದ್ಧ ವನ್ಯಜೀವಿ ಅಪರಾಧ ಪ್ರಕರಣವನ್ನು ದಾಖಲಿಸಿಕೊಂಡು, ತಲೆ ಮರೆಸಿಕೊಂಡಿರುವ ನಾಗರಾಜು ಬಂಧನಕ್ಕೆ ಬಲೆ ಬೀಸಿದ್ದಾರೆ.
ಕಾವೇರಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುರೇಂದ್ರ ಎಂ.ಸಿ. ಮತ್ತು ಕಾವೇರಿ ವನ್ಯಜೀವಿ ಉಪ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮರಿಸ್ವಾಮಿ ಕೆ.ಎಂ ಅವರ ಮಾರ್ಗದರ್ಶನದಲ್ಲಿ ವಲಯ ಅರಣ್ಯಾಧಿಕಾರಿ ನಿರಂಜನ ನೇತೃತ್ವದಲ್ಲಿ ಗೋಪಾ ಉಪವಲಯ ಅರಣ್ಯಾಧಿಕಾರಿ, ಶಾಗ್ಯಂ ಶಾಖೆ, ಅನಿಲ್ ಕುಮಾರ್, ಗಸ್ತು ವನಪಾಲಕ, ಎಲ್ಲೇಮಾಳ ಗಸ್ತು, ಶಿವರಾಜ್ ಸಾಸಲವಡಾದ ಗಸ್ತು ವನಪಾಲಕ, ಬೇಟೆಗಾರನ ಗಸ್ತು ಮತ್ತು ವಲಯದ ಇತರ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.