ಸಾಲದ ನೆಪದಲ್ಲಿ ಆನ್‌ಲೈನ್ ಆ್ಯಪ್‌ನಿಂದ 2.50 ಲಕ್ಷ ವಂಚನೆ; ಮನನೊಂದ ಯುವಕ ಆತ್ಮಹತ್ಯೆ

ಚಾಮರಾಜನಗರ : ಆನ್ಲೈನ್ ಆಪ್ ನಲ್ಲಿ 10 ರಿಂದ 15 ಲಕ್ಷ ಸಾಲ ನೀಡುವುದಾಗಿ ನಂಬಿಸಿ ಸುಮಾರು ಎರಡೂವರೆ ಲಕ್ಷ ರೂಪಾಯಿ ಹಣವನ್ನು ಕಳೆದುಕೊಂಡ ಯುವಕನೊಬ್ಬ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಳ್ಳೇಗಲ ತಾಲೂಕಿನ ಕಾಮಗೆರೆ ಗ್ರಾಮದಲ್ಲಿ ನಡೆದಿದೆ.
ಕಾಮಗೆರೆ ಗ್ರಾಮದ ರಾಜಪ್ಪ (30) ಮೃತ ಯುವಕ.
ಮೋಸ ಹೋಗಿರುವುದು ಖಚಿತಗೊಂಡ ಈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾನೆ. ತಕ್ಷಣವೇ ಹತ್ತಿರದ ಹೋಲಿ ಕ್ರಾಸ್ ಆಸ್ಪತ್ರೆ ಗೆ ಕರೆದುಕೊಂಡು ಹೋಗಿದ್ದು, ಮೃತ ಪಟ್ಟಿರುವುದನ್ನು ವೈದ್ಯರು ದೃಢಪಡಿಸಿದ್ದಾರೆ.
ಕೊಳ್ಳೇಗಾಲ ಗ್ರಾಮಾಂತರ ಠಾಣಿಯ ಪಿ ಎಸ್ ಐ ಸುಪ್ರೀತ್ ರವರು ತಮ್ಮ ಠಾಣಿಯ ಸಿಬ್ಬಂದಿಯನ್ನು ಹೋಲಿ ಕ್ರಾಸ್ ಆಸ್ಪತ್ರೆಗೆ ಕಳುಹಿಸಿದ್ದು, ಮರಣೋತ್ತರ ಪರೀಕ್ಷೆಗಾಗಿ ಹತ್ತಿರದ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ರವಾನಿಸಲಾಗಿದೆ.
ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣಿಯಲ್ಲಿ ದೂರು ದಾಖಲಾಗಿದೆ.
Next Story