ಚಿಕ್ಕೋಡಿ | ಎಟಿಎಂ ದರೋಡೆ ಯತ್ನ

ಚಿಕ್ಕೋಡಿ : ಚಿಕ್ಕೋಡಿ ತಾಲೂಕಿನ ಕಬ್ಬೂರದಲ್ಲಿ ಸೋಮವಾರ ಮಧ್ಯರಾತ್ರಿ ದುಷ್ಕರ್ಮಿಗಳು ಎಟಿಎಂ ಕೇಂದ್ರವನ್ನು ಗುರಿಯಾಗಿಸಿಕೊಂಡು ದರೋಡೆಗೆ ಯತ್ನ ನಡೆಸಿದ ಘಟನೆ ಬೆಳಕಿಗೆ ಬಂದಿದೆ.
ಕಬ್ಬೂರದ ಖೇಮಲಾಪೂರೆ ವಾಣಿಜ್ಯ ಮಳಿಗೆಯೊಳಗೆ ಇರುವ ಎಟಿಎಂನಲ್ಲಿ ರಾತ್ರಿ ವೇಳೆ ದುಷ್ಕರ್ಮಿಗಳು ಪ್ರವೇಶಿಸಿ, ಗ್ಯಾಸ್ ಕಟರ್ ಬಳಸಿ ಎಟಿಎಂ ಬಾಗಿಲನ್ನು ಮುರಿಯಲು ಯತ್ನಿಸಿದ್ದು, ಯಂತ್ರವನ್ನು ಸಂಪೂರ್ಣವಾಗಿ ಒಡೆದು ಹಣ ದೋಚುವಲ್ಲಿ ವಿಫಲರಾದ ಕಾರಣ ಖಾಲಿಹಸ್ತವಾಗಿ ಪರಾರಿಯಾಗಿದ್ದಾರೆ.
ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಎಟಿಎಂ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ. ಸ್ಥಳದಲ್ಲಿದ್ದ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಎಎಸ್ಪಿ ರಾಮಗೌಡ ಬಸರಗಿ ತಿಳಿಸಿದ್ದಾರೆ.
Next Story