Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ಬೆಂಗಳೂರು ನಗರ
  4. ‘ಪ್ರಜಾಪ್ರಭುತ್ವ’ ಸಮಾಜದ ಪ್ರತಿಯೊಂದು...

‘ಪ್ರಜಾಪ್ರಭುತ್ವ’ ಸಮಾಜದ ಪ್ರತಿಯೊಂದು ವರ್ಗದ ಸಬಲೀಕರಣದ ಮಹಾನ್ ಪ್ರಕ್ರಿಯೆ : ದೆಹಲಿ ವಿಧಾನಸಭೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್ ಭಾಷಣ

ವಾರ್ತಾಭಾರತಿವಾರ್ತಾಭಾರತಿ25 Aug 2025 9:43 PM IST
share
‘ಪ್ರಜಾಪ್ರಭುತ್ವ’ ಸಮಾಜದ ಪ್ರತಿಯೊಂದು ವರ್ಗದ ಸಬಲೀಕರಣದ ಮಹಾನ್ ಪ್ರಕ್ರಿಯೆ : ದೆಹಲಿ ವಿಧಾನಸಭೆಯಲ್ಲಿ ಸ್ಪೀಕರ್‌ ಯು.ಟಿ ಖಾದರ್ ಭಾಷಣ

ಹೊಸದಿಲ್ಲಿ, ಆ.25: ಪ್ರಜಾಪ್ರಭುತ್ವವು ಕೇವಲ ನಮ್ಮ ಆಡಳಿತ ವ್ಯವಸ್ಥೆಯಲ್ಲ, ಅದು ನಮ್ಮ ನಂಬಿಕೆ, ಅದು ನಮ್ಮ ಶಕ್ತಿ, ಅದು ನಮ್ಮ ಗುರುತು. ಪ್ರಜಾಪ್ರಭುತ್ವವೆಂದರೆ ಅಧಿಕಾರದ ಧ್ರುವೀಕರಣವಲ್ಲ ಬದಲಾಗಿ ಸಮಾಜದ ಪ್ರತಿಯೊಂದು ವರ್ಗದ, ಪ್ರತಿಯೊಂದು ಹಂತದ ಜನರ ಸಬಲೀಕರಣ ಮಾಡುವ ಮಹಾನ್ ಪ್ರಕ್ರಿಯೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದರು.

ಸೋಮವಾರ ದಿಲ್ಲಿಯ ವಿಧಾನಸಭೆಯಲ್ಲಿ, ಬ್ರಿಟಿಷ್‌ ಭಾರತದಲ್ಲಿ ಕೇಂದ್ರ ಶಾಸಕಾಂಗ ಸಭೆಯ ಮೊದಲ ಚುನಾಯಿತ ಅಧ್ಯಕ್ಷರಾಗಿದ್ದ ಶ್ರೀ ವಿಠಲಭಾಯಿ ಪಟೇಲ್ ಅವರ ಸ್ಮರಣಾರ್ಥ ನಡೆದ ‘ಭಾರತ-ಪ್ರಜಾಪ್ರಭುತ್ವದ ತಾಯಿ’ ಎನ್ನುವ ಸಮ್ಮೇಳನದಲ್ಲಿ ಅವರು ಭಾಷಣ ಮಾಡಿದರು.

ಭಾರತವು ಭಾಷೆ, ಸಂಸ್ಕೃತಿ ಮತ್ತು ಆಚರಣೆಗಳಲ್ಲಿ ವೈವಿಧ್ಯತೆ ಹೊಂದಿರುವ, ವೈವಿಧ್ಯತೆಯ ದೇಶ ಈ ವೈವಿಧ್ಯತೆಯು ನಮ್ಮ ದೌರ್ಬಲ್ಯವಲ್ಲ ಅದು ನಮ್ಮ ಅಸ್ತಿತ್ವದ ಶಕ್ತಿ ಎಂದು ಭಾರತ ಇಡೀ ವಿಶ್ವಕ್ಕೆ ತೋರಿಸಿ ಕೊಟ್ಟಿದೆ. ಏಕತೆ ಎಂದರೆ ಏಕರೂಪತೆಯಲ್ಲ, ಏಕತಾನತೆಯಲ್ಲ. ಏಕತೆ ಎಂದರೆ ಸಾಮರಸ್ಯ. ಸಾಮರಸ್ಯ ಎಂದರೆ ನಮ್ಮ ಭಿನ್ನಾಭಿಪ್ರಾಯಗಳನ್ನು ಅಳಿಸಿಹಾಕಬೇಕೆಂದಲ್ಲ. ಭಿನ್ನಾಭಿಪ್ರಾಯಗಳನ್ನು ಪರಸ್ಪರ ಗೌರವಿಸಿ, ಸ್ವೀಕರಿಸಿ ಮತ್ತು ಒಗ್ಗಟ್ಟಿನಿಂದ ಮುನ್ನಡೆಯಬೇಕು. ಇದೇ ನಮ್ಮ ಸಂಸ್ಕೃತಿ ಮತ್ತು ನಮ್ಮ ಪರಂಪರೆ ಎಂದು ಅವರು ಹೇಳಿದರು.

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ, ಕಚ್‍ನಿಂದ ಕಾಮರೂಪದವರೆಗೆ, ಪ್ರತಿಯೊಂದು ಭಾಷೆ, ಪ್ರತಿಯೊಂದು ಸಂಸ್ಕೃತಿ, ಪ್ರತಿಯೊಂದು ಸಂಪ್ರದಾಯವು ಭಾರತದ ಚಿತ್ರಪಟಕ್ಕೆ ಹೊಸ ಮೆರುಗನ್ನು, ಹೊಸ ವೈಭವವನ್ನು ನೀಡುತ್ತದೆ. ಆದುದರಿಂದ, ಭಾರತವು ಕೇವಲ ಒಂದು ದೇಶವಲ್ಲ, ಅದು ಜೀವಂತ ನಾಗರಿಕತೆಯೇ, ಶಾಶ್ವತವಾದ ಆಧ್ಯಾತ್ಮಿಕ ಕುಟುಂಬವೇ ಆಗಿದೆ ಎಂದು ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಸ್ವಾತಂತ್ರ್ಯ ಸಂಗ್ರಾಮದಲ್ಲಿ ದಿಲ್ಲಿಯ ಕೊಡುಗೆಯನ್ನು ವಿವರಿಸಿದ ಯು.ಟಿ.ಖಾದರ್, ಈ ಐತಿಹಾಸಿಕ ದಿಲ್ಲಿ ನಗರದಲ್ಲಿ ನಡೆಯುತ್ತಿರುವ ಭಾರತ-ಪ್ರಜಾಪ್ರಭುತ್ವದ ಮಾತೃಭೂಮಿ ಎನ್ನುವ ಈ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನನಗೆ ಹೆಮ್ಮೆಯೂ ಸಂತೋಷವೂ ಆಗುತ್ತಿದೆ, ಯಾಕೆಂದರೆ ದಿಲ್ಲಿ ನಗರವು ಕೇವಲ ಭಾರತದ ರಾಜಧಾನಿ ಮಾತ್ರವಲ್ಲ, ನಮ್ಮ ದೇಶದ ಸ್ವಾತಂತ್ರ್ಯ ಹೋರಾಟದ ಪ್ರಬಲ ವೇದಿಕೆ ಕೂಡ ಆಗಿದೆ ಎಂದು ಹೇಳಿದರು.

ಖಿಲಾಫತ್ ಚಳವಳಿಯಿಂದ ಜಾಮಾ ಮಸೀದಿಯ ಹೋರಾಟದವರೆಗೆ, ಎಲ್ಲರೂ ಧರ್ಮ, ಜಾತಿ, ಸಮುದಾಯವೆನ್ನದೆ ಸಂಘಟಿತರಾಗಿ ಬ್ರಿಟಿಷರ ವಿರುದ್ಧ ಅಚಲವಾಗಿ ನಿಂತರು. ಮಹಾತ್ಮ ಗಾಂಧಿ ಈ ಚಳವಳಿಯನ್ನು ಅಸಹಕಾರ ಚಳವಳಿಯೊಂದಿಗೆ ಜೋಡಿಸಿ, ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಒಂದು ಏಕೀಕೃತ, ರಾಷ್ಟ್ರೀಯ ಗುರುತನ್ನು ನೀಡಿ, ರಾಷ್ಟ್ರವ್ಯಾಪಿ ಕ್ರಾಂತಿಗೆ ಕಾರಣರಾದರು ಎಂದು ಖಾದರ್ ಹೇಳಿದರು.

ಕರ್ನಾಟಕದ ಕ್ರಾಂತಿಯನ್ನು ವಿವರಿಸಿದ ಅವರು, ಕರ್ನಾಟಕದಲ್ಲಿ 1880ರ ದಶಕದಲ್ಲಿ, ಮೈಸೂರು ಮಹಾರಾಜರ ಆಶ್ರಯದಲ್ಲಿ, ಚುನಾಯಿತ ಪ್ರತಿನಿಧಿಗಳು ಸಭೆ ಸೇರಿ ಬ್ರಿಟಿಷ್‌ ಆಡಳಿತದ ವಿರುದ್ಧ ಧ್ವನಿ ಎತ್ತಿದರು. ಭಾರತ ಸಂವಿಧಾನ ರಚನೆಯ ದಶಕಕ್ಕೂ ಮೊದಲು ಭಾರತದಲ್ಲಿ ಮೀಸಲಾತಿಯ ಮೊದಲ ಅನುಷ್ಠಾನದ ಪ್ರಯತ್ನವು 1918 ರಲ್ಲಿ, ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ನೇತೃತ್ವದಲ್ಲಿ ನಡೆಯಿತು ಎಂದು ಅವರು ಹೇಳಿದರು.

ಸಮಾಜದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಮಾನತೆಯನ್ನು ತರಲು, ಮೀಸಲಾತಿ ಪ್ರತಿನಿಧಿತ್ವವನ್ನು ಅಧ್ಯಯನ ಮಾಡಿ ವರದಿ ನೀಡಲು ಮಿಲ್ಲರ್ ಸಮಿತಿಯನ್ನು ನೇಮಿಸಿದರು. ಇದರಿಂದ ಸರಕಾರಿ ಉದ್ಯೋಗಗಳು ಮತ್ತು ಶಿಕ್ಷಣವು ಹಿಂದುಳಿದ ಹಾಗೂ ಶೋಷಿತ ವರ್ಗದವರಿಗೂ ದೊರಕುವಂತಾಯಿತು. ಈ ಕ್ರಾಂತಿಕಾರಿ ಹೆಜ್ಜೆಯು ಭಾರತದಾದ್ಯಂತ ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ನೀಡಿದ ದೊಡ್ಡ ಕೊಡುಗೆಯಾಯಿತು ಎಂದು ಖಾದರ್ ಅಭಿಪ್ರಾಯಪಟ್ಟರು.

ಡಾ.ಬಿ.ಆರ್.ಅಂಬೇಡ್ಕರ್ ನಮ್ಮ ಸಂವಿಧಾನವನ್ನು ರೂಪಿಸಿದಾಗ, ಮೈಸೂರಿನ ಈ ಮಾದರಿಯನ್ನು ಹೆಮ್ಮೆಯಿಂದ ಸ್ಮರಿಸಲಾಯಿತು. ಇಷ್ಟು ಮಾತ್ರವಲ್ಲದೆ, 12ನೆ ಶತಮಾನದ ಆರಂಭದಲ್ಲಿಯೆ, ಮಹಾನ್ ಸಮಾಜ ಸುಧಾರಕ ಬಸವಣ್ಣ ವಿಶ್ವದ ಮೊದಲ ಸಂಸತ್ತು ಎಂದು ಪರಿಗಣಿಸಲಾದ ಅನುಭವ ಮಂಟಪವನ್ನು ಸ್ಥಾಪಿಸಿದರು. ಇದು ಕೇವಲ ಆಧ್ಯಾತ್ಮಿಕ ಕೇಂದ್ರವಾಗಿ ಉಳಿಯದೆ ಎಲ್ಲ ವರ್ಣ, ಲಿಂಗ, ಧರ್ಮ, ಜಾತಿ ಬೇಧವಿಲ್ಲದೆ, ಪ್ರತಿಯೊಬ್ಬರೂ ಸಮಾನ ಹಕ್ಕಿನಿಂದ ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳುವ ವೇದಿಕೆಯಾಗಿತ್ತು ಎಂದು ಅವರು ಹೇಳಿದರು.

ಆದುದರಿಂದ, ಪ್ರಜಾಪ್ರಭುತ್ವವೆಂಬುದು ನಮಗೆ ಹೊರಗಿನ ಪ್ರಪಂಚದಿಂದ ಬಂದ ಉಡುಗೊರೆಯಲ್ಲ, ಅದು ನಮ್ಮ ಮಣ್ಣಿನಲ್ಲೆ ಮೊಳಕೆ ಹೊಡೆದ ಗಿಡ. ನಮ್ಮ ಸಂಸ್ಕಾರಗಳಿಂದ ಪೋಷಿಸಲ್ಪಟ್ಟು ನಮ್ಮೆಲ್ಲರಲ್ಲಿ ರಕ್ತಗತವಾಗಿದೆ. ಹಳ್ಳಿಯಲ್ಲಿರುವ ಚಿಕ್ಕ ಪಂಚಾಯತ್‍ನಿಂದ ಹಿಡಿದು ದಿಲ್ಲಿಯ ಭವ್ಯ ಲೋಕಸಭೆಯವರೆಗೆ, ಪ್ರತಿಯೊಬ್ಬ ಭಾರತೀಯನು ಆಡಳಿತದಲ್ಲಿ ಪಾಲುದಾರನಾಗುವ ಜವಾಬ್ದಾರಿಯನ್ನು, ಹಕ್ಕನ್ನು ಪ್ರಜಾಪ್ರಭುತ್ವವು ನಮಗೆ ನೀಡಿದೆ. ಆದುದರಿಂದ, ಭಾರತವು-ಪ್ರಜಾಪ್ರಭುತ್ವದ ಮಾತೃಭೂಮಿ ಎನ್ನುವುದು ನಿತ್ಯ ಸತ್ಯ ಎಂದು ಖಾದರ್ ತಿಳಿಸಿದರು.

ಈ ಸಮ್ಮೇಳನದಲ್ಲಿ ರಾಜ್ಯ ವಿಧಾನಸಭೆಯ ಉಪಸಭಾಧ್ಯಕ್ಷ ರುದ್ರಪ್ಪ ಮಾನಪ್ಪ ಲಮಾಣಿ ಭಾಗವಹಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X