ಬಾಗಲಕೋಟೆ | ಗಣೇಶ ವಿಸರ್ಜನೆ ವೇಳೆ ಯುವಕನಿಗೆ ಚಾಕು ಇರಿತ; ಆರೋಪಿ ವಶಕ್ಕೆ

ಆರೋಪಿ ಆಶೀಫ್ ಬೆಳಗಾಂವ್
ಬಾಗಲಕೋಟೆ : ಗಣೇಶ ವಿಸರ್ಜನೆ ವೇಳೆ ಯುವಕನೊರ್ವನಿಗೆ ಚಾಕು ಇರಿದಿರುವ ಘಟನೆ ಬಾಗಲಕೋಟೆ ತಾಲೂಕಿನ ಮುರನಾಳ ಪುನರ ವಸತಿ ಕೇಂದ್ರದಲ್ಲಿ ಶನಿವಾರ ನಡೆದಿರುವುದಾಗಿ ವರದಿಯಾಗಿದೆ.
ನವೀನ್ ಕುಡ್ಲೆಪ್ಪನವರ ಎಂಬ ಯುವಕ ಚಾಕು ಇರಿತದಿಂದ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆಸಿಫ್ ಬೆಳಗಾಂವ್ ಎಂಬಾತ ಚಾಕು ಇರಿದ ಆರೋಪಿಯಾಗಿದ್ದಾನೆ.
ಗಣೇಶ ವಿಸರ್ಜನೆ ಮಾಡುತ್ತಿರುವ ಸಮಯದಲ್ಲಿ ಆಸಿಫ್ ಬೆಳಗಾಂವ್ ಕುಡಿದು ಬಂದು ವಿನಾಕಾರಣ ಗಲಾಟೆ ಮಾಡಿದ್ದಾನೆ ಎನ್ನಲಾಗಿದೆ. ಈ ವೇಳೆ ಆಸಿಫ್ ಹಾಗೂ ನವೀನ್ ನಡುವೆ ಗಲಾಟೆ ಉಂಟಾಗಿದೆ. ಈ ವೇಳೆ ಆಶೀಫ್ ಚಾಕು ತೆಗದು ಬೆನ್ನಿಗೆ ಇರಿದಿದ್ದಾನೆ ಎಂದು ಆರೋಪಿಸಲಾಗಿದೆ.
ಮುರನಾಳ ಪುನರ ವಸತಿ ಕೇಂದ್ರದಲ್ಲಿ ವೀರ ಸಾವರ್ಕರ್ ಗಜಾನನ ಯುವಕ ಮಂಡಳಿ ಗಣೇಶ ವಿಸರ್ಜನೆ ಮಾಡುವುದಕ್ಕೆ ಮೆರವಣಿಗೆ ನಡೆಸಿದ್ದಾರೆ. ಮೆರವಣಿಗೆ ಸಮಯದಲ್ಲಿ ಡ್ಯಾನ್ಸ್ ಮಾಡುತ್ತಿರುವಾಗ ಗಲಾಟೆ ಉಂಟಾಗಿದೆ ಎನ್ನಲಾಗಿದೆ.
ಘಟನೆ ಸಂಬಂಧ ಆರೋಪಿ ಆಸಿಫ್ ಬೆಳಗಾಂವ್ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿದ್ದಾರ್ಥ ಗೋಯಲ್ ಮಾಹಿತಿ ನೀಡಿದ್ದಾರೆ.