Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಲೇಖನಗಳು
  4. ಸಂಸತ್ ಅಧಿವೇಶನದ ಹೊತ್ತಿನಲ್ಲಿ ಪ್ರಧಾನಿ...

ಸಂಸತ್ ಅಧಿವೇಶನದ ಹೊತ್ತಿನಲ್ಲಿ ಪ್ರಧಾನಿ ಮೋದಿ ವಿದೇಶ ಭೇಟಿಗೆ ಹೋಗುವ ತುರ್ತು ಇತ್ತೇ?

ಹರೀಶ್ ಎಚ್.ಕೆ.ಹರೀಶ್ ಎಚ್.ಕೆ.27 July 2025 11:59 AM IST
share
ಸಂಸತ್ ಅಧಿವೇಶನದ ಹೊತ್ತಿನಲ್ಲಿ ಪ್ರಧಾನಿ ಮೋದಿ ವಿದೇಶ ಭೇಟಿಗೆ ಹೋಗುವ ತುರ್ತು ಇತ್ತೇ?

ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶ ಪ್ರವಾಸಗಳು ಮತ್ತು ಸಂಸತ್ತಿನ ಅಧಿವೇಶನಕ್ಕೆ ಗೈರುಹಾಜರಿ ಕುರಿತು ಹಲವು ಪ್ರಶ್ನೆಗಳು ಮತ್ತು ಟೀಕೆಗಳು ಕೇಳಿಬಂದಿವೆ.

ವಿಶೇಷವಾಗಿ ದೇಶವು ಹಲವಾರು ಬಿಕ್ಕಟ್ಟುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ, ಅವರ ವಿದೇಶ ಪ್ರವಾಸಗಳ ವೆಚ್ಚ ಮತ್ತು ಅವುಗಳ ಉದ್ದೇಶದ ಬಗ್ಗೆ ಪ್ರತಿಪಕ್ಷಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿವೆ.

ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಇದ್ದರೂ, ಪ್ರಧಾನಿಯವರು ವಿದೇಶ ಪ್ರವಾಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವುದು ಏಕೆ ಎಂಬುದು ಮುಖ್ಯ ಪ್ರಶ್ನೆಯಾಗಿದೆ. ಈ ಪ್ರಶ್ನೆಯು ಕೇವಲ ಪ್ರತಿಪಕ್ಷಗಳಿಂದ ಮಾತ್ರವಲ್ಲದೆ, ಸಾಮಾನ್ಯ ನಾಗರಿಕರಿಂದಲೂ ಕೇಳಿಬರುತ್ತಿವೆ.

ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವಾಗ, ದುಬಾರಿ ಪ್ರವಾಸಗಳ ಅಗತ್ಯವೇನು ಎಂಬುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ವೆಚ್ಚಗಳು ದೇಶದ ತೆರಿಗೆದಾರರ ಹಣದಿಂದ ಆಗಿರುವುದರಿಂದ, ಅವುಗಳ ಸದುಪಯೋಗದ ಬಗ್ಗೆ ಸ್ಪಷ್ಟತೆ ಬೇಕು ಎಂಬುದು ಜನರ ಆಗ್ರಹವಾಗಿದೆ.

ಮೂಲಭೂತ ಆಡಳಿತಾತ್ಮಕ ಸಮಸ್ಯೆಗಳನ್ನು ನಿರ್ಲಕ್ಷಿಸಿ, ಅಂತರ್ರಾಷ್ಟ್ರೀಯ ಮಟ್ಟದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಮೋದಿ ಪ್ರಯತ್ನಿಸುತ್ತಿದ್ದಾರೆ ಎಂಬ ಟೀಕೆಗಳು ಕೇಳಿಬರುತ್ತಿವೆ.

ಪಹಲ್ಗಾಮ್ ಭಯೋತ್ಪಾದಕ ದಾಳಿಯಾಗಿ ಮೂರು ತಿಂಗಳುಗಳೇ ಕಳೆದಿವೆ. ಚುನಾವಣೆ ನಡೆಯಲಿರುವ ರಾಜ್ಯಕ್ಕೆ ಹೋಗಿ ಉಗ್ರರ ಬಗ್ಗೆ ರೋಷಾವೇಶದ ಮಾತಾಡಿದ್ದವರಿಗೆ, 26 ಅಮಾಯಕರನ್ನು ಕೊಂದ ಮೂರ್ನಾಲ್ಕು ಭಯೋತ್ಪಾದಕರನ್ನು ಇನ್ನೂ ಬಂಧಿಸಲು ಆಗಲಿಲ್ಲ.

ಆಪರೇಷನ್ ಸಿಂಧೂರ ಬಗ್ಗೆ ಎದ್ದಿರುವ ಪ್ರಶ್ನೆಗಳು ಹಲವಾರು. ಸೇನಾ ಮುಖ್ಯಸ್ಥರೇ ಹಲವು ಲೋಪಗಳ ಬಗ್ಗೆ ಬಹಿರಂಗವಾಗಿ ಹೇಳಿದ್ದೂ ಆಯಿತು. ಆದರೆ ಯಾರು ನಿಜವಾಗಿಯೂ ಜನರೆದುರು ಸತ್ಯ ಇಡಬೇಕಿತ್ತೋ ಅವರು ಮಾತಾಡಿಯೇ ಇಲ್ಲ.

ಬಿಹಾರದಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಹೆಸರಲ್ಲಿ ನಿಜವಾದ ಮತದಾರರ ಹಕ್ಕನ್ನೇ ಕಸಿಯುವ ಹುನ್ನಾರ ನಡೆದಿರುವ ಆರೋಪಗಳು ದೊಡ್ಡ ಮಟ್ಟದಲ್ಲಿ ಕೇಳಿಬರುತ್ತಿವೆ. ಆದರೆ ಉತ್ತರಿಸಬೇಕಾದವರು ಮಹಾಮೌನಿಯಂತಿದ್ದಾರೆ.

ದೇಶದಲ್ಲಿ ಹೀಗೆ ಹಾಸಿಹೊದೆಯುವಷ್ಟು ತಾಪತ್ರಯಗಳು ಇರುವಾಗ, ಜನರು ನೂರೆಂಟು ಕಷ್ಟಗಳಲ್ಲಿ ಹೈರಾಣಾಗಿರುವಾಗ, ಪ್ರಧಾನ ಸೇವಕ ಎಂದು ಘೋಷಿಸಿಕೊಂಡಿದ್ದವರು ಏನು ಮಾಡುತ್ತಿದ್ದಾರೆ?

ಕಳೆದ 5 ವರ್ಷಗಳಲ್ಲೇ ಪ್ರಧಾನಿ ವಿದೇಶ ಪ್ರವಾಸಗಳಿಗೆ ಕೇಂದ್ರ ಸರಕಾರ 362 ಕೋಟಿ ರೂ. ಖರ್ಚು ಮಾಡಿದೆ.

ಈ ವರ್ಷವೇ ಏಳು ತಿಂಗಳುಗಳಲ್ಲೇ 67 ಕೋಟಿ ರೂ. ಖರ್ಚಾಗಿದೆ. ಅದರಲ್ಲೂ ಅತ್ಯಂತ ದುಬಾರಿ ಎಂದರೆ ಅವರ ಫ್ರಾನ್ಸ್ ಪ್ರವಾಸ. ಅದೊಂದಕ್ಕೇ ಆಗಿರುವ ವೆಚ್ಚ 25 ಕೋಟಿ ರೂ. ಗಳಿಗೂ ಹೆಚ್ಚು. ಯಾರಿಗೆ ಅಚ್ಛೇ ದಿನಗಳನ್ನು ತರುವ ಸಲುವಾಗಿ ಇಷ್ಟು ಕೋಟಿ ಕೋಟಿ ಹಣ ಸುರಿಯಲಾಗಿದೆ?

ರಾಜ್ಯಸಭೆಯಲ್ಲಿ ಸರಕಾರ ಹಂಚಿಕೊಂಡಿರುವ ಮಾಹಿತಿ ಈ ದಂಗುಬಡಿಸುವ ಕೋಟಿಗಟ್ಟಲೆ ಖರ್ಚುಗಳನ್ನು ಬಹಿರಂಗಪಡಿಸಿದೆ. ಆ ಮಾಹಿತಿಯ ಪ್ರಕಾರ, 2025ರಲ್ಲಿ ಅಮೆರಿಕ ಮತ್ತು ಫ್ರಾನ್ಸ್ ಸೇರಿದಂತೆ ಐದು ದೇಶಗಳಿಗೆ ಅವರ ಭೇಟಿಗಳಿಗಾಗಿ 67 ಕೋಟಿ ರೂ.ಗಳಿಗೂ ಹೆಚ್ಚು ಖರ್ಚಾಗಿದೆ.

ಟಿಎಂಸಿ ಸಂಸದ ಡರೆಕ್ ಒಬ್ರಿಯಾನ್ ಅವರ ಪ್ರಶ್ನೆಗೆ ಉತ್ತರವಾಗಿ, ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ಕೀರ್ತಿ ವರ್ಧನ್ ಸಿಂಗ್ ಈ ವೆಚ್ಚದ ವಿವರ ನೀಡಿದ್ದಾರೆ.

2025ರಲ್ಲಿ ಫ್ರಾನ್ಸ್ ಪ್ರವಾಸಕ್ಕೆ 25 ಕೋಟಿ ರೂ.ಗಳಿಗಿಂತ ಹೆಚ್ಚು ವೆಚ್ಚವಾದರೆ, ಅಮೆರಿಕ ಭೇಟಿಗೆ 16 ಕೋಟಿಗೂ ಹೆಚ್ಚು ಹಣ ಖರ್ಚಾಗಿದೆ.

ಹಿಂದಿನ ವರ್ಷಗಳ ಡೇಟಾಗಳ ಪ್ರಕಾರ,

2024ರಲ್ಲಿ ರಶ್ಯ ಮತ್ತು ಉಕ್ರೇನ್ ಸೇರಿದಂತೆ 16 ದೇಶಗಳ ಪ್ರವಾಸಕ್ಕೆ 109 ಕೋಟಿ ರೂ. ಖರ್ಚು ಮಾಡಲಾಗಿದೆ. 2023ರಲ್ಲಿ ಸುಮಾರು ರೂ. 93 ಕೋಟಿ ವೆಚ್ಚವಾಗಿದೆ. 2022ರಲ್ಲಿ 55.82 ಕೋಟಿ ರೂ; 2021ರಲ್ಲಿ 36 ಕೋಟಿ ರೂ. ಖರ್ಚಾಗಿದೆ.

ಮೋದಿ ವಿದೇಶ ಪ್ರವಾಸ ಕೈಗೊಳ್ಳುವಾಗ, ಅದರ ಜಾಹೀರಾತಿಗಾಗಿಯೂ ಲಕ್ಷಾಂತರ ಹಣ ವೆಚ್ಚವಾಗುತ್ತದೆ.ಉದಾಹರಣೆಗೆ, 2023ರ ಈಜಿಪ್ಟ್ ಭೇಟಿಯಲ್ಲಿ ಜಾಹೀರಾತಿಗಾಗಿ 11.90 ಲಕ್ಷ ರೂ. ಖರ್ಚು ಮಾಡಲಾಗಿದೆ.

ಮೋದಿಯವರ ವಿದೇಶ ಪ್ರವಾಸಗಳು ಅವರ ಕೆಲಸದ ಒಂದು ಭಾಗವೆಂಬುದು ಸರಿಯೇ ಆದರೂ, ಇಷ್ಟು ದುಬಾರಿ ವೆಚ್ಚದಲ್ಲಿ ದೇಶಕ್ಕೆ ಸಿಕ್ಕಿದ್ದೇನು ಎಂಬ ಪ್ರಶ್ನೆಯೂ ಮಹತ್ವದ್ದಾಗುತ್ತದೆ.

ಮೋದಿ ಹೀಗೆ ದಾಖಲೆಯ ಲೆಕ್ಕದಲ್ಲಿ ವಿದೇಶಗಳಿಗೆ ಹೋಗುತ್ತಾರೆ. ದೇಶದ ಜನರ ಕೋಟಿಗಟ್ಟಲೆ ತೆರಿಗೆ ದುಡ್ಡನ್ನು ಖರ್ಚು ಮಾಡುತ್ತಾರೆ. ಆದರೆ ದೇಶಕ್ಕೆ ನಿಜವಾಗಿ ಅಂತರ್ ರಾಷ್ಟ್ರೀಯ ಬೆಂಬಲ ಬೇಕಾಗಿರುವಾಗ ಮೋದಿಯವರು ಭೇಟಿ ಕೊಟ್ಟ ಯಾವ ದೇಶಗಳೂ ನಮ್ಮ ಜೊತೆ ನಿಲ್ಲುವುದೇ ಇಲ್ಲ.

ಮೋದಿಯವರು ಹೋಗಿ ಆಲಂಗಿಸಿ, ಚಾ ಕುಡಿದು ಬಂದ ದೇಶದ ನಾಯಕರು ಪಾಕಿಸ್ತಾನವನ್ನು ಭಯೋತ್ಪಾದನೆ ಹರಡುವ ದೇಶ ಎಂದು ಖಂಡಿಸುವುದಿಲ್ಲ, ಉಗ್ರರನ್ನು ಬೆಳೆಸುವ ಪಾಕಿಸ್ತಾನಕ್ಕೇ ವಿಶ್ವಸಂಸ್ಥೆಯ ಉಗ್ರ ವಿರೋಧಿ ಸಮಿತಿಯ ಉಪಾಧ್ಯಕ್ಷ ಸ್ಥಾನ ಕೊಟ್ಟರೆ ಮೋದಿಯವರು ಹೋಗಿ ಬಂದ ದೇಶಗಳ ನಾಯಕರು ಅದನ್ನೂ ವಿರೋಧಿಸುವುದಿಲ್ಲ ವಾದರೆ ಇಂತಹ ವಿದೇಶ ಪ್ರವಾಸಗಳಿಂದ ಸಾಧಿಸುವುದಾದರೂ ಏನು?

ಭಾರತದಲ್ಲಿ ಈಗ ಅಧಿವೇಶನ ನಡೆಯುತ್ತಿರುವಾಗ, ಮೋದಿ ಯುಕೆ, ಮಾಲ್ದೀವ್ಸ್ ಪ್ರವಾಸದಲ್ಲಿದ್ದಾರೆ.

ಅದರ ಬಗ್ಗೆ ಕಾಂಗ್ರೆಸ್ ಸಂಸದ ಪ್ರಮೋದ್ ತಿವಾರಿ ಪ್ರಶ್ನಿಸಿದ್ದಾರೆ. ಹೀಗಿರುವಾಗ ಅವರು ಸಂಸತ್ತಿನ ಅಧಿವೇಶನವನ್ನು ಏಕೆ ಕರೆದರು ಎಂದು ತಿವಾರಿ ಕೇಳಿದ್ದಾರೆ.

ಪ್ರಧಾನಿ ಲೋಕಸಭೆ ಮತ್ತು ರಾಜ್ಯಸಭೆಗೆ ಎಷ್ಟು ದಿನ ಹಾಜರಾಗಿದ್ದಾರೆ ಎಂಬುದನ್ನು ನೋಡಿಕೊಳ್ಳಬೇಕು. ಪ್ರಧಾನಿಗೆ ಪ್ರಜಾಪ್ರಭುತ್ವದ ಬಗ್ಗೆ ಗಂಭೀರತೆಯಿಲ್ಲ ಎಂದು ಅವರು ಟೀಕಿಸಿದ್ಧಾರೆ.

ಆಪರೇಷನ್ ಸಿಂಧೂರ, ಪಹಲ್ಗಾಮ್ ಭಯೋತ್ಪಾದಕ ದಾಳಿ ವಿಷಯ, ಏರ್ ಇಂಡಿಯಾ ವಿಮಾನ ಅಪಘಾತ ಮತ್ತು ಬಿಹಾರ ಮತದಾರರ ಪಟ್ಟಿ ಪರಿಷ್ಕರಣೆ ಇಂಥ ಹಲವಾರು ವಿಷಯಗಳು ಸಂಸತ್ತಿನಲ್ಲಿ ಚರ್ಚೆಯಾಗಬೇಕಿರುವ ಸಮಯ ಇದು. ಹಲವಾರು ಪ್ರಶ್ನೆಗಳಿಗೆ ಸಂಬಂಧಿಸಿ ದೇಶ ಪ್ರಧಾನಿಯ ಉತ್ತರಗಳಿಗಾಗಿ ಕಾದಿರುವ ಸಮಯ ಇದು. ಹೀಗಿರುವಾಗಲೂ ಪ್ರಧಾನಿ ಅಧಿವೇಶನದಲ್ಲಿ ಇರದೆ, ವಿದೇಶಗಳಲ್ಲಿ ಇರುವುದರ ಬಗ್ಗೆ ತಿವಾರಿ ಪ್ರಶ್ನಿಸಿದ್ದಾರೆ.

ಸದನವನ್ನು ನಡೆಸುವಲ್ಲಿ ಸರಕಾರದ ಗಂಭೀರತೆಯ ಬಗ್ಗೆಯೇ ಅನುಮಾನಗಳು ಏಳುತ್ತವೆ ಎಂದು ಅವರು ಹೇಳಿದ್ದಾರೆ.

ಅಧಿವೇಶನದ ಹೊತ್ತಿನ ವಿದೇಶ ಪ್ರವಾಸಕ್ಕೆ ಸಂಬಂಧಿಸಿ, ಕಾಂಗ್ರೆಸ್ ಸಂಸದ ಜೈರಾಂ ರಮೇಶ್ ಕೂಡ ಮೋದಿಯವರನ್ನು ಟೀಕಿಸಿದ್ಧಾರೆ.

ಪಹಲ್ಗಾಮ್ ಭಯೋತ್ಪಾದಕ ದಾಳಿ ಮತ್ತು ಆಪರೇಷನ್ ಸಿಂಧೂರದ ಕುರಿತು ಚರ್ಚಿಸಲು ಮೋದಿ ಹಾಜರಿರುವಂತೆ ಅವರು ಒತ್ತಾಯಿಸಿದ್ದಾರೆ.

ಪ್ರಧಾನಿಯವರ ಅನುಪಸ್ಥಿತಿಯು ಪ್ರಮುಖ ವಿಷಯಗಳ ಬಗ್ಗೆ ಸರಕಾರದ ನಿಲುವನ್ನು ಖಚಿತಪಡಿಸುತ್ತದೆ ಎಂದು ಜೈರಾಂ ರಮೇಶ್ ಪ್ರತಿಪಾದಿಸಿದ್ದಾರೆ.

ಜುಲೈ 26ರವರೆಗೆ ವಿದೇಶ ಪ್ರವಾಸದಲ್ಲಿದ್ದ ಮೋದಿ ಅಲ್ಲಿಂದ ಬಂದ ಕೂಡಲೇ ಸಂಸತ್ತಿಗೆ ಬರುವ ಖಾತರಿ ಇಲ್ಲ.

ಆ ನಂತರ ಅವರು ತಮಿಳು ಾಡಿನಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೀಗೆ ಪ್ರಧಾನ ಸೇವಕರ ಪ್ರವಾಸಗಳು ಮುಗಿಯುವುದೇ ಇಲ್ಲ. ಹಾಗಾದರೆ, ಸಂಸತ್ತಿನ ಅಧಿವೇಶನಲ್ಲಿ ಹಲವಾರು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡುವ ಉದ್ದೇಶವೇ ಅವರಿಗಿಲ್ಲವೆ?

share
ಹರೀಶ್ ಎಚ್.ಕೆ.
ಹರೀಶ್ ಎಚ್.ಕೆ.
Next Story
X