Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರದ ವಿಶೇಷ
  3. ಇ-ಜಗತ್ತು
  4. ಆನ್ ಲೈನ್ ನಲ್ಲಿ ನಿಮ್ಮ ಹಣವನ್ನು...

ಆನ್ ಲೈನ್ ನಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿಸಲು ಹೀಗೆ ಮಾಡಿ

ವಾರ್ತಾಭಾರತಿವಾರ್ತಾಭಾರತಿ18 July 2021 7:14 PM IST
share
ಆನ್ ಲೈನ್ ನಲ್ಲಿ ನಿಮ್ಮ ಹಣವನ್ನು ಸುರಕ್ಷಿತವಾಗಿಸಲು ಹೀಗೆ ಮಾಡಿ

ತಂತ್ರಜ್ಞಾನದ ಬೆಳವಣಿಗೆ ಮತ್ತು ಡಿಜಿಟಲೀಕರಣದ ವ್ಯಾಪಕತೆ ಹೆಚ್ಚುತ್ತಿರುವುದರೊಂದಿಗೆ ಸೈಬರ್ ಕ್ರಿಮಿನಲ್ ಗಳು ಮತ್ತು ವಂಚಕರು ಈಗ ಹಿಂದೆಂದಿಗಿಂತಲೂ ಹೆಚ್ಚು ವ್ಯಸ್ತರಾಗಿದ್ದಾರೆ. ಕೋವಿಡ್ ಸಾಂಕ್ರಾಮಿಕ ಮತ್ತು ಲಾಕ್ ಡೌನ್ ಗಳಿಂದಾಗಿ ಆನ್ ಲೈನ್ ಚಟುವಟಿಕೆಗಳು ಹೆಚ್ಚುತ್ತಿದ್ದು, ಆನ್ ಲೈನ್ ವಂಚನೆಗಳೂ ಹೆಚ್ಚುತ್ತಿವೆ. ಜನರನ್ನು ವಂಚಿಸಲು ಈ ವಂಚಕರು ಹೊಸ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಆನ್ ಲೈನ್ ನಲ್ಲಿ ವಹಿವಾಟು ನಡೆಸುವಾಗ ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಮತ್ತು ಜಾಗರೂಕರಾಗಿರುವುದು ಜನರಿಗೆ ಬಿಟ್ಟಿದ್ದು ಎನ್ನುತ್ತಾರೆ ಉದ್ಯಮ ತಜ್ಞರು.
ಆನ್ ಲೈನ್ ನಲ್ಲಿ ನಿಮ್ಮ ಹಣದ ಸುರಕ್ಷತೆಯನ್ನು ಕಾಯ್ದುಕೊಳ್ಳಲು ಕೆಲವು ಮಾರ್ಗಗಳು ಇಲ್ಲಿವೆ.....

► ಒಟಿಪಿ ಮತ್ತು ಕ್ಯೂಆರ್ ಕೋಡ್ ಗಳು


ಒಟಿಪಿ ಅಥವಾ ಒಂದು ಬಾರಿಯ ಪಾಸ್ವರ್ಡ್ ಸಾಮಾನ್ಯ ಪಾಸ್ವರ್ಡ್ ಗಳಿಗಿಂತ ಭಿನ್ನವಾಗಿರುವುದಿಲ್ಲ,ಹೀಗಾಗಿ ಅಪರಿಚಿತ ವ್ಯಕ್ತಿಗಳು ಅಥವಾ ಸಂಸ್ಥೆಗಳೊಂದಿಗೆ ಅದನ್ನು ಹಂಚಿಕೊಳ್ಳುವುದು ನೀವು ಹಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ. ಇದೇ ರೀತಿ ದೃಢೀಕೃತವಲ್ಲದ ಕ್ಯೂಆರ್ ಕೋಡ್ ಗಳನ್ನು ಸ್ಕಾನ್ ಮಾಡುವುದು ಕೂಡ ನಿಮಗೆ ಹಣಕಾಸು ನಷ್ಟವನ್ನುಂಟು ಮಾಡಬಹುದು.

ಹಲವಾರು ಬ್ಯಾಂಕ್ಗಳು ಮತ್ತು ವೆಬ್ ಸೈಟ್ ಗಳು ಒಟಿಪಿ ದೃಢೀಕರಣದೊಂದಿಗೆ ಜನರು ತಮ್ಮ ಪಾಸ್ವರ್ಡ್ಗಳನ್ನು ಬದಲಿಸಲು ಅವಕಾಶ ಕಲ್ಪಿಸಿವೆ. ವಂಚಕರು ಈಗ ಕೇವಲ ಒಟಿಪಿ ದೃಢೀಕರಣಕ್ಕಾಗಿ ಕೇಳುವ ಮೂಲಕ ವ್ಯಕ್ತಿಗಳ ಆನ್ ಲೈನ್ ಬ್ಯಾಂಕಿಂಗ್ ಲಾಗಿನ್ ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಅಲ್ಲದೆ ಯಾವುದೇ ಕ್ಯೂಆರ್ ಕೋಡ್ ನನ್ನು ಸ್ಕಾನ್ ಮಾಡುವುದರಿಂದ ವ್ಯಕ್ತಿಯ ವ್ಯಾಲೆಟ್, ಬ್ಯಾಂಕ್ ಖಾತೆ ಇತ್ಯಾದಿಗಳೊಂದಿಗೆ ಜೋಡಣೆಯಾಗಿರುವ ವಿವರಗಳು ಕಳ್ಳತನವಾಗಬಹುದು. ಹೀಗಾಗಿ ಒಟಿಪಿಗಳನ್ನು ಹಂಚಿಕೊಳ್ಳುವ ಗೋಜಿಗೆ ಹೋಗಬೇಡಿ ಮತ್ತು ನಿಮಗೆ ದೃಢಪಡದಿದ್ದರೆ ಕ್ಯೂಆರ್ ಕೋಡ್ ಗಳನ್ನು ಸ್ಕಾನ್ ಮಾಡುವುದರಿಂದ ದೂರವಿರಿ.

►ಲಿಂಕ್ ಅನ್ನು ಕ್ಲಿಕ್ಕಿಸುವುದು


ವಂಚಕರು ಇ-ಮೇಲ್ ತಂತ್ರವನ್ನು ಬಳಸಿ ಅಮಾಯಕರನ್ನು ಬಲೆಗೆ ಬೀಳಿಸುತ್ತಾರೆ. ವಂಚಕರು ಮೇಲ್ನೋಟಕ್ಕೆ ಅಸಲಿಯೆಂಬಂತೆ ಕಂಡು ಬರುವ ಇ-ಮೇಲ್ಗಳನ್ನು ರವಾನಿಸುತ್ತಾರೆ. ಅದರಲ್ಲಿರುವ ಲಿಂಕ್ಗಳೂ ಅಧಿಕೃತವೆಂಬಂತೆ ಕಂಡು ಬರುತ್ತವೆ. ಅಸಲಿಗೆ ಇದು ಫಿಷಿಂಗ್ ತಂತ್ರವಾಗಿದೆ. ಹೆಚ್ಚಾಗಿ ಬ್ಯಾಂಕುಗಳು,ವಿಮಾ ಕಂಪನಿಗಳು ಇತ್ಯಾದಿಗಳ ಹೆಸರುಗಳಲ್ಲಿ ಇಂತಹ ಇ-ಮೇಲ್ಗಳು ನಿಮ್ಮ ಮೇಲ್ಬಾಕ್ಸ್ ಬಂದು ಬೀಳುತ್ತವೆ. ಹೆಚ್ಚಿನ ಜನರಿಗೆ ಅಸಲಿ ಮತ್ತು ನಕಲಿ ಲಿಂಕ್ಗಳ ನಡುವಿನ ವ್ಯತ್ಯಾಸ ಗೊತ್ತಿರುವುದಿಲ್ಲ, ಹೀಗಾಗಿ ಇಂತಹ ಲಿಂಕ್ಗಳನ್ನು ಕ್ಲಿಕ್ಕಿಸದಿರುವುದು ಒಳ್ಳೆಯದು ಎನ್ನುತ್ತಾರೆ ತಜ್ಞರು.


►ಕಾರ್ಡ್ ವಿವರಗಳ ದಾಸ್ತಾನು


ಹೆಚ್ಚಿನ ಜನರು ವಿವಿಧ ವೆಬ್ ಸೈಟ್ ಗಳಲ್ಲಿ ಮತ್ತು ಪ್ಲಾಟ್ಫಾರ್ಮ್ಗಳಲ್ಲಿ ವಹಿವಾಟು ಸುಲಭವಾಗಲೆಂದು ತಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ಗಳ ವಿವರಗಳನ್ನು ಸೇವ್ ಮಾಡಿರುತ್ತಾರೆ. ಆದರೆ ಈ ಪ್ರವೃತ್ತಿಯಿಂದ ದೂರವಿರುವುದು ಒಳ್ಳೆಯದು. ಬ್ರೌಸರ್ನಲ್ಲಿ ಆಟೋ-ಫಿಲ್ ಸೌಲಭ್ಯವನ್ನು ಟರ್ನ್ ಆಫ್ ಮಾಡುವುದರ ಜೊತೆಗೆ ಬ್ಯಾಂಕ್ ಆ್ಯಪ್ ಅಥವಾ ವೆಬ್ ಸೈಟ್ ಮೂಲಕ ಯಾವುದೇ ಕ್ರೆಡಿಟ್ ಕಾರ್ಡ್ನ ಆನ್ ಲೈನ್ ಮತ್ತು ಟ್ಯಾಪ್ ಆ್ಯಂಡ್ ಪೇ ಸೌಲಭ್ಯವನ್ನೂ ಟರ್ನ್ ಆಫ್ ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಒಳ್ಳೆಯದು. ಹೀಗೆ ಟರ್ನ್ ಆಫ್ ಮಾಡುವುದರಿಂದ ಅನಾನುಕೂಲತೆ ಹೆಚ್ಚಬಹುದಾದರೂ ಅದು ಖಂಡಿತವಾಗಿಯೂ ನಿಮ್ಮ ಆನ್ ಲೈನ್ ವಹಿವಾಟುಗಳನ್ನು ಹೆಚ್ಚು ಸುರಕ್ಷಿತವಾಗಿಸುತ್ತದೆ.


► ಟ್ಯಾಪ್ ಆ್ಯಂಡ್ ಪೇ ಕಾರ್ಡ್ ಗಳು


ನೂತನ ತಂತ್ರಜ್ಞಾನ ಪ್ರಗತಿಯಲ್ಲಿ ಟ್ಯಾಪ್ ಆ್ಯಂಡ್ ಪೇ ಸೌಲಭ್ಯವು ಸೇರಿದ್ದು,ಇದು ಪಿನ್ ಅಥವಾ ಕೋಡ್ ಅನ್ನು ದಾಖಲಿಸದೆ ವಹಿವಾಟು ನಡೆಸಲು ಅನುಕೂಲವನ್ನು ಕಲ್ಪಿಸಿದೆ. ಪಿನ್ ದೃಢೀಕರಣವಿಲ್ಲದೆ ನಿಮ್ಮ ಖಾತೆಯ ಪ್ರವೇಶವನ್ನು ಈ ಸೌಲಭ್ಯವು ಸುಲಭವಾಗಿಸಿದೆಯಾದರೂ ಕಾರ್ಡ್ನ್ನು ಕಳೆದುಕೊಂಡಾಗ ಅಥವಾ ಕಳ್ಳತನವಾದಾಗ ತೊಂದರೆಗೆ ಕಾರಣವಾಗುತ್ತದೆ. ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಈ ಸೌಲಭ್ಯವನ್ನು ಸೀಮಿತವಾಗಿ ಬಳಸಬೇಕು ಅಥವಾ ಸಂಪೂರ್ಣವಾಗಿ ನಿರ್ಬಂಧಿಸಬೇಕು ಎನ್ನುತ್ತಾರೆ ತಜ್ಞರು.

► ಕೊಡುಗೆಗಳಿಂದ ಕಳಚಿಕೊಳ್ಳಿ


ಆಫರ್ಗಳು ಅಥವಾ ಕೊಡುಗೆಗಳು,ರಿಯಾಯಿತಿಗಳು ಮತ್ತು ಪ್ರಚಾರಗಳು ಹಲವರನ್ನು ಆಕರ್ಷಿಸುತ್ತವೆ. ಇಂತಹ ಪ್ರಚಾರದ ಸಂದೇಶಗಳ ಮೂಲಕ ಜನರು ವಂಚಕರಿಗೆ ಬಲಿಯಾಗುತ್ತಾರೆ. ಹೀಗಾಗಿ ಇಂತಹ ಪ್ರೊಮೋಶನಲ್ ಆಫರ್ಗಳಿಂದ ಅನ್ಸಬ್ಸ್ಕ್ರೈಬ್ ಆಗುವುದು ಅಥವಾ ಸಂಪರ್ಕವನ್ನು ಕಡಿದುಕೊಳ್ಳುವುದು ವಂಚನೆಗಳನ್ನು ತಪ್ಪಿಸಲು ಮತ್ತು ವಂಚಕರ ಬಲೆಗೆ ಬೀಳದಿರಲು ಅತ್ಯುತ್ತಮ ಮಾರ್ಗವಾಗಿದೆ. ಬ್ಯಾಂಕ್ ಆಗಿರಲಿ ಅಥವಾ ಇನ್ಯಾವುದೇ ಹಣಕಾಸು ಸಂಸ್ಥೆಯಾಗಿರಲಿ,ಅವು ಗ್ರಾಹಕರಿಗೆ ಇ-ಮೇಲ್ಗಳು ಮತ್ತು ಎಸ್ಎಂಎಸ್ಗಳ ಮಹಾಪೂರವನ್ನೇ ರವಾನಿಸುವುದರಿಂದ ಇಂತಹ ಪ್ರಚಾರ ಸಂದೇಶಗಳಿಂದ ಅನ್ಸಬ್ಸ್ಕ್ರೈಬ್ ಆಗುವುದು ನಿಮ್ಮ ಹಣದ ಸುರಕ್ಷತೆಯ ದೃಷ್ಟಿಯಿಂದ ಒಳ್ಳೆಯದು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X