Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಮೊಳಕೆ ಕಟ್ಟು

ಮೊಳಕೆ ಕಟ್ಟು

ರಾಜೇಂದ್ರ ಪ್ರಸಾದ್ರಾಜೇಂದ್ರ ಪ್ರಸಾದ್15 Sept 2020 12:10 AM IST
share
ಮೊಳಕೆ ಕಟ್ಟು

ಮನುಷ್ಯ ಬಳಸುವ ಆಹಾರ ಧಾನ್ಯಗಳಲ್ಲಿ ಕಾಳುಗಳು ಕೂಡ ಮುಖ್ಯವಾದುವು. ಭತ್ತ, ರಾಗಿ, ಗೋಧಿ ಇತ್ಯಾದಿ ಏಕದಳ ಧಾನ್ಯಗಳ ಜೊತೆಗೆ ಹೆಸರು, ಉದ್ದು, ಅವರೆ, ಅಲಸಂಡೆ, ಕಡಲೆ ಸೇರಿದಂತೆ ಹಲವಾರು ಬಗೆಯ ದ್ವಿದಳ ಧಾನ್ಯಗಳ ಬಳಕೆಯು ಬಹಳಷ್ಟಿದೆ. ಇವೆಲ್ಲ ನಿನ್ನೆ ಮೊನ್ನೆ ಅಥವಾ ಶತಮಾನಗಳ ಹಿಂದೆ ರೂಪಿತವಾಗಿ ಬಳಸಲು ಶುರು ಮಾಡಿದುದಲ್ಲ.. ಅನಾದಿ ಕಾಲದಿಂದಲೂ ರೂಢಿಯಲ್ಲಿರುವಂತಹವು. ಈಗ ಇಂತಹ ಧಾನ್ಯಗಳಲ್ಲಿ ಒಂದಷ್ಟು ಕಸಿ ತಳಿಯ ಪ್ರಯೋಗಗಳಾಗಿವೆ ಬಿಟ್ಟರೆ ಉಳಿದುದುದೆಲ್ಲವೂ ಪರಂಪರೆಯಿಂದ ಬಂದುದು. ಶೀತ, ಉಷ್ಣ ಮತ್ತು ಸಮಶೀತೋಷ್ಣ ಭೌಗೋಳಿಕ ವಲಯಗಳಲ್ಲಿ ಅಲ್ಲಿನ ಪರಿಸರ ಮತ್ತು ಹವೆಗೆ ತಕ್ಕಂತಹ ಹಲವಾರು ತರಹದ ಕಾಳುಗಳನ್ನು ಬೆಳೆಯಲಾಗುತ್ತದೆ. ಇವು ಬೇಳೆ ಮತ್ತು ಹಿಟ್ಟುಗಳಾಗಿ ಕೂಡ ಬಳಕೆಯಲ್ಲಿವೆ. ಕಾಳುಗಳು ಮತ್ತು ಕಣಜಗಳು ಮನುಷ್ಯ ವಿಕಾಸದ ಉದ್ದಕ್ಕೂ ಅವನೊಟ್ಟಿಗೆ ಸಾಗಿ ಬಂದಿರುವ ಸಂಪತ್ತುಗಳು. ಬಯಲು ಸೀಮೆಯಲ್ಲಿ ಹೆಚ್ಚು ಲಭ್ಯವಿರುವ ಮಳೆ ಆಶ್ರಿತ ಕೃಷಿ ಭೂಮಿಯಲ್ಲಿ ಕಾಳುಗಳು ಮತ್ತು ರಾಗಿ ಪ್ರಮುಖ ಬೆಳೆಗಳು. ನೀರಾವರಿ ಸೌಕರ್ಯಗಳು ಸಿಗುವ ಮೊದಲು ಅದೆಷ್ಟೋ ರೈತಾಪಿ ಕುಟುಂಬಗಳು ಭತ್ತ, ಕಬ್ಬು ತೆರನಾದ ಬೆಳೆಗಳನ್ನೇ ಬೆಳೆಯುತ್ತಿರಲಿಲ್ಲ.

ಅವರ ಮನೆಯ ಆಹಾರದಲ್ಲೂ ರಾಗಿ ಮತ್ತು ಕಾಳುಗಳು ಹೆಚ್ಚು. ಅನ್ನ ಅಪರೂಪವಾಗಿತ್ತು. ಬಹುಶಃ ಇವೇ ಅವರ ಶ್ರಮದ ಬದುಕಿನ ಸಂಜೀವಿನಿ ಆಗಿದ್ದುವು ಅನಿಸುತ್ತದೆ. ಕಾಳುಗಳನ್ನು ಗದ್ದೆ, ತೋಟದ ಬದುಗಳಲ್ಲಿ ಮಿಶ್ರ ಬೆಳೆಯಾಗಿ ಕೂಡ ಬೆಳೆಯಲಾಗುತ್ತಿತ್ತು. ಹಳೆ ಮೈಸೂರು ಭಾಗದ ಹೊಲಗಳಲ್ಲಿ ಬೆಳೆಯುತ್ತಿದ್ದ ಕಾಳುಗಳಲ್ಲಿ ಹೆಚ್ಚು ಭಾಗ ಹುರುಳಿಕಾಳಿನದ್ದೇ ಸಾಮ್ರಾಜ್ಯವಾಗಿತ್ತು. ಕಾಳುಗಳನ್ನು ತಕ್ಕ ಹಾಗೆ ಬೆಳೆಯಬೇಕು. ಇಲ್ಲಿ ಬೆಳೆದ ಹಸಿಕಾಳುಗಳನ್ನೇ ನೇರವಾಗಿ ಅಡುಗೆಗೆ ಬಳಸುತ್ತೇವೆ. ಉದಾ: ಅವರೆಕಾಯಿ, ಅಲಸಂಡೆೆಕಾಯಿ, ತೊಗರಿಕಾಯಿ. ಆದರೆ ಹುರುಳಿ, ಉದ್ದು, ಹೆಸರುಕಾಳುಗಳನ್ನೂ ಹಸಿಯಲ್ಲೇ ಬಳಸಿದ್ದು ನನಗೆ ತಿಳಿದಿಲ್ಲ. ಕಡಲೆಯನ್ನು ಹಸಿಯಲ್ಲಿ ಆರಾಮವಾಗಿ ತಿನ್ನಬಹುದು, ಸಲಾಡ್‌ಗೆ ಬಳಸಬಹುದು. ಅಡುಗೆಗೆ ಬಳಸಿದ್ದು ಕಾಣೆ. ಇಂತಹ ಹಸಿ ಕಡಲೆಯನ್ನು ಸಂತೆಯಲ್ಲಿ ಮಾರುಕಟ್ಟೆಯಲ್ಲಿ ಒಂದೊಂದು ಗೊಂಚಲು ಕೊಂಡು ಬಿಡಿಸಿ ತಿನ್ನುವುದನ್ನು ಮಾತ್ರ ನೋಡಿದ್ದೇನೆ.

ಈ ಹಸಿಕಾಳುಗಳನ್ನು ಪಲ್ಯಕ್ಕೆ, ಸಾರಿಗೆ ಸೊಪ್ಪು, ತರಕಾರಿಗಳ ಜೊತೆಗೆ ಬಳಸಿದರೆ ಒಳ್ಳೆಯ ರುಚಿ. ಇದರಿಂದ ಉಪ್ಸಾರು, ಬಸ್ಸಾರು ಮಾಡಿದರೆ ಹೊಟ್ಟೆ ಎರಡಾಗುವಷ್ಟು ಊಟ ಸೇರುತ್ತದೆ. ಇನ್ನು ಈ ಬೆಳೆದ ಕಾಳುಗಳನ್ನು ಒಣಗಲು ಬಿಟ್ಟು ನಂತರ ಒಕ್ಕಣೆ ಮಾಡಿ ಬಿಡಿಸಿ ತೂರಿ ಹಸನು ಮಾಡಿ ಸಂಗ್ರಹಿಸಿಟ್ಟು ಬೇಕಾದಾಗ ಹುರಿದೋ ಅಥವಾ ನೀರಲ್ಲಿ ನೆನೆಸಿಯೋ ಅಡುಗೆಗೆ ಬಳಸಿಕೊಳ್ಳಬಹುದು. ಸಾಂಬಾರು, ಪಲ್ಯ, ಉಸಲಿ ಮುಂತಾದುವಕ್ಕೆ ಬಳಸಬಹುದು. ಹಸಿಕಾಳು ಮತ್ತು ಒಣಗಿಸಿದ ಕಾಳುಗಳನ್ನು ತಿನ್ನುವಂತೆಯೇ ಮೊಳಕೆ ಬರಿಸಿದ ಕಾಳುಗಳನ್ನು ಅಡುಗೆಗೆ ಬಳಸುವುದು ಕೂಡ ನಮ್ಮ ಪುರಾತನ ರೂಢಿ. ಮೊಳಕೆ ಕಟ್ಟಿದ ಎರಡು ಮೂರು ದಿನದ ತರುವಾಯ ಆ ಕಾಳುಗಳನ್ನು ಹಾಕಿ ಮಾಡಿದ ಮಸಾಲೆ ಸಾರು ಯಾವ ಮಾಂಸದ ಸಾರಿಗೂ ಕಡಿಮೆಯಿಲ್ಲ. ರುಚಿ, ಘಮ ಮತ್ತು ತೃಪ್ತಿಯಲ್ಲಿ ಮೊಳಕೆ ಕಾಳಿನ ಮಸಾಲೆ ಸಾರು ಜನಪ್ರಿಯ. ರಾಗಿಮುದ್ದೆ ಮತ್ತು ಅನ್ನಕ್ಕೆ ಹೊಂದಿಕೊಳ್ಳುವ ಈ ಸಾರನ್ನು ಚೂರು ಗಟ್ಟಿಯಾಗಿ ಜೊತೆಗೆ ಆಲೂಗೆಡ್ಡೆ, ಬದನೆಕಾಯಿ ಬೇಯಿಸಿ ಮಾಡಿದರೆ ಇಡ್ಲಿ, ರೊಟ್ಟಿ, ಚಪಾತಿ ಎಲ್ಲದಕ್ಕೂ ಒಳ್ಳೆಯ ಜೋಡಿ ಆಗುತ್ತದೆ. ಇದಕ್ಕೆ ಹುರುಳಿ. ಕಡಲೇ, ಅವರೆ, ಹೆಸರು, ಅಲಸಂಡೆ ಕೆಲವೊಮ್ಮೆ ಬಟಾಣಿ ಕಾಳುಗಳನ್ನೂ ಕೂಡ ಬಳಸಲಾಗುತ್ತದೆ. ಇವುಗಳಿಂದ ಮಸಾಲೆ ಸಾರು ಮಾತ್ರವಲ್ಲ ಎಣ್ಣೆಯಲ್ಲಿ ಹುರಿದು ಬೆಳ್ಳುಳ್ಳಿ ಒಗ್ಗರಣೆ ಜೊತೆಗೆ ಬೇಯಿಸಿ ಉಪ್ಸಾರು ಮತ್ತಷ್ಟು ರುಚಿಯಾಗಿರುತ್ತದೆ. ಉಪ್ಸಾರಲ್ಲಿ ಬೆಂದ ಮೊಳಕೆಕಾಳುಗಳನ್ನು ತೆಗೆದು ಈರುಳ್ಳಿ, ಹಸಿಮೆಣಸಿನಕಾಯಿ, ತೆಂಗಿನ ತುರಿ ಹುರಿದ ಎಣ್ಣೆಯ ಜೊತೆಗೆ ಬಾಡಿಸಿದರೆ ಒಳ್ಳೆಯ ಪಲ್ಯವಾಗುತ್ತದೆ. ಮೊಳಕೆಕಾಳುಗಳ ಬಾತ್ ಕೂಡ ಮಾಡಬಹುದು.

ಸಣ್ಣಗೆ ಹಚ್ಚಿದ ತರಕಾರಿಗಳ ಜೊತೆಗೆ ಈ ಕಾಳುಗಳನ್ನು ಕೂಡ ಸೇರಿಸಿದರೆ ಆಯಿತು ಉಳಿದಂತೆ ಮಸಾಲೆ ಪದಾರ್ಥಗಳಲ್ಲಿ ವ್ಯತ್ಯಾಸವಿಲ್ಲ. ಬೇಯಿಸಿ ಮಾಡುವ ಮೊಳಕೆ ಸಾರು ಪಲ್ಯಗಳದ್ದು ಒಂದು ವಿಧವಾದರೆ ಅವುಗಳನ್ನು ಹಸಿಯಾಗಿಯೇ ತಿನ್ನುವ ಅಡುಗೆಯದ್ದು ಮತ್ತೊಂದು ವಿಧ. ಈಚೆಗಂತೂ ತೂಕ ಇಳಿಸಿಕೊಳ್ಳುವ ಯುವಜನರು, ನಗರದ ಆಧುನಿಕರು ‘ಡಯಟ್ ಫುಡ್’ ಆಗಿ ಹೆಚ್ಚು ಬಳಸುತ್ತಾರೆ. ಹೆಸರು ಮತ್ತು ಕಡಲೆ ಕಾಳುಗಳನ್ನು ಇದರಲ್ಲಿ ಬಳಸಬಹುದು. ಮೊಳಕೆ ಕಟ್ಟಿದ ಹೆಸರುಕಾಳು ಬಹಳ ಜನಪ್ರಿಯ. ಇದರ ಮೊಳಕೆ ಪೈರು ಬೆಳೆದಂತೆಲ್ಲಾ ಅಡುಗೆಯಿಂದ ಅಡುಗೆಯ ಅಲಂಕರಣೆಯವರೆಗೆ ಎಲ್ಲ ಕಡೆಯೂ ಇದರದೇ ರಾಜ್ಯಭಾರ. ಸಣ್ಣದಾಗಿ ಮೊಳಕೆ ಬಂದ ಹೆಸರು ಕಾಳಿಗೆ ಚೂರು ಮೆಣಸಿನ ಪುಡಿ ಮತ್ತು ಉಪ್ಪುಬೆರೆಸಿ ಸಾಕು. ಬೆಳಗಿನ ತಿಂಡಿ ಬದಲಿಗೆ ಒಂದು ಬಟ್ಟಲು ಮೊಳಕೆ ಕಾಳು ಸಾಕಾಗುತ್ತದೆ. ಅರ್ಧ ಇಂಚಿನಷ್ಟು ಮೊಳಕೆ ಬಂದ ಕಾಳಿಗೆ ಸೌತೆಕಾಯಿ, ಕ್ಯಾರೆಟ್, ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು ಸಣ್ಣಗೆ ಹಚ್ಚಿ ಮೆಣಸಿನ ಪುಡಿ ಮತ್ತು ಉಪ್ಪು ಬೆರೆಸಿ ಕೋಸಂಬರಿ ಮಾಡಬಹುದು. ಅಗತ್ಯವಿದ್ದರೆ ಕಾಯಿತುರಿ ಬಳಸಬಹುದು. ಹಾಗೆಯೆ ಅನಾನಸು ಹಣ್ಣನ್ನು ಸಣ್ಣಗೆ ಹಚ್ಚಿ, ದ್ರಾಕ್ಷಿಯ ಹೋಳುಗಳ ಜೊತೆಗೆ ಮೆಣಸಿನಪುಡಿ, ಉಪ್ಪು, ಮೊಳಕೆ ಕಾಳು ಕಲಸಿ ಸಲಾಡ್ ಮಾಡಬಹುದು. ಸ್ವಲ್ಪಉದ್ದಕ್ಕೆ ಬೆಳೆದು ಎಲೆ ಮೂಡಿದ ಮೊಳಕೆಯ ಪೈರು. ಒಂದಲಗೆ, ಸ್ಟ್ರಾಬೆರಿ ಹಣ್ಣು, ಬೆಲ್ಲದ ಪುಡಿ ಉದುರಿಸಿ ಸೊಪ್ಪಿನ ಸಿಹಿ ಸಲಾಡ್ ಮಾಡಬಹುದು.

ಮೊಳಕೆ ಬಂದ ಕಡಲೆಕಾಳು ಮತ್ತು ಬೆಲ್ಲ ಒಳ್ಳೆಯ ಜೋಡಿ. ಯಾವುದೇ ಹಸಿ ಸೊಪ್ಪು ಮತ್ತು ತರಕಾರಿಯ ಜೊತೆಗೆ ನಿಂಬೆಹಣ್ಣಿನ ರಸ, ಕಾಳುಮೆಣಸಿನ ಪುಡಿ ಮತ್ತು ಉಪ್ಪುಇವುಗಳನ್ನು ಬೆರೆಸಿ ರುಚಿಗಟ್ಟುವ ಸಲಾಡ್ ಮಾಡಿ ತಿನ್ನಬಹುದು. ಆದರೆ ನೆನೆಪಿರಲಿ ಆ ಸೊಪ್ಪುಮತ್ತು ತರಕಾರಿಗಳು ಹಸಿಯಾಗಿ ತಿನ್ನಲು ಯೋಗ್ಯವಾಗಿರಬೇಕು. ಉದಾ: ಕ್ಯಾರೆಟ್, ಮೂಲಂಗಿ, ಸೌತೆಕಾಯಿ, ಹಸಿ ಮುಸುಕಿನ ಜೋಳ, ಕೊತ್ತಂಬರಿ ಸೊಪ್ಪು, ಒಂದೆಲಗ, ಲೆಕ್ಟಸ್, ಪುಂಡಿ ಸೊಪ್ಪುಈ ತರಹದವು. ಮೊಳಕೆ ಕಾಳುಗಳಲ್ಲಿ ಅಧಿಕ ಪೋಷಕಾಂಶ ಇರುವುದು ಉದ್ದಿನ ಕಾಳಿನಲ್ಲಿ. ಇದನ್ನು ಡಯಟ್ ಪುಡ್‌ನಲ್ಲಿ ಬಳಸಲಾಗುವುದಿಲ್ಲ. ಹಳೆ ಮೈಸೂರು ಭಾಗದಲ್ಲಿ ನೆನೆಸಿ ಮೊಳಕೆ ಬಂದ ಉದ್ದಿನಕಾಳನ್ನು ಮೈನೆರೆದ ಮೊದಲ ದಿನಗಳ ಪಥ್ಯದಲ್ಲಿ ಹೆಣ್ಣು ಮಕ್ಕಳಿಗೆ ಬೆಳಗಿನ ತಿಂಡಿಯಾಗಿ ತಿನ್ನಿಸುತ್ತಾರೆ. ಈ ಹಸಿಉದ್ದಿನ ಜೊತೆಗೆ ಹಸಿಬೆಲ್ಲ ಇದ್ದೇ ಇರುತ್ತದೆ.

ಇಲ್ಲಿ ಮೊಳಕೆಬಂದ/ ನೆನೆಸಿದ ಉದ್ದಿನ ಕಾಳು ವಿಶೇಷ ಆರೈಕೆಯ ಆಹಾರವಾಗಿ ಪರಿಗಣಿಸಲ್ಪಡುತ್ತದೆ. ಈ ಕಾಳುಗಳ ಜೊತೆಗೆ ಮೆಂತ್ಯೆ ಕಾಳನ್ನು ಕೂಡ ಮೊಳಕೆ ಕಟ್ಟಿ ಮೆಣಸು ಉಪ್ಪುಹಸಿ ತರಕಾರಿಗಳ ಜೊತೆಗೆ ಕಲಸಿ ಸಲಾಡ್ ಮಾಡಬಹುದು. ಇವುಗಳಿಂದಾಗುವ ನಿಶ್ಚಿತ ಆರೋಗ್ಯ ಲಾಭಗಳ ಬಗ್ಗೆ ವ್ಯಾಪಾರಿಯಂತೆ ನಾವು ಯೋಚಿಸಬಾರದು. ಅಗತ್ಯಕ್ಕೆ ತಕ್ಕಂತೆ ಆಹಾರ ಸೇವಿಸುವ ಪ್ರಾಣಿಯಾಗಿ ಮಾತ್ರ ಚಿಂತಿಸಬೇಕು. ಮಿತವು ಸುಖ ವಿಪರೀತವು ದುಃಖ. ಆಹಾರದ ವಿಚಾರಗಳಲ್ಲಿ ನಾವು ಟಿವಿ, ಸಾಮಾಜಿಕ ಮಾಧ್ಯಮಗಳು ಮತ್ತು ನೆರೆಹೊರೆಯ ನಡುವೆ ಬರೀ ಪ್ರವಚನಗಳನ್ನು ಕೇಳುವುದರಲ್ಲಿಯೇ ಕಾಲ ಕಳೆದು ಬಿಡುತ್ತೇವೆ. ಪ್ರಯೋಗಕ್ಕೆ ಮುಂದಾಗುವುದಿಲ್ಲ. ಹಾಗಾಗಿಯೇ ಮೊಳಕೆ ಕಾಳಿನ ಸಾರು ಮತ್ತು ಸಲಾಡ್‌ಗಳನ್ನು ಬಿಟ್ಟು ಬೇರೆಯ ಅಡುಗೆಗಳ ಬಗ್ಗೆ ನಮಗೆ ಹೆಚ್ಚು ಗೊತ್ತೇ ಇಲ್ಲ. ನಮ್ಮ ಇವತ್ತಿನ ಆಹಾರಕ್ರಮಗಳು ನಮ್ಮ ಹಿರಿಯರ ಪ್ರಯೋಗಶೀಲತೆಯಿಂದಲೇ ಹುಟ್ಟಿಬಂದವು ಎಂಬುದನ್ನು ನಾವು ಮನ ಮಾಡಿಕೊಂಡರೆ ನಮ್ಮ ಆಹಾರ ಕ್ರಮಗಳು ವಿಸ್ತಾರವಾಗುತ್ತಾ ಹೋಗುತ್ತವೆ.

ಈಗೆಲ್ಲಾ ಮನೆಯಲ್ಲಿ ಮೊಳಕೆ ಕಟ್ಟಿ ದಿನಮಾನ ಕಾಯುವ ಹಾಗೆಯೇ ಇಲ್ಲ. ಮಾರುಕಟ್ಟೆಯಲ್ಲಿ ಮತ್ತು ಬೀದಿಗಳಲ್ಲಿ ಮೊಳಕೆಕಾಳುಗಳು ಮಾರಾಟಕ್ಕೆ ಲಭ್ಯವಿವೆ. ನಮಗೆ ಬೇಕಾದಷ್ಟು ಕೊಂಡು ಅಡುಗೆ ಮಾಡುವುದಷ್ಟೇ ಬಾಕಿ. ಸಾರು, ಸಲಾಡೋ ಅಥವಾ ಸುಮ್ಮನೆ ಒಂದು ಪ್ರಯೋಗವೋ ನಮಗೇ ಬಿಟ್ಟದ್ದು ಅಷ್ಟೇ 

share
ರಾಜೇಂದ್ರ ಪ್ರಸಾದ್
ರಾಜೇಂದ್ರ ಪ್ರಸಾದ್
Next Story
X