Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ರಾಜಕಾರಣದ ಮಾತುಗಳನ್ನು ಮರುಕ್ಷಣವೇ...

ರಾಜಕಾರಣದ ಮಾತುಗಳನ್ನು ಮರುಕ್ಷಣವೇ ಮರೆಯಿರಿ

ವಾರ್ತಾಭಾರತಿವಾರ್ತಾಭಾರತಿ26 Dec 2019 11:54 PM IST
share
ರಾಜಕಾರಣದ ಮಾತುಗಳನ್ನು ಮರುಕ್ಷಣವೇ ಮರೆಯಿರಿ

ದಿನಾಂಕ 20 ಅಕ್ಟೋಬರ್ 1938ರಂದು ಮಧ್ಯಪ್ರಾಂತದ ವರ್ಹಾಡ ಪ್ರಾಂತದ ಕಾರ್ಯಕರ್ತರ ನಿಯೋಗವು ಡಾ. ಅಂಬೇಡ್ಕರ್ ಅವರನ್ನು ರಾಜಗೃಹದಲ್ಲಿ ಭೇಟಿಯಾಗಿದ್ದರು. ಕಾರ್ಯಕರ್ತರ ಮಾತು ಕೇಳಿದ ಬಳಿಕ ಡಾ. ಅಂಬೇಡ್ಕರ್ ಕಾರ್ಯಕರ್ತರನ್ನು ಉದ್ದೇಶಿಸಿ ನೀಡಿದ ಉಪದೇಶವನ್ನು ಕೆಳಗೆ ನೀಡಲಾಗಿದೆ. ಲೇಖಕರು ಸ್ವತಃ ನಿಯೋಗದ ಜೊತೆಗಿದ್ದರು. ಡಾ. ಅಂಬೇಡ್ಕರ್ ಮಾತಾಡಿದ್ದನ್ನೆಲ್ಲ ಲೇಖಕರು ನಮೂದಿಸಿರುವುದರಿಂದ ಅದನ್ನೇ ಆಯ್ದು ನೀಡಲಾಗಿದೆ.

ಬೆಳಗ್ಗೆ ಏಳಕ್ಕೆ ಕಾರ್ಯಕರ್ತರು ಡಾ. ಅಂಬೇಡ್ಕರ್ ಅವರನ್ನು ಭೇಟಿಯಾದರು. ಆಗ ಅವರು ಗಂಭೀರ ಮತ್ತು ಶಾಂತವಾಗಿ ಕಾಣುತ್ತಿದ್ದರು. ಚಹರೆಯ ಮೇಲೆ ದಿಟ್ಟ ಅಭಿಮಾನ ಗೋಚರಿಸುತ್ತಿತ್ತು ಕಾರ್ಯಕರ್ತರೊಂದಿಗಿನ ಚರ್ಚೆಯ ಬಳಿಕ ನಮ್ಮನ್ನು ಉದ್ದೇಶಿಸಿ ಹೇಳಿದರು. ಆಗ ಅವರ ಮಾತಿನಲ್ಲಿ ಕಳಕಳಿ ಇರುವುದು ನಮಗೆ ಕಾಣಿಸಿತು. ಡಾ ಅಂಬೇಡ್ಕರ್ ಹೇಳಿದರು-

‘‘ನಿಮ್ಮ ಮಧ್ಯಪ್ರಾಂತದ ವರ್ಹಾಡ ಕೌನ್ಸಿಲ್ ಚುನಾವಣೆ ನಡೆದು ಸುಮಾರು ಒಂದೂವರೆ ವರ್ಷವಾಯಿತು. ಇಷ್ಟು ದಿನ ನಾವು ಏನೂ ಮಾಡಲಿಲ್ಲ. ನಿಮಗೆ 20 ಸ್ಥಾನಗಳನ್ನು ದೊರಕಿಸಿಕೊಟ್ಟೆವು. ಅದರಲ್ಲಿ ಕೇವಲ ಏಳೇ ಸ್ಥಾನ ಸಿಕ್ಕಿದ್ದು. 13 ಸ್ಥಾನಗಳ ಬಗ್ಗೆ ಏನೂ ಮಾಡುವುದಾಗಲಿಲ್ಲ. ಈ ಏಳು ಜನರಲ್ಲಿ ಎಂದೂ ಆತ್ಮೀಯತೆ ಕಾಣಲಿಲ್ಲ. ಎಂದೂ ಒಗ್ಗಟ್ಟಿರಲಿಲ್ಲ. ನಮ್ಮ ಮುಂಬೈಯಲ್ಲಿ ಸ್ವತಂತ್ರ ಕಾರ್ಮಿಕ ಪಕ್ಷವು ಕಾಂಗ್ರೆಸ್‌ಗಿಂತ ಉತ್ತಮ ಸಂಘಟನೆಯಿಂದ ಕೂಡಿದೆ. ಜನಜಾಗೃತಿ ಮತ್ತು ರಾಜಕಾರಣದಲ್ಲಿಯ ಸಂಘಟನೆ ಎರಡೂ ಬೇರೆ ಬೇರೆ ಕಾರ್ಯ.

ಚುನಾವಣೆ ಬಳಿಕ ನಾವೆಷ್ಟು ಸದಸ್ಯರನ್ನು ಮಾಡಿದೆವು? ಹಿಂದೆ ನಾನು ಒಮ್ಮೆ ಕೇಸಿನ ಸಂದರ್ಭದಲ್ಲಿ ಬಂದಾಗ ಕೇಳಿದೆ. ಆಗ ಯಾರೂ ಪಕ್ಷದ ಸದಸ್ಯರಾಗಿದ್ದು ಕಂಡುಬರಲಿಲ್ಲ. ಅಲ್ಲಿ ಸ್ವ್ವತಂತ್ರ ಕಾರ್ಮಿಕ ಪಕ್ಷದ ಆಫೀಸ್ ಇಲ್ಲ. ಅಲ್ಲಿ ಯಾರಾದರೂ ದೂರು ತಂದರೆ, ತಕರಾರಿದ್ದರೆ ಅದರ ವ್ಯವಸ್ಥೆ ಮಾಡುವ ಯಾವ ಅನುಕೂಲತೆಯೂ ಅಲ್ಲಿಲ್ಲ. ನಿಮ್ಮ ಹತ್ತಿರ ದುಡ್ಡಿಲ್ಲ. ಹಣವಿಲ್ಲದೆ ರಾಜಕಾರಣ ನಡೆಯುವುದು ಹೇಗೆ? ಹಣಕ್ಕಾಗಿ ಕೇವಲ ಒಬ್ಬರನ್ನೇ ಅವಲಂಬಿಸಿದ್ದರೆ ರಾಜಕಾರಣ ನಡೆಯುವುದಿಲ್ಲ. ನಾವು ಮಾಡಿದ ಸದಸ್ಯರಲ್ಲಿ ಕೆಲವರು ಶಾಶ್ವತ ಸದಸ್ಯರಿದ್ದಾರೆಂದೇ ರಾಜಕಾರಣವಿದೆ. ನೀವು ಏನೂ ಮಾಡಲಿಲ್ಲ. ನಾನು ಹೇಳಿದ್ದನ್ನೂ ಮಾಡುವುದಿಲ್ಲ. ನಾನು ಕೇವಲ ಮುಂಬೈ ಜವಾಬ್ದಾರಿ ಹೊತ್ತಿದ್ದೇನೆ. ನನಗೂ ಮಧ್ಯಪ್ರಾಂತದ ವರ್ಹಾಡಿಗೆ ಏನು ಸಂಬಂಧ? ನಿಮಗೆ ಯಾವುದೇ ಕಾರ್ಯ ಮಾಡುವ ಇಚ್ಛೆ ಇರದಿದ್ದರೆ ನಾನು ನಿಮ್ಮ ಪ್ರಾಂತದ ಬಗ್ಗೆ ಏನೂ ಮಾಡಲಾರೆ. ನಿಮ್ಮ ಪ್ರಾಂತದಲ್ಲಿ ಕೆಲವು ಸ್ವಾರ್ಥಿಗಳಿದ್ದಾರೆ. ಸರಿಯಾಗಿ ಮಾತನಾಡುವವರೂ ಇದ್ದಾರೆ ಮತ್ತೆ ಕೆಲವರು ಕೆಲಸ ಮಾಡುವವರೂ ಇದ್ದಾರೆ. ಆದರೆ ಇಂದಿನವರೆಗೆ ಏನೂ ಆಗಲೇ ಇಲ್ಲ. ನೀವೀಗ ಆ ಕಾರ್ಯವನ್ನು ಮಾಡಬೇಕು. ನೀವು ಯಾವುದಾದರೂ ಒಂದು ಸಂಗತಿಯನ್ನು ಮಾಡಬೇಕು. ಒಂದೋ ನಾನು ಹೇಳಿದಂತೆ ಮಾಡಬೇಕು ಅಥವಾ ಎರಡನೆಯದು ನಾನು ಮಾಡಿದಂತೆ ವರ್ತಿಸಬೇಕು. ಜಯವಂತ ಬಾಯಿಯನ್ನು ಸಂಘಟಕನೆಂದು ನೇಮಿಸಲಾಗಿದೆ. ಹೀಗಾಗಿ ನೀವು ಅವರಿಗೆ ಸಹಕಾರ ನೀಡಿ ಕೆಲಸ ಮಾಡಬೇಕು. ಅದನ್ನು ಬಿಟ್ಟು ನೀವೇಕೆ ವಿರೋಧಿಸುತ್ತಿದ್ದೀರಿ? ನಮ್ಮಲ್ಲಿರುವ ಒಂದು ದೋಷವೆಂದರೆ ಒಮ್ಮೆ ನಡೆದ ಜಗಳವನ್ನು ತಲೆ ತಲಾಂತರದವರೆಗೆ ಮುಂದುವರಿಸುವುದು. ರಾಜಕಾರಣದ ಮಾತನ್ನು ಮರುಕ್ಷಣವೇ ಮರೆಯಬೇಕು. ಹರದಾಸನ ಬಗೆಗೆ ನನಗೆ ಗೌರವವಿದೆ. ಆದರೆ ಅವರಲ್ಲಿ ಕೆಲವು ದೋಷಗಳೂ ಇವೆ. ಪಾಟೀಲನಿಗೆ ಹರದಾಸರು ಚುನಾವಣೆಯ ಟಿಕೆಟ್ ಕೊಡಲಿಲ್ಲವೆಂದು ಪಾಟೀಲ್ ಹೀಗೆ ವರ್ತಿಸಬಾರದು.

ನಾವು ಅಲ್ಪಸಂಖ್ಯಾತರು. ಕಪ್ಪೆ ಎಷ್ಟೇ ಉಬ್ಬಿದರೂ ಎತ್ತಿನಷ್ಟಾಗುವುದು ಸಾಧ್ಯವಿಲ್ಲ. ಆದ್ದರಿಂದ ಯಾರ ಜೋಡಿಯಾದರೂ ಜೋಡು ಹಚ್ಚದ ಹೊರತು ರಾಜಕಾರಣ ನಮ್ಮ ಕೈಗೆ ಬರಲಾರದು. ಹಿಂದಿನ ಚಳವಳಿಯು ನಮಗಷ್ಟೇ ಸೀಮಿತವಾಗಿತ್ತು. ನಾವು ಆಂಗ್ಲ ಸರಕಾರದಿಂದ ಆ ಕಾಲಕ್ಕೆ ಪಡೆಯಬೇಕಾಗಿತ್ತು. ಈಗ ಬ್ರಿಟಿಷ್ ಸರಕಾರ ಉಳಿದಿಲ್ಲ. ಇಂದಿನ ರಾಜಕಾರಣ ಬಹುಮತದಿಂದ ನಡೆಯುವಂಥದ್ದಾಗಿದೆ. ಬಹುಮತವಿಲ್ಲದೆ ನಾವು ರಾಜಕಾರಣವನ್ನು ಹಸ್ತಗತ ಮಾಡಿಕೊಳ್ಳುವುದು ಸಾಧ್ಯವಿಲ್ಲ. ಆದ್ದರಿಂದ ಬಹುಮತವನ್ನು ಬೆಳೆಸಬೇಕು. ಜಯವಂತನ ಪ್ರಕರಣವನ್ನು ಏಕೆ ಬೆಳೆಸುತ್ತೀರಿ? ಜಯವಂತನೇನು ರಾಜನಲ್ಲ. ಯಾರೇ ಆಗಲಿ ಉತ್ತಮವಾಗಿ ಕಾರ್ಯ ಮಾಡುತ್ತಿದ್ದರೆ ಸರಿ. ಯಾರಾದರೂ ವಿರುದ್ಧ ಕಾರ್ಯ ಮಾಡಲಾರಂಭಿಸಿದರೆ ಅವನನ್ನು ಒಂದೇ ಮಾತಿಗೆ ಹೊರಗೆ ಹಾಕಬಲ್ಲೆ. ಯಾರು ಸ್ವತಂತ್ರ ಕಾರ್ಮಿಕ ಪಕ್ಷದ ಸದಸ್ಯರಾಗಿದ್ದಾರೋ ಅವರು ಬೇರೆ ಪಕ್ಷದ ಸದಸ್ಯರಾಗುವಂತಿಲ್ಲ. ರಾಜಕಾರಣ ಹೊರತು ಸಾಮಾಜಿಕ ಕಾರ್ಯ ಧಾರ್ಮಿಕ ಕಾರ್ಯ ಮಾಡಬಹುದಾಗಿದೆ. ಸತ್ತೆ ಮೇಲೆ ಯಾರಿರಬೇಕು ಎಂದು ನಿರ್ಧರಿಸುವುದು ಜನರ ಕರ್ತವ್ಯ. ಸದಸ್ಯರ ಮೇಲೆ ಉಸ್ತುವಾರಿ ನಡೆಸಲು ಒಬ್ಬ ಅರ್ಹ ವ್ಯಕ್ತಿಯಿಲ್ಲವೆಂದು ಹೀಗಾಗುತ್ತಿರಬೇಕು. ನಾನು ಏನಾದರೂ ಹೆಚ್ಚು ಕಡಿಮೆ ಕಾರ್ಯ ಮಾಡಿದರೆ ಇಲ್ಲಿ ಜನರು ಕೇಳಲು ಬರುತ್ತಾರೆ.

ಯಾವ ಮನುಷ್ಯನನ್ನು ನಾವು ಪ್ರೀತಿಸುತ್ತೇವೋ ಅಂಥವನ ವಿರುದ್ಧ ಮಾಡುವುದೇ ಸತ್ಯಾಗ್ರಹ. ಮಗು ತಾಯಿಯ ವಿರುದ್ಧ ಸತ್ಯಾಗ್ರಹ ಮಾಡುತ್ತದೆ. ಖರೆಯವರಿಂದ ನಾನು ತಪ್ಪೊಪ್ಪಿಗೆ ಪತ್ರವನ್ನು ಬರೆಯಿಸಿಕೊಂಡಿದ್ದೇನೆ. ‘‘ಈ ಜನರು (ಅಸ್ಪೃಶ್ಯ) ಅಜ್ಞಾನಿಗಳು. ಅವರಿಗೆ ಮಹತ್ವಾಕಾಂಕ್ಷೆ ಇಲ್ಲ. ನನಗೆ ಅಸ್ಪೃಶ್ಯ ಮಿನಿಸ್ಟರ್ ತೆಗೆದುಕೊಳ್ಳಬಹುದಾಗಿತ್ತು. ಏಕೆ ತೆಗೆದುಕೊಂಡಿರಿ? ಒಬ್ಬ ಮಿನಿಸ್ಟರ್‌ನನ್ನು ತೆಗೆದುಕೊಂಡು ನೀವು ಅವರ ಮನದೊಳಗೆ ಮಹತ್ವಾಕಾಂಕ್ಷೆಯನ್ನು ಹುಟ್ಟಿಸಿದಿರಿ’’ ಎಂದು ಮಹಾತ್ಮಾ ಗಾಂಧಿ ಹೇಳಿದರು.

ನೀವು ಸತ್ಯಾಗ್ರಹ ಮಾಡಿದಾಗ ಅಗ್ನಿಭೋಜ ಸ್ವಲ್ಪವಾದರೂ ಭಾಗವಹಿಸಿದ್ದನೇ? ಅವನು ಒಂದು ವೇಳೆ ತನ್ನ ಹಕ್ಕಿಗಾಗಿ ಜಗಳವಾಡಲು ಸಿದ್ಧನಿಲ್ಲದಿದ್ದರೆ, ನೀವು ಗಾಂಧಿ ವಿರುದ್ಧ ಏಕೆ ಸತ್ಯಾಗ್ರಹ ಮಾಡಿದಿರಿ? ಯಾರು ಜಗಳವಾಡಲು ಸಿದ್ಧನಿರುತ್ತಾನೋ ಅವನಿಗೆ ಜಗಳವಾಡಲು ಮುಂದೆ ಬರುವುದು ಕರ್ತವ್ಯವಾಗುತ್ತದೆ.

ಸ್ವತಂತ್ರ ಕಾರ್ಮಿಕ ಪಕ್ಷದ ಕಾರ್ಯವೆಲ್ಲಿ ನಡೆಯುತ್ತಿದೆಯೋ ಆ ಬ್ರಾಂಚ್‌ನ ಮೇಲೆ ಹೆಡ್‌ಆಫೀಸ್‌ನ ಕಂಟ್ರೋಲ್ ಇರಬೇಕಾಗುತ್ತದೆ. ನಾನು ಶಿಸ್ತು ಪರಿಪಾಲಿಸುವ ವ್ಯಕ್ತಿ. ಹಾಗೆಯೇ ಒಂದು ಬಗೆಯ ಡಿಕ್ಟೇಟರ್‌ನಾಗಿದ್ದೇನೆ. ಹಣದ ವಿಷಯದಲ್ಲಿ ಅತ್ಯಂತ ಪ್ರಾಮಾಣಿಕವಾಗಿರಬೇಕು.

ಪ್ರತಿಯೊಂದು ಜಿಲ್ಲೆಯ ಐದೈದು ಸದಸ್ಯರನ್ನು ಕರೆಸಿ ಅವರ ಸಭೆಯನ್ನು ಏರ್ಪಡಿಸಿ, ಅಲ್ಲಿ ಏಳೂ ಶಾಸಕರನ್ನು ಕರೆಯಿಸಿ ಎಲ್ಲರೂ ಸೇರಿ ಸ್ವತಂತ್ರ ಕಾರ್ಮಿಕ ಪಕ್ಷವನ್ನು ಸ್ಥಾಪಿಸಿ.
ಕಾಂಗ್ರೆಸ್ ಭದ್ರ ಬುನಾದಿಯ ಮೇಲೆ ನಿಂತ ಸಂಸ್ಥೆ ಅದರ ಮುಂದೆ ನಮ್ಮದೇನೂ ನಡೆಯುವುದಿಲ್ಲ. ಅದರದ್ದೇ ಬಹುಮತವಿರುವುದರಿಂದ ನಾವು ಏನು ಮಾಡುವಂತಿಲ್ಲ. ಆದ್ದರಿಂದ ಅವರಲ್ಲಿ ಒಡಕು ತರುವುದು ನಮ್ಮ ಕರ್ತವ್ಯ. ಡಾ. ಖರೆಯವರು ವೈರಿ ಪಕ್ಷದ ಒಂದು ಕಲ್ಲು. ಅದನ್ನು ಉರುಳಿಸುವ ಪ್ರಯತ್ನವನ್ನು ನಾನು ಮಾಡಿದೆ.

ಪಕ್ಷದ ಸದಸ್ಯರ ಹಣವನ್ನು ಒಬ್ಬನೇ ವ್ಯಕ್ತಿಯ ಹೆಸರಿನಲ್ಲಿಡಬಾರದು. ಇಬ್ಬರ ಅಥವಾ ಐವರ ಹೆಸರಿನಲ್ಲಿ ಬ್ಯಾಂಕಿನಲ್ಲಿ ಇಡಬೇಕು. ಪಕ್ಷದ ಕೆಲಸಕ್ಕಾಗಿ ಒಬ್ಬ ಸೆಕ್ರೆಟರಿಯನ್ನು ನೇಮಿಸಿ. (ಈ ಕೆಲಸವಂತೂ ಆಗಿದೆ) ಆಫೀಸಿಗಾಗಿ ಒಂದು ಮನೆಯನ್ನು ಮಾಡಿ. ತಿಂಗಳಲ್ಲಿ ಸಂಗ್ರಹಗೊಂಡ ವಂತಿಕೆಯನ್ನು ಫಾರ್ಮಿನಲ್ಲಿ ತುಂಬಿ ಕಳಿಸಿ. ನೀವು ಸರಿಯಾಗಿ ಕಾರ್ಯನಿರ್ವಹಿಸಿದರೆ ಜನತಾ ಪತ್ರಿಕೆಯಲ್ಲಿ ಸಿ.ಪಿ. ಮತ್ತು ಬೇರಾರಗಾಗಿ ಎರಡು ಪುಟ ಮೀಸಲು ಇರಿಸೋಣ. ಸದ್ಯಕ್ಕೆ ಒಂದು ಹಂಗಾಮಿ ಕಮಿಟಿಯನ್ನು ನೇಮಿಸಿ. ಆನಂತರ ಚುನಾವಣೆ ಜರುಗುತ್ತದೆ. ಪ್ರಚಾರ ಕಾರ್ಯಕ್ಕೆ ಬೇರೆ ಬೇರೆ ಜನರಿಗೆ ಬೇರೆ ಬೇರೆ ವಿಭಾಗಗಳನ್ನು ಕೊಡಿ. ಸ್ವತಂತ್ರ ಕಾರ್ಮಿಕ ಪಕ್ಷದ ರಾಜಕಾರಣಕ್ಕಾಗಿ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸುವ, ಸಂಘಟಿಸುವ ಅಗತ್ಯವಿದೆ.

ಯಾವ ಮನುಷ್ಯನ ಕೈಗೆ ಸತ್ತೆ ಹೋಗುತ್ತದೋ ಅಲ್ಲಿ ಒಬ್ಬ ಯೋಗ್ಯ ವ್ಯಕ್ತಿಯನ್ನು ಆಯ್ಕೆ ಮಾಡಿ ಕಳಿಸಬೇಕು. ಸಾಮಾಜಿಕ ಕಾರ್ಯವೆಂದರೇನು, ಸಮಾಜದ ಹಿತ ಯಾವುದರಲ್ಲಿದೆ, ಯಾವ ಯಾವ ಸಂಗತಿಗಳು ಸಮಾಜಕ್ಕೆ ಅಗತ್ಯವಿದೆ ಎಂಬುದರ ಅರಿವು ಅವರಿಗಿರಬೇಕು. ಕಾರ್ಯ ಮಾಡಲು ಪ್ರಥಮ ದರ್ಜೆಯ ಜನರನ್ನು ಆಯ್ಕೆ ಮಾಡಿ ಕಳುಹಿಸದೆ, ಅಂತಲ್ಲಿ ತಮ್ಮ ಬಂಧು ಬಳಗದವರನ್ನು ಕಳುಹಿಸಿದರೆ ಯಾವ ಕಾರ್ಯವೂ ಆಗಲಾರದು. ತಮ್ಮ ವ್ಯಕ್ತಿಯ ಬಗೆಗೆ ಬಹಿರಂಗ ಸಭೆಯಲ್ಲಿ ಏನೇ ಭಿನ್ನಾಭಿಪ್ರಾಯವಿದ್ದರೂ ತಮ್ಮ ಪಕ್ಷ ಕುಂಠಿತವಾಗದಂತೆ ಪ್ರತಿಯೊಬ್ಬ ಸದಸ್ಯರು ವರ್ತಿಸಬೇಕು. ಪಕ್ಷದ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಹಾಗೆ ಮಧ್ಯಪ್ರಾಂತದ ನಕಾಶೆಯನ್ನು ಬಿಡಿಸಿ ನನಗೆ ಕಳುಹಿಸಿ. ಆ ನಕಾಶೆಯಲ್ಲಿ ಪ್ರತಿ ಜಿಲ್ಲೆಯ ವಿಭಾಗವನ್ನು ತೋರಿಸಿ. ಅಲ್ಲಿ ನಮ್ಮ ಮತದಾರರು ಎಷ್ಟು?, ಸಾಮಾನ್ಯ ಮತದಾರರು ಎಷ್ಟು? ಎಲ್ಲಿ ಜಾಗ ರಿಸರ್ವ್ ಆಗಿದೆ ಮತ್ತು ಎಲ್ಲಿ ಚುನಾವಣೆಗೆ ಸ್ಪರ್ಧಿಸಬೇಕಾಗುತ್ತದೆ ಈ ಎಲ್ಲ ಮಾಹಿತಿಯನ್ನು ಅದರಲ್ಲಿ ಬರೆದು ನನಗೆ ಕಳಿಸಿ. ಅಂದರೆ ಮುಂದಿನ ವ್ಯವಸ್ಥೆ ಹೇಗಿರಬೇಕು ಎನ್ನುವುದನ್ನು ನಿರ್ಧರಿಸುವುದು ತುಂಬಾ ಸುಲಭವಾಗುತ್ತದೆ


(ಕೃಪೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಪ್ರಕಟಿತ ಅಂಬೇಡ್ಕರ್ ಭಾಷಣ-ಬರಹಗಳ ಸಂಪುಟ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X