Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನೋಟು ನಿಷೇಧಕ್ಕೆ ವರ್ಷ: ಮುಂಬೈ ಚಿತ್ರಣ

ನೋಟು ನಿಷೇಧಕ್ಕೆ ವರ್ಷ: ಮುಂಬೈ ಚಿತ್ರಣ

ಶ್ರೀನಿವಾಸ್ ಜೋಕಟ್ಟೆಶ್ರೀನಿವಾಸ್ ಜೋಕಟ್ಟೆ14 Nov 2017 12:04 AM IST
share
ನೋಟು ನಿಷೇಧಕ್ಕೆ ವರ್ಷ: ಮುಂಬೈ ಚಿತ್ರಣ

ನವೆಂಬರ್ 8, 2016 ರಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನುದ್ದೇಶಿಸಿ 500 ಮತ್ತು 1,000 ಮುಖಬೆಲೆಯ ನೋಟುಗಳ ನಿಷೇಧದ ಸಂದೇಶ ನೀಡಿದಾಗ 125 ಕೋಟಿ ಜನಸಂಖ್ಯೆಯ ಭಾರತ ಒಂದು ಕ್ಷಣ ನಡುಗಿ ಬಿಟ್ಟಿತು. ಕಪ್ಪುಹಣವನ್ನು ಸಮಾಪ್ತಿಗೊಳಿಸುವುದಕ್ಕಾಗಿ ‘ದೊಡ್ಡ ನೋಟುಗಳ’ ಸುಮಾರು ಶೇಕಡಾ 86 ಕರೆನ್ಸಿಗಳನ್ನು ಕ್ಷಣಾರ್ಧದಲ್ಲಿ ಮಾರುಕಟ್ಟೆಯಿಂದ ಸಮಾಪ್ತಿಗೊಳಿಸುವ ಈ ತೀರ್ಮಾನ ಸಾಮಾನ್ಯರಿಂದ ಹಿಡಿದು ಹಣವಂತರಿಗೂ ಒಂದು ಕ್ಷಣ ಕಸಿವಿಸಿ ಉಂಟುಮಾಡಿತ್ತು. ಸರಕಾರ ಇದಕ್ಕೆ ಸ್ಪಷ್ಟನೆ ನೀಡುತ್ತಾ ಆರ್ಥಿಕತೆಗೆ ವೇಗವನ್ನು ಕಾಣಿಸುವುದು, ಕಪ್ಪುಹಣ ನಿಯಂತ್ರಿಸುವುದು, ದೇಶವನ್ನು ಡಿಜಿಟಲ್ ಕ್ಯಾಶ್‌ಲೆಸ್ ಓಟದಲ್ಲಿ ಮುನ್ನಡೆಸುವುದು.....ಮುಂತಾದ ವಿಚಾರಗಳನ್ನು ಹೇಳಿತು.

ಇದಾಗಿ ಒಂದು ವರ್ಷ ಕಳೆದಿದೆ. ಇಲ್ಲಿ ಯಾವ ದೃಶ್ಯವಿದೆ ಎಂದು ಹಿಂದೆ ತಿರುಗಿ ನೋಡಿದಾಗ ನೋಟು ಅಮಾನ್ಯ, ಜಿಎಸ್‌ಟಿಯ ಪರಿಣಾಮ ಕಣ್ಣಿಗೆ ಕಟ್ಟ್ಟುತ್ತಿದೆ. ‘‘ಮುಂಬೈಯಲ್ಲಿ ಸಾಧಾರಣ ಎಲ್ಲಾ ಸೆಕ್ಟರ್‌ಗಳಲ್ಲಿ ಸಂಘಟಿತ ಕ್ಷೇತ್ರಗಳಲ್ಲಿ ಕಾರುಬಾರು ಹೆಚ್ಚಿದೆ. ಡಿಜಿಟಲ್ ವ್ಯವಹಾರ ವೃದ್ಧಿಸಿದೆ. ನೋಟ್ ರದ್ದತಿ ಸಾಮಾನ್ಯ ಗ್ರಾಹಕನಿಗೆ ಹೊಸ ಶಕ್ತಿ ನೀಡಿದೆ.......’’ ಇತ್ಯಾದಿಗಳನ್ನು ಹೇಳಲಾಗುತ್ತಿದೆ. ಆದರೆ ಇಕಾನಮಿಯ ಈ ಹೊಳಪಿನ ಅಂಕಿಅಂಶಗಳ ಕೆಳಗಡೆ ಸ್ಥಳೀಯ ಬಜಾರುಗಳು ತೀವ್ರ ನಷ್ಟ ಅನುಭವಿಸಿವೆ. ಸಣ್ಣ ವ್ಯವಹಾರಗಳ ಆದಾಯ ಕುಸಿದಿದೆ. ಪ್ರಮುಖ ಸೆಕ್ಟರ್‌ಗಳ ಅಸಂಘಟಿತ ಕ್ಷೇತ್ರಗಳ ಲಕ್ಷಗಟ್ಟಲೆ ಕಾರ್ಮಿಕರ ನೌಕರಿಯನ್ನು ಕಸಿದುಕೊಳ್ಳಲಾಗಿದೆ. ಮುಂಬೈಯ ಪಾರಂಪರಿಕ ವ್ಯವಹಾರಗಳು ತಮ್ಮ ಜಾಗದಿಂದ ಪಲಾಯನ ಮಾಡಿವೆ. ಭಿವಂಡಿಯ ಟೆಕ್ಸ್‌ಟೈಲ್ಸ್ ಉತ್ಪಾದನೆಗಳ ಭವಿಷ್ಯ ಅಂಧಕಾರದಲ್ಲಿದೆ. ಎಲ್ಲಾ ಸ್ಥಳೀಯ ಬಜಾರ್‌ಗಳ ಬಿಸ್‌ನೆಸ್ 20-30 ಪ್ರತಿಶತ ಇಳಿಯತೊಡಗಿದೆ. ಯಾಕೆಂದರೆ ಈ ಎಲ್ಲಾ ಬಜಾರುಗಳಲ್ಲಿ ನಗದು ವ್ಯವಹಾರದಿಂದಲೇ ಕೊಡುಕೊಳ್ಳುವಿಕೆ ನಡೆಯುತ್ತಾ ಬಂದಿದೆ! ‘ಆಲ್ ಕ್ಯಾಶ್ ಈಸ್ ನಾಟ್ ಬ್ಲ್ಯಾಕ್’ ಎನ್ನುತ್ತಿದ್ದಾರೆ ವ್ಯಾಪಾರಿಗಳು.

ನೋಟು ರದ್ದತಿಯ ನಂತರ ಮುಂಬೈಯಲ್ಲಿ ಹೆಚ್ಚಿನ ನೌಕರಿಗಳ ಮೇಲೆ ಪ್ರಭಾವ ಬೀರಿದೆ. ಹಲವೆಡೆ ಉತ್ಪಾದನೆ 40 ಶೇಕಡಾ ಕುಸಿದಿದೆ. ಭಾರತ್ ಮರ್ಚೆಂಟ್ ಚೇಂಬರ್‌ನ ಅಧ್ಯಕ್ಷ ಚಂದ್ರ ಕಿಶೋರ್ ಪೊದ್ದಾರ್, ‘‘ನೋಟು ರದ್ದತಿಯ ನಂತರ 25ರಿಂದ 30 ಶೇಕಡಾ ತನಕ ದಂಧೆ ಇಳಿಮುಖವಾಗಿದೆ. ಬೇಡಿಕೆಗಳು ಕಡಿಮೆಯಾಗಿದೆ. ಗ್ರಾಹಕರ ಅಗತ್ಯ ಸೂಚಿಗಳಲ್ಲಿ ಬಟ್ಟೆ ಕಡಿತವಾಗುತ್ತಿದೆ. ಇದಕ್ಕೆ ನೋಟು ರದ್ದತಿಯೇ ಕಾರಣವಾಗಿದೆ’’ ಎಂದು ಹೇಳುತ್ತಾರೆ.

ಧಾರಾವಿಯಲ್ಲಿ 4 ಸಾವಿರ ಕಿರು ಕೈಗಾರಿಕೆಗಳಿಗೆ ಬಾಗಿಲು:
ನೋಟು ರದ್ದತಿಯಿಂದ ಹೆಚ್ಚಿನ ಪ್ರಭಾವ ಕಿರು ಕೈಗಾರಿಕೆಗಳ ಮೇಲೆ ಬಿದ್ದಿದೆ. ಮುಂಬೈಯಲ್ಲಿ ಧಾರಾವಿ ಜೋಪಡ ಪಟ್ಟಿ ಕ್ಷೇತ್ರದಲ್ಲಿ ಅತೀಹೆಚ್ಚು ಕಿರು ಕೈಗಾರಿಕೆಗಳಿವೆ. ಇವುಗಳಲ್ಲಿ ಅರ್ಧದಷ್ಟು ನೋಟು ರದ್ದತಿಯ ನಂತರ ಸಂಕಷ್ಟಕ್ಕೀಡಾಗಿವೆ. 10 ್ಡ 10 ಕೊಠಡಿಯಲ್ಲಿರುವ ಸಾವಿರಾರು ಕಿರು ಉದ್ಯೋಗಗಳು ಬಾಗಿಲು ಮುಚ್ಚಿವೆ. ಸಮೀಕ್ಷೆಯ ಪ್ರಕಾರ 8 ಸಾವಿರ ಕಿರು ಕೈಗಾರಿಕೆಗಳಿದ್ದು ಇದರಲ್ಲಿ 2 ಸಾವಿರ ಪ್ಲ್ಯಾಸ್ಟಿಕ್, 3 ಸಾವಿರ ಬಟ್ಟೆ ಮತ್ತು 3 ಸಾವಿರ ಚರ್ಮದ ಕಾರ್ಖಾನೆಗಳಿವೆ. ಈ ಒಂದು ವರ್ಷದಲ್ಲಿ ನಗದು ಹಣದ ಕೊರತೆಯಲ್ಲಿ ಒಂದೊಂದೇ ಕಿರು ಕೈಗಾರಿಕೆಗಳು ಬಾಗಿಲು ಹಾಕತೊಡಗಿವೆ. ಈ ಎಂಟು ಸಾವಿರ ಕಿರುಕೈಗಾರಿಕೆಗಳಲ್ಲಿ ಸುಮಾರು 4 ಸಾವಿರ ಕಿರು ಉದ್ಯಮಗಳು ನೋಟು ರದ್ದತಿಯ ನಂತರ ನಷ್ಟದಲ್ಲಿವೆ ಅಥವಾ ಬಾಗಿಲು ಮುಚ್ಚುತ್ತಿವೆ.

ಬಾಂಬೆ ಸ್ವದೇಶಿ ಮಾರ್ಕೆಟ್ ಬೋರ್ಡ್‌ನ ಅಧ್ಯಕ್ಷ ಗಿತೇಶ್ ಜನ್ನಾಡ್ಕರ್ ಹೇಳುವಂತೆ ‘‘ನೋಟುರದ್ದತಿಯ ನಂತರ ಬಟ್ಟೆ ವ್ಯಾಪಾರಕ್ಕೆ ಅತಿಹೆಚ್ಚಿನ ಕಷ್ಟ ಬಂದಿದೆ ಹಾಗೂ 30 ಪ್ರತಿಶತ ವ್ಯಾಪಾರ ಕುಸಿದಿದೆ.’’ ‘‘ಕಳೆದ ನವೆಂಬರ್  ಡಿಸೆಂಬರ್‌ನಲ್ಲಿ ಬಟ್ಟೆ ಕಾರುಬಾರು ಪೂರ್ಣರೂಪದಿಂದ ತಟಸ್ಥಗೊಂಡಿತ್ತು. ಜನ ಆನ್‌ಲೈನ್ ಖರೀದಿಯತ್ತ ಗಮನ ಹರಿಸಲು ಆರಂಭಿಸಿದ್ದಾರೆ. ಮುಂಬೈ ಅಂದ ಕೂಡಲೇ ಬಟ್ಟೆ ಕಾರುಬಾರು ಸುದ್ದಿ ಮಾಡುತ್ತಿತ್ತು. ಆದರೆ ಮಾರ್ಕೆಟ್‌ನಲ್ಲಿ ಆ ಎರಡು ತಿಂಗಳು ಗ್ರಾಹಕರೇ ನಾಪತ್ತೆ ಆಗಿದ್ದರು’’ ಎನ್ನುತ್ತಾರೆ ಮಂಗಲ್‌ದಾಸ್ ಮಾರ್ಕೆಟ್ ಅಸೋಸಿಯೇಶನ್‌ನ ಅಧ್ಯಕ್ಷ ಭರತ್ ಟಕ್ಕರ್.

ಅತ್ತ ಭಿವಂಡಿ ಪವರ್‌ಲೂಮ್ ಅಸೋಸಿಯೇಶನ್‌ನ ಶರದ್‌ರಾಮ್ ಸೇಜ್‌ಪಾಲ್ ಹೇಳುವಂತೆ ‘‘ನೋಟ್ ರದ್ದತಿಯ ನಂತರ ಭಿವಂಡಿಯ ಸುಮಾರು 9 ಲಕ್ಷ ಪವರ್‌ಲೂಮ್ಸ್‌ನಲ್ಲಿ ಈಗ ಕನಿಷ್ಠ ಅರ್ಧದಷ್ಟು ಮಾತ್ರ ಉಳಿದುಕೊಂಡಿದ್ದು ಇನ್ನರ್ಧ ಬಾಗಿಲು ಮುಚ್ಚಿವೆ. ಭಿವಂಡಿಯ ಪವರ್‌ಲೂಮ್ ಇಂಡಸ್ಟ್ರಿ ಸುಮಾರು 1,200 ಕೋಟಿ ರೂಪಾಯಿಯ ವಾರ್ಷಿಕ ವ್ಯಾಪಾರ ನಡೆಸುತ್ತಿತ್ತು. ಈ ಯುನಿಟ್ಸ್‌ಗಳಲ್ಲಿ ಸುಮಾರು 10 ಲಕ್ಷ ಜನ ಕೆಲಸ ಮಾಡುತ್ತಿದ್ದರು. ಈಗ ಈ ಸಂಖ್ಯೆ ಅರ್ಧಕ್ಕೆ ಇಳಿದಿದೆ. ಕಾರ್ಮಿಕರು ಬೇರೆ ಕಡೆ ಉದ್ಯೋಗ ಹುಡುಕಿದ್ದಾರೆ.’’ ಭಿವಂಡಿಯಲ್ಲಿ ನೋಟ್ ರದ್ದತಿಯ ನಂತರ ನಗದು ಹಣದ ಕೊರತೆ ತೀವ್ರವಾಗಿ ಉದ್ಯಮಿಗಳನ್ನು ಕಾಡಿತು. ಆರು ತಿಂಗಳ ಕಾಲ ಒದ್ದಾಡಿದ ದಂಧೆಗೆ ಎಪ್ರಿಲ್‌ನಿಂದ ಒಂದಿಷ್ಟು ಚೇತರಿಕೆ ಕಾಣಲು ಶುರುವಾದರೂ ನಂತರ ಜುಲೈ 1ರಿಂದ ‘ಜಿ.ಎಸ್.ಟಿ.’ ಜಾರಿಗೆ ಬಂದು ಇದರ ಹೊಡೆತದಿಂದ ಮತ್ತೆ ತತ್ತರಿಸಿತು. ಜಿ.ಎಸ್.ಟಿ.ಯ ಸರಿಯಾದ ವಿವರಣೆಗಳೇ ಗೊತ್ತಾಗದೆ ವ್ಯಾಪಾರ ಕುಸಿಯಿತು.

ಇತ್ತ ಮುಂಬೈಯ ಭುಲೇಶ್ವರದ ಪಾತ್ರೆಸಾಮಾನುಗಳ ಬಜಾರ್ ಕೂಡಾ ಕುಸಿದಿದೆ. ದೈನಂದಿನ ಖರೀದಿ ಕಡಿಮೆಯಾಯಿತು. ಜನ ಅಗತ್ಯಕ್ಕೆ ತಕ್ಕಂತೆ ಮಾತ್ರ ಖರೀದಿಸುತ್ತಿದ್ದಾರೆ. ಸ್ಟೈನ್‌ಲೆಸ್ ಸ್ಟೀಲ್ ಮರ್ಚೆಂಟ್ಸ್ ಅಸೋಸಿಯೇಶನ್ ಕೂಡಾ ಶೇಕಡಾ 30 ವ್ಯಾಪಾರ ಕುಸಿದಿದೆ ಅನ್ನುತ್ತಿದೆ. ವಿವಾಹ ಸಮಾರಂಭ ಸಂದರ್ಭಗಳಲ್ಲಿ ಪಾತ್ರೆ ಸಾಮಾನುಗಳ ಖರೀದಿ ಹೆಚ್ಚುತ್ತಿತ್ತು. ಆದರೆ ಈ ವರ್ಷ ಆ ದೃಶ್ಯ ಕಂಡು ಬರಲಿಲ್ಲ.

ಇತ್ತ ಎ.ಪಿ.ಎಂ.ಸಿ. ಮಾರ್ಕೆಟ್‌ನ ಕಾರುಬಾರು ಕೂಡಾ ಕುಸಿದಿದೆ. ಇಲ್ಲೆಲ್ಲ್ಲ 80 ಶೇಕಡಾ ವ್ಯವಹಾರಗಳು ನಗದು ರೂಪದಲ್ಲೇ ನಡೆಯುತ್ತದೆ. ಆದರೆ ನೋಟು ರದ್ದತಿಯ ನಂತರ ಅನಿರೀಕ್ಷಿತ ಶೇಕಡಾ 40 ದಂಧೆ ಕುಸಿದಿದ್ದು ಸ್ಟಾಕ್ ಕೂಡಾ ಕಡಿಮೆ ಮಾಡತೊಡಗಿದರು. ಹಾಗಾಗಿ ಮಾರ್ಕೆಟ್‌ನಲ್ಲಿ ಪೂರೈಕೆ ಕೂಡಾ ಕಡಿಮೆಯಾಗತೊಡಗಿತು. ನಂತರ ಜಿ.ಎಸ್.ಟಿ. ಕೂಡಾ ಇವರಿಗೆ ಹೊಡೆತ ನೀಡಿತು.

ಬುಲಿಯನ್ ಟ್ರೇಡರ್ಸ್ ಮತ್ತು ಜ್ಯುವೆಲ್ಲರ್ಸ್ ಹೇಳುವಂತೆ ಚಿನ್ನದ ವ್ಯಾಪಾರ 25 ಶೇಕಡಾ ಕಡಿಮೆ ಆಗಿದೆ. ಗೋಲ್ಡ್ ಟ್ರೇಡ್ ಬಿ2ಬಿ (ಬಿಸ್‌ನೆಸ್ ಟು ಬಿಸ್‌ನೆಸ್) ಕಾರುಬಾರಿನಲ್ಲಿ ಕಪ್ಪುಹಣದ ಹರಿವು ನಿಂತು ಹೋಗಿದೆ. ಆದರೆ ಬಿ2ಸಿ (ಬಿಸ್‌ನೆಸ್ ಟು ಕನ್ಸ್ಯೂಮರ್) ಒಪ್ಪಂದದಲ್ಲಿ ಇದರ ಒತ್ತಡ ಈಗಲೂ ಇದೆ. ಇಂಡಿಯನ್ ಬುಲಿಯನ್ ಆ್ಯಂಡ್ ಜ್ಯುವೆಲ್ಲರಿ ಅಸೋಸಿಯೇಶನ್‌ನ ನ್ಯಾಷನಲ್ ಸೆಕ್ರೆಟರಿ ಸುರೇಂದ್ರ ಮೆಹ್ತಾ ಹೇಳುವಂತೆ ನೋಟು ರದ್ದತಿಯ ನಂತರ ಸ್ಮಗ್ಲಿಂಗ್‌ನಲ್ಲಿ ದೊಡ್ಡ ಕುಸಿತ ಕಂಡು ಬಂದಿದೆ.

ಮುಂಬೈಯ ಲ್ಯಾಮಿಂಗ್ಟನ್ ರೋಡ್ ಮಾರ್ಕೆಟ್‌ನ ಕಾರುಬಾರು ನೋಟು ರದ್ದತಿಯ ನಂತರ ಶೇಕಡಾ 50 ತಣ್ಣಗಾಗಿದೆ. ಇಲ್ಲಿ ನಗದು ವ್ಯವಹಾರವೇ ಹೆಚ್ಚು. ಲ್ಯಾಪ್‌ಟಾಪ್, ಅನ್ಯ ಇಲೆಕ್ಟ್ರಾನಿಕ್ ಉತ್ಪಾದನೆಗಳ ದೊಡ್ಡ ಬಜಾರ್ ಇಲ್ಲಿದೆ. ಕಳೆದ ವರ್ಷದಿಂದ ವ್ಯಾಪಾರ ಕುಸಿದಿದ್ದು ಇನ್ನೂ ಚೇತರಿಸಿಲ್ಲ ಎನ್ನುತ್ತಾರೆ ಅಲ್ಲಿನ ವ್ಯಾಪಾರಿಗಳು. ಯಾಕೆಂದರೆ ಜನ ಆನ್‌ಲೈನ್ ಖರೀದಿಯಲ್ಲಿ ಆಸಕ್ತರಾಗಿದ್ದಾರಂತೆ. ಮುಂಬೈ ಮಾರ್ಬಲ್ ಅಸೋಸಿಯೇಶನ್‌ನ ಅಧ್ಯಕ್ಷ ರಾಮ್‌ಭಾಯಿ ಅವರ ಪ್ರಕಾರ ‘‘ಕಾರುಬಾರು 20ರಿಂದ 25 ಶೇಕಡಾ ತನಕ ಕುಸಿದಿದೆ ಹಾಗೂ ನೌಕರಿಯೂ 25 ಶೇಕಡಾ ಕಡಿಮೆಯಾಗಿದೆ. ಜಿ.ಎಸ್.ಟಿ. ಕಾರಣ ಸದ್ಯ ಚೇತರಿಕೆ ಕಾಣುತ್ತಿಲ್ಲ. ಇದೆಲ್ಲದರ ನಡುವೆ ಬ್ಯಾಂಕ್ ಖಾತೆಗಳ ಸಂಖ್ಯೆ ಮಾತ್ರ ಹೆಚ್ಚುತ್ತಿದೆ. ಚೆಕ್, ಕ್ರೆಡಿಟ್-ಡೆಬಿಟ್ ಕಾರ್ಡ್, ಅನ್‌ಲೈನ್ ಮನಿ ಟ್ರಾನ್ಸ್‌ಫರ್, ಇ-ವಾಲೆಟ್....ಇವುಗಳ ಬಳಕೆ ತೀವ್ರಗತಿಯಲ್ಲಿ ಏರುತ್ತಿದೆ.’’

ಹಲವೆಡೆ ಶ್ರಾದ್ಧ, ಕೆಲವೆಡೆ ಶವಯಾತ್ರೆ:
ನೋಟು ರದ್ದತಿಗೆ ಒಂದು ವರ್ಷ ಪೂರ್ಣಗೊಂಡ ಸಂದರ್ಭದಲ್ಲಿ ರಾಜಧಾನಿ ಮುಂಬೈಯಲ್ಲಿ ವಿಪಕ್ಷಗಳು ‘ಕಪ್ಪುದಿನ’ ಆಚರಿಸಿವೆ. ನೋಟು ರದ್ದತಿಯ ತೀರ್ಮಾನ ಯಾವುದೇ ಪೂರ್ವ ಸಿದ್ಧತೆ ಇಲ್ಲದ ನಷ್ಟದಾಯಕ ಕ್ರಮ ಎಂದು ವಿಪಕ್ಷಗಳು ಟೀಕಿಸಿದವು. ಆಝಾದ್ ಮೈದಾನದಲ್ಲಿ ನೋಟು ರದ್ದತಿಯ ಒಂದು ವರ್ಷದ ನೆನಪಿನಲ್ಲಿ ಮುಂಬೈ ಕಾಂಗ್ರೆಸ್ ಕಪ್ಪುಪಟ್ಟಿ ಅಳವಡಿಸಿಕೊಂಡು ‘ಶ್ರಾದ್ಧ’ ಆಚರಿಸಿತು. ನೋಟು ಬದಲಾವಣೆಯ ಸಂದರ್ಭದಲ್ಲಿ ಗಂಟೆಗಟ್ಟಲೆ ಕಾದು ಕೂತು ಸಾವನ್ನಪ್ಪಿದ 115 ಭಾರತೀಯರಿಗೆ ಕಾಂಗ್ರೆಸ್ ಕಾರ್ಯಕರ್ತರು ವಾರ್ಷಿಕ ಶ್ರಾದ್ಧ ಮಾಡಿದರು. ಕೆಲವು ಕಾರ್ಯಕರ್ತರು ಕೇಶಮುಂಡನ ಮಾಡಿ ಹಳೆಯ ನೋಟುಗಳ ಚಿತ್ರಗಳನ್ನು ಹಿಡಿದಿದ್ದರು. ಪುರೋಹಿತರನ್ನು ಕರೆಸಿ ಪಿಂಡ ದಾನ ಮಾಡಿದರು. ಇದರ ನೇತೃತ್ವವನ್ನು ಮುಂಬೈ ಕಾಂಗ್ರೆಸ್ ಅಧ್ಯಕ್ಷ ಸಂಜಯ್ ನಿರೂಪಮ್ ವಹಿಸಿದ್ದರು.

ಥಾಣೆ ಶಹರದ ಕಾಂಗ್ರೆಸ್‌ನಿಂದ ಕ್ಯಾಂಡಲ್‌ಮಾರ್ಚ್ ಹೊರಟಿದ್ದರು. ಎನ್.ಸಿ.ಪಿ.ಯವರು ಶ್ರಾದ್ಧ ಮಾಡಿದರು. ಭಿವಂಡಿಯಲ್ಲೂ ಇದೇ ದೃಶ್ಯವಿತ್ತು. ಮುಂಬೈ ಪ್ರದೇಶ್ ಯುವ ಕಾಂಗ್ರೆಸ್ ಬೈಂಗನ್‌ವಾಡಿ ಸಿಗ್ನಲ್‌ನಿಂದ ದೇವನಾರ್ ಸ್ಮಶಾನ ಭೂಮಿ ತನಕ ಮೋದಿ ಕಟೌಟ್ ಜೊತೆ ಅಣಕು ಶವಯಾತ್ರೆ ಹೊರಟಿದ್ದರು. ಎನ್.ಸಿ.ಪಿ. ಕೂಡಾ ವಿವಿಧೆಡೆ ವಿರೋಧ ಪ್ರದರ್ಶನ ನಡೆಸಿದೆ. ಬಿಜೆಪಿ ಸಹಯೋಗಿ ಪಕ್ಷ ಶಿವಸೇನೆ ನಾಸಿಕ್ ಜಿಲ್ಲೆಯಲ್ಲಿ ಕುಂಭಮೇಳದ ಮುಖ್ಯ ತೀರ್ಥಯಾತ್ರೆ ಕೇಂದ್ರ ಗೋದಾವರಿ ನದಿ ತೀರದಲ್ಲಿ ‘ಶ್ರಾದ್ಧ’ ಮಾಡಿತು! ಅತ್ತ ಸಮಾಜವಾದಿ ಪಾರ್ಟಿ ಕೂಡಾ ಆಝಾದ್ ಮೈದಾನದಲ್ಲಿ ವಿರೋಧ ಪ್ರದರ್ಶನದಲ್ಲಿ ಪಾಲ್ಗೊಂಡಿತು. ದಾದರ್ ರೈಲ್ವೇ ಸ್ಟೇಷನ್ ಹೊರಗಡೆ ನೋಟು ನಿಷೇಧದ ವಿರುದ್ಧ ಜನತಾದಳ (ಯೂ) ಕಾರ್ಯಕರ್ತರು ರಾಜ್ಯಾಧ್ಯಕ್ಷ ಕಪಿಲ್ ಪಾಟೀಲ್‌ರ ನೇತೃತ್ವದಲ್ಲಿ ಪ್ರದರ್ಶನ ನಡೆಸಿದರು. ಸಣ್ಣ ವ್ಯಾಪಾರಿಗಳು, ರೈತರು, ಕೂಲಿ ಕಾರ್ಮಿಕರು, ಶಿಕ್ಷಕರು ಎಲ್ಲರೂ ನೋಟು ರದ್ದತಿಯಿಂದ ಕಿರಿಕಿರಿ ಅನುಭವಿಸಿದ್ದನ್ನು ಇಲ್ಲಿ ಹೇಳಲಾಯಿತು.

ನೋಟು ರದ್ದತಿಯ ನಂತರ ಕಳೆದ ಒಂದು ವರ್ಷದಿಂದ ಡಿಜಿಟಲ್ ಪೇಮೆಂಟ್ ಮತ್ತು ಆನ್‌ಲೈನ್ ಖರೀದಿ ದೃಶ್ಯಗಳು ಹೆಚ್ಚಿದ್ದು ಇದರ ಇನ್ನೊಂದು ಮಗ್ಗಲು ಗಮನಿಸಿದರೆ ಈ ಸಂದರ್ಭದಲ್ಲಿ ಸೈಬರ್ ಅಪರಾಧಗಳ ಗ್ರಾಫ್ ಕೂಡಾ ಏರಿದೆ.
* * *

ಶಾಲಾ ಬ್ಯಾಗ್ ತೂಕದ ತನಿಖೆಗೆ ಮೆಷಿನ್‌ಗಳ ಕೊರತೆ:
 ಮುಂಬೈಯ ಪ್ರಾಥಮಿಕ ಶಾಲೆಗಳಲ್ಲಿ ಅಥವಾ ಇತರ ಖಾಸಗಿ ಶಾಲೆಗಳ ವಿದ್ಯಾರ್ಥಿಗಳ ಶಾಲಾಬ್ಯಾಗ್‌ಗಳ ಭಾರ ಎಷ್ಟಿದೆ ಎಂಬ ಬಗ್ಗೆ ಪ್ರತೀ ತಿಂಗಳು ವರದಿ ತಯಾರಿಸಲು ಶಿಕ್ಷಣ ಇಲಾಖೆಯು ಮುಂದಾಗಿತ್ತು. ಅತ್ತ ಶಿಕ್ಷಣ ಮಂತ್ರಿಯವರು ಶಾಲಾ ವಿದ್ಯಾರ್ಥಿಯ ಬ್ಯಾಗನ್ನು ತೂಕ ಮಾಡುವ ಯಂತ್ರ ಕೈಯಲ್ಲಿ ಹಿಡಿದ ಫೋಟೋ ಕೂಡಾ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಆದರೆ ಶಿಕ್ಷಣ ಮಂತ್ರಿಯವರ ಈ ’ವಜನ್ ಕಾಂಟಾ’ ಈ ತನಕವೂ ಅನೇಕ ಶಾಲೆಗಳನ್ನು ತಲುಪಲೇ ಇಲ್ಲವೆಂದು ಹಲವು ಶಾಲಾ ಮುಖ್ಯೋಪಾಧ್ಯಾಯರು ಹೇಳುತ್ತಿದ್ದಾರೆ.

ಮುಂಬೈ ವಿಭಾಗದಲ್ಲಿ ಒಟ್ಟು 1,016 ಶಾಲೆಗಳಲ್ಲಿ ಆಗಸ್ಟ್‌ನಲ್ಲಿ 449, ಮತ್ತು ಸೆಪ್ಟಂಬರ್‌ನಲ್ಲಿ 530 ಶಾಲೆಗಳ ವಿದ್ಯಾರ್ಥಿಗಳ ಶಾಲಾಬ್ಯಾಗ್‌ಗಳ ಭಾರವನ್ನು ತನಿಖೆ ಮಾಡಲಾಗಿತ್ತು.

ಸರಕಾರವು ಪ್ರತೀ ತಿಂಗಳು ಶಾಲಾ ಮಕ್ಕಳ ಬ್ಯಾಗ್‌ನ ಭಾರದ ತನಿಖೆ ನಡೆಸಿ ವರದಿ ಒಪ್ಪಿಸಲು ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಹೇಳಿದೆ. ಈಗ ಜೂನ್  ಜುಲೈಯಲ್ಲಿ ಯಾವುದೇ ದಾಖಲೆ ಇಲ್ಲದೆ ಆಗಸ್ಟ್ - ಸೆಪ್ಟ್ಟೆಂಬರ್‌ನ ವರದಿ ನೀಡಲಾಗಿದೆ. ಇದಕ್ಕಾಗಿ 77 ಅಧಿಕಾರಿಗಳನ್ನು ನಿಯುಕ್ತಿಗೊಳಿಸಲಾಗಿತ್ತು. ಆದರೆ ಎಲ್ಲಾ ಶಾಲೆಗಳ ಮಕ್ಕಳ ಬ್ಯಾಗ್‌ನ ಭಾರ ತನಿಖೆ ನಡೆಸಲು ಸಾಧ್ಯವಾಗಿಲ್ಲ. ಆಗಸ್ಟ್‌ನಲ್ಲಿ 35,744 ವಿದ್ಯಾರ್ಥಿಗಳ ಮತ್ತು ಸೆಪ್ಟಂಬರ್‌ನಲ್ಲಿ 34,599 ವಿದ್ಯಾಥಿಗಳ ಬ್ಯಾಗ್‌ನ ಭಾರ ತನಿಖೆಗೊಳಪಡಿಸಲಾಗಿತ್ತು.

share
ಶ್ರೀನಿವಾಸ್ ಜೋಕಟ್ಟೆ
ಶ್ರೀನಿವಾಸ್ ಜೋಕಟ್ಟೆ
Next Story
X