Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ಒಡೆದ ಜೇನುಗೂಡು

ಒಡೆದ ಜೇನುಗೂಡು

ಧಾರಾವಾಹಿ-38

ವಾರ್ತಾಭಾರತಿವಾರ್ತಾಭಾರತಿ3 Jun 2017 11:09 PM IST
share
ಒಡೆದ ಜೇನುಗೂಡು

‘‘ನೀವು ಗುರೂಜಿಯನ್ನು ಭೇಟಿಯಾಗಲಿಲ್ಲವೇ?’’

‘‘ಅವರು ಯಾರು?’’ ‘‘ಅದೇ ಶಾಖೆ ನಡೆಸುತ್ತಾರಲ್ಲ? ಭಾಷಣ ಮಾಡುತ್ತಾರೆ....’’

‘‘ಯಾರು ಶ್ಯಾಂಭಟ್ಟರ...? ಯಾರೋ ಹೇಳಿದರು ಅವರ ಮನೆಗೆ ಹೋಗಿ ವಿಷಯ ಹೇಳಿ ಅಂತ. ಅವರ ಮನೆಗೆ ಒಂದು ಹತ್ತು ಬಾರಿಯಾದರೂ ಹೋಗಿದ್ದೆ. ಆದರೆ ಅವರು ಒಮ್ಮೆಯೂ ಮಾತನಾಡಲು ಸಿಗಲಿಲ್ಲ..’’

ಪಪ್ಪುವಿಗೆ ಒಳಗೊಳಗೆ ಸಂಕಟವಾಗತೊಡಗಿತು. ತನ್ನೆದುರು ಕಣ್ಣೀರು ಸುರಿಸುತ್ತಿರುವ ಹೆಂಗಸನ್ನು ಹೇಗೆ ಸಮಾಧಾನ ಪಡಿಸುವುದು ಎನ್ನುವುದು ಗೊತ್ತಾಗಲಿಲ್ಲ. ಅವನಿಗೆ ಒಟ್ಟಿನಲ್ಲಿ ಯಾವುದೂ ಅರ್ಥವಾಗುತ್ತಿರಲಿಲ್ಲ. ತಲೆಯೊಳಗೆ ಜೇನು ಗೂಡೊಂದು ಒಡೆದಂತೆ. ಜೇಬಿನಲ್ಲಿ ತಡಕಾಡಿದ. ನೂರು ರುಪಾಯಿ ಸಿಕ್ಕಿತು. ಅದನ್ನು ಆಕೆಯ ಕೈಗಿಟ್ಟವನೇ ಅಲ್ಲಿಂದ ಮನೆಯ ಕಡೆಗೆ ಹೊರಟ. ಅವನಿಗೆ ಅಳು ಉಕ್ಕಿ ಬರುತ್ತಿತ್ತು. ಎಲ್ಲಾದರೂ ಹೋಗಿ ಜೋರಾಗಿ ಅಳಬೇಕು ಅನ್ನಿಸುತ್ತಿತ್ತು. ತಲೆಎತ್ತದೆ ವೇಗವಾಗಿ ಅವನು ನಡೆಯುತ್ತಿದ್ದ. ‘ಹೇಲು ತುಳಿದನೇನೋ?’ ದುರ್ವಾಸನೆ ಮತ್ತೆ ಅವನನ್ನು ಹಿಂಬಾಲಿಸತೊಡಗಿತು. ಅದರಿಂದ ಪಾರಾಗುವವನಂತೆ ಮತ್ತೂ ವೇಗವಾಗಿ ನಡೆಯುತ್ತಿದ್ದ. ಮನೆ ತಲುಪಿದವನು ನೇರ ಒಳ ಹೋಗಿ ಕೋಣೆಯ ಬಾಗಿಲು ಹಾಕಿ, ಮಂಚಕ್ಕೆ ಒರಗಿದ.

ಅಂದು ಸಂಜೆ ಮನೆಗೆ ಬಂದ ಅನಂತ ಭಟ್ಟರು ಮೊದಲು ಪತ್ನಿಯನ್ನು ಕೇಳಿದ್ದು ‘‘ಪಪ್ಪು ಎಲ್ಲಿ?’’ ಎಂದು.

‘‘ಕೋಣೆಯೊಳಗಿದ್ದಾನೆ...’’ ಎಂದರು ಲಕ್ಷ್ಮಮ್ಮ.

‘‘ಊಟ ಮಾಡಿದನೋ...’’

‘‘ಹೂಂ...ಮಾಡಿದ...’’

‘‘ಅವನು ಬೆಳಗ್ಗೆ ಹೊಲೇರ ದಟ್ಟಿಗೆಗೆ ಹೋಗಿದ್ದನಂತೆ....ಯಾರೋ ಸಿಕ್ಕಿದವರು ಹೇಳಿದರು...’’

‘‘ಯಾಕಂತೆ?’’

‘‘ಗೊತ್ತಿಲ್ಲ....ಒಳಗೆ ಬರುವಾಗ ತಲೆಗೆ ನೀರು ಹಾಕಿಕೊಂಡಿದ್ದಾನಲ್ಲ...?’’

ಲಕ್ಷ್ಮಮ್ಮ ಮೌನವಾದರು.

‘‘ಪಪ್ಪು...ಹೊಲೇರ ಕೇರಿಗೆ ಹೋಗಿದ್ದೆಯೇನೋ?’’ ಅನಂತ ಭಟ್ಟರು ಮಗನನ್ನು ಕರೆದರು.

‘‘ಹೌದಪ್ಪ’’ ಪಪ್ಪು ಒಳಗಿನಿಂದಲೇ ಉತ್ತರಿಸಿದ.
‘‘ಯಾಕೋ...?’’

‘‘ಹುತಾತ್ಮ ಯೋಧ ವೆಂಕಟನ ಮನೆಯವರನ್ನು ಮಾತನಾಡಿಸುವುದಕ್ಕಪ್ಪ....’’ ‘‘ಒಳಗೆ ಬರುವಾಗ ತಲೆಗೆ ನೀರು ಹಾಕಿದ್ದೀಯಾ? ಸ್ನಾನ ಮಾಡಿದ್ದೀಯಾ?’’

‘‘ಯಾಕಪ್ಪ...?’’

‘‘ಯಾಕೆಂದರೆ? ಅದು ಹೊಲೇರ ಕೇರಿ ಕಣೋ...ಮನೆ ಅಶುದ್ಧಿ ಮಾಡಿಬಿಟ್ಟೆಯಲ್ಲೋ....’’

‘‘ನಾನು ದೇಶಕ್ಕಾಗಿ ಪ್ರಾಣಕೊಟ್ಟ ಯೋಧನ ಮನೆಗೆ ಹೋಗಿದ್ದು ಅಪ್ಪ....’’ ಪಪ್ಪು ಜೋರು ದನಿಯಲ್ಲಿ ಉತ್ತರಿಸಿದ.

ಅನಂತಭಟ್ಟರ ಧ್ವನಿ ಕಟ್ಟಿತು. ಪ್ರತಿಯಾಗಿ ಏನು ಆಡಬೇಕು ಎನ್ನುವುದು ಅವರಿಗೆ ಗೊತ್ತಾಗಲಿಲ್ಲ.

‘‘ಆದರೂ...ದೇವರಕೋಣೆ ಎಲ್ಲ ಇರುವಾಗ...ತಲೆಗೆ ಸ್ವಲ್ಪ ನೀರು ಹಾಕಿದ ಹಾಗೆ ಮಾಡುವುದಲ್ವ...?’’ ಅವರ ಧ್ವನಿ ಮೆತ್ತಗಾಯಿತು.
ಒಳಗಿನಿಂದ ಯಾವ ಉತ್ತರವೂ ಇಲ್ಲ.

ಮರುದಿನ ಬೆಳಗ್ಗೆ ಅನಂತಭಟ್ಟರು ಆದದ್ದಾಗಲಿ ಎಂದು ಗುರೂಜಿಯವರ ಮನೆಗೆ ನಡೆದರು. ತನ್ನ ಸದ್ಯದ ಸಮಸ್ಯೆಗೆ ಪರಿಹಾರ ನೀಡಲು ಗುರೂಜಿಯವರಷ್ಟೇ ಶಕ್ತರು ಎನ್ನುವುದು ಅವರಿಗೆ ಮನದಟ್ಟಾಗಿ ಹೋಗಿತ್ತು. ಪಪ್ಪುವಿನ ರಜೆ ಮುಗಿಯುವ ಮೊದಲು ಆತನ ಮದುವೆ ನಡೆಯಲೇ ಬೇಕು. ಮದುವೆಯಾಗದೇ ವಾಪಸಾದರೆ ಅವನು ಮತ್ತೆ ಊರಿನ ಕಡೆ ತಿರುಗಿ ನೋಡುವುದು ಅನುಮಾನ ಅನ್ನಿಸಿತು ಅವರಿಗೆ. ಗುರೂಜಿಯ ಮನೆ ತಲುಪಿದಾಗ ಅವರು ಯಾರ ಜೊತೆಯೋ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಅವರು ಬಹಳ ಸಂತೋಷದಲ್ಲಿದ್ದಂತೆ ಇತ್ತು. ಕೈ ಸನ್ನೆ ಮೂಲಕವೇ ಮೇಷ್ಟ್ರನ್ನು ಸ್ವಾಗತಿಸಿದರು. ಫೋನ್‌ನಲ್ಲಿ ಮಾತು ಮುಗಿದ ಬಳಿಕವೂ ಅವರ ಮುಖದಲ್ಲಿ ಸಂತೋಷ ಕುಣಿಯುತ್ತಿತ್ತು.

‘‘ಮಗಳು ಜಾನಕಿ. ಅಮೆರಿಕದಿಂದ ಫೋನ್ ಮಾಡಿದ್ದಳು. ಅದ್ಯಾವುದೋ ಥೀಸಿಸ್ ಬರೆದಿದ್ದಳಂತೆ. ಅದಕ್ಕೆ ಅಮೆರಿಕದ ಯಾವುದೋ ವಿಶ್ವವಿದ್ಯಾನಿಲಯ ಡಾಕ್ಟರೇಟ್ ನೀಡಿದೆಯಂತೆ....ಬೇರೆ ಬೇರೆ ವಿಶ್ವವಿದ್ಯಾನಿಲಯಗಳಿಂದ ಆಕೆಗೆ ಭಾಷಣಕ್ಕೆ ಆಹ್ವಾನ ಬಂದಿದೆಯಂತೆ...ಗುರೂಜಿ ದಕ್ಷಿಣ ಕನ್ನಡಕ್ಕೆ ಸೀಮಿತವಾದರೆ, ಮಗಳನ್ನು ವಿಶ್ವವೇ ಭಾಷಣಕ್ಕೆ ಕರೆಯುತ್ತಿದೆ....’’ ಎಂದು ನಗುತ್ತಾ ಹೇಳಿದರು.

‘‘ನೂಲಿನಂತೆ ಸೀರೆ....’’ ಎಂದು ಅನಂತಭಟ್ಟರೂ ನಕ್ಕು ಜಾನಕಿಯನ್ನು ಅಭಿನಂದಿಸಿದರು.

‘‘ಮೊನ್ನೆಯ ನಿಮ್ಮ ಮಗನ ಕಾರ್ಯಕ್ರಮ ಅದ್ಭುತವಾಗಿತ್ತು. ಪತ್ರಿಕೆಗಳಲ್ಲಿ ಸುದ್ದಿ, ಫೋಟೋಗಳೆಲ್ಲ ಬಂದಿವೆೆ...ನೋಡಿದ್ರಾ?’’

‘‘ಇಲ್ಲ...ನಾನು ಸ್ವಲ್ಪ ಕೆಲಸದಲ್ಲಿ ಬಿದ್ದಿದ್ದೆ....ಮಗ ಬಂದ ದಿನದಿಂದ ಪೇಪರ್ ಓದಿಯೇ ಇಲ್ಲ...’’

‘‘ನೀವೆಂತ ಮೇಷ್ಟ್ರು? ನಿಮ್ಮ ಮಗನ ಸನ್ಮಾನ ಕಾರ್ಯಕ್ರಮದ ವರದಿ ಪೇಪರ್‌ನಲ್ಲಿ ಬಂದದ್ದು ಓದಿಲ್ಲ ಎನ್ನುತ್ತೀರಿ....ಲೇ ಇವಳೇ...ಆ ಅವತ್ತಿನ ಕಾರ್ಯಕ್ರಮದ ವರದಿ ಬಂದ ಪೇಪರ್‌ಗಳನ್ನೆಲ್ಲ ಒಮ್ಮೆ ಕೊಡು...’’ ಎಂದು ಪತ್ನಿಯನ್ನು ಕೂಗಿದರು.

ಪದ್ಮಮ್ಮ ಒಳಗಿನಿಂದ ಎರಡು ಪತ್ರಿಕೆಗಳನ್ನು ಹಿಡಿದುಕೊಂಡು ಬಂದರು. ಅನಂತಭಟ್ಟರು ಪತ್ರಿಕೆ ಬಿಡಿಸಿದರು. ಒಳ ಪುಟದಲ್ಲಿ ಸುದ್ದಿ. ಗುರೂಜಿಯವರ ಭಾಷಣವೇ ತಲೆಬರಹ. ಫೋಟೋಗಳಲ್ಲೂ ಅವರೇ ಇದ್ದಾರೆ. ಜೊತೆಗೆ ಚುನಾವಣೆಗೆ ನಿಂತ ಅಭ್ಯರ್ಥಿಯ ಫೋಟೋವೂ ಇದೆ.

‘‘ಚೆನ್ನಾಗಿ ಬಂದಿದೆ ...ಚೆನ್ನಾಗಿ ಬಂದಿದೆ...’’ ಅನಂತ ಭಟ್ಟರು ಸಂತೋಷ ವ್ಯಕ್ತಪಡಿಸಿದರು. ‘‘ಹೇಗಿದ್ದಾನೆ ನಮ್ಮ ಸಿಂಹ...ರಜೆ ಯಾವಾಗ ಮುಗಿಯುವುದಂತೆ?’’ ಗುರೂಜಿ ಕೇಳಿದರು.

‘‘ರಜೆ ಮುಗಿಯುವ ಮೊದಲು ಮಗನ ಮದುವೆಯ ನಿಶ್ಚಿತಾರ್ಥವಾದರೂ ಮಾಡಿ ಮುಗಿಸಬೇಕು ಎಂದಿದೆ ಗುರೂಜಿ. ಅದಕ್ಕಾಗಿ ಮದುವೆ ಮಾತುಕತೆ ನಡೆಸುತ್ತಾ ಇದ್ದೇನೆ...’’

‘‘ಸಂತೋಷ...ತುಂಬಾ ಸಂತೋಷ.... ಹುಡುಗಿ ಗೊತ್ತು ಮಾಡಿ ಆಯಿತಾ?’’

‘‘ಇಲ್ಲ...ಅದರ ಹುಡುಕಾಟ ನಡೆಯುತ್ತಿದೆ ಗುರೂಜಿ...’’

‘‘ಅದಕ್ಕೇನಂತೆ...ನಮ್ಮ ಊರಿನ ಸಿಂಹ ಅವನು. ಅವನಿಗೆ ಹೆಣ್ಣು ಸಿಗದೆ ಇರುತ್ತದೆಯೇ?’’ ದೊಡ್ಡದಾಗಿ ನಕ್ಕು ಹೇಳಿದರು ಗುರೂಜಿ.

‘‘ಅದೇ ಈಗ ಕಷ್ಟ ಆಗಿರೋದು....ಮಿಲಿಟರಿಯಲ್ಲಿ ಇದ್ದಾನೆ ಅಂದ ಕೂಡಲೇ ಹಿಂದುಮುಂದು ನೋಡ್ತಾರೆ ಅನ್ನೋದು ಪದ್ಮನಾಭರ ಮಾತು. ನರಸಿಂಹಯ್ಯರ ಬಳಿ ಮಾತುಕತೆಗೆ ಕಳುಹಿಸಿದ್ದೆ...ಅವರೇನೋ ಸಂಪ್ರದಾಯ ಅದು ಇದು ಅಂತ ಹೇಳಿ ನಿರಾಕರಿಸಿದರಂತೆ...’’

ಗುರೂಜಿ ಒಮ್ಮೆಲೆ ಗಂಭೀರರಾದರು. ಅನಂತಭಟ್ಟರು ಮಾತು ಮುಂದುವರಿಸಿದರು ‘‘....ತುಂಬಾ ಕಡೆ ಸಂಬಂಧ ನೋಡಿದೆ. ಎಲ್ಲೂ ಸರಿಕೂಡಿ ಬರುತ್ತಿಲ್ಲ....’’

‘‘ಬ್ರಹ್ಮಗಂಟು...ಎಲ್ಲದಕ್ಕೂ ಸಮಯ ಅಂತ ಇದೆ...ಲೆಕ್ಕದ ಮೇಷ್ಟ್ರಾದ ನಿಮಗೆ ಅದನ್ನು ವಿವರಿಸಬೇಕೆ?’’ ಗುರೂಜಿ ಮಾತು ತೇಲಿಸಿದರು.

‘‘ಹಾಗೆಂದು ಈ ಬಾರಿ ಅವನನ್ನು ಹಾಗೆ ಕಳುಹಿಸಿ ಬಿಟ್ಟರೆ ಅವನ ಮನಸ್ಸೂ ನೊಂದೀತು. ನೀವೇ ಏನಾದರೂ ಮಾಡಿ....ನಮ್ಮ ಹುಡುಗನಿಗೆ ಒಂದು ಸಂಬಂಧ ಹುಡುಕಿ ಕೊಡಬೇಕು...’’

‘‘ಹೂಂ...ವಿಷಯ ಹೀಗೆ...’’ ಗುರೂಜಿ ಅದೇನೋ ಆಲೋಚನೆಯಲ್ಲಿ ಬಿದ್ದರು.

ಸ್ವಲ್ಪ ಹೊತ್ತಿನ ಬಳಿಕ ಗುರೂಜಿಯವರೇ ಮಾತಿಗೆ ತೊಡಗಿದರು ‘‘ನೋಡಿ ಮೇಷ್ಟ್ರೆ. ನಾನು ಹೇಳುವುದನ್ನು ನೀವು ಮನವಿಟ್ಟು ಕೇಳಬೇಕು. ತಪ್ಪು ತಿಳಿದುಕೊಳ್ಳಬಾರದು. ಒಂದು ರೀತಿಯಲ್ಲಿ ಮಿಲಿಟರಿಯಲ್ಲಿರುವವರಿಗೆ ಸಂಪ್ರದಾಯಸ್ಥರು ಹೆಣ್ಣು ಕೊಡಲು ಹಿಂದೆ ಮುಂದೆ ನೋಡುವುದು ಸಾಮಾನ್ಯ. ಮಿಲಿಟರಿ ಎನ್ನುವಾಗ ಹುಡುಗರು ಮೀನು, ಮಾಂಸ ಅಂತ ತಿನ್ನೋದೆಲ್ಲ ಇರುತ್ತದಲ್ಲ...ಆದರೂ ದೇಶದ ಪ್ರಶ್ನೆ ಬಂದಾಗ ಸಂಪ್ರದಾಯ ಇತ್ಯಾದಿಗಳ ಪ್ರಶ್ನೆ ಬರುವುದಿಲ್ಲ. ಆದರೆ ಮದುವೆ, ಕುಟುಂಬ ಮೊದಲಾದ ವಿಷಯ ಬಂದಾಗ ಸ್ವಲ್ಪ ಹಿಂಜರಿಯುವುದು ಇರುತ್ತದೆ....’’ ಎಂದು ಮೌನವಾದರು.

ಅನಂತಭಟ್ಟರ ಗಂಟಲಲ್ಲಿ ಮುಳ್ಳು ಸಿಕ್ಕಿ ಹಾಕಿಕೊಂಡಂತಾಗಿತ್ತು. ಅಲ್ಲಿಂದ ಯಾವ ಮಾತೂ ಹೊರಡುತ್ತಿರಲಿಲ್ಲ.

‘‘...ನೋಡಿ ಮೇಷ್ಟ್ರೇ...ಹಿಂದೂಗಳು ಅಂದ ಮೇಲೆ ಜಾತಿಗಳು ಯಾಕಿರಬೇಕು? ಈಗ ಎಲ್ಲರೂ ಕೆಳಜಾತಿಯ ಹೆಣ್ಣುಗಳನ್ನೇ ಶುದ್ಧೀಕರಿಸಿ ಮನೆ ತುಂಬಿಸುವ ಕೆಲಸಕ್ಕೆ ಇಳಿದಿದ್ದಾರೆ. ಅಷ್ಟರ ಮಟ್ಟಿಗೆ ನಮ್ಮ ಸಮುದಾಯದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿದಿದೆ. ಪಾಶ್ಚಿಮಾತ್ಯ ವಿದ್ಯೆಯಿಂದ ಅವರು ನಗರದ ಹಾದಿ ಹಿಡಿಯುತ್ತಿದ್ದಾರೆ. ಇಷ್ಟಕ್ಕೂ ಈ ನಮ್ಮ ಬ್ರಾಹ್ಮಣ ಹೆಣ್ಣು ಮಕ್ಕಳಿಗೆ ಎಂತ ಸಂಪ್ರದಾಯ ಗೊತ್ತಿದೆ ಮಣ್ಣು....ಈ ಶುದ್ಧೀಕರಣ ನಿಧಾನಕ್ಕೆ ಇಡೀ ಹಿಂದೂಸ್ಥಾನವನ್ನು ಒಂದು ಮಾಡುತ್ತದೆ. ಜಾತಿಯನ್ನು ನಾಶ ಮಾಡಿ, ಬ್ರಾಹ್ಮಣತ್ವವನ್ನು ಎತ್ತಿ ಹಿಡಿಯುತ್ತದೆ. ನಾನು ಪುರಾಣಿಕರಿಗೆ ಫೋನ್ ಮಾಡಿ ಹೇಳುತ್ತೇನೆ....ಅವರ ಗೋವನಿತಾಶ್ರಮದಲ್ಲಿ ಅತ್ಯುತ್ತಮ ಬ್ರಾಹ್ಮಣ ಸಂಸ್ಕಾರ ಇರುವ ಹೆಣ್ಣು ಮಕ್ಕಳಿದ್ದಾರೆ. ಎಲ್ಲರೂ ಬಡ ಕುಟುಂಬದಿಂದ ಬಂದ ಕೆಳಜಾತಿಯ ಹೆಣ್ಣು ಮಕ್ಕಳು. ಆ ಆಶ್ರಮದಲ್ಲಿ ಗೋಮಾತೆಯನ್ನು ಸಲಹುವುದರ ಜೊತೆಗೆ ವೈದಿಕ ಸಂಪ್ರದಾಯ, ಸಂಸ್ಕಾರವನ್ನು ಅವರಿಗೆ ನೀಡಲಾಗುತ್ತದೆ. ಮಾಂಸಾಹಾರ ಇತ್ಯಾದಿಗಳೆಲ್ಲದರಿಂದ ಅವರು ದೂರ ಇದ್ದಾರೆ. ನಮ್ಮ ಸಮುದಾಯದಲ್ಲಿರುವ ಹೆಣ್ಣು ಮಕ್ಕಳ ಕೊರತೆಯನ್ನು ತುಂಬಲು ಈ ಆಶ್ರಮ ತುಂಬಾ ಕೆಲಸ ಮಾಡುತ್ತಿದೆ. ಎಲ್ಲ ಹೆಣ್ಣು ಮಕ್ಕಳು ಕೆಲಸ ಕಾರ್ಯಗಳಲ್ಲಿ ಬಹಳ ಹುಶಾರು...ನೀವು ಪದ್ಮನಾಭರನ್ನು ಇನ್ನೊಮ್ಮೆ ಭೇಟಿ ಮಾಡಿ. ನೇರ ಪುತ್ತೂರಿಗೆ ಹೋಗಿ ಪುರಾಣಿಕರನ್ನು ಕಾಣಿ. ನಾನು ಹೇಳಿದ್ದು ಎಂದರೆ ಸಾಕು...ನೀವು ಹೋಗುವ ಮೊದಲು ನಾನು ಫೋನ್ ಮಾಡಿ ಅವರಿಗೆ ವಿಷಯವನ್ನೆಲ್ಲ ತಿಳಿಸುತ್ತೇನೆ....’’

ಅನಂತಭಟ್ಟರು ಕುಳಿತಲ್ಲೇ ಕಲ್ಲಾಗಿದ್ದರು. ಏನು ಪ್ರತಿಕ್ರಿಯಿಸುವುದಕ್ಕೂ ಅವರಿಂದ ಸಾಧ್ಯವಾಗುತ್ತಿರಲಿಲ್ಲ. ಪದ್ಮಮ್ಮ್ವ ಬಂದು ‘‘ಕಾಫಿ...’’ ಎಂದದ್ದೇ ಅವರು ಬೆಚ್ಚಿ ಬಿದ್ದರು. ನಡುಗುವ ಕೈಯಲ್ಲಿ ಲೋಟ ಎತ್ತಿಕೊಂಡರು. ಗುರೂಜಿ ಮಾತಾಡಿದ್ದೆಲ್ಲ ಮುಗಿದಾಗ ಬೇರೇನು ಹೇಳದೆ ‘‘ಬರುತ್ತೇನೆ ಗುರೂಜಿ’’ ಎಂದಷ್ಟೇ ಹೇಳಿ ಮನೆಯ ಹಾದಿ ಹಿಡಿದರು.

(ಗುರುವಾರದ ಸಂಚಿಕೆಗೆ)

share
ವಾರ್ತಾಭಾರತಿ
ವಾರ್ತಾಭಾರತಿ
Next Story
X